ಮಮತಾ ಬ್ಯಾನರ್ಜಿ ಹೇಳಿಕೆ ಖಂಡಿಸಿ ಬಂಗಾಳದಲ್ಲಿ ಸನ್ಯಾಸಿಗಳಿಂದ ಪ್ರತಿಭಟನಾ ರ‍್ಯಾಲಿ

ಭಾನುವಾರ ಜಲ್ಪೈಗುರಿಯ ರಾಮಕೃಷ್ಣ ಮಿಷನ್ ಆಶ್ರಮದ ಮೇಲೆ ನಡೆದ ದಾಳಿಯನ್ನು ಸನ್ಯಾಸಿಗಳು ಖಂಡಿಸಿದ್ದಾರೆ. ಪಶ್ಚಿಮ ಬಂಗಾಳದ ಪ್ರಭಾವಿ ಸನ್ಯಾಸಿಗಳಾದ ಕೆಲವು ಸನ್ಯಾಸಿಗಳು ಚುನಾವಣೆಯಲ್ಲಿ ಬಿಜೆಪಿಯ ಸೂಚನೆಯಂತೆ ಕೆಲಸ ಮಾಡುತ್ತಿದ್ದಾರೆ ಎಂದು ಮಮತಾ ಬ್ಯಾನರ್ಜಿ ಹೇಳಿಕೆ ನೀಡಿದ್ದರು.

ಮಮತಾ ಬ್ಯಾನರ್ಜಿ ಹೇಳಿಕೆ ಖಂಡಿಸಿ ಬಂಗಾಳದಲ್ಲಿ ಸನ್ಯಾಸಿಗಳಿಂದ ಪ್ರತಿಭಟನಾ ರ‍್ಯಾಲಿ
ಸನ್ಯಾಸಿಗಳ ರ‍್ಯಾಲಿ
Follow us
ರಶ್ಮಿ ಕಲ್ಲಕಟ್ಟ
|

Updated on:May 24, 2024 | 7:05 PM

ಕೋಲ್ಕತ್ತಾ, ಮೇ 24: ಇಸ್ಕಾನ್, ರಾಮಕೃಷ್ಣ ಮಿಷನ್ ಮತ್ತು ಭಾರತ್ ಸೇವಾಶ್ರಮ ಸಂಘಗಳು ಕೇಂದ್ರ ನಾಯಕರ ಇಚ್ಛೆಯ ಮೇರೆಗೆ ಬಿಜೆಪಿಗಾಗಿ ಕೆಲಸ ಮಾಡುತ್ತಿವೆ ಎಂದು ಹೇಳಿದ್ದ ಪಶ್ಚಿಮ ಬಂಗಾಳದ (West Bengal) ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ (Mamata Banerjee) ಹೇಳಿಕೆಗಳನ್ನು ಖಂಡಿಸಿ ಉತ್ತರ ಮತ್ತು ಮಧ್ಯ ಕೋಲ್ಕತ್ತಾದ ಕೆಲವು ಭಾಗಗಳಲ್ಲಿ ಸನ್ಯಾಸಿಗಳು (Monks) ಪ್ರತಿಭಟನಾ ರ‍್ಯಾಲಿ ನಡೆಸಿದ್ದಾರೆ. ಉರಿ ಬಿಸಿಲಿನಲ್ಲಿಯೂ ಕಾವಿ ಧರಿಸಿದ ಬರಿಗಾಲಿನ ಸನ್ಯಾಸಿಗಳು ಬಾಗ್‌ಬಜಾರ್‌ನಲ್ಲಿರುವ ಮಾತೆಯ (ತಾಯಿ ಶಾರದಾ ದೇವಿ) ಮನೆಯಿಂದ ಮೆರವಣಿಗೆಯನ್ನು ಆರಂಭಿಸಿ ಬೀದಿಗಳಲ್ಲಿ ನಡೆದುಕೊಂಡು ಸ್ವಾಮಿ ವಿವೇಕಾನಂದರ ಮನೆವರೆಗೆ ಪ್ರತಿಭಟನೆ ನಡೆಸಿದ್ದಾರೆ. ಇದು ಈಗ ಆರ್‌ಕೆಎಂ ಆಸ್ತಿಯಾಗಿದ್ದು, ಈ ಮ್ಯೂಸಿಯಂನಲ್ಲಿ ರಾಮಕೃಷ್ಣರ ಶಿಷ್ಯರು ಬಳಸಿದ ಲೇಖನಗಳನ್ನು ಪ್ರದರ್ಶಿಸಲಾಗಿದೆ.

‘ಸಂತ ಸ್ವಾಭಿಮಾನ್ ಯಾತ್ರೆ’ಯ ಬ್ಯಾನರ್‌ನಡಿಯಲ್ಲಿ ನಡೆದ ಮೆರವಣಿಗೆಯನ್ನು ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಮತ್ತು ಪಶ್ಚಿಮ ಬಂಗಾಳದ ಸನ್ಯಾಸಿಗಳ ಅತ್ಯುನ್ನತ ಸಂಸ್ಥೆಯಾದ ಬಂಗಿಯ ಸನ್ಯಾಸಿ ಸಮಾಜದ ಸದಸ್ಯರು ಆಯೋಜಿಸಿದ್ದರು. ಮುರ್ಷಿದಾಬಾದ್‌ನ ಜಂಗೀಪುರದಲ್ಲಿ ಭಾರತ ಸೇವಾಶ್ರಮ ಸಂಘದ ಕಾರ್ಯದರ್ಶಿ ಕಾರ್ತಿಕ್ ಮಹಾರಾಜರೂ ಭಾಗವಹಿಸಿದ್ದರು.

ಭಾನುವಾರ ಜಲ್ಪೈಗುರಿಯ ರಾಮಕೃಷ್ಣ ಮಿಷನ್ ಆಶ್ರಮದ ಮೇಲೆ ನಡೆದ ದಾಳಿಯನ್ನು ಸನ್ಯಾಸಿಗಳು ಖಂಡಿಸಿದ್ದಾರೆ. ಪಶ್ಚಿಮ ಬಂಗಾಳದ ಪ್ರಭಾವಿ ಸನ್ಯಾಸಿಗಳಾದ ಕೆಲವು ಸನ್ಯಾಸಿಗಳು ಚುನಾವಣೆಯಲ್ಲಿ ಬಿಜೆಪಿಯ ಸೂಚನೆಯಂತೆ ಕೆಲಸ ಮಾಡುತ್ತಿದ್ದಾರೆ ಎಂದು ಬ್ಯಾನರ್ಜಿ ಹೇಳಿಕೆ ನೀಡಿದ್ದರು.

ಮಮತಾ ಬ್ಯಾನರ್ಜಿ ಭಾರತ ಸೇವಾಶ್ರಮ ಸಂಘದ (ಬಿಎಸ್‌ಎಸ್) ಪ್ರಮುಖ ಸನ್ಯಾಸಿ ವಿರುದ್ಧ ಟೀಕಾ ಪ್ರಹಾರ ಮಾಡಿದ್ದು ಕಳೆದ ತಿಂಗಳು ರಾಮನವಮಿ ಮೆರವಣಿಗೆಯ ಸಂದರ್ಭದಲ್ಲಿ ಮುರ್ಷಿದಾಬಾದ್‌ನ ಬೆಲ್ದಂಗದಲ್ಲಿ ನಡೆದ ಗಲಭೆಗೆ ಅವರನ್ನು ದೂಷಿಸಿದ್ದರು. ಅವರು ಬಿಜೆಪಿ ಮಾಡಲು ಬಯಸಿದರೆ, ಅವರು ಮಾಡಬಹುದು, ಆದರೆ ಅದರ ಬ್ಯಾಡ್ಜ್ ಧರಿಸಿ ಅದನ್ನು ಮಾಡಬೇಕು ಎಂದು ಮಮತಾ ಬ್ಯಾನರ್ಜಿ ಅವರು ಬಂಕುರಾ ಜಿಲ್ಲೆಯ ರ‍್ಯಾಲಿಯಲ್ಲಿ BSS ನ ಕಾರ್ತಿಕ್ ಮಹಾರಾಜ್ ಅವರನ್ನು ಉಲ್ಲೇಖಿಸಿ ಹೇಳಿದ್ದರು. ಸನ್ಯಾಸಿ ಈ ಹಿಂದೆ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಅವರೊಂದಿಗೆ ಸಂಬಂಧ ಹೊಂದಿದ್ದರು ಮತ್ತು ಈಗ ಬಿಜೆಪಿಯಲ್ಲಿದ್ದಾರೆ ಎಂದಿದ್ದರು ಮಮತಾ.

“ನಾನು ರಾಮಕೃಷ್ಣ ಮಿಷನ್ (RKM) ವಿರೋಧಿಯಲ್ಲ. ನಾನು ಒಂದು ಸಂಸ್ಥೆಯ ವಿರುದ್ಧ ಏಕೆ ಅಗೌರವ ತೋರಿಸಬೇಕು? ಮಹಾರಾಜ್ (ಮಿಷನ್‌ನ ಮಾಜಿ ಮುಖ್ಯಸ್ಥ) ಅವರು ಅನಾರೋಗ್ಯದಿಂದ ಬಳಲುತ್ತಿದ್ದಾಗ ನಾನು ಅವರನ್ನು ಭೇಟಿ ಮಾಡಿದ್ದೇನೆ. ಒಂದಿಬ್ಬರು ಜನರ ಬಗ್ಗೆ ಮಾತ್ರ ಮಾತನಾಡಿದ್ದೇನೆ. ಅದೇ ವೇಳೆ BSS ಅನ್ನು ಶ್ಲಾಘಿಸಿದ ಮಮತಾ ಇದು ಜನರಿಗೆ ಪರೋಪಕಾರಿ ಕೆಲಸ ಮಾಡುತ್ತದೆ ಎಂದು ಹೇಳಿದರು.

“ರಾಜಕೀಯದಲ್ಲಿ ತೊಡಗುವ ಸಾಧುಗಳನ್ನು (ಸನ್ಯಾಸಿಗಳು) ಸಾಧುಗಳು ಎಂದು ಪರಿಗಣಿಸುವುದಿಲ್ಲ” ಎಂದು ಮುಖ್ಯಮಂತ್ರಿ ಶನಿವಾರ ಹೇಳಿದ್ದು ಅವರ ಈ ಹೇಳಿಕೆಗಳು BSS, RKM ಮತ್ತು ISKCON ನ ಕೆಲವು ಸನ್ಯಾಸಿಗಳನ್ನು ಉದ್ದೇಶಿಸಿವೆ.

ಒಂದು ದಿನದ ನಂತರ ಇದಕ್ಕೆ ಪ್ರತಿಕ್ರಿಯಿಸಿದ ಪ್ರಧಾನಿ ನರೇಂದ್ರ ಮೋದಿಯವರು, ಮುಖ್ಯಮಂತ್ರಿಗಳು “ಮುಸ್ಲಿಂ ಮೂಲಭೂತವಾದಿಗಳ ಒತ್ತಡದಲ್ಲಿ ತನ್ನ ಮತ ಬ್ಯಾಂಕ್ ಅನ್ನು ಸಮಾಧಾನಪಡಿಸಲು” ಪ್ರಯತ್ನಿಸುತ್ತಿದ್ದಾರೆ. ಅವರು ಹಿಂದೂ ಸನ್ಯಾಸಿಗಳಿಗೆ ತೆರೆದ ವೇದಿಕೆಯಿಂದ ಬೆದರಿಕೆ ಹಾಕುತ್ತಿದ್ದಾರೆ ಎಂದು ಹೇಳಿದರು.

ಬ್ಯಾನರ್ಜಿಯವರ ಹೇಳಿಕೆಗಳ ನಂತರ, ಜಲ್ಪೈಗುರಿ ಜಿಲ್ಲೆಯಲ್ಲಿ ರಾಮಕೃಷ್ಣ ಮಿಷನ್ ನ ಆಶ್ರಮದ ಮೇಲೆ ದಾಳಿ ನಡೆಸಲಾಯಿತು ಎಂದ ಮೋದಿ ಹೇಳಿದ್ದಾರೆ. RKM, BSS ಮತ್ತು ISKCON ಅನ್ನು ಪಶ್ಚಿಮ ಬಂಗಾಳದ ಆಧ್ಯಾತ್ಮಿಕ ಪರಂಪರೆಯ ಭಾಗವೆಂದು ಬಣ್ಣಿಸಿದ ಪ್ರಧಾನಿ, “ರಾಮಕರಿಷ್ಣ ಮಿಷನ್ ಮತ್ತು ಇತರ ಹಿಂದೂ ಸಂಘಟನೆಗಳ ಅವಮಾನವನ್ನು ಬಂಗಾಳ ಒಪ್ಪಿಕೊಳ್ಳುವುದಿಲ್ಲ” ಎಂದು ಹೇಳಿದರು.

ಸ್ವಾಮಿ ಪ್ರದೀಪ್ತಾನಂದ ಮಹಾರಾಜ್ ಎಂದೂ ಕರೆಯಲ್ಪಡುವ ಕಾರ್ತಿಕ್ ಮಹಾರಾಜ್ ಅವರು ಮಮತಾ ಬ್ಯಾನರ್ಜಿ ಅವರಿಗೆ ಕಾನೂನು ನೋಟಿಸ್ ಕಳುಹಿಸಿದ್ದು ಸಂಸ್ಥೆಯ ಬಗ್ಗೆ ಮಾನಹಾನಿಕರ ಹೇಳಿಕೆಗಳಿಗಾಗಿ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದ್ದಾರೆ.

ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಅವರು ಸಾಮಾಜಿಕ ಮಾಧ್ಯಮದಲ್ಲಿ ಕಾನೂನು ಸೂಚನೆಯ ಪ್ರತಿಯನ್ನು ಪೋಸ್ಟ್ ಮಾಡಿದ್ದು, ಸನ್ಯಾಸಿಗಳು “ಸನಾತನ ಧರ್ಮದ ಮೇಲೆ ಮಮತಾ ಬ್ಯಾನರ್ಜಿಯ ಉದ್ದೇಶಿತ ದಾಳಿಯ ವಿರುದ್ಧ ಎದ್ದುನಿಂತು ಧ್ವನಿ ಎತ್ತುವ ಮೂಲಕ ಧೈರ್ಯಶಾಲಿಯಾಗಿದ್ದಾರೆ” ಎಂದು ಹೇಳಿದರು.

ಇದನ್ನೂ ಓದಿ: ಕಾಂಗ್ರೆಸ್, ಅಭಿವೃದ್ಧಿಯ ಬಾಗಿಲುಗಳನ್ನು ಮುಚ್ಚಿದೆ: ಮಂಡಿಯಲ್ಲಿ ಪ್ರಧಾನಿ ಮೋದಿ

ಚುನಾವಣಾ ಪ್ರಚಾರವನ್ನು ಧ್ರುವೀಕರಿಸುವ ಪ್ರಯತ್ನಗಳು ನಡೆಯುತ್ತಿರುವಾಗಲೇ ಈ ಬೆಳವಣಿಗೆಯಾಗಿದೆ. ಬಿಜೆಪಿ ನಾಯಕತ್ವವು ತೃಣಮೂಲ ರಾಜ್ಯದಲ್ಲಿ ಹಿಂದೂಗಳನ್ನು ಎರಡನೇ ದರ್ಜೆಯ ಪ್ರಜೆಗಳನ್ನಾಗಿ ಮಾಡಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:04 pm, Fri, 24 May 24