AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಿರುವನಂತಪುರಂ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿಗೆ ಅಭೂತಪೂರ್ವ ಗೆಲುವು, ಭಾವನಾತ್ಮಕ ಪತ್ರ ಬರೆದ ಪ್ರಧಾನಿ ಮೋದಿ

ಕೇರಳದ ತಿರುವನಂತಪುರಂ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿದೆ. ಈ ಐತಿಹಾಸಿಕ ವಿಜಯದ ನಂತರ, ಪ್ರಧಾನಿ ನರೇಂದ್ರ ಮೋದಿ ನೂತನ ಮೇಯರ್ ಮತ್ತು ಉಪ ಮೇಯರ್‌ಗೆ ಹೃದಯಪೂರ್ವಕ ಪತ್ರ ಬರೆದು ಅಭಿನಂದಿಸಿದ್ದಾರೆ. ಮೋದಿ ತಮ್ಮ ಕೇರಳದೊಂದಿಗಿನ ಸಂಬಂಧವನ್ನು ಸ್ಮರಿಸಿಕೊಂಡು, ನಗರದ ಅಭಿವೃದ್ಧಿಗೆ ಒತ್ತು ನೀಡಿದ್ದಾರೆ. ಈ ಗೆಲುವು ಕೇರಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ಮುನ್ನಡಿಯಾಗಿದೆ ಎಂದು ಬಣ್ಣಿಸಿದ್ದಾರೆ.

ತಿರುವನಂತಪುರಂ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿಗೆ ಅಭೂತಪೂರ್ವ ಗೆಲುವು, ಭಾವನಾತ್ಮಕ ಪತ್ರ ಬರೆದ ಪ್ರಧಾನಿ ಮೋದಿ
ಮೋದಿ-ಮೇಯರ್
ನಯನಾ ರಾಜೀವ್
|

Updated on:Jan 01, 2026 | 1:17 PM

Share

ತಿರುವನಂತಪುರಂ, ಜನವರಿ 01: ಕೇರಳದ ರಾಜಧಾನಿ ತಿರುವನಂತಪುರಂ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಜಯಭೇರಿ ಸಾಧಿಸಿ ಮೇಯರ್ ಹುದ್ದೆಗೇರಿದ ಬಿಜೆಪಿ ಮುಖಂಡರಿಗೆ ಪ್ರಧಾನಿ ನರೇಂದ್ರ ಮೋದಿ(Narendra Modi) ಹೃದಯ ಪೂರ್ವಕ ಭಾವನಾತ್ಮಕ ಪತ್ರ ಬರೆದಿದ್ದಾರೆ. 2026ರ ಹೊಸ ವರ್ಷದ ಸುಸಂದರ್ಭದಲ್ಲಿ ಮೇಯರ್ ಆಗಿ ನೇಮಕವಾಗಿರುವ ವಿವಿ ರಾಜೇಶ್ ಹಾಗೂ ಉಪ ಮೇಯರ್ ಆಶಾ ಮಾತ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ. ಹಾಗೆಯೇ ಈ ಅಭೂತಪೂರ್ವ ಜಯಕ್ಕೆ ಕಾರಣವಾದ ಸ್ಥಳೀಯ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಇದೇ ಸಂದರ್ಭದಲ್ಲಿ ಕೇರಳದ ಜತೆಗಿನ ನಂಟನ್ನು ಸ್ಮರಿಸಿಕೊಂಡಿರುವ ನರೇಂದ್ರ ಮೋದಿ, ತಿರುವನಂತಪುರಂನೊಂದಿಗಿನ ತಮ್ಮ ನೆನಪನ್ನು ಹಂಚಿಕೊಂಡಿದ್ದಾರೆ. ಪದ್ಮನಾಭ ಸ್ವಾಮಿಯ ಅನುಗ್ರಹ ಪಡೆದಿರುವ ನನಗೆ ಕೇರಳದ ಈ ನೆಲಸ ಮೇಲೆ ವಿಶೇಷ ಅಭಿಮಾನವಿದೆ ಎಂದಿದ್ದಾರೆ.

ಹಾಗೆಯೇ ತಿರುವನಂತಪುರ ನಗರವು ಹಲವಾರು ನಾಯಕರು, ಸಮಾಜ ಸುಧಾರಕರು, ಕಲಾವಿದರು, ಕವಿಗಳು, ಸಂಗೀತಗಾರರು , ಸಾಂಸ್ಕೃತಿಕ ಧಿಗ್ಗಜರು, ಸಂತರನ್ನು ಹೊಂದಿರುವ ನಾಡಾಗಿದೆ. ಇಂಥಾ ನಗರವು ನಮ್ಮ ಪಕ್ಷಕ್ಕೆ ಆಶೀರ್ವಾದ ಮಾಡಿರುವುದು ಹೆಮ್ಮೆಯ ವಿಚಾರ.

ಮತ್ತಷ್ಟು ಓದಿ: New Year 2026: ವಿಧಾನಸಭಾ ಚುನಾವಣಾ ಕದನ, ಒಂದು ರಾಷ್ಟ್ರ, ಒಂದು ಚುನಾವಣೆ, ಜನಗಣತಿ ಈ ವರ್ಷ ಏನೆಲ್ಲಾ ನಡೀಬಹುದು?

ಈ ಹಿನ್ನೆಲೆಯಲ್ಲಿ ನಗರದ ಅಭಿವೃದ್ಧಿಗೆ ನಮ್ಮ ನಾಯಕತ್ವವು ಶ್ರಮಿಸಲಿದೆ. ನಮ್ಮ ಪಕ್ಷವು ದೇಶದ ವಿವಿಧ ರಾಜ್ಯಗಳಲ್ಲಿ ವಿವಿಧ ರಾಜ್ಯಗಳಲ್ಲಿ ಮಾಡಿರುವ ಅಭಿವೃದ್ಧಿ ಪಥವನ್ನು ಬಯಸಿ ಇಲ್ಲಿಯ ಜನರು ಆಶೀರ್ವಾದ ಮಾಡಿದ್ದಾರೆ ಎಂದುಕೊಂಡಿದ್ದೇನೆ ಎಂದು ಮೋದಿ ಹೇಳಿದ್ದಾರೆ.

ಮೋದಿ ಬರೆದ ಪತ್ರ

ಕೇರಳ ಹಾಗೂ ದೇಶದ ಅಗಣಿತ ಬಿಜೆಪಿ ಕಾರ್ಯಕರ್ತರ ಪರವಾಗಿ ಈ ಹೆಮ್ಮೆಯ ವಿಚಾರವನ್ನು ಹೇಳಿಕೊಳ್ಳಲು ಖುಷಿಯಾಗುತ್ತದೆ. ತಿರುವನಂತಪುರಂ ಜನತೆಯ ಈ ತೀರ್ಪು ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆಯುವ ವಿಚಾರವಾಗಿದೆ ಎಂದು ಮೋದಿ ಹೇಳಿದ್ದಾರೆ.

ದಶಕಗಳ ಕಾಲ ಕೇರಳದಲ್ಲಿನ ಬಿಜೆಪಿ ಕಾರ್ಯಕರ್ತರು ಕಠಿಣ ಹಾದಿಯನ್ನು ಸವೆಸಿ ಬಂದಿದ್ದಾರೆ. ಕೇರಳದ ಎಲ್​ಡಿಎಫ್ ಹಾಗೂ ಯುಡಿಎಫ್ ಮೈತ್ರಿಕೂಟದ ದುರಾಡಳಿವನ್ನು ವರ್ಷಗಳ ಕಾಲ ಇಲ್ಲಿನ ಜನರು ನೋಡಿದ್ದಾರೆ.ಇನ್ನೊಂದೆಡೆ ಕೇರಳದ ಸಂಸ್ಕೃತಿಯನ್ನು ನಾಶಪಡಿಸುವ ಪ್ರಯತ್ನವನ್ನು ಈ ಕೂಡ ಮಾಡುವುದರ ಜತೆಗೆ ದುರಾಡಳಿತ ಹಾಗೂ ಭ್ರಷ್ಟಾಚಾರದ ಮೂಲಕ ರಾಜ್ಯದ ಜನತೆಗೆ ಮೋಸ ಮಾಡಲಾಗಿದೆ.

ಬಿಜೆಪಿ ಸಂಘಟನೆಯ ಮೇಲಿನ ನಿರಂತರ ಹಿಂಸಾಚಾರದ ಬಳಿಕವು ಕಾರ್ಯಕತರ್ರು ಪಕ್ಷಕ್ಕಾಗಿ ಧೈರ್ಯದಿಂದ ಎದೆ ತಟ್ಟಿ ನಿಂತಿದ್ದಾರೆ, ಜನರ ಧ್ವನಿಯಾಗಿ ಪಕ್ಷವ ಬಾವುಟವನ್ನು ಹಿಡಿದು ಧೈರ್ಯದಿಂದ ನಿಂತಿದ್ದಾರೆ ಎಂದು ಮೋದಿ ಕೊಂಡಾಡಿದ್ದಾರೆ. ಇಂದು ಭಾರತ ಮೊದಲು ಎನ್ನುವ ನಮ್ಮ ಸಿದ್ಧಾಂತದೊಂದಿಗೆ ನಿಂತು ಹೋರಾಡಿದ ಹಲವು ಕಾರ್ಯಕರ್ತರು ಇಂದು ನಮ್ಮೊಂದಿಗೆ ಇಲ್ಲ ಆದಾಗ್ಯೂ ಈ ಗೆಲುವು ಅವರಿಗೆ ಖುಷಿ ತರಿಸಲಿದೆ ಎಂದು ಮೋದಿ ಭಾವುಕ ನುಡಿಗಳನ್ನು ಬರೆದಿದ್ದಾರೆ.

ತಿರುವನಂತಪುರಂನ ಈ ಗೆಲುವು ಕೇರಳ ರಾಜ್ಯದಲ್ಲಿ ಬಿಜೆಪಿ ಆಡಳಿತಕ್ಕೆ ಬರಲು ಮುನ್ನುಡಿಯಾಗಲಿದೆ , ಈ ನಿಟ್ಟಿನಲ್ಲಿ ನಮ್ಮ ಕಾರ್ಯಕರ್ತರು ಹಾಗೂ ಪಕ್ಷ ಕೆಲಸ ಮುಂದುವರೆಸಲಿದೆ ಎಂದು ಹೇಳಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 1:12 pm, Thu, 1 January 26

ಮುಖಕ್ಕೆ ಮಾಸ್ಕ್, ಕೈಯಲ್ಲಿ ಕೋಲು: ದರೋಡೆಗೆ ಕಳ್ಳರ ಸಂಚು ನೋಡಿ
ಮುಖಕ್ಕೆ ಮಾಸ್ಕ್, ಕೈಯಲ್ಲಿ ಕೋಲು: ದರೋಡೆಗೆ ಕಳ್ಳರ ಸಂಚು ನೋಡಿ
ತಮ್ಮ ಲವ್ ಸ್ಟೋರಿ ಬಿಚ್ಚಿಟ್ಟ ನಟ ಝೈದ್ ಖಾನ್: ವಿಡಿಯೋ ನೋಡಿ
ತಮ್ಮ ಲವ್ ಸ್ಟೋರಿ ಬಿಚ್ಚಿಟ್ಟ ನಟ ಝೈದ್ ಖಾನ್: ವಿಡಿಯೋ ನೋಡಿ
ಬಿಗ್​​ಬಾಸ್ ವಿನ್ನರ್ ಗಿಲ್ಲಿಗೆ ಸಿಎಂ ಕೇಳಿದ ಪ್ರಶ್ನೆಗಳೇನು: ವಿಡಿಯೋ ನೋಡಿ
ಬಿಗ್​​ಬಾಸ್ ವಿನ್ನರ್ ಗಿಲ್ಲಿಗೆ ಸಿಎಂ ಕೇಳಿದ ಪ್ರಶ್ನೆಗಳೇನು: ವಿಡಿಯೋ ನೋಡಿ
ಪ್ರಿಯಕರನ ಜೊತೆ ಮಗಳು ಓಡಿಹೋಗಿದ್ದಕ್ಕೆ ಕಿರುಕುಳ: ಪತ್ನಿಯಿಂದಲೇ ಪತಿ ಹತ್ಯೆ
ಪ್ರಿಯಕರನ ಜೊತೆ ಮಗಳು ಓಡಿಹೋಗಿದ್ದಕ್ಕೆ ಕಿರುಕುಳ: ಪತ್ನಿಯಿಂದಲೇ ಪತಿ ಹತ್ಯೆ
ಪ್ರಾಮಾಣಿಕತೆಗೆ ಫಲ:ಸರ್ಕಾರಕ್ಕೆ ನಿಧಿ ಕೊಟ್ಟ ರಿತ್ತಿ ಕುಟುಂಬಕ್ಕೆ ಸೈಟ್​!
ಪ್ರಾಮಾಣಿಕತೆಗೆ ಫಲ:ಸರ್ಕಾರಕ್ಕೆ ನಿಧಿ ಕೊಟ್ಟ ರಿತ್ತಿ ಕುಟುಂಬಕ್ಕೆ ಸೈಟ್​!
ಪೂರ್ತಿ ಭಾಷಣ ಓದದೇ ನಿರ್ಗಮಿಸಿದ ರಾಜ್ಯಪಾಲರು, ಮುಂದೇನು?
ಪೂರ್ತಿ ಭಾಷಣ ಓದದೇ ನಿರ್ಗಮಿಸಿದ ರಾಜ್ಯಪಾಲರು, ಮುಂದೇನು?
ಮುಸ್ಲಿಂ ಯುವತಿಯೊಂದಿಗೆ ಇದ್ದ ಹಿಂದೂ ಯುವಕರು ಮೇಲೆ ಹಲ್ಲೆ
ಮುಸ್ಲಿಂ ಯುವತಿಯೊಂದಿಗೆ ಇದ್ದ ಹಿಂದೂ ಯುವಕರು ಮೇಲೆ ಹಲ್ಲೆ
ಶಿವಮೊಗ್ಗ: ಗ್ರಾಮಸ್ಥನಿಗೆ ಅವಾಚ್ಯವಾಗಿ ನಿಂದಿಸಿದ ಕಾಂಗ್ರೆಸ್ ಕಾರ್ಯಕರ್ತ
ಶಿವಮೊಗ್ಗ: ಗ್ರಾಮಸ್ಥನಿಗೆ ಅವಾಚ್ಯವಾಗಿ ನಿಂದಿಸಿದ ಕಾಂಗ್ರೆಸ್ ಕಾರ್ಯಕರ್ತ
ಬಿಕೆ ಹರಿಪ್ರಸಾದ್ ಬಟ್ಟೆ ಹರಿದರಾ ಬಿಜೆಪಿಗರು? ಅಸಲಿ ಸತ್ಯ ಈ ವಿಡಿಯೋದಲ್ಲಿದೆ
ಬಿಕೆ ಹರಿಪ್ರಸಾದ್ ಬಟ್ಟೆ ಹರಿದರಾ ಬಿಜೆಪಿಗರು? ಅಸಲಿ ಸತ್ಯ ಈ ವಿಡಿಯೋದಲ್ಲಿದೆ
ಭಾಷಣಕ್ಕೆ ಹರಿಪ್ರಸಾದ್​​ ಪಟ್ಟು: ಸದನದಿಂದ ಹೊರಟ ಗವರ್ನರ್​ ತಡೆದು ಹೈಡ್ರಾಮಾ
ಭಾಷಣಕ್ಕೆ ಹರಿಪ್ರಸಾದ್​​ ಪಟ್ಟು: ಸದನದಿಂದ ಹೊರಟ ಗವರ್ನರ್​ ತಡೆದು ಹೈಡ್ರಾಮಾ