ಎಸ್‌ಐಟಿ ನೀಡಿದ್ದ ನೋಟಿಸ್‌ಗೆ ತಡೆಯಾಜ್ಞೆ ನೀಡಲು ಹೈಕೋರ್ಟ್ ನಕಾರ: ಬಿ.ಎಲ್ ಸಂತೋಷ್‌ಗೆ ಹಿನ್ನಡೆ
ಎಸ್‌ಐಟಿ ನೋಟಿಸ್ ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗಿದ್ದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ ಅವರಿಗೆ ಹಿನ್ನಡೆಯಾಗಿದೆ.
ಹೈದರಾಬಾದ್: ತೆಲಂಗಾಣದಲ್ಲಿ ಭಾರತ ರಾಷ್ಟ್ರ ಸಮಿತಿಯ(TRS) ನಾಲ್ವರು ಶಾಸಕರ ಖರೀದಿ ಯತ್ನ ಆರೋಪ ಸಂಬಂಧ ಹೈದರಾಬಾದ್ ವಿಶೇಷ ತನಿಖಾ ತಂಡವು(SIT) ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್‌ಗೆ (BL Santosh) ವಿಚಾರಣೆಗೆ ಹಾಜರಾ್ಗುವಂತೆ ಸಮನ್ಸ್ ನೀಡಿದೆ. ಇದನ್ನು ಪ್ರಶ್ನಿಸಿ ತೆಲಂಗಾಣ ಹೈಕೋರ್ಟ್ ಮೊರೆ ಹೋಗಿದ್ದ ಬಿ.ಎಲ್. ಸಂತೋಷ್‌ಗೆ ಹಿನ್ನಡೆಯಾಗಿದೆ.
ಬಿಜೆಪಿ ಸೇರಲು ಟಿಆರ್‌ಎಸ್ ಶಾಸಕರಿಗೆ ಹಣದ ಆಮಿಷ ಪ್ರಕರಣ: ಬಿ.ಎಲ್.ಸಂತೋಷ್‌ಗೆ ನೋಟಿಸ್
ಹೌದು…ಎಸ್‌ಐಟಿ ನೀಡಿದ್ದ ನೋಟಿಸ್‌ಗೆ ತಡೆಯಾಜ್ಞೆ ನೀಡುವಂತೆ ಬಿ.ಎಲ್ ಸಂತೋಷ್ ತೆಲಂಗಾಣ ಹೈಕೋರ್ಟ್ಗೆ ಮನವಿ ಮಾಡಿದ್ದರು. ಆದ್ರೆ, ಕೋರ್ಟ್, ನೋಟಿಸ್‌ಗೆ ತಡೆಯಾಜ್ಞೆ ನೀಡಲು ನಿರಾಕರಿಸಿದೆ. ಅಲ್ಲದೇ ನೋಟಿಸ್ ವಿಚಾರದಲ್ಲಿ ಸಹಕರಿಸುವಂತೆ ದೆಹಲಿ ಪೊಲೀಸರಿಗೆ ಸೂಚನೆ ನೀಡಿದೆ.
Hyderabad | HC Single Judge Bench Justice Vijayasen Reddy, hearing lunch motion petition moved by BJP, ordered that SIT should not make arrests or initiate coercive action against BJP National General Secy (Org) B L Santhosh.
— ANI (@ANI) November 19, 2022
ಇನ್ನು ಎಸ್‌ಐಟಿ, ಬಿಎಲ್ ಸಂತೋಷ್ ಅವರನ್ನು ಬಂಧಿಸಬಾರದು ಎಂದು ತೆಲಂಗಾಣ ಹೈಕೋರ್ಟ್ ಏಕಸದಸ್ಯ ಪೀಠ ನ್ಯಾಯಮೂರ್ತಿ ವಿಜಯಸೇನ್ ರೆಡ್ಡಿ ಆದೇಶಿಸಿದ್ದಾರೆ. ಇದರಿಂದ ಬಿ.ಎಲ್ ಸಂತೋಷ್‌ಗೆ ಕೊಂಚ ರಿಲೀಫ್ ಸಿಕ್ಕಂತಾಗಿದೆ.
ಆಪರೇಷನ್ ಕಮಲ ಆರೋಪ: ಶಾಸಕ-ಸ್ವಾಮೀಜಿ ಆಡಿಯೋ ಲೀಕ್, ಬಿಎಲ್ ಸಂತೋಷ್ ಹೆಸರು ಪ್ರಸ್ತಾಪ
ನೋಟಿಸ್ ನೀಡಿದ್ದ ಎಸ್‌ಐಟಿ
ತೆಲಂಗಾಣದಲ್ಲಿ ಭಾರತ ರಾಷ್ಟ್ರ ಸಮಿತಿಯ ನಾಲ್ವರು ಶಾಸಕರ ಖರೀದಿ ಯತ್ನ ಆರೋಪ ಸಂಬಂಧ ಹೈದರಾಬಾದ್ ವಿಶೇಷ ತನಿಖಾ ತಂಡವು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರಿಗೆ ನವೆಂಬರ್ 21ರಂದು ವಿಚಾರಣೆಗೆ ಖುದ್ದು ಹಾಜರಾಗುವಂತೆ ಸಮನ್ಸ್ ಜಾರಿಗೊಳಿಸಿತ್ತು. , ಅಪರಾಧ ನೀತಿ ಸಂಹಿತೆಯ ಸೆಕ್ಷನ್ 41 (ಎ) ಅಡಿಯಲ್ಲಿ ಸಮನ್ಸ್ ಜಾರಿಗೊಳಿಸಿದ್ದು, ವಿಚಾರಣೆಗೆ ಗೈರಾದರೆ ಬಂಧಿಸುವ ಎಚ್ಚರಿಕೆ ನೀಡಿತ್ತು.
ಪ್ರಕರಣ ಹಿನ್ನೆಲೆ
ಅಕ್ಟೋಬರ್ 26ರಂದುತೆಲಂಗಾಣದ ಸೈಬರಾಬಾದ್ ಪೊಲೀಸರು ಅಝಿಜ್ ನಗರದ ಫಾರ್ಮ್ ಹೌಸ್ ಮೇಲೆ ದಾಳಿ ಮಾಡಿದ್ದರು. ಈ ವೇಳೆ ಬರೋಬ್ಬರಿ 15 ಕೋಟಿ ರೂ. ಹಣವನ್ನು ಸೀಜ್ ಮಾಡಿದ್ದರು. ಅಲ್ಲದೇ ಆಪರೇಷನ್ ಕಮಲಕ್ಕೆ ಈ ಹಣ ತರಲಾಗಿತ್ತು ಎನ್ನಲಾಗಿತ್ತು. ತೆಲಂಗಾಣ ರಾಷ್ಟ್ರ ಸಮಿತಿಯ (ಟಿಆರ್‌ಎಸ್) ನಾಲ್ವರು ಶಾಸಕರಿಗೆ ಪಕ್ಷ ಬದಲಿಸಲು ಬಿಜೆಪಿ ಹಣದ ಆಮಿಷ ಒಡ್ಡಲಾಗಿತ್ತು. ಶಾಸಕರನ್ನು ಖರೀದಿಸಲು ತಂದಿದ್ದ ಎನ್ನಲಾದ 15 ಕೋಟಿ ರೂ. ಹಣದ ಜೊತೆಗೆ ಮೂವರನ್ನು ಪೊಲೀಸರ ಬಂಧಿಸಿದ್ದರು.
ಅಲ್ಲದೇ ಆಪರೇಷನ್ ಕಮಲದ ಬಗ್ಗೆ ಆಡಿಯೋವೊಂದು ವೈರಲ್ ಆಗಿತ್ತು. ಆ ಆಡಿಯೋದಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಹೆಸರು ಪ್ರಸ್ತಾಪಿಸಲಾಗಿತ್ತು. ಈ ಪ್ರಕರಣ ತೆಲಂಗಾಣ ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಮೂಡಿಸಿತ್ತು.
ಶಾಸಕ ರೋಹಿತ್ ರೆಡ್ಡಿ ಹಾಗೂ ರಾಮಚಂದ್ರ ಭಾರತಿ ಸ್ವಾಮಿಜಿ ನಡುವಿನ ಸಂಭಾಷಣೆ ಆಡಿಯೋನಲ್ಲಿ, ಬಿ.ಎಲ್ ಸಂತೋಷ್ ಪರವಾಗಿ ಮಾತನಾಡುತ್ತಿದ್ದೇನೆ ಎಂದು ಸ್ವಾಮೀಜಿ ಹೇಳಿಕೊಂಡಿದ್ದರು. ನೀವು ಬಿಜೆಪಿ ಸೇರಿ. ನಮ್ಮ ಸಂಘಟನಾ ಕಾರ್ಯದರ್ಶಿ ಬಿ.ಎಲ್‌ಸಂತೋಷ್ ಎಲ್ಲವನ್ನು ನೋಡಿಕೊಳ್ಳುತ್ತಾರೆ ಎಂದು ಟಿಆರ್ ಎಸ್ ಶಾಸಕನಿಗೆ ಆಮಿಷ ಒಡ್ಡಲಾಗಿತ್ತು.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 5:24 pm, Sat, 19 November 22