ಮತ್ತೆ ಪ್ರತ್ಯಕ್ಷನಾದ ನಿತ್ಯಾನಂದ ಸ್ವಾಮಿಯಿಂದ ಅಚ್ಚರಿಯ ಹೇಳಿಕೆ; ಮಧುರೈ ಅಧೀನಂ ಮಠದ ಸಿಬ್ಬಂದಿಗೆ ಗೊಂದಲ

ಮಧುರೈ ಅಧೀನಂನ 292ನೇ ಪೀಠಾಧಿಪತಿ ಅರುಣಗಿರಿನಾಥ ಜ್ಞಾನಸಂಬಂತ ದೇಶಿಕ ಪರಮಾಚಾರ್ಯ ಸ್ವಾಮಿ ಆಗಸ್ಟ್​ 13ರಂದು ಖಾಸಗಿ ಆಸ್ಪತ್ರೆಯೊಂದರಲ್ಲಿ ನಿಧನರಾಗಿದ್ದಾರೆ. 77 ವರ್ಷದ ಅವರು, ಉಸಿರಾಟ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು.

ಮತ್ತೆ ಪ್ರತ್ಯಕ್ಷನಾದ ನಿತ್ಯಾನಂದ ಸ್ವಾಮಿಯಿಂದ ಅಚ್ಚರಿಯ ಹೇಳಿಕೆ; ಮಧುರೈ ಅಧೀನಂ ಮಠದ ಸಿಬ್ಬಂದಿಗೆ ಗೊಂದಲ
ಸ್ವಾಮಿ ನಿತ್ಯಾನಂದ
Follow us
TV9 Web
| Updated By: Digi Tech Desk

Updated on:Aug 19, 2021 | 11:58 AM

ಮಧುರೈ: ಸ್ವಯಂಘೋಷಿತ ದೇವಮಾನವ, ಕಾಣದೂರಿನ ಕೈಲಾಸವಾಸಿ ಸ್ವಾಮಿ ನಿತ್ಯಾನಂದ ಸದಾ ವಿವಾದ ಪ್ರಿಯರು ಎಂಬುದರಲ್ಲಿ ಎರಡು ಮಾತಿಲ್ಲ. ಅತ್ಯಾಚಾರ ಆರೋಪ ಎದುರಿಸುತ್ತಿದ್ದರೂ, ದೇಶಬಿಟ್ಟು ಹೋಗಿ ಬಿಂದಾಲ್​ ಜೀವನ ಸಾಗಿಸುತ್ತಿರುವ ಸ್ವಾಮಿ ನಿತ್ಯಾನಂದ ಇದೀಗ ದಿಢೀರ್​ ಪ್ರತ್ಯಕ್ಷರಾಗಿ ತಮ್ಮ ಸಾಮಾಜಿಕ ಜಾಲತಾಣಗಳ ಮೂಲಕ ನೀಡಿರುವ ಹೇಳಿಕೆ ಅಚ್ಚರಿಗೆ ಕಾರಣವಾಗಿದೆ. ತಾವು ಮಧುರೈ ಆಧೀನಂ ಮಠದ 293ನೇ ಪೀಠಾಧಿಪತಿಯಾಗಿ ಅಧಿಕಾರ ಸ್ವೀಕಾರ ಮಾಡಿದ್ದೇನೆಂದು ಹೇಳಿಕೊಂಡಿದ್ದಾರೆ. ಇದು ಸಹಜವಾಗಿಯೇ ಆ ಶೈವ ಮಠದ ಉಳಿದ ಸ್ವಾಮೀಜಿಗಳಲ್ಲಿ ಗೊಂದಲ ಮೂಡಿಸಿದೆ.

ಮಧುರೈ ಅಧೀನಂನ 292ನೇ ಪೀಠಾಧಿಪತಿ ಅರುಣಗಿರಿನಾಥ ಜ್ಞಾನಸಂಬಂತ ದೇಶಿಕ ಪರಮಾಚಾರ್ಯ ಸ್ವಾಮಿ ಆಗಸ್ಟ್​ 13ರಂದು ಖಾಸಗಿ ಆಸ್ಪತ್ರೆಯೊಂದರಲ್ಲಿ ನಿಧನರಾಗಿದ್ದಾರೆ. 77 ವರ್ಷದ ಅವರು, ಉಸಿರಾಟ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ಕಳೆದ ನಾಲ್ಕು ದಶಕಗಳಿಂದಲೂ ಈ ಅಧೀನಂನ ಪೀಠಾಧಿಪತಿಯಾಗಿದ್ದರು. ಆಗಸ್ಟ್​ 14ರಂದು ಅರುಣಗಿರಿನಾಥ ಜ್ಞಾನಸಂಬಂತ ದೇಶಿಕ ಪರಮಾಚಾರ್ಯರ ಅಂತಿಮ ಕ್ರಿಯೆ ನಡೆದಿದೆ. ಅಂದೇ ಅಧೀನಂಗೆ ನೂತನ ಪೀಠಾಧಿಪತಿಯ ಹೆಸರೂ ಘೋಷಣೆಯಾಗಿದೆ. ಅರುಣಗಿರಿನಾಥ ಅವರ ಶಿಷ್ಯರಾದ ಹರಿಹರ ದೇಸಿಕ ಜ್ಞಾನಸಂಬಂತ ಪರಮಾಚಾರ್ಯ ಸ್ವಾಮಿಗಳು ಮಧುರೈ ಅಧೀನಂನ ಮುಂದಿನ ಪೀಠಾಧಿಪತಿಗಳು ಎಂದು ಹೇಳಲಾಗಿತ್ತು. 2019ರಲ್ಲಿ ಇವರನ್ನು ಕಿರಿಯ ಮಠಾಧೀಶರನ್ನಾಗಿ ನೇಮಕ ಮಾಡಲಾಗಿತ್ತು. ಶೀಘ್ರದಲ್ಲೇ ಹರಿಹರ ದೇಸಿಕ ಪರಮಾಚಾರ್ಯರ ಪಟ್ಟಾಭಿಷೇಕವೂ ನಡೆಯುವುದಿತ್ತು. ಅಷ್ಟರಲ್ಲಿ ನಿತ್ಯಾನಂದ ಸಕಲರಿಗೂ ಶಾಕ್​ ಕೊಟ್ಟಿದ್ದಾರೆ.

ಮಂಗಳವಾರ ತಮ್ಮ ಸಾಮಾಜಿಕ ಜಾಲತಾಣದ ಮೂಲಕ ತಾನು ಮಧುರೈ ಅಧೀನಂನ 293ನೇ ಪೀಠಾಧಿಪತಿಯಾಗಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ನಾನು ಕೈಲಾಸದ ನಿಯಮಗಳಿಗೆ ಅನುಸಾರವಾಗಿ, ಎಲ್ಲ ರೀತಿಯ ಅಧ್ಯಾತ್ಮ, ಧಾರ್ಮಿಕ ಮತ್ತು ಸಾಂಪ್ರದಾಯಿಕ ಆಚರಣೆಗಳ ಮೂಲಕವೇ ಮಧುರೈ ಅಧೀನಂನ ಪೀಠಾಧಿಪತಿಯಾಗಿದ್ದೇನೆ. ಉತ್ತರಾಧಿಕಾರತ್ವದ ಔಪಚಾರಿಕ ಪ್ರಕ್ರಿಯೆಗಳೆಲ್ಲವೂ ಅಧಿಕೃತವಾಗಿಯೇ ನಡೆದು, ಮುಕ್ತಾಯಗೊಂಡಿವೆ ಎಂದು ನಿತ್ಯಾನಂದ ಹೇಳಿಕೊಂಡಿದ್ದಾರೆ. ಹಾಗೇ, ತಮ್ಮ ಅನುಯಾಯಿಗಳಿಗೆ ವರ್ಚ್ಯುವಲ್​ ಆಗಿ ಆಶೀರ್ವಾದ ನೀಡುತ್ತಿದ್ದೇನೆ ಎಂದೂ ತಿಳಿಸಿದ್ದಾರೆ.

ಮಧುರೈ ಅಧೀನಂನ 292ನೇ ಪೀಠಾಧಿಪತಿಯಾಗಿದ್ದ ಅರುಣಗಿರಿನಾಥ ಸ್ವಾಮಿಗಳು ಆಗಸ್ಟ್​ 9ರಂದು ಆಸ್ಪತ್ರೆಗೆ ದಾಖಲಾದಾಗ, ಶೀಘ್ರವೇ ಗುಣಮುಖರಾಗುವಂತೆ ಈ ನಿತ್ಯಾನಂದ ಹಾರೈಸಿದ್ದರು. ನಿತ್ಯಾನಂದ ಅವರನ್ನು 2012ರ ಏಪ್ರಿಲ್​ 27ರಂದು ಇದೇ ಅರುಣಗಿರಿನಾಥರು, ಮಧುರೈ ಅಧೀನಂನ ಕಿರಿಯ ಪೀಠಾಧಿಪತಿ ಎಂದು ಘೋಷಿಸಿದ್ದರು. ಆದರೆ ನಂತರ ಅವರ ವಿರುದ್ಧದ ಕಾನೂನು ಮೊಕದ್ದಮೆಗಳು ಮತ್ತಿತರ ಕಾರಣಕ್ಕೆ ಅದೇ ವರ್ಷ ಡಿಸೆಂಬರ್​​ನಲ್ಲಿ ತೆಗೆದುಹಾಕಿದ್ದರು. ಅದಾದ ನಂತರ ನಿತ್ಯಾನಂದ ಮತ್ತು ಆತನ ಸಹಚರರು ಮಧುರೈ ಅಧೀನಂ ಒಳಗೆ ಪ್ರವೇಶ ಮಾಡಬಾರದು ಎಂದು 2017ರಲ್ಲಿ ಮದ್ರಾಸ್​ ಹೈಕೋರ್ಟ್​ ತೀರ್ಪು ನೀಡಿತ್ತು.

ಇದನ್ನೂ ಓದಿ‘ಮಹಾನಾಯಕ ಡಾ. ಬಿ.ಆರ್​. ಅಂಬೇಡ್ಕರ್​’ ಧಾರಾವಾಹಿಗೆ ಸಿಎಂ ಬಸವರಾಜ ಬೊಮ್ಮಾಯಿ ಬೆಂಬಲ; ಹೊಸ ಯುಗ ಶುರು

Ashraf Ghani: ಅಫ್ಘಾನಿಸ್ತಾನ ಬಿಟ್ಟ ಮೇಲೆ ಮೊದಲ ವಿಡಿಯೋ ಬಿಡುಗಡೆ ಮಾಡಿದ ಅಶ್ರಫ್​ ಘನಿ; ಹೇಳಿದ್ದೇನು?

(Swami Nityananda claims to have taken charge as pontiff of Madurai Aadheenam)

Published On - 9:32 am, Thu, 19 August 21

‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು