ನೋಯ್ಡಾದಲ್ಲಿರುವ 40 ಅಂತಸ್ತಿನ ಸೂಪರ್ ಟೆಕ್ ಅವಳಿ ಕಟ್ಟಡ ಕೆಡವಲು ಸುಪ್ರೀಂಕೋರ್ಟ್ ಆದೇಶ

ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಪೀಠವು ನೋಯ್ಡಾ ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿ ತನ್ನ ಸ್ವಂತ ವೆಚ್ಚದಲ್ಲಿ ಮೂರು ತಿಂಗಳಲ್ಲಿ ಕೆಡವಲು ಕ್ರಮ ಕೈಗೊಳ್ಳಬೇಕು ಎಂದು ಆದೇಶಿಸಿತು.

ನೋಯ್ಡಾದಲ್ಲಿರುವ 40 ಅಂತಸ್ತಿನ ಸೂಪರ್ ಟೆಕ್ ಅವಳಿ ಕಟ್ಟಡ ಕೆಡವಲು ಸುಪ್ರೀಂಕೋರ್ಟ್ ಆದೇಶ
ಸುಪ್ರೀಂ​ ಕೋರ್ಟ್
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Aug 31, 2021 | 2:18 PM

ದೆಹಲಿ: ಕಟ್ಟಡ ನಿಯಮಗಳ ಉಲ್ಲಂಘನೆ ಮಾಡಿದ್ದಕ್ಕಾಗಿ ನೊಯ್ಡಾದ ಎಮರಾಲ್ಡ್ ಕೋರ್ಟ್ ಯೋಜನೆಯಲ್ಲಿ 40 ಅಂತಸ್ತಿನ ಗೋಪುರಗಳನ್ನು ಕೆಡವಲು ಸೂಚಿಸಿದ ಅಲಹಾಬಾದ್ ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್ ಮಂಗಳವಾರ ಎತ್ತಿಹಿಡಿದಿದೆ ಎಂದು ಲೈವ್ ಲಾ ವರದಿ ಮಾಡಿದೆ.  ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಪೀಠವು ನೋಯ್ಡಾ ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿ ತನ್ನ ಸ್ವಂತ ವೆಚ್ಚದಲ್ಲಿ ಮೂರು ತಿಂಗಳಲ್ಲಿ ಕೆಡವಲು ಕ್ರಮ ಕೈಗೊಳ್ಳಬೇಕು ಎಂದು ಆದೇಶಿಸಿತು. ಸಿಬಿಆರ್​ಐ ಸುರಕ್ಷಿತವಾಗಿ ಕೆಡವುವ ಕಾರ್ಯ ಖಚಿತಪಡಿಸಿಕೊಳ್ಳುವ ಮೇಲ್ವಿಚಾರಣೆ ನಡೆಸಬೇಕು ಎಂದು ಹೇಳಿದೆ.

ಆಗಸ್ಟ್ 4 ರಂದು ಸುಪ್ರೀಂಕೋರ್ಟ್ ತನ್ನ ತೀರ್ಪನ್ನು ತೀರ್ಪು ಕಾಯ್ದಿರಿಸಿತು ಮತ್ತು ನೋಯ್ಡಾ ಪ್ರಾಧಿಕಾರವು ಭ್ರಷ್ಟಾಚಾರವನ್ನು ಎದುರಿಸುತ್ತಿದೆ ಎಂದು ಛೀಮಾರಿ ಹಾಕಿತು. ಸೂಪರ್‌ಟೆಕ್‌ನ ಎಮರಾಲ್ಡ್ ಕೋರ್ಟ್ ಯೋಜನೆ ಮನೆ ಖರೀದಿದಾರರಿಗೆ ಮಂಜೂರಾದ ಯೋಜನೆಯನ್ನು ಒದಗಿಸದ ಕಾರಣ ಬಿಲ್ಡರ್‌ನೊಂದಿಗೆ ಸಂಪರ್ಕ ಸಾಧಿಸಿದ್ದರು. ಮನೆ ಖರೀದಿದಾರರು ಯೋಜನೆಯನ್ನು ಕೇಳಿದಾಗ ಪ್ರಾಧಿಕಾರವು ಡೆವಲಪರ್‌ಗೆ ಅದನ್ನು ಹಂಚಿಕೊಳ್ಳಬೇಕೇ ಎಂದು ಕೇಳಿತ್ತು. ಡೆವಲಪರ್‌ನ ಆಜ್ಞೆಯ ಮೇರೆಗೆ ಅವರಿಗೆ ಯೋಜನೆಯನ್ನು ನೀಡಲು ನಿರಾಕರಿಸಿತು.

ಈ ಹಿಂದೆ ಸೂಪರ್‌ಟೆಕ್ ಲಿಮಿಟೆಡ್ ಮಾಡಿರುವುದು “ಸ್ಪಷ್ಟವಾಗಿ ತಪ್ಪು” ಎಂದು ಸುಪ್ರೀಂಕೋರ್ಟ್ ಹೇಳಿತ್ತು. ಯಾಕೆಂದರೆ ವಸತಿ ಸಮುಚ್ಛಯವು  ಹಸಿರು ಪ್ರದೇಶವನ್ನು ಅತಿಕ್ರಮಿಸಿ ಕಟ್ಟಡಗಳನ್ನು ನಿರ್ಮಿಸಲಾಗಿದೆ. ಹೈಕೋರ್ಟ್ ಸ್ಪಷ್ಟವಾಗಿ ನೋಯ್ಡಾ ಪ್ರಾಧಿಕಾರಕ್ಕೆ ಯೋಜನೆಯನ್ನು ನೀಡುವಂತೆ ಸೂಚಿಸಿದ ನಂತರವೇ ಅದನ್ನು ಮಾಡಿದೆ ಎಂದು ನ್ಯಾಯಾಲಯ ಹೇಳಿದೆ.

ರಿಯಾಲ್ಟಿ ಸಂಸ್ಥೆ ಸೂಪರ್‌ಟೆಕ್ ಲಿಮಿಟೆಡ್ ಅವಳಿ ಗೋಪುರಗಳ ನಿರ್ಮಾಣವನ್ನು ಸಮರ್ಥಿಸಿಕೊಂಡಿದೆ ಮತ್ತು ಯಾವುದೇ ಅಕ್ರಮ ನಡೆದಿಲ್ಲ ಎಂದು ಹೇಳಿದೆ. ದೂರ ಮಾನದಂಡಗಳು ಮತ್ತು ಆ ಟವರ್‌ಗಳನ್ನು ನಿರ್ಮಿಸುವ ಮೊದಲು ಮನೆ ಖರೀದಿದಾರರ ಒಪ್ಪಿಗೆ ಪಡೆಯದಿರುವುದು- ಈ ಎರಡು ಅಂಶಗಳ ಮೇಲೆ ಹೈಕೋರ್ಟ್‌ನಲ್ಲಿ ಪ್ರಕರಣವನ್ನು ಕಳೆದುಕೊಂಡಿದೆ ಎಂದು ಸೂಪರ್‌ಟೆಕ್ ಹೇಳಿದೆ .

ಮನೆ ಖರೀದಿದಾರರ ಸಂಘವು ಬಿಲ್ಡರ್ ನಿರ್ಮಿಸಿದ ಬೃಹತ್ ಅವಳಿ ಗೋಪುರಗಳು ಬುಕಿಂಗ್ ಸಮಯದಲ್ಲಿ ತೋರಿಸಿದ ಮೂಲ ಯೋಜನೆಯಲ್ಲಿ ಇರಲಿಲ್ಲ ಮತ್ತು ಅದು ನೋಟ, ವಾಯು ಸಂಚಾರ ಮತ್ತು ಸೂರ್ಯನ ಬೆಳಕನ್ನು ನಿರ್ಬಂಧಿಸಿದೆ ಎಂದು ಹೇಳಿಕೊಂಡಿದೆ.

ಈ ಎರಡು ಗೋಪುರಗಳು, ಸೂಪರ್‌ಟೆಕ್‌ನ ಎಮರಾಲ್ಡ್ ಕೋರ್ಟ್ ಪ್ರಾಜೆಕ್ಟ್‌ನ ಅಪೆಕ್ಸ್ ಮತ್ತು ಸಿಯಾನೆ ಒಟ್ಟಾಗಿ 915 ಅಪಾರ್ಟ್‌ಮೆಂಟ್‌ಗಳು ಮತ್ತು 21 ಅಂಗಡಿಗಳನ್ನು ಹೊಂದಿವೆ. ಇವುಗಳಲ್ಲಿ 633 ಫ್ಲಾಟ್‌ಗಳನ್ನು ಆರಂಭದಲ್ಲಿ ಬುಕ್ ಮಾಡಲಾಗಿದೆ. ಏಪ್ರಿಲ್ 11, 2014 ರಂದುಅಲಹಾಬಾದ್ ಹೈಕೋರ್ಟ್ ನಾಲ್ಕು ತಿಂಗಳೊಳಗೆ ಎರಡು ಕಟ್ಟಡಗಳನ್ನು ಕೆಡವಲು ಮತ್ತು ಅಪಾರ್ಟ್ಮೆಂಟ್ ಖರೀದಿದಾರರಿಗೆ ಹಣವನ್ನು ಹಿಂತಿರುಗಿಸಲು ಆದೇಶಿಸಿತ್ತು.

ಇದನ್ನೂ ಓದಿ:  ತಾಲಿಬಾನ್ ಬಗ್ಗೆ ಭಯವಿಲ್ಲ, ಯಾಕೆ ಹೆದರಬೇಕು? ಎಂದ ಕಾಬೂಲ್ ಶಾಲಾ ವಿದ್ಯಾರ್ಥಿನಿ

ಇದನ್ನೂ ಓದಿ:  ಡೆಡ್‌ಲೈನ್‌ಗೂ 24 ತಾಸು ಮುನ್ನವೇ ಜಾಗ ಖಾಲಿ ಮಾಡಿದ ಅಮೆರಿಕಾ ಸೇನೆ, ತಾಲಿಬಾನಿಗಳ ಕೈಗೆ ಅಫ್ಘಾನಿಸ್ತಾನ್​​

(Supreme Court upheld an order passed by the Allahabad High Court demolition of Noida Supertech’s twin 40-storey towers)

ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ಈ ಬಾರಿ ಬಿಗ್ ಬಾಸ್ ಟ್ರೋಫಿ ಯಾರಿಗೆ? ಭವಿಷ್ಯ ನುಡಿದ ಐಶ್ವರ್ಯಾ
ಈ ಬಾರಿ ಬಿಗ್ ಬಾಸ್ ಟ್ರೋಫಿ ಯಾರಿಗೆ? ಭವಿಷ್ಯ ನುಡಿದ ಐಶ್ವರ್ಯಾ
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ
ಕೇರಳವನ್ನು ಮಿನಿ ಪಾಕಿಸ್ತಾನ ಎಂದು ಕರೆದ ಸಚಿವ ನಿತೇಶ್​ ರಾಣೆ
ಕೇರಳವನ್ನು ಮಿನಿ ಪಾಕಿಸ್ತಾನ ಎಂದು ಕರೆದ ಸಚಿವ ನಿತೇಶ್​ ರಾಣೆ
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪಿಎನನ್ನು ಇದುವರೆಗೆ ಯಾಕೆ ಬಂಧಿಸಿಲ್ಲ? ರವಿ
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪಿಎನನ್ನು ಇದುವರೆಗೆ ಯಾಕೆ ಬಂಧಿಸಿಲ್ಲ? ರವಿ
ನನ್ನ ಸಹೋದರನಿಂದ ಸಚಿನ್ ರೂ. 80 ಲಕ್ಷ ತೆಗೆದುಕೊಂಡಿದ್ದ: ಪ್ರಕಾಶ್ ಕಪನೂರ್
ನನ್ನ ಸಹೋದರನಿಂದ ಸಚಿನ್ ರೂ. 80 ಲಕ್ಷ ತೆಗೆದುಕೊಂಡಿದ್ದ: ಪ್ರಕಾಶ್ ಕಪನೂರ್