ತೆಲಂಗಾಣ ಬಸ್ ಅಪಘಾತ, ಮೂವರು ಹೆಣ್ಣುಮಕ್ಕಳನ್ನು ಕಳೆದುಕೊಂಡು ದಿಕ್ಕೇ ತೋಚದೆ ಕುಳಿತ ತಂದೆ

ತೆಲಂಗಾಣ ಬಸ್ ಅಪಘಾತ(Telangana Bus Accident)ದಲ್ಲಿ ಮೂವರು ಹೆಣ್ಣುಮಕ್ಕಳನ್ನು ಕಳೆದುಕೊಂಡ ಪೋಷಕರಿಗೆ ಆಕಾಶವೇ ತಲೆಯ ಮೇಲೆ ಬಿದ್ದಂತಾಗಿದೆ. ಮೂವರು ಹೆಣ್ಣುಮಕ್ಕಳು ಮಸಣ ಸೇರಿದ್ದಾರೆ. ಪೋಷಕರ ಆಕ್ರಂದ ಮುಗಿಲುಮುಟ್ಟಿದೆ. ಹೈದರಾಬಾದ್-ಬಿಜಾಪುರ ಹೆದ್ದಾರಿಯಲ್ಲಿ ಸೋಮವಾರ ಬೆಳಿಗ್ಗೆ ಸಂಭವಿಸಿದ ದುರಂತದಲ್ಲಿ 19 ಜನರು ಸಾವನ್ನಪ್ಪಿದ್ದಾರೆ. ಅದರಲ್ಲಿ ಯಲ್ಲಯ್ಯ ಗೌಡ ಎಂಬುವವರ ಮೂವರು ಹೆಣ್ಣುಮಕ್ಕಳು ಕೂಡ ಸಾವನ್ನಪ್ಪಿದ್ದಾರೆ. ತನುಷಾ, ಸಾಯಿ ಪ್ರಿಯಾ ಮತ್ತು ನಂದಿನಿ ಎಲ್ಲರೂ ಕಾಲೇಜು ವಿದ್ಯಾರ್ಥಿಗಳು

ತೆಲಂಗಾಣ ಬಸ್ ಅಪಘಾತ, ಮೂವರು ಹೆಣ್ಣುಮಕ್ಕಳನ್ನು ಕಳೆದುಕೊಂಡು ದಿಕ್ಕೇ ತೋಚದೆ ಕುಳಿತ ತಂದೆ
ಮೃತ ಹೆಣ್ಣುಮಕ್ಕಳು
Image Credit source: NDTV

Updated on: Nov 04, 2025 | 8:05 AM

ಹೈದರಾಬಾದ್, ನವೆಂಬರ್ 04: ತೆಲಂಗಾಣ ಬಸ್ ಅಪಘಾತ(Telangana Bus Accident)ದಲ್ಲಿ ಮೂವರು ಹೆಣ್ಣುಮಕ್ಕಳನ್ನು ಕಳೆದುಕೊಂಡ ಪೋಷಕರಿಗೆ ಆಕಾಶವೇ ತಲೆಯ ಮೇಲೆ ಬಿದ್ದಂತಾಗಿದೆ. ಮೂವರು ಹೆಣ್ಣುಮಕ್ಕಳು ಮಸಣ ಸೇರಿದ್ದಾರೆ. ಪೋಷಕರ ಆಕ್ರಂದ ಮುಗಿಲುಮುಟ್ಟಿದೆ. ಹೈದರಾಬಾದ್-ಬಿಜಾಪುರ ಹೆದ್ದಾರಿಯಲ್ಲಿ ಸೋಮವಾರ ಬೆಳಿಗ್ಗೆ ಸಂಭವಿಸಿದ ದುರಂತದಲ್ಲಿ 19 ಜನರು ಸಾವನ್ನಪ್ಪಿದ್ದಾರೆ. ಅದರಲ್ಲಿ ಯಲ್ಲಯ್ಯ ಗೌಡ ಎಂಬುವವರ ಮೂವರು ಹೆಣ್ಣುಮಕ್ಕಳು ಕೂಡ ಸಾವನ್ನಪ್ಪಿದ್ದಾರೆ. ತನುಷಾ, ಸಾಯಿ ಪ್ರಿಯಾ ಮತ್ತು ನಂದಿನಿ ಎಲ್ಲರೂ ಕಾಲೇಜು ವಿದ್ಯಾರ್ಥಿಗಳು.

ಇತ್ತೀಚೆಗೆ ಕುಟುಂಬವು ತಮ್ಮ ಹಿರಿಯ ಮಗಳು ಅನುಷಾಳ ಮದುವೆಯನ್ನು ಆಚರಿಸಿತ್ತು. ವಾರಾಂತ್ಯದಲ್ಲಿ, ಹೈದರಾಬಾದ್‌ನಲ್ಲಿ ಓದುತ್ತಿದ್ದ ಹುಡುಗಿಯರು ತಂದೂರಿನಲ್ಲಿ ಮತ್ತೊಂದು ಮದುವೆಗೆಂದು ಬಂದಿದ್ದರು.

ನಾನು ಬರಬೇಡಿ ಎಂದೇ ಹೇಳಿದ್ದೆ ಆದರೆ ಅವರ ತಾಯಿಯ ಒತ್ತಾಯಕ್ಕೆ ಅವರು ಬಂದಿದ್ದರು. ಭಾನುವಾರ ಹೋಗಬೇಡಿ ಸೋಮವಾರ ಬೆಳಗಿನ ಜಾವ ಬೇಗ ಹೊರಟುಬಿಡಿ ಎಂದು ಎಷ್ಟೇ ಕೇಳಿಕೊಂಡರು ಉಳಿಯಲು ಮಕ್ಕಳು ಸಿದ್ಧರಿರಲಿಲ್ಲ.

ಮತ್ತಷ್ಟು ಓದಿ:  Telangana Road Accident: ತೆಲಂಗಾಣ: ಭೀಕರ ರಸ್ತೆ ಅಪಘಾತದಲ್ಲಿ ಕನಿಷ್ಠ 20 ಮಂದಿ ಸಾವು

ರೈಲು ಸಿಕ್ಕಿಲ್ಲವೆಂದು ಬಸ್ಸಿಗೆ ಬಿಡಲು ಬಂದಾಗ ಎಲ್ಯಾರೋ ಬಸ್ ಉತ್ತಮ ಸ್ಥಿತಿಯಲ್ಲಿಲ್ಲ ಎಂದು ಹೇಳಿದ್ದರು ಆದರೆ ಅದನ್ನೂ ನಾನು ಕಿವಿಗೆ ಹಾಕಿಕೊಂಡಿರಲಿಲ್ಲ. ಜಲ್ಲಿ ತುಂಬಿದ ಟ್ರಕ್ ಹಾಗೂ ಬಸ್ ಮುಖಾಮುಖಿ ಡಿಕ್ಕಿ ಸಂಭವಿಸಿ 19 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಟ್ರಕ್ ಬಸ್ಮೇಲೆ ಮಗುಚಿ ಬಿದ್ದಿತ್ತು.

ಇದರಲ್ಲಿ 33 ವರ್ಷದ ಸಾಲಿಹಾ ಬೇಗಂ ಕುಟುಂಬದ ಕತೆ ಕೂಡಾ ಇದೆ. ಸಾಲಿಹಾ ತನ್ನ ಮೂರು ತಿಂಗಳ ಮಗುವಿನೊಂದಿಗೆ ತನ್ನ ಅಜ್ಜಿಯನ್ನು ಭೇಟಿಯಾಗಲು ಹೈದರಾಬಾದ್ಗೆ ಪ್ರಯಾಣಿಸುತ್ತಿದ್ದರು. ಜಲ್ಲಿ ರಾಶಿಯೊಳಗೆ ಇಬ್ಬರ ದೇಹವೂ ಪತ್ತೆಯಾಗಿದೆ. ತಾಯಿ ಮಗುವನ್ನು ಅಪ್ಪಿಕೊಂಡೇ ಇದ್ದರು.

ಮತ್ತೊಬ್ಬರು ಎನ್ ಹನುಮಂತು, ಅವರು ಹೈದರಾಬಾದ್ಗೆ ಹೋಗುವ ರೈಲು ತಪ್ಪಿ ಬಸ್ ಹತ್ತಿದ್ದರು. ಅವರು 10 ವರ್ಷದ ಮಗನನ್ನು ಅಗಲಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 8:05 am, Tue, 4 November 25

ನಯನಾ ರಾಜೀವ್

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us