padma awardees full list: ಪದ್ಮ ಪ್ರಶಸ್ತಿ ಘೋಷಣೆ: ಕನ್ನಡ ಕವಿ ಸಿದ್ದಲಿಂಗಯ್ಯಗೆ ಪದ್ಮಶ್ರೀ, ಸಿಡಿಎಸ್ ಬಿಪಿನ್ ರಾವತ್​​ಗೆ ಮರಣೋತ್ತರ ಪದ್ಮವಿಭೂಷಣ

ಪದ್ಮ ಪ್ರಶಸ್ತಿ ಪುರಸ್ಕೃತರು: ಸಿಡಿಎಸ್ ಜನರಲ್ ಬಿಪಿನ್ ರಾವತ್ ಅವರಿಗೆ ಕೇಂದ್ರ ಸರ್ಕಾರವು ಮರಣೋತ್ತರ ಪದ್ಮವಿಭೂಷಣ ಪುರಸ್ಕಾರ ನೀಡಿ ಗೌರವಿಸಿದೆ. ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಅವರಿಗೆ ಪದ್ಬಭೂಷಣ ಪುರಸ್ಕಾರ ಸಂದಿದೆ.

padma awardees full list: ಪದ್ಮ ಪ್ರಶಸ್ತಿ ಘೋಷಣೆ: ಕನ್ನಡ ಕವಿ ಸಿದ್ದಲಿಂಗಯ್ಯಗೆ ಪದ್ಮಶ್ರೀ, ಸಿಡಿಎಸ್ ಬಿಪಿನ್ ರಾವತ್​​ಗೆ ಮರಣೋತ್ತರ ಪದ್ಮವಿಭೂಷಣ
ಕನ್ನಡ ಕವಿ ಸಿದ್ದಲಿಂಗಯ್ಯ ಮತ್ತು ಸಿಡಿಎಸ್ ಜನರಲ್ ಬಿಪಿನ್ ರಾವತ್
Edited By:

Updated on: Jan 25, 2022 | 10:30 PM

ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳನ್ನು ಗಣರಾಜ್ಯೋತ್ಸವದ ಮುನ್ನಾದಿನದಂದು ಘೋಷಿಸಲಾಗುತ್ತದೆ. ಈ ಬಾರಿ ಪದ್ಮ ಪ್ರಶಸ್ತಿಗಳನ್ನು ಘೋಷಿಸಿದ್ದು ಕನ್ನಡಕವಿ ಸಿದ್ದಲಿಂಗಯ್ಯ ಅವರಿಗೆ ಪದ್ಮಶ್ರೀ ಪುರಸ್ಕಾರ ಸಂದಿದೆ. ತಮಿಳುನಾಡಿನಲ್ಲಿ ಇತ್ತೀಚೆಗೆ ಸಂಭವಿಸಿದ ಹೆಲಿಕಾಪ್ಟರ್​ ದುರಂತದಲ್ಲಿ ಸಾವನ್ನಪ್ಪಿದ ಸಶಸ್ತ್ರ ಪಡೆಗಳ ಸಿಬ್ಬಂದಿ ಮುಖ್ಯಸ್ಥ (Chief of Defence Staff – CDS) ಸಿಡಿಎಸ್ ಜನರಲ್ ಬಿಪಿನ್ ರಾವತ್ ಅವರಿಗೆ ಕೇಂದ್ರ ಸರ್ಕಾರವು ಮರಣೋತ್ತರ ಪದ್ಮವಿಭೂಷಣ ಪುರಸ್ಕಾರ ನೀಡಿ ಗೌರವಿಸಲಾಗಿದೆ. ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಅವರಿಗೆ ಪದ್ಬಭೂಷಣ ಪುರಸ್ಕಾರ ಸಂದಿದೆ. ಗಾಯಕ ಸೋನು ನಿಗಮ್ ಅವರಿಗೆ ಪದ್ಮಶ್ರೀ ಪುರಸ್ಕಾರ ಸಂದಿದೆ. ಗೂಗಲ್ ಸಿಇಒ ಸುಂದರ್ ಪಿಚೈ, ಮೈಕ್ರೋಸಾಫ್ಟ್​ ಸಿಇಒ ಸತ್ಯ ನಾದೆಳ್ಳ ಸೇರಿದಂತೆ 128 ಸಾಧಕರಿಗೆ ಪದ್ಮ ಪುರಸ್ಕಾರಗಳನ್ನು ನೀಡಿ ಗೌರವಿಸಲಾಗಿದೆ. ಈ ವರ್ಷ ಒಂದು ಜೋಡಿಗೆ ಪ್ರಶಸ್ತಿ ಸೇರಿದಂತೆ 128 ಪದ್ಮ ಪ್ರಶಸ್ತಿಗಳನ್ನು ಪ್ರದಾನ ಮಾಡಲು ರಾಷ್ಟ್ರಪತಿಗಳು ಅನುಮೋದಿಸಿದ್ದಾರೆ (ಒಂದು ಜೋಡಿಯನ್ನು ಒಂದು ಪ್ರಶಸ್ತಿ ಎಂದೇ ಗಣನೆಗೆ ತೆಗೆದುಕೊಳ್ಳಲಾಗುವುದು). ಈ ಬಾರಿ 4 ಪದ್ಮವಿಭೂಷಣ, 17 ಪದ್ಮಭೂಷಣ ಮತ್ತು 107 ಪದ್ಮಶ್ರೀ ಪ್ರಶಸ್ತಿಗಳು ಇವೆ . ಪ್ರಶಸ್ತಿ ಪುರಸ್ಕೃತರಲ್ಲಿ 34 ಮಹಿಳೆಯರು ಮತ್ತು 10 ವಿದೇಶಿಯರು ಮತ್ತು 13 ಮರಣೋತ್ತರ ಪ್ರಶಸ್ತಿ ಪುರಸ್ಕೃತರು ಇದ್ದಾರೆ.

ಪದ್ಮ ಪ್ರಶಸ್ತಿಗಳನ್ನು 1954 ರಲ್ಲಿ ಸ್ಥಾಪಿಸಲಾಯಿತು ಮತ್ತು ಶಿಕ್ಷಣ, ಕಲೆ, ಸಾಹಿತ್ಯ, ವಿಜ್ಞಾನ, ನಟನೆ, ಸಮಾಜ ಸೇವೆ ಮತ್ತು ಸಾರ್ವಜನಿಕ ವ್ಯವಹಾರಗಳು ಸೇರಿದಂತೆ ಚಟುವಟಿಕೆಯ ವಿವಿಧ ಕ್ಷೇತ್ರಗಳಲ್ಲಿ ಅವರ ವಿಶಿಷ್ಟ ಕೊಡುಗೆಗಾಗಿ ಭಾರತದ ನಾಗರಿಕರಿಗೆ ನೀಡಲಾಗುತ್ತದೆ. ಕೇಂದ್ರ ಗೃಹ ಸಚಿವಾಲಯವು ಪ್ರಸಕ್ತ ಸಾಲಿನಲ್ಲಿ ಒಟ್ಟು 128 ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರಕಟಿಸಿದೆ. ಈ ಪೈಕಿ ನಾಲ್ವರಿಗೆ ಪದ್ಮವಿಭೂಷಣ, 17 ಸಾಧಕರಿಗೆ ಪದ್ಮಭೂಷಣ, 107 ಸಾಧಕರಿಗೆ ಪದ್ಮಶ್ರೀ ಪ್ರಶಸ್ತಿ ಸಿಕ್ಕಿದೆ.

ಪ್ರಶಸ್ತಿ ಪುರಸ್ಕೃತರ ಪೂರ್ಣ ಪಟ್ಟಿ ಇಲ್ಲಿದೆ

ಪದ್ಮ ವಿಭೂಷಣ ಪುರಸ್ಕೃತರು
ದೇಶದ ಎರಡನೇ ಅತ್ಯುನ್ನತ ನಾಗರಿಕ ಗೌರವವಾದ ಪದ್ಮವಿಭೂಷಣ ಪುರಸ್ಕಾರಕ್ಕೆ ಪ್ರಭಾ ಅತ್ರೆ (ಕಲೆ; ಮಹಾರಾಷ್ಟ್ರ), ರಾಧೇಶ್ಯಾಮ್ ಖೆಮ್ಕಾ (ಸಾಹಿತ್ಯ ಮತ್ತು ಶಿಕ್ಷಣ, ಮರಣೋತ್ತರ, ಉತ್ತರ ಪ್ರದೇಶ), ಜನರಲ್ ಬಿಪಿನ್ ರಾವತ್ (ನಾಗರಿಕ ಸೇವೆ, ಮರಣೋತ್ತರ, ಉತ್ತರಾಖಂಡ), ಕಲ್ಯಾಣ್​ಸಿಂಗ್ (ಮರಣೋತ್ತರ, ರಾಜಕಾರಣ, ಉತ್ತರ ಪ್ರದೇಶ).

ಪದ್ಮಶ್ರೀ ಪುರಸ್ಕೃತ ಕರ್ನಾಟಕದ ಸಾಧಕರು
ಸುಬ್ಬಣ್ಣ ಅಯ್ಯಪ್ಪನ್ (ವಿಜ್ಞಾನ ಮತ್ತು ಎಂಜಿನಿಯರಿಂಗ್), ಎಚ್​.ಆರ್.ಕೇಶವಮೂರ್ತಿ (ಕಲೆ), ಅಬ್ದುಲ್ ಖಾದರ್ ನಾದಕಟ್ಟಿನ್ (ತಳಮಟ್ಟದ ಅನ್ವೇಷಕರು), ಅಮೈ ಮಹಾಲಿಂಗ ನಾಯ್ಕ (ಕೃಷಿ), ಸಿದ್ದಲಿಂಗಯ್ಯ (ಸಾಹಿತ್ಯ ಮತ್ತು ಶಿಕ್ಷಣ).

ಧಾರವಾಡದ ಕೂರಿಗೆ ತಜ್ಞನಿಗೆ ಒಲಿದು ಬಂದ ಪದ್ಮಶ್ರೀ
ಧಾರವಾಡದ ಕೂರಿಗೆ ತಜ್ಞ ಅಬ್ದುಲ್ ಖಾದರ್ ನಡಕಟ್ಟಿನ್​​ಗೆ ಪದ್ಮಶ್ರೀ ಪ್ರಶಸ್ತಿಯ ಗೌರವ ಸಂದಿದೆ. ನಡಕಟ್ಟಿನ್ ಅವರು ಧಾರವಾಡ ಜಿಲ್ಲೆ ಅಣ್ಣಿಗೇರಿ ಪಟ್ಟಣದ ನಿವಾಸಿ. ಬಿತ್ತನೆ ಕೂರಿಗೆ ಸಂಶೋಧನೆ ಮಾಡಿದ್ದರು.

ಪ್ರಶಸ್ತಿ ಪುರಸ್ಕೃತರ ವಿವರ

Padma-Award-List

ಪದ್ಮ ಪ್ರಶಸ್ತಿ ಪುರಸ್ಕೃತರ ಪಟ್ಟಿ

 

 

 

 

ಇದನ್ನೂ ಓದಿ: Republic Day 2022: 189 ಶೌರ್ಯ ಪ್ರಶಸ್ತಿಗಳು ಸೇರಿದಂತೆ 939 ಪೊಲೀಸ್ ಪದಕ ಘೋಷಿಸಿದ ಗೃಹ ಸಚಿವಾಲಯ
ಇದನ್ನೂ ಓದಿ: Sonu Nigam: ಖ್ಯಾತ ಗಾಯಕ ಸೋನು ನಿಗಮ್​ ಸಾಧನೆಗೆ ಒಲಿಯಿತು ಪದ್ಮಶ್ರೀ ಪ್ರಶಸ್ತಿಯ ಗರಿ

Published On - 8:14 pm, Tue, 25 January 22

TV9 Web

TV9 Kannada

Read More
Loading...
Unable to load recommendations.
Follow Us