Rajinikanth Temple: ಯುವಕನೊಬ್ಬ 250 ಕೆಜಿ ತೂಕದ ರಜನಿಕಾಂತ್ ವಿಗ್ರಹ ನಿರ್ಮಿಸಿ, ನಿತ್ಯ ಪೂಜಿಸುತ್ತಿದ್ದಾನೆ! ಎಲ್ಲಿ?

Rajinikanth Idol Madurai: ನೆಚ್ಚಿನ ನಟನ ಹುಟ್ಟು ಹಬ್ಬ ಆಚರಿಸಿಕೊಳ್ಳುವುದು, ಸಿನಿಮಾ ರಿಲೀಸ್ ವೇಳೆ ಗ್ರ್ಯಾಂಡ್ ವೆಲ್ಕಮ್ ಹೇಳುವುದು, ಅವರ ಹೆಸರಿನಲ್ಲಿ ಟ್ಯಾಟೂ ಹಾಕಿಸಿಕೊಳ್ಳುವುದು, ಅವರ ಜತೆ ಸೆಲ್ಫಿ ತೆಗೆಸಿಕೊಳ್ಳುವುದು ಅಭಿಮಾನಿಗಳಿಗೆ ಸಾಮಾನ್ಯ ಸಂಗತಿ. ತಾಜಾ ಆಗಿ ಮಧುರೈ ಮೂಲದ ಕಾರ್ತಿಕ್ ಎಂಬ ಯುವಕ ತನ್ನ ನೆಚ್ಚಿನ ನಟ ಸೂಪರ್ ಸ್ಟಾರ್ ರಜನಿಕಾಂತ್ ಅವರ ಹೆಸರಿನಲ್ಲಿ ದೇವಸ್ಥಾನ ನಿರ್ಮಿಸಿದ್ದಾರೆ.

Rajinikanth Temple: ಯುವಕನೊಬ್ಬ 250 ಕೆಜಿ ತೂಕದ ರಜನಿಕಾಂತ್ ವಿಗ್ರಹ ನಿರ್ಮಿಸಿ, ನಿತ್ಯ ಪೂಜಿಸುತ್ತಿದ್ದಾನೆ! ಎಲ್ಲಿ?
ಯುವ ಅಭಿಮಾನಿಯೊಬ್ಬ ನಟ ರಜನಿಕಾಂತ್ ವಿಗ್ರಹ ನಿರ್ಮಿಸಿ, ನಿತ್ಯ ಪೂಜಿಸ್ತಿದ್ದಾನೆ!
Follow us
ಸಾಧು ಶ್ರೀನಾಥ್​
|

Updated on: Oct 27, 2023 | 9:43 AM

ದಕ್ಷಿಣ ಚಿತ್ರರಂಗದಲ್ಲಿ ತಮ್ಮ ನೆಚ್ಚಿನ ನಾಯಕರ ಬಗ್ಗೆ ಜನರಿಗಿರುವ ಅಭಿಮಾನದ ಬಗ್ಗೆ ವಿಶೇಷವಾಗಿ ಹೇಳಬೇಕಾಗಿಲ್ಲ. ಒಮ್ಮೆ ಅಭಿಮಾನಿ ತನ್ನ ಆರಾಧ್ಯದೈವ ನಟ/ನಟಿಯನ್ನು ಇಷ್ಟಪಟ್ಟರೆ ಮುಗಿಯಿತು ಆ ಸಿನಿ ಸ್ಟಾರ್ ಅನ್ನು ಹೃದಯದಲ್ಲಿ ಜೋಪಾನವಾಗಿಟ್ಟುಕೊಂಡು ಬಿಡುತ್ತಾರೆ. ತಮ್ಮ ನೆಚ್ಚಿನ ನಾಯಕನಿಗಾಗಿ ಇನ್ನೂ ಏನು ಬೇಕಾದರೂ ಮಾಡುತ್ತಾರೆ. ಇನ್ನು ಸಿನಿ ತಾರೆಯರ ಹುಟ್ಟುಹಬ್ಬ ಬಂದರಂತೂ ಅಭಿಮಾನಿಗಳಿಗೆ ಹಬ್ಬವೋ ಹಬ್ಬ. ತಮ್ಮ ನೆಚ್ಚಿನ ನಟರ ಬೃಹತ್ ಕಟೌಟ್‌ಗಳನ್ನು ಹಾಕುವ ಮೂಲಕ, ಅದಕ್ಕೆ ಹಾಲಿನ ಅಭಿಷೇಕ ಮಾಡುವ ಮೂಲಕ… ಅನ್ನದಾನ ಕಾರ್ಯಕ್ರಮಗಳನ್ನು ಆಯೋಜಿ, ಅವರನ್ನು ದೇವರಂತೆ ಪೂಜಿಸಲಾಗುತ್ತದೆ. ಈಗಾಗಲೇ ಸೌತ್ ಇಂಡಸ್ಟ್ರಿಯಲ್ಲಿ ಅನೇಕ ತಾರೆಯರು ಇಂತಹ ಅಭಿಮಾನಿ ದೇವರುಗಳನ್ನು ಹೊಂದಿದ್ದಾರೆ. ಇತ್ತೀಚೆಗಷ್ಟೇ ಆಂದ್ರದಲ್ಲಿ ಅಭಿಮಾನಿಯೊಬ್ಬ ನಟಿ ಸಮಂತಾ ಪ್ರತಿಮೆ ಮಾಡಿಸಿ, ಪೂಜೆ ಸಲ್ಲಿಸುತ್ತಾ ಇದ್ದಾರೆ. ಇದೀಗ ಮತ್ತೊಬ್ಬ ಸಿನಿ ಅಭಿಮಾನಿ ಸೂಪರ್ ಸ್ಟಾರ್ ರಜನಿಕಾಂತ್ ವಿಗ್ರಹ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸುತ್ತಿದ್ದಾರೆ. ಖುಷ್ಬೂ, ಅಮಿತಾಬ್ ಬಚ್ಚನ್, ನರೇಂದ್ರ ಮೋದಿ ಮುಂತಾದ ಸೆಲೆಬ್ರಿಟಿಗಳನ್ನು ದೇವರಂತೆ ಪೂಜಿಸುವುದನ್ನು ನಾವು ಈಗಾಗಲೇ ನೋಡಿದ್ದೇವೆ. ಇದೀಗ ತಮಿಳುನಾಡಿನ ಯುವಕ (Madurai Temple) ತನ್ನ ಅಭಿಮಾನವನ್ನು (Fan) ತೋರ್ಪಡಿಸಲು ಸೂಪರ್ ಸ್ಟಾರ್ ರಜನಿಕಾಂತ್ ಅವರ ಮೂರ್ತಿಯನ್ನು (Rajinikanth Idol) ತಯಾರಿಸಿ ಪ್ರತಿನಿತ್ಯ ಪೂಜಿಸುತ್ತಿದ್ದಾರೆ.

ನೆಚ್ಚಿನ ನಟನ ಹುಟ್ಟು ಹಬ್ಬ ಆಚರಿಸಿಕೊಳ್ಳುವುದು, ಸಿನಿಮಾ ರಿಲೀಸ್ ವೇಳೆ ಗ್ರ್ಯಾಂಡ್ ವೆಲ್ಕಮ್ ಹೇಳುವುದು, ಅವರ ಹೆಸರಿನಲ್ಲಿ ಟ್ಯಾಟೂ ಹಾಕಿಸಿಕೊಳ್ಳುವುದು, ಅವರ ಜತೆ ಸೆಲ್ಫಿ ತೆಗೆಸಿಕೊಳ್ಳುವುದು ಅಭಿಮಾನಿಗಳಿಗೆ ಸಾಮಾನ್ಯ ಸಂಗತಿ. ತಾಜಾ ಆಗಿ ಇಲ್ಲೊಬ್ಬ ಯುವ ಅಭಿಮಾನಿ ಇತರರಿಗಿಂತ ಸ್ವಲ್ಪ ವಿಭಿನ್ನವಾಗಿ ಯೋಚಿಸಿ ತನ್ನ ನೆಚ್ಚಿನ ನಟನ ಪ್ರತಿಮೆಯನ್ನು ತಯಾರಿಸಿದ್ದಾರೆ.

ಇದನ್ನೂ ಓದಿ: ‘ನನ್ನ ಗುರು ಜೊತೆ ಮತ್ತೆ ಕೆಲಸ ಮಾಡುತ್ತಿದ್ದೇನೆ’: ಅಮಿತಾಭ್​ ಬಗ್ಗೆ ರಜನಿಕಾಂತ್​ ಗೌರವದ ಮಾತು

ಮಧುರೈ ಮೂಲದ ಕಾರ್ತಿಕ್ ಎಂಬ ಯುವಕ ತನ್ನ ನೆಚ್ಚಿನ ನಟ ಸೂಪರ್ ಸ್ಟಾರ್ ರಜನಿಕಾಂತ್ ಅವರ ಹೆಸರಿನಲ್ಲಿ ದೇವಸ್ಥಾನ ನಿರ್ಮಿಸಿದ್ದಾರೆ. 250 ಕೆ.ಜಿ ತೂಕದ ರಜನಿಕಾಂತ್ ವಿಗ್ರಹವನ್ನು ಅಲ್ಲಿ ಪ್ರತಿಷ್ಠಾಪಿಸಲಾಗಿದೆ, ಜೊತೆಗೆ ತಮ್ಮ ತಂದೆ ತಾಯಿಯ ಫೋಟೋ ಮತ್ತು ಗಣೇಶನ ಫೋಟೋವನ್ನು ಅಲ್ಲಿ ಇರಿಸಲಾಗಿದೆ. ಆ ಅಭಿಮಾನಿ ಪ್ರತಿದಿನ ದೀಪವನ್ನು ಬೆಳಗಿಸಿ, ರಜನಿ ವಿಗ್ರಹಕ್ಕೆ ಅಭಿಷೇಕ ಮಾಡುತ್ತಾರೆ. ಇದನ್ನು ರಜನಿಕಾಂತ್ ಗಮನಿಸಿದ್ದಾರೋ ಇಲ್ಲವೋ ಗೊತ್ತಿಲ್ಲ. ಆದರೆ, ಸದರಿ ಅಭಿಮಾನಿ ರಜನಿಕಾಂತ್ ಅವರ ಮೂರ್ತಿಗೆ ಪೂಜೆ ಸಲ್ಲಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ವಿಡಿಯೋ ನೆಟ್‌ನಲ್ಲಿ ಹರಿದಾಡುತ್ತಿದೆ. ಕೆಲವರು ಈ ಬಿಗ್ ಫ್ಯಾನ್​​ ಕಾರ್ತಿಕ್ ಪಾಂಡಮ್ ಅನ್ನು ಇಷ್ಟಪಟ್ಟಿದ್ದಾರೆ ಮತ್ತು ಕೆಲವರು ಇದನ್ನು ಹುಚ್ಚುತನದ ಪರಮಾವಧಿ ಎಂದು ಟೀಕಿಸುತ್ತಿದ್ದಾರೆ. ಏನೇ ಆಗಲಿ ಸದ್ಯಕ್ಕೆ ಈ ವಿಡಿಯೋ ನೆಟ್ಟಿಗರ ಗಮನ ಸೆಳೆಯುತ್ತಿದೆ ಎಂಬ ಮಾತು ಕೂಡ ನಿಜವಾಗಿದೆ. ಇನ್ನು ರಜನಿಕಾಂತ್ ಅವರ ಸಿನಿಮಾಗಳ ವಿಷಯಕ್ಕೆ ಬರೋದಾದರೆ… ಇತ್ತೀಚೆಗಷ್ಟೇ ಜೈಲರ್ ಸಿನಿಮಾದ ಮೂಲಕ ಅವರಿಗೆ ಬ್ಲಾಕ್ ಬಸ್ಟರ್ ಹಿಟ್ ಸಿಕ್ಕಿತ್ತು. ಈಗ ಅವರು ತಮ್ಮ 170ನೇ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲ. ಈ ಚಿತ್ರವು 2024 ರ ಬೇಸಿಗೆಯಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ಅಧಿಕಾರಿಗಳಿಗೂ ತಟ್ಟಿದ ಫೆಂಗಲ್ ಚಂಡಮಾರುತ ಎಫೆಕ್ಟ್: ಒಳ ನುಗ್ಗಿದ ಮಳೆ ನೀರು
ಅಧಿಕಾರಿಗಳಿಗೂ ತಟ್ಟಿದ ಫೆಂಗಲ್ ಚಂಡಮಾರುತ ಎಫೆಕ್ಟ್: ಒಳ ನುಗ್ಗಿದ ಮಳೆ ನೀರು
ಹೃದ್ರೋಗಿ ಪತಿ, ಮಕ್ಕಳೊಂದಿಗೆ 40 ವರ್ಷಗಳಿಂದ ಬಾಡಿಗೆ ಮನೆಯಲ್ಲಿರುವ ಮಹಿಳೆ
ಹೃದ್ರೋಗಿ ಪತಿ, ಮಕ್ಕಳೊಂದಿಗೆ 40 ವರ್ಷಗಳಿಂದ ಬಾಡಿಗೆ ಮನೆಯಲ್ಲಿರುವ ಮಹಿಳೆ
ನೀರು ಸೇದುವಾಗ ಏಕಾಏಕಿ ಬಾವಿಗೆ ಬಿದ್ದ 94ರ ವೃದ್ಧೆ: ಮುಂದೇನಾಯ್ತು?
ನೀರು ಸೇದುವಾಗ ಏಕಾಏಕಿ ಬಾವಿಗೆ ಬಿದ್ದ 94ರ ವೃದ್ಧೆ: ಮುಂದೇನಾಯ್ತು?
ಒಂದು ವಾರದೊಳಗೆ ಎಲ್ಲವೂ ಸುಖಾಂತ್ಯವಾಗುತ್ತದೆ ಅಂತ ಅಶೋಕ ಹೇಳಿದ್ಯಾಕೆ?
ಒಂದು ವಾರದೊಳಗೆ ಎಲ್ಲವೂ ಸುಖಾಂತ್ಯವಾಗುತ್ತದೆ ಅಂತ ಅಶೋಕ ಹೇಳಿದ್ಯಾಕೆ?
ವಾರ್ನರ್​ ಬಿಡುಗಡೆ ಬೆನ್ನಲ್ಲೇ ‘ಯುಐ’ ಸಿನಿಮಾ ಸುದ್ದಿಗೋಷ್ಠಿ; ಲೈವ್ ನೋಡಿ..
ವಾರ್ನರ್​ ಬಿಡುಗಡೆ ಬೆನ್ನಲ್ಲೇ ‘ಯುಐ’ ಸಿನಿಮಾ ಸುದ್ದಿಗೋಷ್ಠಿ; ಲೈವ್ ನೋಡಿ..
ಬ್ರೇಕಿಂಗ್ ನ್ಯೂಸ್​ ಮೂಲಕವೂ ಕಳಚಿತು ಗೌತಮಿ ಜಾದವ್ ಪಾಸಿಟಿವ್ ಮುಖವಾಡ
ಬ್ರೇಕಿಂಗ್ ನ್ಯೂಸ್​ ಮೂಲಕವೂ ಕಳಚಿತು ಗೌತಮಿ ಜಾದವ್ ಪಾಸಿಟಿವ್ ಮುಖವಾಡ
ಟೀಂ ಇಂಡಿಯಾವನ್ನು ಅವರ ನೆಲದಲ್ಲೇ ಸೋಲಿಸಬೇಕು; ಶೋಯೆಬ್ ಅಖ್ತರ್
ಟೀಂ ಇಂಡಿಯಾವನ್ನು ಅವರ ನೆಲದಲ್ಲೇ ಸೋಲಿಸಬೇಕು; ಶೋಯೆಬ್ ಅಖ್ತರ್
ಸ್ವಾಮೀಜಿ ಮಾತಾಡಿದ್ದು ತಪ್ಪು ಎಂದು ಹೇಳಿರುವ ಡಿಕೆ ಶಿವಕುಮಾರ್
ಸ್ವಾಮೀಜಿ ಮಾತಾಡಿದ್ದು ತಪ್ಪು ಎಂದು ಹೇಳಿರುವ ಡಿಕೆ ಶಿವಕುಮಾರ್
ಸಿದ್ದರಾಮಯ್ಯ, ಮೋದಿ ಹಣ ಹಾಕ್ತಾರೆಂದು ಅಂಚೆ ಕಚೇರಿಯಲ್ಲಿ ಜನವೋ ಜನ..!
ಸಿದ್ದರಾಮಯ್ಯ, ಮೋದಿ ಹಣ ಹಾಕ್ತಾರೆಂದು ಅಂಚೆ ಕಚೇರಿಯಲ್ಲಿ ಜನವೋ ಜನ..!
ಮುಡಾ ಹಗರಣದ ತನಿಖೆ ಚುರುಕು: ವಿಧಾನಸೌಧ ತಲುಪಿದ ಇಡಿ ತನಿಖೆ!
ಮುಡಾ ಹಗರಣದ ತನಿಖೆ ಚುರುಕು: ವಿಧಾನಸೌಧ ತಲುಪಿದ ಇಡಿ ತನಿಖೆ!