ರಾಜ್​ಕೋಟ್​ ಅಗ್ನಿ ಅವಘಡ: ಸುಭಾಷ್ ತ್ರಿವೇದಿ ನೇತೃತ್ವದಲ್ಲಿ ಎಸ್​ಐಟಿ ರಚನೆ

ಗುಜರಾತ್​ನ ರಾಜ್​ಕೋಟ್​ನ ಕಲಾವಾಡ್ ರಸ್ತೆಯಲ್ಲಿರುವ ಟಿಆರ್​ಪಿ ಗೇಮಿಂಗ್​ ಝೋನ್​ನಲ್ಲಿ ಶನಿವಾರ ಭಾರಿ ಅಗ್ನಿ ಅವಘಡ ಸಂಭವಿಸಿದ್ದು, 27 ಮಂದಿ ಸುಟ್ಟು ಕರಕಲಾಗಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಭಾಷ್ ತ್ರಿವೇದಿ ನೇತೃತ್ವದಲ್ಲಿ ಎಸ್​ಐಟಿ ರಚಿಸಲಾಗಿದೆ.

ರಾಜ್​ಕೋಟ್​ ಅಗ್ನಿ ಅವಘಡ: ಸುಭಾಷ್ ತ್ರಿವೇದಿ ನೇತೃತ್ವದಲ್ಲಿ ಎಸ್​ಐಟಿ ರಚನೆ
ಅಗ್ನಿ ಅವಘಡ

Updated on: May 26, 2024 | 9:07 AM

ಗುಜರಾತ್​ನ ರಾಜ್​ಕೋಟ್​ನಲ್ಲಿರು ಗೇಮ್ ಝೋನ್​ನಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡ(Fire Accident)ದಲ್ಲಿ 27 ಮಂದಿ ಸಜೀವದಹನಗೊಂಡಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಸಿಐಡಿ ಕ್ರೈಂನ ಎಡಿಜಿ ಸುಭಾಷ್ ತ್ರಿವೇದಿ ನೇತೃತ್ವದಲ್ಲಿ ಎಸ್​ಐಟಿ ರಚಿಸಲಾಗಿದೆ.

ಐದು ಸದಸ್ಯರ ತಂಡ ಪ್ರಕರಣದ ತನಿಖೆ ಮಾಡಲಿದೆ. 72 ಗಂಟೆಗಳೊಳಗೆ ಪ್ರಾಥಮಿಕ ವರದಿಯನ್ನು ನೀಡಲಿವೆ.
ಅಗ್ನಿ ಅವಘಡಕ್ಕೆ ಕಾರಣವೇನು?, ಗೇಮಿಂಗ್​ ಝೋನ್​ಗೆ ಅನುಮತಿ ನೀಡುವ ಸಂದರ್ಭದಲ್ಲಿ ಈ ಕೆಲವು ವಿಷಯಗಳ ಬಗ್ಗೆ ಗಮನಹರಿಸಲಾಗಿತ್ತೆ?, ಗೇಮಿಂಗ್ ಝೋನ್​ ನಿರ್ಮಾಣಕ್ಕೆ ಅನುಮತಿ ಪಡೆದಿದ್ದರೇ? ಎಂಬೆಲ್ಲಾ ವಿಚಾರಗಳ ಕುರಿತು ತನಿಖೆ ನಡೆಸಲಿದೆ.

ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಆತಂಕ ಎದುರಾಗಿದೆ. ಬೆಂಕಿಯ ಕೆನ್ನಾಲಿಗೆಗೆ ಗೇಮ್ ಝೋನ್ ಸುಟ್ಟು ಕರಕಲಾಗಿದೆ.
ಸುದ್ದಿ ತಿಳಿದ ತಕ್ಷಣ ಎಂಟು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ದೌಡಾಯಿಸಿ ಕಾರ್ಯಾಚರಣೆ ಬೆಂಕಿಯನ್ನು ನಂದಿಸಲು ಸಾಕಷ್ಟು ಕಸರತ್ತು ನಡೆಸಬೇಕಾಯಿತು.

ಶನಿವಾರ ಸಂಜೆ ಟಿಆರ್ ಪಿ ಗೇಮಿಂಗ್ ವಲಯದಲ್ಲಿ ಹಠಾತ್ ಬೆಂಕಿ ಕಾಣಿಸಿಕೊಂಡಿದೆ. ನೋಡನೋಡುತ್ತಿದ್ದಂತೆ ಬೆಂಕಿಯ ಕೆನ್ನಾಲಿಗೆ ಇಡೀ ಪ್ರದೇಶಕ್ಕೆ ಆವರಿಸಿ ಧಗಧಗನೆ ಹೊತ್ತಿ ಉರಿಯಿತು. ಈ ಕುರಿತು ರಾಜ್ ಕೋಟ್ ನ ಪೊಲೀಸ್ ಆಯಕ್ತ ಭಾರ್ಗವ ಅಗ್ನಿ ಅವಘಡದ ಬಗ್ಗೆ ವಿವರ ನೀಡಿ, ಇದುವರೆಗೆ 35 ಮೃತದೇಹಗಳನ್ನು ವಶಪಡಿಸಿ ಕೊಳ್ಳಲಾಗಿದೆ. ಪರಿಹಾರ ಕಾರ್ಯ ನಡೆಯುತ್ತಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.

ಮತ್ತಷ್ಟು ಓದಿ: ಗುಜರಾತ್‌ನ ರಾಜ್‌ಕೋಟ್‌ನ ಗೇಮಿಂಗ್ ಝೋನ್‌ನಲ್ಲಿ ಬೆಂಕಿ ಅವಘಡ; 24 ಮಂದಿ ಸಾವು

ಬೆಂಕಿ ಎಷ್ಟು ತೀವ್ರತೆ ಎಷ್ಟಿತ್ತು ಎಂದರೆ ಅದರ ಹೊಗೆ 3 ಕಿಲೋಮೀಟರ್ ದೂರಕ್ಕೂ ಗೋಚರಿಸುತ್ತಿತ್ತು, ಗೇಮಿಂಗ್ ವಲಯದಲ್ಲಿ ಸಿಕ್ಕಿಹಾಕೊಂಡವರ ಚೀರಾಟ, ಆಕ್ರಂದನ ಹೇಳತೀರದಾಗಿತ್ತು. ಕೆಲವರು‌ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ.
ಆದರೆ, ಬೆಂಕಿ ಹೊತ್ತಿಕೊಳ್ಳಲು ಕಾರಣ ಏನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಕಟ್ಟಡ ಕುಸಿದಿರುವುದರಿಂದ ಪರಿಹಾರ ಕಾರ್ಯದಲ್ಲಿ ತೊಂದರೆಯಾಗುತ್ತಿದೆ ಎಂದು ಅಗ್ನಿಶಾಮಕ ಅಧಿಕಾರಿಗಳು ತಿಳಿಸಿದ್ದಾರೆ.

ಮಾಲೀಕನ ಬಂಧನ
ಗೇಮ್ ಝೋನ್ ಮಾಲೀಕ ಯುವರಾಜ್ ಸಿಂಗ್ ಸೋಲಂಕಿ ಅವರನ್ನು ರಾಜ್‌ಕೋಟ್ ಪೊಲೀಸರು ಬಂಧಿಸಿದ್ದಾರೆ. ಗೇಮ್ ಝೋನ್‌ನ ವ್ಯವಸ್ಥಾಪಕನಿಗಾಗಿ ಪೊಲೀಸರು ಶೋಧ‌ ಕಾರ್ಯಕೈಗೊಂಡಿದ್ದಾರೆ.

ಈ ಆಟದ ವಲಯದ ಒಂದು ಭಾಗದಲ್ಲಿ ನವೀಕರಣ ಕಾರ್ಯ ನಡೆಯುತ್ತಿತ್ತು . ಈ ವೇಳೆ ಎರಡು ದಿನಗಳ ಹಿಂದೆ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಗೇಮ್ ಝೋನ್ ಬಂದ್ ಮಾಡಲಾಗಿತ್ತು. ಈ ಘಟನೆ‌ ಸಂಭವಿಸಿ, ಒಂದು ದಿನದ ನಂತರ ಆಟದ ವಲಯವನ್ನು ಪುನಃ ತೆರೆಯಲಾಗಿದೆ ಎಂದು ಮೂಲಗಳು ತಿಳಿಸಿವೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 8:09 am, Sun, 26 May 24

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us