TN Urban Local Body Polls ವೆಲ್ಲೂರಿನಲ್ಲಿ ಡಿಎಂಕೆ ಅಭ್ಯರ್ಥಿಯಾಗಿ ಕಣಕ್ಕಿಳಿದು ಗೆದ್ದ ತೃತೀಯಲಿಂಗಿ ಗಂಗಾ ನಾಯಕ್

| Updated By: ರಶ್ಮಿ ಕಲ್ಲಕಟ್ಟ

Updated on: Feb 23, 2022 | 2:27 PM

ಮಾಧ್ಯಮ ವರದಿಗಳ ಪ್ರಕಾರ, ವೆಲ್ಲೂರಿನಲ್ಲಿ ದಿನಗೂಲಿ ಕಾರ್ಮಿಕರ ಕುಟುಂಬದಲ್ಲಿ ಜನಿಸಿದ ಗಂಗಾ ನಾಯಕ್ ಅವರು ತಮ್ಮ ಸಾಮಾಜಿಕ ಕೆಲಸ ಮತ್ತು ಸಮುದಾಯದ ಸೇವೆಗಾಗಿ ಮನ್ನಣೆ ಗಳಿಸಿದ್ದಾರೆ. 30 ತೃತೀಯಲಿಂಗಿ ವ್ಯಕ್ತಿಗಳನ್ನು ಒಳಗೊಂಡ ಅವರ ನಾಟಕ ತಂಡವು ಜನಪ್ರಿಯತೆಯನ್ನು ಗಳಿಸಿದೆ.

TN Urban Local Body Polls ವೆಲ್ಲೂರಿನಲ್ಲಿ ಡಿಎಂಕೆ ಅಭ್ಯರ್ಥಿಯಾಗಿ ಕಣಕ್ಕಿಳಿದು ಗೆದ್ದ ತೃತೀಯಲಿಂಗಿ ಗಂಗಾ ನಾಯಕ್
ಗಂಗಾ ನಾಯಕ್
Follow us on

ಚೆನ್ನೈ: ತಮಿಳುನಾಡು ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ(TN Urban Local Body Polls) ವೆಲ್ಲೂರ್‌ನಿಂದ (Vellore) ಮಂಗಳವಾರ ನಡೆದ ಚುನಾವಣೆಯಲ್ಲಿ ಡಿಎಂಕೆಯ ಟ್ರಾನ್ಸ್‌ಜೆಂಡರ್ ಅಭ್ಯರ್ಥಿ ಜಯಗಳಿಸಿದ್ದಾರೆ. ವೆಲ್ಲೂರು ಮುನ್ಸಿಪಲ್ ಕಾರ್ಪೊರೇಷನ್‌ನ ವಾರ್ಡ್ 37 ರಲ್ಲಿ 49 ವರ್ಷದ ಗಂಗಾ ನಾಯಕ್ (Ganga Nayak) ಅವರನ್ನು ವಿಜೇತ ಅಭ್ಯರ್ಥಿ ಎಂದು ಘೋಷಿಸಲಾಯಿತು. ಗಂಗಾ ನಾಯಕ್ ವೆಲ್ಲೂರು ಮೂಲದ ಸಾಮಾಜಿಕ ಕಾರ್ಯಕರ್ತೆ ಮತ್ತು ದಕ್ಷಿಣ ಭಾರತ ಟ್ರಾನ್ಸ್‌ಜೆಂಡರ್ ಅಸೋಸಿಯೇಷನ್‌ನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪಾಲಿಕೆ ಕೌನ್ಸಿಲರ್ ಹುದ್ದೆಗೆ ಡಿಎಂಕೆ ಅಭ್ಯರ್ಥಿ 15 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಅವರು ಒಟ್ಟು 2,131 ಮತಗಳನ್ನು ಪಡೆದರು. 21 ಮುನ್ಸಿಪಲ್ ಕಾರ್ಪೊರೇಷನ್‌ಗಳು, 138 ಪುರಸಭೆಗಳು ಮತ್ತು 490 ಪಟ್ಟಣ ಪಂಚಾಯತ್‌ಗಳಲ್ಲಿ 12,838 ಸ್ಥಾನಗಳನ್ನು ಭರ್ತಿ ಮಾಡಲು 11 ವರ್ಷಗಳ ನಂತರ ತಮಿಳುನಾಡು ನಗರ ಸ್ಥಳೀಯ ಸಂಸ್ಥೆ ಚುನಾವಣೆಗಳು ನಡೆದಿವೆ. ಆದಾಗ್ಯೂ, ಈ ಬಾರಿ ಚುನಾವಣೆಗೆ ಟ್ರಾನ್ಸ್ ಅಭ್ಯರ್ಥಿಗಳನ್ನು ಘೋಷಿಸಿದ್ದು ಡಿಎಂಕೆ ಮಾತ್ರವಲ್ಲ, ಬಿಜೆಪಿ ಮತ್ತು ಎಐಎಡಿಎಂಕೆ ಎರಡೂ ತೃತೀಯ ಲಿಂಗಿಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಈ ವರ್ಷ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಒಟ್ಟು 15 ಟ್ರಾನ್ಸ್ ವ್ಯಕ್ತಿಗಳು ಸ್ಪರ್ಧಿಸಿದ್ದಾರೆ, ಅವರಲ್ಲಿ ಹಲವರು ಪಕ್ಷೇತರರಾಗಿ ಸ್ಪರ್ಧಿಸಿದ್ದಾರೆ.  ಎಐಎಡಿಎಂಕೆಯ ತೃತೀಯಲಿಂಗಿ ಅಭ್ಯರ್ಥಿ ಜಯದೇವಿ ಅವರು ಚೆನ್ನೈ ಕಾರ್ಪೊರೇಷನ್‌ನ ತೆನಾಂಪೇಟ್ ವಲಯದ ವಾರ್ಡ್ 112 ರಿಂದ ಸ್ಪರ್ಧಿಸಿದ್ದಾರೆ. ಅವರು ಕಳೆದ 15 ವರ್ಷಗಳಿಂದ ಪಕ್ಷದೊಂದಿಗೆ ಸಂಬಂಧ ಹೊಂದಿದ್ದಾರೆ. ಏತನ್ಮಧ್ಯೆ, ಬಿಜೆಪಿಯ ಟ್ರಾನ್ಸ್ ಅಭ್ಯರ್ಥಿ ರಾಜಮ್ಮ ಅವರು ಚೆನ್ನೈ ಕಾರ್ಪೊರೇಶನ್‌ನ ತಿರುವಿ ಕಾ ನಗರ ವಲಯದ 76 ನೇ ವಾರ್ಡ್‌ನಿಂದ ಸ್ಪರ್ಧಿಸಿದ್ದಾರೆ.


ಗಂಗಾ ನಾಯಕ್ ಯಾರು?
ಮಾಧ್ಯಮ ವರದಿಗಳ ಪ್ರಕಾರ, ವೆಲ್ಲೂರಿನಲ್ಲಿ ದಿನಗೂಲಿ ಕಾರ್ಮಿಕರ ಕುಟುಂಬದಲ್ಲಿ ಜನಿಸಿದ ಗಂಗಾ ನಾಯಕ್ ಅವರು ತಮ್ಮ ಸಾಮಾಜಿಕ ಕೆಲಸ ಮತ್ತು ಸಮುದಾಯದ ಸೇವೆಗಾಗಿ ಮನ್ನಣೆ ಗಳಿಸಿದ್ದಾರೆ. 30 ತೃತೀಯ ಲಿಂಗಿ ವ್ಯಕ್ತಿಗಳನ್ನು ಒಳಗೊಂಡ ಅವರ ನಾಟಕ ತಂಡವು ಜನಪ್ರಿಯತೆಯನ್ನು ಗಳಿಸಿದೆ.

ಕೊವಿಡ್ ಸಾಂಕ್ರಾಮಿಕ ಸಮಯದಲ್ಲಿ, ಗಂಗಾ ಮತ್ತು ಅವರ ತಂಡವು ವೆಲ್ಲೂರು ಮತ್ತು ತಮಿಳುನಾಡಿನ ಇತರ ಜಿಲ್ಲೆಗಳಲ್ಲಿ ಹಲವಾರು ಜಾಗೃತಿ ಅಭಿಯಾನಗಳನ್ನು ನಡೆಸಿತು. 2022 ರ ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ತಮಿಳುನಾಡಿನಲ್ಲಿ ಟ್ರಾನ್ಸ್ ಜೆಂಡರ್ ಸಮುದಾಯದಿಂದ ಚುನಾವಣೆ ಗೆದ್ದ ಏಕೈಕ ಅಭ್ಯರ್ಥಿಯಾಗಿದ್ದಾರೆ. ಗಂಗಾ ಕಳೆದ ಇಪ್ಪತ್ತು ವರ್ಷಗಳಿಂದ ಡಿಎಂಕೆ ಸದಸ್ಯೆಯಾಗಿದ್ದಾರೆ.

ಇದನ್ನೂ ಓದಿ: ತಮಿಳುನಾಡು ನಗರ ಸ್ಥಳೀಯ ಸಂಸ್ಥೆ ಚುನಾವಣಾ ಫಲಿತಾಂಶ ಮುಂದಿನ ವಿಧಾನಸಭೆ ಚುನಾವಣೆಗೆ ತಾಲೀಮು ಎಂದ ಸಿಟಿ ರವಿ

Published On - 2:24 pm, Wed, 23 February 22