Evening Digest | ಇಂದು ನೀವು ಮಿಸ್ ಮಾಡಿಕೊಳ್ಳದೇ ಗಮನಿಸಬೇಕಾದ 9 ಪ್ರಮುಖ ಸುದ್ದಿ, ಬೆಳವಣಿಗೆಗಳಿವು

Kannada News Digest: ದಿನವಿಡೀ ಹರಿದುಬರುವ ಸುದ್ದಿ ಪ್ರವಾಹದಲ್ಲಿ ಅತಿಮುಖ್ಯ ಸುದ್ದಿ / ಬೆಳವಣಿಗೆ ನಿಮ್ಮ ಕಣ್ತಪ್ಪಬಾರದು. ಹೀಗಾಗಿಯೇ ಆಯ್ದ 9 ಪ್ರಮುಖ ಸುದ್ದಿಗಳನ್ನು ನಿಮ್ಮ ಮುಂದಿಡುವ ಪ್ರಯತ್ನ ಟಿವಿ9 ಡಿಜಿಟಲ್ ತಂಡ ಮಾಡಿದೆ.

Evening Digest | ಇಂದು ನೀವು ಮಿಸ್ ಮಾಡಿಕೊಳ್ಳದೇ ಗಮನಿಸಬೇಕಾದ 9 ಪ್ರಮುಖ ಸುದ್ದಿ, ಬೆಳವಣಿಗೆಗಳಿವು
ಶುಭಮನ್ ಗಿಲ್​, ರೋಹಿತ್​ ಶರ್ಮಾ
Follow us
ಸಾಧು ಶ್ರೀನಾಥ್​
| Updated By: ರಾಜೇಶ್ ದುಗ್ಗುಮನೆ

Updated on:Feb 24, 2021 | 7:27 PM

ಇಂದು ನೀವು ಮಿಸ್ ಮಾಡಿಕೊಳ್ಳದೇ ಗಮನಿಸಬೇಕಾದ 9 ಪ್ರಮುಖ ಸುದ್ದಿ / ಪ್ರಚಲಿತ ವಿದ್ಯಮಾನಗಳ ಮಾಹಿತಿ ಇಲ್ಲಿದೆ. ದೇಶ-ವಿದೇಶಗಳಿಂದ ನಾಲ್ಕು ದಿಕ್ಕಿನಿಂದ ಸಾವಿರಾರು ಸುದ್ದಿ ಹರಿದಾಡುತ್ತಿರುತ್ತವೆ. ಕ್ಷಣಾರ್ಧದಲ್ಲಿ ಬಹುತೇಕ ಸುದ್ದಿಗಳನ್ನು ನಿಮಗೆ ತಲುಪಿಸುವ ಕಾರ್ಯ ಟಿವಿ9 ವೆಬ್​ಸೈಟ್​​ ಮಾಡುತ್ತಿದೆ. ದಿನವಿಡೀ ಹರಿದುಬರುವ ಸುದ್ದಿ ಪ್ರವಾಹದಲ್ಲಿ ಅತಿಮುಖ್ಯ ಸುದ್ದಿ / ಬೆಳವಣಿಗೆ ನಿಮ್ಮ ಕಣ್ತಪ್ಪಬಾರದು. ಹೀಗಾಗಿಯೇ ಆಯ್ದ 9 ಪ್ರಮುಖ ಸುದ್ದಿಗಳನ್ನು ನಿಮ್ಮ ಮುಂದಿಡುವ ಪ್ರಯತ್ನ ಟಿವಿ9 ಡಿಜಿಟಲ್ ತಂಡ ಮಾಡಿದೆ:

1.ಭಾರತ-ಇಂಗ್ಲೆಂಡ್ ಟೆಸ್ಟ್ ಕ್ರಿಕೆಟ್: 112 ರನ್​ಗಳಿಗೆ ಇಂಗ್ಲೆಂಡ್​ ಸರ್ವಪತನ ಟೀಂ ಇಂಡಿಯಾ ಪರ ಆರಂಭದಿಂದಲೂ ಆರ್ಭಟಿಸಿದ ಅಕ್ಷರ್​ 6, ಅಶ್ವಿನ್​ 3 ಹಾಗೂ ಇಶಾಂತ್ 1 ವಿಕೆಟ್​ ಪಡೆದು ಮಿಂಚಿದರು Link: ಅಕ್ಷರ್​-ಅಶ್ವಿನ್​​ ಅಬ್ಬರ, 112 ರನ್​ಗಳಿಗೆ ಇಂಗ್ಲೆಂಡ್​ ಆಲ್​ಔಟ್

2. ದೊಡ್ಡ ನಟನನ್ನ ಸಣ್ಣ ಹೀರೋಯಿನ್ ಮನೆಯಲ್ಲಿ ನಿಲ್ಲಿಸಿದ್ರು..  ನಟ ದರ್ಶನ್​​ನನ್ನು ನಾನು ಬಹಳ ಪ್ರೀತಿಸುತ್ತೇನೆ. ಅವತ್ತು ಪೋಲಿಸರು ಅವನನ್ನ ಚಪ್ಪಲಿ ಇಲ್ಲದೆ ನಿಲ್ಲಿಸಿದ್ರಲ್ಲ, ಆಗ ಯಾರು ಬಂದಿದ್ರು ಅವನ ಸಪೋರ್ಟ್‌ಗೆ? ಆಗ ಬಂದಿದ್ದು ಜಗ್ಗೇಶ್ ಅಲ್ವಾ ನೀವೇ ಹೇಳಿ. Link:  ಆಗ ಯಾರು ಬಂದಿದ್ರು ಅವನ ಸಪೋರ್ಟ್‌ಗೆ: ಜಗ್ಗೇಶ್ ಪ್ರಶ್ನೆ

3. ವಿವಾದಕ್ಕೆ ತೆರೆ: ಅಭಿಮಾನಿಗಳ ಪರವಾಗಿ ಕ್ಷಮೆ ಕೇಳಿದ ನಟ ದರ್ಶನ್ ಇದೇ ಮೊದಲ ಬಾರಿಗೆ ದರ್ಶನ್​ ಮೌನ​ ಮುರಿದಿದ್ದಾರೆ. ಟಿವಿ9 ಕನ್ನಡಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಅಭಿಮಾನಿಗಳ ಪರವಾಗಿ ದರ್ಶನ್​ ಕ್ಷಮೆ ಯಾಚಿಸಿದ್ದಾರೆ. Link: ಜಗ್ಗೇಶ್​ ವಿವಾದಕ್ಕೆ ತೆರೆ: ಅಭಿಮಾನಿಗಳ ಪರವಾಗಿ ಕ್ಷಮೆ ಕೇಳಿದ ನಟ ದರ್ಶನ್​

4. ಪರೀಕ್ಷೆ ಹತ್ತಿರವಿರುವಾಗ ಮಕ್ಕಳ ದೈಹಿಕ ಕ್ಷಮತೆ, ಏಕಾಗ್ರತೆ ಕಾಪಾಡಲು ಈ ಆಹಾರಗಳು ಸಹಕಾರಿ ಸಾಧಾರಣವಾಗಿ ಹಸಿರು ಸೊಪ್ಪಿನ ತರಕಾರಿಗಳು ಅತಿ ಹೆಚ್ಚಿನ ಪ್ರಮಾಣದಲ್ಲಿ ಕಬ್ಬಿಣಾಂಶ ಒಳಗೊಂಡಿರುತ್ತವೆ. ಇದು ರಕ್ತದಲ್ಲಿನ ಹಿಮೋಗ್ಲೋಬಿನ್​ ಪ್ರಮಾಣ ವೃದ್ಧಿಸುವ ಜೊತೆಗೆ ಮೆದುಳು ಸಕ್ರಿಯವಾಗಿರಲು ಸಹಕಾರಿಯಾಗುತ್ತದೆ. Link: ಮಕ್ಕಳ ಏಕಾಗ್ರತೆ ಹೆಚ್ಚಿಸಲು ಈ ಜೀವನಶೈಲಿ ಸಹಕಾರಿ

5. ಮೂರು ಮದುವೆಯಾಚೆಗೂ ಹಲವರೊಂದಿಗೆ ಅಫೇರ್ ಇತ್ತು ಫುಟ್​ಬಾಲ್ ವಿಶ್ವಕಪ್​ ಗೆದ್ದ ಈ ಆಟಗಾರನನ್ನು ಈಗಲೂ ಅದೆಷ್ಟೋ ಯುವಕರು ತಮ್ಮ ರೋಲ್ ಮಾಡೆಲ್​ ಎಂದುಕೊಳ್ಳುತ್ತಿದ್ದಾರೆ. ಫುಟ್ಬಾಲ್​ ಗ್ರೌಂಡ್​ನಲ್ಲಿ ಅದ್ಭುತ ಸಾಧನೆ ತೋರಿರುವ ಪೀಲೆಯ ವೈಯಕ್ತಿಕ ಜೀವನ ಈಗ ಸುದ್ದಿಯಲ್ಲಿದೆ. Link: ಫುಟ್ಬಾಲ್​ ದಂತಕತೆ ಪೀಲೆ ಬಿಚ್ಚಿಟ್ಟ ಸತ್ಯ

6.ಮೋದಿ ದಂಗಾಬಾಜ್​ ಎಂದ ಮಮತಾ ಬ್ಯಾನರ್ಜಿ ಬಂಗಾಳವನ್ನು ಬಂಗಾಳವೇ ಆಳುತ್ತದೆ. ಗುಜರಾತ್ ಬಂಗಾಳವನ್ನು ಆಳುವುದಿಲ್ಲ ಎನ್ನುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಮಮತಾ ಟಾಂಗ್ ನೀಡಿದರು. Link: ಪಶ್ಚಿಮ ಬಂಗಾಳ ಚುನಾವಣೆ

7.ಪುದುಚೇರಿಯಲ್ಲಿ ರಾಷ್ಟ್ರಪತಿ ಆಡಳಿತಕ್ಕೆ ಶಿಫಾರಸು ಪುದುಚೇರಿಯಲ್ಲಿ ರಾಷ್ಟ್ರಪತಿ ಆಡಳಿತಕ್ಕೆ ಲೆಫ್ಟಿನೆಂಟ್ ಗವರ್ನರ್ ತಮಿಳಿಸೈ ಸೌಂದರರಾಜನ್ ಶಿಫಾರಸು ಮಾಡಿದ ಬೆನ್ನಲ್ಲೇ ಕೇಂದ್ರ ಸರ್ಕಾರ ಈ ತೀರ್ಮಾನ ಕೈಗೊಂಡಿದೆ. Link: ಪುದುಚೇರಿ ರಾಜಕಾರಣಕ್ಕೆ ಮತ್ತೊಂದು ತಿರುವು

8.ಪಿಂಕ್-ಬಾಲ್ ಪಂದ್ಯಗಳೇ ಟೆಸ್ಟ್​ ಕ್ರಿಕೆಟ್​ನ ಭವಿಷ್ಯ: ಸೌರವ್ ಗಂಗೂಲಿ ಅನಾರೋಗ್ಯದ ನಿಮಿತ್ತ ಪಂದ್ಯ ವೀಕ್ಷಿಸಲು ಅಹಮದಾಬಾದಿಗೆ ಹೋಗಲಾಗದ ಸ್ಥಿತಿಗೆ ನಿರಾಶೆ ವ್ಯಕ್ತಪಡಿಸಿದ ಗಂಗೂಲಿ ಭಾರತ ತಂಡದ ಆಟ, ಟೆಸ್ಟ್​ ಕ್ರಿಕೆಟ್​ನ ಭವಿಷ್ಯದ ಬಗ್ಗೆ ಭಾವಲಹರಿ ಹರಿಸಿದ್ದಾರೆ. Link: ಗೆಲ್ಲಲಿದೆ ಭಾರತ: ಗಂಗೂಲಿ ನುಡಿದ ಭವಿಷ್ಯ

9.ಜಯಲಲಿತಾ ಅಂದ್ರೆ ನನಗೆ ತುಂಬಾ ಇಷ್ಟ ನಾನು ಬಾಲ ನಟಿಯಾಗಿದ್ದಾಗ ಜಯಲಲಿತಾ ಅವರನ್ನು ತುಂಬಾ ಇಷ್ಟ ಪಡುತ್ತಿದ್ದೆ. ಅವರ ಅಭಿಮಾನಿಯಾಗಿದ್ದೆ, ಅವರ ಜತೆಗೆ ತುಂಬಾ ಒಳ್ಳೆಯ ನೆನಪುಗಳಿವೆ ಎಂದಿದ್ದರು ಶ್ರೀದೇವಿ Link: ಮೋಹಕತಾರೆಯ ಮನದ ಮಾತು

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ  www.tv9kannada.com  ನೋಡುತ್ತಿರಿ.

Published On - 7:20 pm, Wed, 24 February 21

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್