AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Lasya Nanditha: ಭೀಕರ ಅಪಘಾತದಲ್ಲಿ ಲಾಸ್ಯ ನಂದಿತಾ ದುರ್ಮರಣ; 10 ದಿನಗಳ ಹಿಂದೆ ನಡೆದ ಅವಘಡದಲ್ಲಿ ಪಾರಾಗಿದ್ದರು!

10 ದಿನಗಳ ಹಿಂದೆಯಷ್ಟೇ ನರ್ಕಟ್‌ಪಲ್ಲಿಯಲ್ಲಿ ಸಂಭವಿಸಿದ ಅಪಘಾತದಲ್ಲಿ 37ರ ಹರೆಯದ ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ಶಾಸಕಿ ಲಾಸ್ಯ ನಂದಿತಾ ಬದುಕುಳಿದಿದ್ದರು.ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಭಾಷಣ ಮಾಡುತ್ತಿದ್ದ ರ‍್ಯಾಲಿಗೆ ತೆರಳುತ್ತಿದ್ದ ವೇಳೆ ಪಾನಮತ್ತ ಚಾಲಕನೊಬ್ಬ ಆಕೆಯ ವಾಹನಕ್ಕೆ ಡಿಕ್ಕಿ ಹೊಡೆದು ಆ ಅಪಘಾತ ಸಂಭವಿಸಿತ್ತು. ಅದರಲ್ಲಿಆಕೆಯ ಹೋಮ್ ಗಾರ್ಡ್ ಸಾವಿಗೀಡಾಗಿದ್ದು, ಆಕೆಗೆ ಸಣ್ಣಪುಟ್ಟ ಗಾಯಗಳಾಗಿತ್ತು

Lasya Nanditha: ಭೀಕರ ಅಪಘಾತದಲ್ಲಿ ಲಾಸ್ಯ ನಂದಿತಾ ದುರ್ಮರಣ; 10 ದಿನಗಳ ಹಿಂದೆ ನಡೆದ ಅವಘಡದಲ್ಲಿ ಪಾರಾಗಿದ್ದರು!
ಲಾಸ್ಯ ನಂದಿತಾ
ರಶ್ಮಿ ಕಲ್ಲಕಟ್ಟ
|

Updated on: Feb 23, 2024 | 6:17 PM

Share

ಹೈದರಾಬಾದ್ ಫೆಬ್ರುವರಿ 23: ಹೈದರಾಬಾದ್​​ (Hyderabad)ನಲ್ಲಿ ಎಸ್‌ಯುವಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ತೆಲಂಗಾಣ ಶಾಸಕಿ ಲಾಸ್ಯ ನಂದಿತಾ (Lasya Nanditha) ಸಾವಿಗೀಡಾಗಿದ್ದಾರೆ. 37ರ ಹರೆಯದ ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ಶಾಸಕಿ, 10 ದಿನಗಳ ಹಿಂದೆಯಷ್ಟೇ ನರ್ಕಟ್‌ಪಲ್ಲಿಯಲ್ಲಿ ಅಪಘಾತದಲ್ಲಿ ಬದುಕುಳಿದಿದ್ದರು. ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಭಾಷಣ ಮಾಡುತ್ತಿದ್ದ ರ‍್ಯಾಲಿಗೆ ತೆರಳುತ್ತಿದ್ದ ವೇಳೆ ಪಾನಮತ್ತ ಚಾಲಕನೊಬ್ಬ ಆಕೆಯ ವಾಹನಕ್ಕೆ ಡಿಕ್ಕಿ ಹೊಡೆದಿದ್ದಾನೆ. ಈ ಅಪಘಾತದಲ್ಲಿ ಆಕೆಯ ಹೋಮ್ ಗಾರ್ಡ್ ಸಾವಿಗೀಡಾಗಿದ್ದು, ಆಕೆಗೆ ಸಣ್ಣಪುಟ್ಟ ಗಾಯಗಳಾಗಿತ್ತು.

ಹೈದರಾಬಾದ್‌ನ ಹೊರ ವರ್ತುಲ ರಸ್ತೆಯಲ್ಲಿ ಆಕೆಯ ವಾಹನ ಮಾರುತಿ ಎಕ್ಸ್‌ಎಲ್ 6 ಚಾಲಕನ ನಿಯಂತ್ರಣ ತಪ್ಪಿ ಲೋಹದ ಡಿವೈಡರ್‌ಗೆ ಡಿಕ್ಕಿ ಹೊಡೆದು ಶುಕ್ರವಾರ ಭೀಕರ ಅಪಘಾತ ಸಂಭವಿಸಿದೆ. ಲಾಸ್ಯ ನಂದಿತಾ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಚಾಲಕ ಗಂಭೀರವಾಗಿ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶುಕ್ರವಾರ ಮುಂಜಾನೆ 5.30ಕ್ಕೆ ಈ ಘಟನೆ ನಡೆದಿದೆ. ಎರಡೂ ಅಪಘಾತಗಳ ಕುರಿತು ಸದ್ಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

37 ವರ್ಷ ವಯಸ್ಸಿನ ಸಿಕಂದರಾಬಾದ್ ಕಂಟೋನ್ಮೆಂಟ್ (SC) ಶಾಸಕರಾಗಿದ್ದ ಲಾಸ್ಯ ಅವರನ್ನು ಅಪಘಾತ ಸ್ಥಳದಿಂದ ಆಸ್ಪತ್ರೆಗೆ ಸಾಗಿಸಲಾಗಿತ್ತು. ಅಲ್ಲಿಗೆ ಬರುವಾಗಲೇ ಶಾಸಕಿ ಕೊನೆಯುಸಿರೆಳೆದಿರುವುದಾಗಿ ವೈದ್ಯರು ಘೋಷಿಸಿದ್ದಾರೆ. 1986 ರಲ್ಲಿ ಹೈದರಾಬಾದ್‌ನಲ್ಲಿ ಜನಿಸಿದ ಲಾಸ್ಯ ನಂದಿತಾ ಸುಮಾರು ಒಂದು ದಶಕದ ಹಿಂದೆ ರಾಜಕೀಯಕ್ಕೆ ಕಾಲಿಟ್ಟರು. 2023 ರ ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಸಿಕಂದರಾಬಾದ್ ಕಂಟೋನ್ಮೆಂಟ್‌ನಿಂದ ಶಾಸಕರಾಗಿ ಆಯ್ಕೆಯಾಗುವ ಮೊದಲು ಅವರು ಕವಾಡಿಗುಡ ವಾರ್ಡ್‌ನಲ್ಲಿ ಕಾರ್ಪೊರೇಟರ್ ಆಗಿ ಸೇವೆ ಸಲ್ಲಿಸಿದ್ದರು.

ತೆಲಂಗಾಣ ಮುಖ್ಯಮಂತ್ರಿ, ಬಿಆರ್‌ಎಸ್ ಮುಖ್ಯಸ್ಥ ಕೆ ಚಂದ್ರಶೇಖರ್ ರಾವ್, ರಾಜ್ಯ ಬಿಜೆಪಿ ಅಧ್ಯಕ್ಷ ಜಿ ಕಿಶನ್ ರೆಡ್ಡಿ ಮತ್ತು ತೆಲಂಗಾಣದ ಹಲವಾರು ಸಚಿವರು ಮತ್ತು ಮುಖಂಡರು ಯುವ ಶಾಸಕರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ಇದನ್ನೂ ಓದಿ: Unemployed Husband Maintenance: ನಿರುದ್ಯೋಗಿ ಪತಿಗೆ ತಿಂಗಳಿಗೆ ₹5,000 ಜೀವನಾಂಶ ಕೊಡಬೇಕು ಎಂದು ಆದೇಶಿಸಿದ ಇಂದೋರ್ ನ್ಯಾಯಾಲಯ

ಲಾಸ್ಯ ನಂದಿತಾ ಅವರ ಸಾವಿನ ಬಗ್ಗೆ ದುಃಖ ವ್ಯಕ್ತಪಡಿಸಿದ ರೇವಂತ್ ರೆಡ್ಡಿ, ಆಕೆಯ ತಂದೆ ಜಿ ಸಾಯಣ್ಣ ಅವರೊಂದಿಗಿನ ನಿಕಟ ಒಡನಾಟವನ್ನು ಸ್ಮರಿಸಿದರು. ಕಳೆದ ವರ್ಷ ಫೆಬ್ರವರಿಯಲ್ಲಿ ಸಾಯಣ್ಣ ಮೃತಪಟ್ಟಿದ್ದು ಅದೇ ತಿಂಗಳಲ್ಲಿ (ಒಂದು ವರ್ಷದ ಅವಧಿಯಲ್ಲಿ) ಲಾಸ್ಯ ನಂದಿತಾ ಸಾವಿಗೀಡಾಗಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ