Temple 360 ವೆಬ್​ಸೈಟ್ ಲೋಕಾರ್ಪಣೆಗೊಳಿಸಿದ ಕೇಂದ್ರ ಸರ್ಕಾರ; ಏನಿದರ ವೈಶಿಷ್ಟ್ಯತೆ? ಇಲ್ಲಿದೆ ಮಾಹಿತಿ

ಸದ್ಯ ಟೆಂಪಲ್​ 360 ಪೋರ್ಟಲ್​ನಲ್ಲಿ ಗುಜರಾತ್​ನ ಸೋಮನಾಥ ದೇಗುಲ, ಕಾಶಿ ವಿಶ್ವನಾಥ ದೇವಾಲಯ, ಮಹಾರಾಷ್ಟ್ರದ ತೃಯಂಬೇಕಶ್ವರ ಮತ್ತು ಘೃಷ್ಣೇಶ್ವರ ಮಂದಿರಗಳ ದೇವರ ದರ್ಶನ ಪಡೆಯಬಹುದಾಗಿದೆ.

Temple 360 ವೆಬ್​ಸೈಟ್ ಲೋಕಾರ್ಪಣೆಗೊಳಿಸಿದ ಕೇಂದ್ರ ಸರ್ಕಾರ; ಏನಿದರ ವೈಶಿಷ್ಟ್ಯತೆ? ಇಲ್ಲಿದೆ ಮಾಹಿತಿ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: Lakshmi Hegde

Updated on: Apr 06, 2022 | 6:51 PM

ಯುಗಾದಿಯಂದು ಕೇಂದ್ರ ಸರ್ಕಾರ ‘Temple 360’ ಎಂಬ ಒಂದು ಪೋರ್ಟಲ್​​ನ್ನು (ವೆಬ್​ಸೈಟ್​) ಹೊರತಂದಿದೆ. ಅಂದು ಕೇಂದ್ರ ಸಂಸ್ಕೃತಿ, ವಿದೇಶಾಂಗ ಇಲಾಖೆ ರಾಜ್ಯ ಸಚಿವೆ ಮೀನಾಕ್ಷಿ ಲೇಖಿ ಈ ಪೋರ್ಟಲ್​ನ್ನು ಇಂದಿರಾ ಗಾಂಧಿ ರಾಷ್ಟ್ರೀಯ ಕಲಾ ಕೇಂದ್ರ (IGNCA)ದಲ್ಲಿ ಉದ್ಘಾಟಿಸಿದ್ದಾರೆ. ಈ ಬಾರಿ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ನಿಮಿತ್ತ ಕೇಂದ್ರ ಸರ್ಕಾರ ಆಜಾದಿ ಕಾ ಅಮೃತಮಹೋತ್ಸವ ಎಂಬ ವಿಶೇಷ ಅಭಿಯಾನ ಹಮ್ಮಿಕೊಂಡಿದೆ. ಇದರಡಿಯಲ್ಲಿ ಹಲವು ವಿಭಿನ್ನ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಹಾಗೇ, ಈ ಟೆಂಪಲ್​ 360 ಕೂಡ ಹೊರಬಂದಿದೆ. ಇದರ ಮೂಲಕ ದೇಶಾದ್ಯಂತ ಇರುವ ಪವಿತ್ರ ಯಾತ್ರಾಸ್ಥಳಗಳು, ಪ್ರಮುಖ ದೇವಾಲಯಗಳನ್ನು ಭಕ್ತರು ತಾವಿದ್ದ ಸ್ಥಳದಿಂದಲೇ ಆನ್​ಲೈನ್​ ಮೂಲಕ ವೀಕ್ಷಿಸಬಹುದು. ಅಂದರೆ ದೇಗುಲಗಳಲ್ಲಿರುವ ದೇವರ ದರ್ಶನವನ್ನು ಈ ಪೋರ್ಟಲ್​​ನಲ್ಲಿ ಲೈವ್​ ಆಗಿ ಪಡೆಯಬಹುದು. ಇದರಲ್ಲಿ 12 ಜ್ಯೋತಿರ್ಲಿಂಗ​ ಸೇರಿ ಇನ್ನೂ ಹಲವು ಪ್ರಮುಖ ಧಾರ್ಮಿಕ ಕ್ಷೇತ್ರಗಳ ದರ್ಶನ ಪಡೆಯಬಹುದಾಗಿದೆ.

ಸದ್ಯ ಟೆಂಪಲ್​ 360 ಪೋರ್ಟಲ್​ನಲ್ಲಿ ಗುಜರಾತ್​ನ ಸೋಮನಾಥ ದೇಗುಲ, ಕಾಶಿ ವಿಶ್ವನಾಥ ದೇವಾಲಯ, ಮಹಾರಾಷ್ಟ್ರದ ತೃಯಂಬೇಕಶ್ವರ ಮತ್ತು ಘೃಷ್ಣೇಶ್ವರ ಮಂದಿರಗಳ ದೇವರ ದರ್ಶನ ಪಡೆಯಬಹುದಾಗಿದೆ. ಪೂಜೆ, ಮಹಾಮಂಗಳಾರತಿ ಸೇರಿ ಇನ್ನಿತರ ಸೇವೆಗಳನ್ನೆಲ್ಲ ಲೈವ್​ನಲ್ಲಿಯೇ ಭಕ್ತರು ನೋಡಬಹುದಾಗಿದೆ. ಶೀಘ್ರದಲ್ಲಿಯೇ 12 ಜ್ಯೋತಿರ್ಲಿಂಗ ದರ್ಶನ ಮತ್ತು ಗುಜರಾತ್​ನ ದ್ವಾರಕಾ, ಉತ್ತರಾಖಂಡ್​ನ ಬದರಿನಾಥ, ಓಡಿಶಾದ ಪುರಿ ದೇಗುಲ ಮತ್ತು ತಮಿಳುನಾಡಿನ ರಾಮೇಶ್ವರಂ ದೇವಸ್ಥಾನಗಳ ಧಾರ್ಮಿಕ ಆಚರಣೆಗಳ ಲೈವ್​ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗುವುದು ಎಂದು ಕೇಂದ್ರ ಸಚಿವಾಲಯ ತಿಳಿಸಿದೆ.

ಈ ವೆಬ್​ಸೈಟ್ ಮೂಲಕ ಜನರು ಅಧ್ಯಾತ್ಮ ಪ್ರವಾಸ ಕೈಗೊಳ್ಳಬಹುದು. ಅಂದರೆ ದೇಶದ ಪ್ರಮುಖ ದೇಗುಲಗಳು, ಯಾತ್ರಾ ಸ್ಥಳಗಳ ದರ್ಶನವನ್ನು ಪ್ರಸ್ತುತ ಪೋರ್ಟಲ್​​ ಮೂಲಕ ಪಡೆಯಬಹುದು. ಅಲ್ಲಿ ನಡೆಯುವ ಧಾರ್ಮಿಕ ಆಚರಣೆಗಳು, ಪೂಜೆ, ಸೇವೆಯನ್ನು ಲೈವ್ ಆಗಿ ವೀಕ್ಷಿಸಬಹುದು. ಅಷ್ಟೇ ಅಲ್ಲ, ತಾವಿದ್ದಾ ಜಾಗದಿಂದಲೇ ಸೇವೆಯನ್ನೂ ಮಾಡಬಹುದು. ಇದಕ್ಕಾಗಿ ವೆಬ್​ಸೈಟ್​ನಲ್ಲಿ ಇನ್ನಷ್ಟು ವೈಶಿಷ್ಟ್ಯಗಳನ್ನು ಅಳವಡಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಅಲಿಗಢ, ಬದೌನ್ ಮತ್ತು ಸುಲ್ತಾನ್‌ಪುರ ಸೇರಿದಂತೆ ಉತ್ತರ ಪ್ರದೇಶದ 12 ಜಿಲ್ಲೆಗಳ ಹೆಸರು ಬದಲಾಯಿಸಲಿದೆ ಯೋಗಿ ಸರ್ಕಾರ