ಪಶ್ಚಿಮ ಬಂಗಾಳದ ಉಪಚುನಾವಣೆಯಲ್ಲಿ ಟಿಎಂಸಿ ಭರ್ಜರಿ ಬೇಟೆ; ಎಲ್ಲಾ 6 ಸ್ಥಾನಗಳಲ್ಲಿ ಗೆಲುವು

ಪಶ್ಚಿಮ ಬಂಗಾಳದ ಉಪಚುನಾವಣೆ ಫಲಿತಾಂಶ ಹೊರಬಿದ್ದಿದೆ. 2021ರ ಚುನಾವಣೆಯಲ್ಲಿ ಬಿಜೆಪಿ ಪಾಲಾಗಿದ್ದ ಅಲಿಪುರ್ದೌರ್ ಜಿಲ್ಲೆಯ ಮದರಿಹತ್ ಕ್ಷೇತ್ರದಲ್ಲಿ ಕೂಡ ತೃಣಮೂಲ ಕಾಂಗ್ರೆಸ್ ಗೆದ್ದಿದೆ. ಸಿತಾಯಿ, ಮದರಿಹತ್, ನೈಹಟಿ, ಹರೋವಾದಲ್ಲಿ ಗೆದ್ದಿರುವ ಟಿಎಂಸಿ ಮೇದಿನಿಪುರ, ತಲ್ದಂಗ್ರಾದಲ್ಲಿ ಮುನ್ನಡೆ ಸಾಧಿಸಿದೆ. ಇಂದು ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭವಾಯಿತು.

ಪಶ್ಚಿಮ ಬಂಗಾಳದ ಉಪಚುನಾವಣೆಯಲ್ಲಿ ಟಿಎಂಸಿ ಭರ್ಜರಿ ಬೇಟೆ; ಎಲ್ಲಾ 6 ಸ್ಥಾನಗಳಲ್ಲಿ ಗೆಲುವು
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ
Follow us
ಸುಷ್ಮಾ ಚಕ್ರೆ
|

Updated on: Nov 23, 2024 | 5:17 PM

ನವದೆಹಲಿ: ಪಶ್ಚಿಮ ಬಂಗಾಳ ವಿಧಾನಸಭಾ ಉಪಚುನಾವಣೆಯಲ್ಲಿ ಅಖಿಲ ಭಾರತ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಭಾರಿ ಗೆಲುವಿನತ್ತ ಸಾಗುತ್ತಿದೆ. ಟಿಎಂಸಿ ಇಲ್ಲಿಯವರೆಗೆ 4 ಸ್ಥಾನಗಳನ್ನು ಗೆದ್ದು ಎರಡು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಟಿಎಂಸಿ ಸಿತಾಯಿ, ಮದರಿಹತ್, ನೈಹಟಿ, ಹರೋವಾ ಗೆದ್ದು ಮೇದಿನಿಪುರ, ತಲ್ದಂಗ್ರಾದಲ್ಲಿ ಮುನ್ನಡೆ ಸಾಧಿಸಿದೆ. ಇಂದು ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭವಾಯಿತು. ಟಿಎಂಸಿ ಅಭ್ಯರ್ಥಿಗಳು ತಮ್ಮ 2 ಸ್ಥಾನಗಳಲ್ಲಿ ಬಹುಮತದೊಂದಿಗೆ ಮುನ್ನಡೆ ಸಾಧಿಸಿದ್ದು, ಬಿಜೆಪಿ ಅಭ್ಯರ್ಥಿಗಳು ಹಿಂದುಳಿದಿದ್ದಾರೆ. ಈ ವರ್ಷ ಜೂನ್‌ನಲ್ಲಿ ಲೋಕಸಭೆಗೆ ಆಯ್ಕೆಯಾದ ನಂತರ ಶಾಸಕರು ರಾಜೀನಾಮೆ ನೀಡಿದ ನಂತರ ತೆರವಾದ ಈ ಸ್ಥಾನಗಳಿಗೆ ಉಪಚುನಾವಣೆ ಅಗತ್ಯವಾಗಿತ್ತು.

ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಮತ್ತು ಹತ್ಯೆಯ ಆರೋಪದ ಮೇಲೆ ಪಶ್ಚಿಮ ಬಂಗಾಳ ರಾಜ್ಯದಲ್ಲಿ ಆಕ್ರೋಶದ ನಡುವೆ ನಡೆದ ಪಶ್ಚಿಮ ಬಂಗಾಳದ ಉಪಚುನಾವಣೆಯು ಮಮತಾ ಬ್ಯಾನರ್ಜಿಗೆ ಪರೀಕ್ಷೆಯಾಗಿದೆ. ಈ ಘಟನೆ ರಾಜ್ಯದಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದು, ರಾಜ್ಯದ ವಿವಿಧೆಡೆ ಪ್ರತಿಭಟನೆಗೆ ಕಾರಣವಾಗಿತ್ತು.

ಇದನ್ನೂ ಓದಿ: Cyclone Dana: ಒಡಿಶಾ, ಬಂಗಾಳದಲ್ಲಿ ಇಂದು ರಾತ್ರಿಯಿಂದ ಡಾನಾ ಚಂಡಮಾರುತದ ಅಬ್ಬರ; 10 ಲಕ್ಷ ಜನರ ಸ್ಥಳಾಂತರ

2021 ಮತ್ತು 2016ರ ಚುನಾವಣೆಗಳಲ್ಲಿ ಬಿಜೆಪಿ ಪಾಲಾಗಿದ್ದ ಅಲಿಪುರ್ದೂರ್ ಜಿಲ್ಲೆಯ ಮದರಿಹತ್ ಕ್ಷೇತ್ರವನ್ನು ಟಿಎಂಸಿ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಸಿತಾಯಿ, ಹರೋವಾ, ನೈಹತಿ, ತಲ್ದಂಗ್ರಾ, ಮತ್ತು ಮೇದಿನಿಪುರ್ ಕ್ಷೇತ್ರಗಳಲ್ಲಿ ತೃಣಮೂಲ ಅಭ್ಯರ್ಥಿಗಳು ಜಯಭೇರಿ ಬಾರಿಸಿದ್ದಾರೆ. ಈಗಾಗಲೇ ಟಿಎಂಸಿಯ ಸಂಗೀತಾ ರಾಯ್ ಅವರು ಸೀತಾಯಿ (ಪರಿಶಿಷ್ಟ ಜಾತಿ) 1 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆದ್ದಿದ್ದಾರೆ. ಅವರು ಕೇವಲ 35,348 ಮತಗಳನ್ನು ಪಡೆದ ಬಿಜೆಪಿಯ ದೀಪಕ್ ಕುಮಾರ್ ರೇ ಅವರನ್ನು ಸೋಲಿಸಿದರು.

ದಕ್ಷಿಣ ಕೊಲ್ಕತ್ತಾದಲ್ಲಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಮನೆ ಮುಂದೆಯೂ ಸೇರಿದಂತೆ ತೃಣಮೂಲ ಕಾರ್ಯಕರ್ತರು ಈಗಾಗಲೇ ಸಂಭ್ರಮಾಚರಣೆ ಆರಂಭಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು
ಗಾಂಧಿ ಭಾರತ ಒಂದು ಸರ್ಕಾರೀ ಕಾರ್ಯಕ್ರಮ, ಎಲ್ಲರೂ ಭಾಗವಹಿಸಬಹುದು: ಶಿವಕುಮಾರ್
ಗಾಂಧಿ ಭಾರತ ಒಂದು ಸರ್ಕಾರೀ ಕಾರ್ಯಕ್ರಮ, ಎಲ್ಲರೂ ಭಾಗವಹಿಸಬಹುದು: ಶಿವಕುಮಾರ್
ನಾನು ನಿಷ್ಠಾವಂತ ಕಾರ್ಯಕರ್ತ, ಸತೀಶ್ ಜಾರಕಿಹೊಳಿ ಹಿಂಬಾಲಕನಲ್ಲ: ಕಾರ್ಯಕರ್ತ
ನಾನು ನಿಷ್ಠಾವಂತ ಕಾರ್ಯಕರ್ತ, ಸತೀಶ್ ಜಾರಕಿಹೊಳಿ ಹಿಂಬಾಲಕನಲ್ಲ: ಕಾರ್ಯಕರ್ತ
ಸುಮ್ಮನಿರುವಂತೆ ಸತೀಶ್ ಹೇಳಿದರೂ ಕೂಗಾಟ ನಿಲ್ಲಿಸದ ಕಾರ್ಯಕರ್ತರು!
ಸುಮ್ಮನಿರುವಂತೆ ಸತೀಶ್ ಹೇಳಿದರೂ ಕೂಗಾಟ ನಿಲ್ಲಿಸದ ಕಾರ್ಯಕರ್ತರು!