ಫೆ 3 ರಿಂದ ಬಜೆಟ್ ಅಧಿವೇಶನ: ತೆಲಂಗಾಣ ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣ ಇರುತ್ತದಾ, ಇಲ್ಲವಾ? ಕೆಸಿಆರ್ ಸರ್ಕಾರ ಹೇಳುವುದೇನು?
Telangana Budget Session: ತೆಲಂಗಾಣದಲ್ಲಿ ಬಜೆಟ್ ಅಧಿವೇಶನ ನಿಗದಿಯಾಗಿದೆ. ಫೆಬ್ರವರಿ 3ರಂದು ಅಧಿವೇಶನ ಆರಂಭವಾಗಲಿದೆ. 5ರಂದು ಬಜೆಟ್ ಮಂಡನೆಯಾಗಲಿದೆ. ಆದರೆ ಈ ಬಾರಿಯೂ ರಾಜ್ಯಪಾಲರ ಭಾಷಣ ಇಲ್ಲದೆಯೇ ಬಜೆಟ್ ಅಧಿವೇಶನ ನಡೆಯುತ್ತದಾ?
ತೆಲಂಗಾಣದಲ್ಲಿ (Telangana) ಬಜೆಟ್ ಅಧಿವೇಶನ ನಿಗದಿಯಾಗಿದೆ. ಫೆಬ್ರವರಿ 3ರಂದು ಅಧಿವೇಶನ ಆರಂಭವಾಗಲಿದೆ. 5ರಂದು ಬಜೆಟ್ ಮಂಡನೆಯಾಗಲಿದೆ. ಆದರೆ ಈ ಬಾರಿಯೂ ರಾಜ್ಯಪಾಲರ ಭಾಷಣ (Governor) ಇಲ್ಲದೆಯೇ ಬಜೆಟ್ ಅಧಿವೇಶನ ನಡೆಯಲಿದೆ ಎನ್ನಲಾಗಿದೆ. ಮತ್ತೊಂದೆಡೆ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ (K Chandrashekar Rao) ಬಜೆಟ್‌ನ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ. ತೆಲಂಗಾಣ ಬಜೆಟ್ ಅಧಿವೇಶನ ಮುಂದಿನ ತಿಂಗಳು 3 ಶುಕ್ರವಾರದಂದು ಮಧ್ಯಾಹ್ನ 12 ಗಂಟೆಗೆ ಆರಂಭವಾಗಲಿದೆ. 5 ರಂದು ಸದನದಲ್ಲಿ ಬಜೆಟ್ ಮಂಡನೆಯಾಗಲಿದೆ. ಈ ಮಟ್ಟಿಗೆ ವಿಧಾನಸಭೆ ಮತ್ತು ಪರಿಷತ್ ಸಭೆಗಳ ಬಗ್ಗೆ ಶಾಸಕರು ಮತ್ತು ಎಂಎಲ್ ಸಿ ಗಳಿಗೆ ಮಾಹಿತಿ ನೀಡಲಾಗಿದೆ.
ತೆಲಂಗಾಣ ರಾಜ್ಯ ಬಜೆಟ್ 2023-24 ರ ಪ್ರಸ್ತಾವನೆಗಳನ್ನು ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಈಗಾಗಲೇ ಪರಿಶೀಲಿಸಿದ್ದಾರೆ. ಸಭೆಯಲ್ಲಿ ಹಣಕಾಸು ಸಚಿವ ಹರೀಶ್ ರಾವ್ ಹಾಗೂ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು. ಹಾಗೆ ನೋಡಿದರೆ ಬಜೆಟ್ ಗಾತ್ರ ಸುಮಾರು 2.85 ಲಕ್ಷ ಕೋಟಿಯಿಂದ 3 ಲಕ್ಷ ಕೋಟಿ ರೂಪಾಯಿ ಇರಬಹುದು ಎಂದು ಅಂದಾಜಿಸಲಾಗಿದೆ.
ಮತ್ತೊಂದೆಡೆ ಈ ಭಾಷಣದಲ್ಲಿ ರಾಜ್ಯಪಾಲರ ಭಾಷಣ ಇರುತ್ತಾ.. ಅಥವಾ.. ಇಲ್ಲವಾ ಎಂಬ ಕುತೂಹಲ ಮೂಡಿದೆ. ಆದರೆ, ಈ ಬಾರಿ ರಾಜ್ಯಪಾಲರ ಭಾಷಣ ಇಲ್ಲದೆಯೇ ಜಂಟಿ ಅಧಿವೇಶನ ನಡೆಯುವ ಸೂಚನೆಗಳಿವೆ. ಅದಕ್ಕೆ ಕಾರಣವನ್ನೂ ಹೇಳಲಾಗಿದೆ. ಸರ್ಕಾರದ ಮೂಲಗಳ ಪ್ರಕಾರ ಹೊಸ ಅಧಿವೇಶನದಲ್ಲಿ ರಾಜ್ಯಪಾಲರ ಭಾಷಣ ಮಾತ್ರ ಇರುತ್ತದೆ.
ಆದರೆ ತೆಲಂಗಾಣದಲ್ಲಿ ಕಳೆದ ಒಂದೂವರೆ ವರ್ಷದಿಂದ ಒಂದೇ ಅಧಿವೇಶನ ಜರುಗಿದ್ದು, ವಿಧಾನಸಭೆ ನಡೆಯುತ್ತಿದೆ. ಬಜೆಟ್ ಸಭೆಗಳಲ್ಲಿ ರಾಜ್ಯಪಾಲರ ಭಾಷಣ ಕೇವಲ ಸಂಪ್ರದಾಯವೇ ಹೊರತು ಸಂವಿಧಾನದ ವಿಧಿಯಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ತೆಲಂಗಾಣದಲ್ಲಿ ಕೆಲವು ವರ್ಷಗಳಿಂದ ರಾಜಭವನ ವರ್ಸಸ್ ಪ್ರಗತಿ ಭವನ ಎಂಬಂತಾಗಿ ತಿಕ್ಕಾಟ ಮನೆ ಮಾಡಿದೆ. ಇತ್ತೀಚೆಗೆ ಖಮ್ಮಂ ಸಭೆಯಲ್ಲೂ ರಾಜ್ಯಪಾಲರ ವಿಚಾರವಾಗಿ ಆಡಳಿತಾರೂಢ ನಾಯಕರು ಟೀಕೆ ಮಾಡಿದ್ದರು. ಬಳಿಕ ರಾಜ್ಯಪಾಲ ತಮಿಳ್ಸಾಯಿ ಕೂಡ ಅದಕ್ಕೆ ಪ್ರತಿಕ್ರಿಯಿಸಿದ್ದರು.
ರಾಜ್ಯದಲ್ಲಿ ಶಿಷ್ಟಾಚಾರ ಪಾಲನೆಯಾಗುತ್ತಿಲ್ಲ. ಈ ಬಾರಿಯ ಬಜೆಟ್ ಅಧಿವೇಶನದಲ್ಲಾದರೂ ಪಾಲಿಸುತ್ತಾರಾ ಎಂಬುದನ್ನು ಗಮನಿಸಲಾಗುವುದು ಎಂದು ಪ್ರತಿಕ್ರಿಯಿಸಿದರು. ಆದರೆ ಇದಕ್ಕೆ ತಿರುಗೇಟು ಕೊಡುವಂತೆ ರಾಜ್ಯಪಾಲರ ಭಾಷಣ ಇರುವುದಿಲ್ಲ ಎನ್ನಲಾಗಿದೆ.
ಇತ್ತೀಚೆಗಷ್ಟೇ ತಮಿಳುನಾಡಿನಲ್ಲಿ ರಾಜ್ಯಪಾಲರು ಮತ್ತು ಸರ್ಕಾರದ ನಡುವೆ ದೊಡ್ಡ ವಾಗ್ವಾದ ನಡೆದಿತ್ತು. ರಾಜ್ಯಪಾಲ ರವಿ ವಿಧಾನಸಭೆಯಲ್ಲಿ ಮಾಡಿದ ಭಾಷಣಕ್ಕೆ ರಾಜ್ಯಾದ್ಯಂತ ಟೀಕೆ ವ್ಯಕ್ತವಾಗಿತ್ತು. ಅವರ ಭಾಷಣದ ವಿರುದ್ಧ ತಮಿಳುನಾಡು ಸರ್ಕಾರ ನಿರ್ಣಯವನ್ನೂ ಅಂಗೀಕರಿಸಿದೆ. ಅಂತಹ ಸನ್ನಿವೇಶಗಳು ಇಲ್ಲಿ ನಡೆಯುವ ಸಾಧ್ಯತೆ ಇಲ್ಲ. ಹಾಗಾಗಿಯೇ ರಾಜ್ಯಪಾಲರ ಭಾಷಣವಿಲ್ಲದೇ ಸರ್ಕಾರ/ ಅಧಿವೇಶನ ಮುಂದುವರಿಯಲಿದೆ ಎಂಬ ಮಾತು ರಾಜಕೀಯ ವಲಯದಲ್ಲಿ ಜೋರಾಗಿದೆ.