ಭಾರತದಲ್ಲಿ ಸಮುದಾಯ ಪ್ರಸರಣ ಹಂತ ತಲುಪಿದ ಒಮಿಕ್ರಾನ್​ ಸೋಂಕು; ಐಎನ್​​ಎಸ್​ಎಸಿಒಜಿ ಮಾಹಿತಿ

ಭಾರತದಲ್ಲಿ ಸಮುದಾಯ ಪ್ರಸರಣ ಹಂತ ತಲುಪಿದ ಒಮಿಕ್ರಾನ್​ ಸೋಂಕು; ಐಎನ್​​ಎಸ್​ಎಸಿಒಜಿ ಮಾಹಿತಿ
ಸಾಂಕೇತಿಕ ಚಿತ್ರ​

ಭಾರತದಲ್ಲಿ ಒಮಿಕ್ರಾನ್​ ಸಮುದಾಯ ಪ್ರಸರಣ ಆಗುತ್ತಿದೆ ಎಂಬುದನ್ನು ಈಗಾಗಲೇ ಹಲವು ರಾಜ್ಯಗಳು ಹೇಳಿದ್ದವು. ವಿದೇಶಿ ಪ್ರವಾಸದ ಹಿನ್ನೆಲೆ ಇಲ್ಲದವರು, ವಿದೇಶಕ್ಕೆ ಹೋಗಿಬಂದವರ ಸಂಪರ್ಕಕ್ಕೆ ಹೋಗದೆ ಇರುವವರಿಗೂ ಒಮಿಕ್ರಾನ್​ ತಗುಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದವು. 

TV9kannada Web Team

| Edited By: Lakshmi Hegde

Jan 23, 2022 | 2:47 PM

ದೆಹಲಿ: ಒಮಿಕ್ರಾನ್​ ರೂಪಾಂತರದ ಹರಡುವಿಕೆ ಭಾರತದಲ್ಲಿ ಸಮುದಾಯ ಪ್ರಸರಣದ (Omicron Community Transmission) ಹಂತ ತಲುಪಿದೆ. ಅದರಲ್ಲೂ ವಿವಿಧ ಮೆಟ್ರೋ ನಗರಗಳಲ್ಲಿಯೇ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಹರಡುತ್ತಿದೆ. ಪ್ರತಿದಿನವೂ ಕೇಸ್​ಗಳ ಸಂಖ್ಯೆ ವೇಗವಾಗಿ ಬೆಳೆಯುತ್ತಿದೆ ಎಂದು ಭಾರತೀಯ ಸಾರ್ಸ್​-ಕೊವ್​-1 ಜಿನೋಮಿಕ್ಸ್ ಕನ್ಸೋರ್ಟಿಯಂ (INSACOG) ತಿಳಿಸಿದೆ. ಒಮಿಕ್ರಾನ್​ ರೂಪಾಂತರದ ಸಾಂಕ್ರಾಮಿಕ  ಉಪ-ರೂಪಾಂತರ ಬಿಎ .2 ಎಂಬ ವಂಶಾವಳಿ ಭಾರತದಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಹೀಗಾಗಿ ಎಸ್​ ಜೀನ್​​ ಡ್ರಾಪ್​ಔಟ್​ ಆಧಾರಿತ ಸ್ಕ್ರೀನಿಂಗ್​ ಗಳು ಹೆಚ್ಚಿನ ತಪ್ಪು ನೆಗೆಟಿವ್​ ವರದಿ ಕೊಡುವ ಸಾಧ್ಯತೆಯಿದೆ ಎಂದು ಹೇಳಿದೆ. 

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದಡಿಯಲ್ಲಿ ಬರುವ ಈ ಐಎನ್​​ಎಸ್​ಎಸಿಒಜಿ ಇಂದು ಲಘುಪ್ರಕಟಣೆ ಬಿಡುಗಡೆ ಮಾಡಿದ್ದು, ಸದ್ಯ ಬಹುತೇಕ ಒಮಿಕ್ರಾನ್ ಸೋಂಕಿತರಿಗೆ ಯಾವುದೇ ಲಕ್ಷಣಗಳು ಇಲ್ಲ ಅಥವಾ ಸೌಮ್ಯವಾದ ಲಕ್ಷಣಗಳಿವೆ. ಆದರೆ ನಿರ್ಲಕ್ಷಿಸುವಂತಿಲ್ಲ. ಕೊವಿಡ್​ 19 ಮೂರನೇ ಅಲೆಯಲ್ಲೂ ಕೂಡ ಆಸ್ಪತ್ರೆಗೆ ದಾಖಲಾಗುವ ಪ್ರಮಾಣ ಮತ್ತು ಐಸಿಯು ಚಿಕಿತ್ಸೆ ಪಡೆಯುವವರ ಸಂಖ್ಯೆಯಲ್ಲಿ ಹೆಚ್ಚಳವಾಗಲಿದೆ.  ಅಪಾಯದ ಪ್ರಮಾಣ ಹೆಚ್ಚಲಿದೆ ಎಂದು ಎಚ್ಚರಿಕೆ ನೀಡಿದೆ. ಇತ್ತೀಚೆಗೆ ಫ್ರಾನ್ಸ್​​ನಲ್ಲಿ ಪತ್ತೆಯಾಗಲಿದೆ ಎಂದು ಹೇಳಲಾದ B.1.640.2 ತಳಿ ಇದುವರೆಗೂ ಭಾರತದಲ್ಲಿ ಕಂಡುಬಂದಿಲ್ಲ. ಹಾಗಾಗಿ ಆತಂಕ ಪಡುವ ಅಗತ್ಯವೂ ಸದ್ಯಕ್ಕೆ ಇಲ್ಲ ಎಂದೂ ಈ ಐಎನ್​​ಎಸ್​ಎಸಿಒಜಿ ತಿಳಿಸಿದೆ.

ಭಾರತದಲ್ಲಿ ಒಮಿಕ್ರಾನ್​ ಸಮುದಾಯ ಪ್ರಸರಣ ಆಗುತ್ತಿದೆ ಎಂಬುದನ್ನು ಈಗಾಗಲೇ ಹಲವು ರಾಜ್ಯಗಳು ಹೇಳಿದ್ದವು. ವಿದೇಶಿ ಪ್ರವಾಸದ ಹಿನ್ನೆಲೆ ಇಲ್ಲದವರು, ವಿದೇಶಕ್ಕೆ ಹೋಗಿಬಂದವರ ಸಂಪರ್ಕಕ್ಕೆ ಹೋಗದೆ ಇರುವವರಿಗೂ ಒಮಿಕ್ರಾನ್​ ತಗುಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದವು.  ಒಮಿಕ್ರಾನ್​ ವೈರಾಣು ಮೊದಲು ಪತ್ತೆಯಾಗಿದ್ದು ದಕ್ಷಿಣ ಆಫ್ರಿಕಾದಲ್ಲಿ. 2021ರ ನವೆಂಬರ್​ 24ರಂದು ಆ ದೇಶದಲ್ಲಿ ಪತ್ತೆಯಾದ ಒಮಿಕ್ರಾನ್​ ಇದೀಗ ಜಗತ್ತಿನ ಬಹುತೇಕ ದೇಶಗಳಲ್ಲಿ ಮತ್ತೊಮ್ಮೆ ಕೊರೊನಾ ಹೆಚ್ಚಲು ಕಾರಣವಾಗಿದೆ. ಅಷ್ಟೇ ಅಲ್ಲ, ಭಾರತದಲ್ಲಿಯೂ ಮೂರನೇ ಅಲೆ ಉಂಟಾಗಲು ಕಾರಣವಾಗಿದೆ. ದೇಶದಲ್ಲಿ ಮೊಟ್ಟಮೊದಲ ಒಮಿಕ್ರಾನ್​ ಪ್ರಕರಣ ಡಿಸೆಂಬರ್​​ನಲ್ಲಿ ಕಾಣಿಸಿಕೊಂಡಿತ್ತು. ಎರಡನೇ ಅಲೆಗೆ ಕಾರಣವಾಗಿದ್ದ ಡೆಲ್ಟಾ ವೈರಾಣುಗಿಂತಲೂ ಅತ್ಯಂತ ವೇಗವಾಗಿ ಒಮಿಕ್ರಾನ್​ ಹರಡುತ್ತಿದೆ. ಸದ್ಯ ದೇಶದಲ್ಲಿ 10,050 ಒಮಿಕ್ರಾನ್​ ಸೋಂಕಿತರು ಇದ್ದಾರೆ.

ಇದನ್ನೂ ಓದಿ: ನಿಮ್ಮ ಫೋನನ್ನು ಬೇರೆಯವರಿಗೆ ಕೊಡುವಾಗ ಹೀಗೆ ಮಾಡಿ: ಅವರೇನು ಮಾಡಿದ್ರು ಎಲ್ಲ ತಿಳಿಯುತ್ತೆ

Follow us on

Related Stories

Most Read Stories

Click on your DTH Provider to Add TV9 Kannada