ಜ್ಞಾನವಾಪಿ ಮಸೀದಿ ವಿವಾದದ ಅರ್ಜಿ ನಾಳೆ ಸುಪ್ರೀಂಕೋರ್ಟ್​​​ನಲ್ಲಿ ವಿಚಾರಣೆ; ಸಮೀಕ್ಷೆ ಅಂತ್ಯ

| Updated By: ರಶ್ಮಿ ಕಲ್ಲಕಟ್ಟ

Updated on: May 16, 2022 | 3:52 PM

ನ್ಯಾಯಾಲಯದ ಆದೇಶದ ಮೇರೆಗೆ ಜ್ಞಾನವಾಪಿ ಮಸೀದಿ ಸಂಕೀರ್ಣದ ವಿಡಿಯೊಗ್ರಫಿ ಸಮೀಕ್ಷೆಯು ಬಿಗಿ ಭದ್ರತೆಯ ನಡುವೆ ಮೂರನೇ ದಿನವಾದ ಸೋಮವಾರ ಮುಕ್ತಾಯವಾಯಿತು. ಬೆಳಗ್ಗೆ 8 ಗಂಟೆಗೆ ಆರಂಭವಾದ ಮಸೀದಿ ಸಂಕೀರ್ಣದ ಸಮೀಕ್ಷೆಯು 10:15 ರ ಸುಮಾರಿಗೆ ಮುಕ್ತಾಯವಾಗಿದೆ.

ಜ್ಞಾನವಾಪಿ ಮಸೀದಿ ವಿವಾದದ ಅರ್ಜಿ ನಾಳೆ ಸುಪ್ರೀಂಕೋರ್ಟ್​​​ನಲ್ಲಿ ವಿಚಾರಣೆ; ಸಮೀಕ್ಷೆ ಅಂತ್ಯ
ಸುಪ್ರೀಂಕೋರ್ಟ್
Follow us on

ವಾರಣಾಸಿಯ ಜ್ಞಾನವಾಪಿ ಮಸೀದಿಯ (Gyanvapi mosque) ಪರಿಶೀಲನೆ, ಸಮೀಕ್ಷೆ ಮತ್ತು ವಿಡಿಯೊಗ್ರಫಿ ನಡೆಸಲು ನ್ಯಾಯಾಲಯ ನೇಮಿಸಿದ ಆಯುಕ್ತರಿಗೆ ಅಲಹಾಬಾದ್ ಹೈಕೋರ್ಟ್(Allahabad High Court) ಅನುಮತಿ ನೀಡಿದೆ. ಈ ಆದೇಶದ ವಿರುದ್ಧ ಸಲ್ಲಿಸಿದ ಮೇಲ್ಮನವಿಯ ವಿಚಾರಣೆಯನ್ನು ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಸುಪ್ರೀಂಕೋರ್ಟ್ (Supreme Court) ಪೀಠ ನಾಳೆ ನಡೆಸಲಿದೆ. ಅಂಜುಮನ್ ಇಂತೇಝಾಮಿಯಾ ಮಸಾಜಿದ್ ಸಮಿತಿ ಈ ಅರ್ಜಿ ಸಲ್ಲಿಸಿದೆ. ನ್ಯಾಯಾಲಯದ ಆದೇಶದ ಮೇರೆಗೆ ಜ್ಞಾನವಾಪಿ ಮಸೀದಿ ಸಂಕೀರ್ಣದ ವಿಡಿಯೊಗ್ರಫಿ ಸಮೀಕ್ಷೆಯು ಬಿಗಿ ಭದ್ರತೆಯ ನಡುವೆ ಮೂರನೇ ದಿನವಾದ ಸೋಮವಾರ ಮುಕ್ತಾಯವಾಯಿತು. ಬೆಳಗ್ಗೆ 8 ಗಂಟೆಗೆ ಆರಂಭವಾದ ಮಸೀದಿ ಸಂಕೀರ್ಣದ ಸಮೀಕ್ಷೆಯು 10:15 ರ ಸುಮಾರಿಗೆ ಮುಕ್ತಾಯವಾಗಿದೆ. ಮಸೀದಿಯು ಕಾಶಿ ವಿಶ್ವನಾಥ ದೇವಸ್ಥಾನದ ಸಮೀಪದಲ್ಲಿದೆ. ಸ್ಥಳೀಯ ನ್ಯಾಯಾಲಯವು ಅದರ ಹೊರ ಗೋಡೆಗಳ ಮೇಲಿನ ವಿಗ್ರಹಗಳ ಮುಂದೆ ದೈನಂದಿನ ಪ್ರಾರ್ಥನೆಗೆ ಅನುಮತಿ ಕೋರಿ ಮಹಿಳೆಯರ ಗುಂಪಿನ ಮನವಿಯನ್ನು ಆಲಿಸುತ್ತಿದೆ. ಏತನ್ಮಧ್ಯೆ, ವಾರಣಾಸಿಯ ನ್ಯಾಯಾಲಯವು ಸಂಕೀರ್ಣದಲ್ಲಿರುವ ಕೊಳದಲ್ಲಿ ಶಿವಲಿಂಗ ಕಂಡು ಬಂದಿದೆ ಎಂಬ ವರದಿ ಹಿನ್ನಲೆಯಲ್ಲಿ ಪ್ರಸ್ತುತ ಸ್ಥಳವನ್ನು ನಿರ್ಬಂಧಿಸುವಂತೆ ಆದೇಶಿಸಿದೆ. “ಪ್ರದೇಶವನ್ನು ಸೀಲ್ ಮಾಡಲು ಮತ್ತು ಪ್ರದೇಶಕ್ಕೆ ಪ್ರವೇಶವನ್ನು ನಿಷೇಧಿಸುವಂತೆ ವಾರಣಾಸಿ ನ್ಯಾಯಾಲಯವು ಜಿಲ್ಲಾ ಮ್ಯಾಜಿಸ್ಟ್ರೇಟ್ ಕೌಶಲ್ ರಾಜ್ ಶರ್ಮಾ ಅವರಿಗೆ ಹೇಳಿದೆ. ಪೊಲೀಸ್ ಕಮಿಷನರ್ ಮತ್ತು ವಾರಣಾಸಿ ಪ್ರ ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್ (ಸಿಆರ್‌ಪಿಎಫ್) ಕಮಾಂಡೆಂಟ್ ನಿರ್ಬಂಧಿತ ಪ್ರದೇಶದ ಜವಾಬ್ದಾರಿಯನ್ನು ಹೊಂದಿರುತ್ತಾರೆ ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ಹೇಳಿದೆ.

ಉತ್ತರ ಪ್ರದೇಶದ ವಾರಣಾಸಿಯಲ್ಲಿರುವ  ಜ್ಞಾನವಾಪಿ ಮಸೀದಿ ಸಂಕೀರ್ಣದ ಮೂರು ದಿನಗಳ ವಿಡಿಯೊ ಸಮೀಕ್ಷೆ ನ್ಯಾಯಾಲಯದ ಆದೇಶದ ಇಂದು (ಸೋಮವಾರ)ಕೊನೆಗೊಂಡಿದೆ. ಸಂಕೀರ್ಣದ ಬಳಿ ಬಿಗಿ ಭದ್ರತೆ ಮತ್ತು ನಿರ್ಬಂಧಗಳ ನಡುವೆ ಇಂದು ಬೆಳಿಗ್ಗೆ ಕೊನೆಯ ದಿನದ ಚಿತ್ರೀಕರಣ ಪ್ರಾರಂಭವಾಯಿತು. ಇಂದು ಬೆಳಿಗ್ಗೆ ಕೊಳದಿಂದ ನೀರನ್ನು ಬತ್ತಿಸಿದಾಗ  “ಶಿವಲಿಂಗ” ಕಂಡುಬಂದಿದೆ ಎಂದು ಮಸೀದಿಯ ಹಿಂಭಾಗದಲ್ಲಿರುವ ದೇಗುಲದಲ್ಲಿ ಪ್ರಾರ್ಥನೆ ಮಾಡಲು ವರ್ಷಪೂರ್ತಿ ಪ್ರವೇಶವನ್ನು ಕೋರಿದ ಹಿಂದೂ ಮಹಿಳೆಯರ ಗುಂಪನ್ನು ಪ್ರತಿನಿಧಿಸುವ ವಕೀಲರು ಹೇಳಿದ್ದಾರೆ. ಈ ಕೊಳದ ನೀರನ್ನು  ಪ್ರಾರ್ಥನೆಗೆ ಮುನ್ನ ಶುದ್ಧೀಕರಣಕ್ಕೆ (ವುಜು) ಬಳಸಲಾಗುತ್ತಿತ್ತು ಎಂದು ವಕೀಲ ಸುಭಾಷ್ ನಂದನ್ ಚತುರ್ವೇದಿ ಹೇಳಿದರು. ಇಸ್ಲಾಮಿಕ್ ವುಜು ಅಥವಾ ಶುದ್ಧೀಕರಣ ಆಚರಣೆಗಾಗಿ ಬಳಸಲಾಗುವ ಕೊಳವನ್ನು ಮುಚ್ಚಬೇಕು ಎಂದು ಅರ್ಜಿದಾರರು ಸ್ಥಳೀಯ ನ್ಯಾಯಾಲಯವನ್ನು ಕೇಳಿದರು. ನ್ಯಾಯಾಲಯವು ಮನವಿಯನ್ನು ಸ್ವೀಕರಿಸಿದೆ. ಅದೇ ವೇಳೆ  ಸದ್ಯಕ್ಕೆ ಕೊಳವನ್ನು ಬಳಸದಂತೆ ನೋಡಿಕೊಳ್ಳಲು ವಾರಣಾಸಿ ಜಿಲ್ಲಾ ಮ್ಯಾಜಿಸ್ಟ್ರೇಟ್‌ಗೆ ಆದೇಶಿಸಿತು.

ಮಸೀದಿ ಸಂಕೀರ್ಣದಲ್ಲಿ “ಶಿವಲಿಂಗ” ಕಂಡುಬಂದ ಬಗ್ಗೆ ವರದಿಗಳನ್ನು ವಾರಣಾಸಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಕೌಶಲ್ ರಾಜ್ ಶರ್ಮಾ ಅವರು ಈ ಹಿಂದೆ ದೃಢಪಡಿಸಿರಲಿಲ್ಲ. “ಜ್ಞಾನವಾಪಿ ಮಸೀದಿಯ ಸಮೀಕ್ಷೆಯ ವಿವರಗಳನ್ನು ಆಯೋಗದ ಯಾವುದೇ ಸದಸ್ಯರು ಬಹಿರಂಗಪಡಿಸಿಲ್ಲ. ನ್ಯಾಯಾಲಯ ಸಮೀಕ್ಷೆಯ ಮಾಹಿತಿಯ ರಕ್ಷಕರಾಗಿದ್ದಾರೆ. ನಿನ್ನೆ ಒಬ್ಬ ಸದಸ್ಯರನ್ನು ಆಯೋಗದಿಂದ ಕೆಲವು ನಿಮಿಷಗಳ ಕಾಲ ಡಿಬಾರ್ ಮಾಡಲಾಗಿದೆ, ನಂತರ ಆಯೋಗಕ್ಕೆ ಸೇರಿಸಿಕೊಳ್ಳಲಾಗಿದೆ ಎಂದು ಶರ್ಮಾ ಹೇಳಿದ್ದಾರೆ.

ಇದನ್ನೂ ಓದಿ
Breaking ಜ್ಞಾನವಾಪಿ ಮಸೀದಿ ಸಮೀಕ್ಷೆ ವೇಳೆ ಶಿವಲಿಂಗ ಪತ್ತೆಯಾದ ಸ್ಥಳ ನಿರ್ಬಂಧಿಸಲು ವಾರಣಾಸಿ ನ್ಯಾಯಾಲಯ ಆದೇಶ
ಬಿಗಿಭದ್ರತೆಯ ನಡುವೆ ಜ್ಞಾನವಾಪಿ ಮಸೀದಿಯ 3ನೇ ದಿನದ ಸಮೀಕ್ಷೆ ಮುಕ್ತಾಯ
Gyanvapi masjid controversy: ಕೋರ್ಟ್ ನೇಮಿಸಿದ ಕಮೀಷನರುಗಳಿಂದ ವಿಡಿಯೋ ಸರ್ವೇ ನಾಳೆ ಆರಂಭ, ಪ್ರಕ್ರಿಯೆ ಹೇಗೆ ನಡೆಯಲಿದೆ ಗೊತ್ತಾ?
ವಾರಣಾಸಿಯ ಜ್ಞಾನವಾಪಿ ಮಸೀದಿ ಸಮೀಕ್ಷೆ ನಿಲ್ಲಿಸಲು ಸುಪ್ರೀಂಕೋರ್ಟ್ ನಕಾರ, ನಾಳೆಯಿಂದ ವಿಡಿಯೊ ಚಿತ್ರೀಕರಣ ಸರ್ವೆ

ಸಮೀಕ್ಷಾ ತಂಡವು ಮೂರು ಗುಮ್ಮಟಗಳು, ಭೂಗತ ನೆಲಮಾಳಿಗೆಗಳು, ಕೊಳವನ್ನು ಚಿತ್ರೀಕರಿಸಿದೆ. ನಾಳೆ ನ್ಯಾಯಾಲಯದೊಂದಿಗೆ ಈ ಸಮೀಕ್ಷೆ ಹಂಚಿಕೊಳ್ಳಲಿದೆ. ವರದಿಯನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸದಿದ್ದರೆ, ನಾವು ನ್ಯಾಯಾಲಯಕ್ಕೆ ಹೆಚ್ಚಿನ ಸಮಯ ಕೇಳುತ್ತೇವೆ ಎಂದು ಸರ್ಕಾರಿ ವಕೀಲ ಮಹೇಂದ್ರ ಪ್ರಸಾದ್ ಪಾಂಡೆ ಹೇಳಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ.

ಜ್ಞಾನವಾಪಿ ಮಸೀದಿಯು ಕಾಶಿ ವಿಶ್ವನಾಥ ದೇವಾಲಯದ ಸಮೀಪದಲ್ಲಿದೆ. ಜ್ಞಾನವಾಪಿ ಮಸೀದಿಯ ಹೊರಗೋಡೆಯಲ್ಲಿರುವ ಕೆಲ ವಿಗ್ರಹಗಳಿಗೆ ಪೂಜೆ ಸಲ್ಲಿಸಲು ಮಹಿಳೆಯರ ತಂಡವೊಂದು ಅನುಮತಿ ಕೋರಿದೆ.