ಕುರೂಪಿ ಹೆಣ್ಣುಮಕ್ಕಳಿಗೆ ಮದುವೆಯಾಗಲು ವರದಕ್ಷಿಣೆ ಸಹಕಾರಿ; ಸಮಾಜಶಾಸ್ತ್ರದ ಪಠ್ಯಪುಸ್ತಕದಲ್ಲಿ ‘ವರದಕ್ಷಿಣೆ ವ್ಯವಸ್ಥೆ’ ಬಗ್ಗೆ ಪಾಠ
ಪೋಷಕರ ಆಸ್ತಿಯಲ್ಲಿ ಪಾಲನ್ನು ಹುಡುಗಿಯರು ವರದಕ್ಷಿಣೆ ಮೂಲಕ ಪಡೆಯುತ್ತಾರೆ. ವರದಕ್ಷಿಣೆ ಎಂಬುದು ನಮ್ಮ ಸಾಮಾಜಿಕ ಪಾರಂಪರಿಕ ಪದ್ದತಿಯಾಗಿದ್ದು ಒಮ್ಮೆಗೇ ಪದ್ಧತಿಗಳನ್ನು ನಿರ್ಮೂಲನೆ ಮಾಡುವುದು ಅಸಾಧ್ಯ.
ದೆಹಲಿ: ವರದಕ್ಷಿಣೆ ವ್ಯವಸ್ಥೆಯ (dowry system) “ಉದ್ದೇಶ ಮತ್ತು ಅನುಕೂಲಗಳು” ಎಂದು ಹೇಳಿರುವ ಪುಸ್ತಕ ಪುಟದ ಚಿತ್ರವು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಅಲ್ಲಿ ಪಟ್ಟಿ ಮಾಡಿರುವ ಸಂಗತಿಗಳನ್ನು ನೋಡಿ ಜನರು ಯುವಕರಿಗೆ ಮತ್ತು ಸಮಾಜಕ್ಕೆ ಇದು ಯಾವ ರೀತಿಯ ಸಂದೇಶವನ್ನು ಕಳುಹಿಸುತ್ತಿದೆ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ . ಟಿಕೆ ಇಂದ್ರಾಣಿ (T K Indrani) ಅವರ ದಾದಿಯರ ಸಮಾಜಶಾಸ್ತ್ರದ ಪಠ್ಯಪುಸ್ತಕದ (Textbook of Sociology for Nurses) ಪುಟ ಇದು ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರು ಹೇಳಿದ್ದಾರೆ. ಈ ಪುಟದಲ್ಲಿ “ವರದಕ್ಷಿಣೆಯ ಉದ್ದೇಶ” ಎಂಬ ಉಪಶೀರ್ಷಿಕೆಯ ಅಡಿಯಲ್ಲಿ ಈ ಸಂಗತಿಗಳನ್ನು ಪಟ್ಟಿ ಮಾಡಲಾಗಿದ. ಈ ಪುಸ್ತಕವು ನರ್ಸಿಂಗ್ ವಿದ್ಯಾರ್ಥಿಗಳಿರುವ ಪುಸ್ತಕವಾಗಿದ್ದು ಭಾರತೀಯ ನರ್ಸಿಂಗ್ ಕೌನ್ಸಿಲ್ ಪಠ್ಯಕ್ರಮದ ಪ್ರಕಾರ ಬರೆಯಲಾಗಿದೆ ಎಂದು ಪುಸ್ತಕದ ಕವರ್ ಮೇಲಿದೆ. ಪುಟದ ಚಿತ್ರವನ್ನು ಹಂಚಿಕೊಂಡ ಸಾಮಾಜಿಕ ಮಾಧ್ಯಮ ಬಳಕೆದಾರರಲ್ಲಿ ಶಿವಸೇನಾ ನಾಯಕಿ ಮತ್ತು ರಾಜ್ಯಸಭಾ ಸಂಸದೆ ಪ್ರಿಯಾಂಕಾ ಚತುರ್ವೇದಿ ಅವರು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರಲ್ಲಿ ಈ ಪಠ್ಯವನ್ನು ತೆಗೆದುಹಾಕುವಂತೆ ಕರೆ ನೀಡಿದರು. ನಮ್ಮ ಪಠ್ಯಕ್ರಮದಲ್ಲಿ ಇದು “ನಾಚಿಕೆಗೇಡಿನ ಸಂಗತಿ” ಎಂದು ಅವರು ಒತ್ತಿ ಹೇಳಿದರು. ಪುಸ್ತಕದಲ್ಲಿ ಪಟ್ಟಿ ಮಾಡಿದ ವರದಕ್ಷಿಣೆಯ ಪ್ರಯೋಜನದ ಪಟ್ಟಿಯಲ್ಲಿ ಪೀಠೋಪಕರಣಗಳು, ರೆಫ್ರಿಜರೇಟರ್‌ಗಳು ಮತ್ತು ವಾಹನಗಳಂತಹ ಉಪಕರಣಗಳೊಂದಿಗೆ “ಹೊಸ ಮನೆಯನ್ನು ಸಜ್ಜುಗೊಳಿಸಲು ವರದಕ್ಷಿಣೆ ಸಹಾಯಕವಾಗಿದೆ” ಎಂದು ಹೇಳುತ್ತದೆ. ಪೋಷಕರ ಆಸ್ತಿಯಲ್ಲಿ ಪಾಲನ್ನು ಹುಡುಗಿಯರು ವರದಕ್ಷಿಣೆ ಮೂಲಕ ಪಡೆಯುತ್ತಾರೆ. ವರದಕ್ಷಿಣೆ ಎಂಬುದು ನಮ್ಮ ಸಾಮಾಜಿಕ ಪಾರಂಪರಿಕ ಪದ್ದತಿಯಾಗಿದ್ದು ಒಮ್ಮೆಗೇ ಪದ್ಧತಿಗಳನ್ನು ನಿರ್ಮೂಲನೆ ಮಾಡುವುದು ಅಸಾಧ್ಯ.
I request Shri @dpradhanbjp ji to remove such books from circulation. That a textbook elaborating the merits of dowry can actually exist in our curriculum is a shame for the nation and its constitution. https://t.co/qQVE1FaOEw
— Priyanka Chaturvedi?? (@priyankac19) April 3, 2022
ವರದಕ್ಷಿಣೆ ವ್ಯವಸ್ಥೆಯ “ಪರೋಕ್ಷ ಪ್ರಯೋಜನ” ಎಂದರೆ ಪೋಷಕರು ಈಗ ತಮ್ಮ ಹೆಣ್ಣುಮಕ್ಕಳಿಗೆ ಕಡಿಮೆ ವರದಕ್ಷಿಣೆ ನೀಡುವ ಉದ್ದೇಶದಿಂದ ಶಿಕ್ಷಣವನ್ನು ನೀಡುತ್ತಿದ್ದಾರೆ. ಪುಟದ ಕೊನೆಯ ಅಂಶವು ವರದಕ್ಷಿಣೆ ವ್ಯವಸ್ಥೆಯು “ಕುರೂಪಿ ಹುಡುಗಿಯರಿಗೆ” ಮದುವೆಯಾಗಲು ಸಹಾಯ ಮಾಡುತ್ತದೆ ಎಂದು ಹೇಳುತ್ತದೆ.
ಇಂಥಾ ಪುಸ್ತಕಗಳು ಕಾಲೇಜು ಮಟ್ಟದ ವಿದ್ಯಾರ್ಥಿಗಳಿಗೆ ಪಠ್ಯಕ್ರಮದ ಭಾಗವಾಗಿರುವುದು ಭಯಾನಕವಾಗಿದೆ ಎಂದು ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ: ಚಿಕ್ಕಮಗಳೂರಿನಲ್ಲಿ 10 ರೂಪಾಯಿ ಚಿಲ್ಲರೆಗಾಗಿ 28 ವರ್ಷದ ಬಾರ್ ಕ್ಯಾಶಿಯರ್ ಕೊಲೆ; 6 ಆರೋಪಿಗಳು ಅರೆಸ್ಟ್