ಇಂದು ನೀವು ಮಿಸ್ ಮಾಡಿಕೊಳ್ಳದೇ ಗಮನಿಸಬೇಕಾದ 9 ಪ್ರಮುಖ ಸುದ್ದಿ / ಬೆಳವಣಿಗೆಗಳ ಮಾಹಿತಿ ಇಲ್ಲಿದೆ. ದೇಶ-ವಿದೇಶಗಳಿಂದ ನಾಲ್ಕು ದಿಕ್ಕಿನಿಂದ ಸಾವಿರಾರು ಸುದ್ದಿ ಹರಿದಾಡುತ್ತಿರುತ್ತವೆ. ಕ್ಷಣಾರ್ಧದಲ್ಲಿ ಬಹುತೇಕ ಸುದ್ದಿಗಳನ್ನು ನಿಮಗೆ ತಲುಪಿಸುವ ಕಾರ್ಯ ಟಿವಿ9 ವೆಬ್ಸೈಟ್ ಮಾಡುತ್ತಿದೆ. ದಿನವಿಡೀ ಹರಿದುಬರುವ ಸುದ್ದಿ ಪ್ರವಾಹದಲ್ಲಿ ಅತಿಮುಖ್ಯ ಸುದ್ದಿ / ಬೆಳವಣಿಗೆ ನಿಮ್ಮ ಕಣ್ತಪ್ಪಬಾರದು. ಹೀಗಾಗಿಯೇ 9 ಪ್ರಮುಖ ಸುದ್ದಿಗಳನ್ನು ನಿಮ್ಮ ಮುಂದಿಡುವ ಪ್ರಯತ್ನ ಟಿವಿ9 ಡಿಜಿಟಲ್ ತಂಡ ಮಾಡಿದೆ.
1. ವಿದ್ಯಾರ್ಥಿನಿ ಮನೆಗೆ ಸಚಿವ ಸುರೇಶ್ ಕುಮಾರ್ ಭೇಟಿ
ಪರೀಕ್ಷೆಗೆ ಹಾಜರಾಗಲು ತಂದೆಯೊಂದಿಗೆ ಹೋಗುತ್ತಿದ್ದಾಗ ರಸ್ತೆ ಅಪಘಾತದಲ್ಲಿ ಗಾಯಗೊಂಡಿರುವ ವಿದ್ಯಾರ್ಥಿನಿ ಯಶಸ್ವಿನಿ ನಿವಾಸಕ್ಕೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ. ಈ ಬಾಲಕಿಗೆ ಇನ್ಮುಂದೆ ಕಲಿಕೆಗೆ ಎಲ್ಲ ವ್ಯವಸ್ಥೆ ಮಾಡಲಾಗುವುದು. ಪೂರ್ಣ ಗುಣಮುಖವಾಗುವವರೆಗೆ ಮನೆಗೆ ಶಾಲಾ ಶಿಕ್ಷಕರು ಪಾಠ ಹೇಳಿಕೊಡುವ ವ್ಯವಸ್ಥೆ ಮಾಡಲಾಗಿದೆ ಎಂದು ಭೇಟಿ ಬಳಿಕ ಸಚಿವರು ತಿಳಿಸಿದ್ದಾರೆ.
Link: ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ವಿದ್ಯಾರ್ಥಿನಿಯ ಮನೆಗೇ ತೆರಳಿ ಆತ್ಮವಿಶ್ವಾಸ ಹೆಚ್ಚಿಸಿದ ಸಚಿವ ಸುರೇಶ್ ಕುಮಾರ್
2. Bigg Boss Kannada 8: ಬಿಗ್ ಬಾಸ್ ಸೀಸನ್ 8 ಸೆಲೆಬ್ರಿಟಿಗಳಿಗೆ ಮೀಸಲು
ಈ ಬಾರಿಯದ್ದು ಸೆಲೆಬ್ರಿಟಿ ಸೀಸನ್. ಹೀಗಾಗಿ, ಜನಸಾಮಾನ್ಯರು ಮನೆ ಒಳಗೆ ಹೋಗಲ್ಲ. ಸ್ಪರ್ಧಿಗಳಿಗೆ ಬಯೋಬಬಲ್ ಕ್ರಿಯೇಟ್ ಮಾಡೋಕೆ ತುಂಬಾನೇ ಒದ್ದಾಡುತ್ತಿದ್ದೇವೆ. ಕೊರೊನಾ ಇರುವುದರಿಂದ ತುಂಬಾನೇ ಎಚ್ಚರಿಕೆ ವಹಿಸಿ ಈ ಬಾರಿಯ ಸ್ಪರ್ಧಿಗಳನ್ನು ಕಳುಹಿಸುತ್ತಿದ್ದೇನೆ. ಬಿಗ್ ಬಾಸ್ ಮನೆ ತುಂಬಾನೇ ಭಿನ್ನವಾಗಿದೆ. ಗಾರ್ಡನ್ ಏರಿಯಾ ಬದಲಾಯಿಸಲಾಗಿದೆ. ಈ ಬಾರಿ ಬಿಗ್ ಬಾಸ್ ವೂಟ್ನಲ್ಲಿ ಲೈವ್ ಮೂಲಕ 24 ಗಂಟೆಗಳ ಕಾಲ ಪ್ರಸಾರವಾಗಲಿದೆ
Link: ಬಿಗ್ ಬಾಸ್ ಸೀಸನ್ 8 ಸೆಲೆಬ್ರಿಟಿಗಳಿಗೆ ಮೀಸಲು; ಪ್ರತಿದಿನ ರಾತ್ರಿ 9:30ಕ್ಕೆ ಶೋ
3. ಸಿಲಿಂಡರ್ನ ಬೆಲೆ ಮತ್ತೆ ಏರಿಕೆ
ಕಳೆದ ಮೂರು ತಿಂಗಳಲ್ಲಿ ಪ್ರತಿ ಸಿಲಿಂಡರ್ನ ಬೆಲೆ ಒಟ್ಟು ₹ 200 ಹೆಚ್ಚಾಗಿದೆ. ಈಗ ಮತ್ತೆ ತೈಲ ಮಾರಾಟ ಕಂಪನಿಗಳು ಗುರುವಾರ ಅಡುಗೆ ಅನಿಲ ಸಿಲಿಂಡರ್ ಬೆಲೆಯನ್ನು ಮತ್ತೆ ₹ 25ರಷ್ಟು ಹೆಚ್ಚಿಸಿವೆ. ಹಾಗಾದ್ರೆ ಎಲ್ಲೆಲ್ಲಿ ಸಿಲಿಂಡರ್ ಬೆಲೆ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ.
Link: LPG Cylinder Price: ಅಡುಗೆ ಅನಿಲದ ಬೆಲೆ ಮತ್ತೆ ಏರಿಕೆ: ಬೆಂಗಳೂರು ಸೇರಿದಂತೆ ದೇಶದ ವಿವಿಧೆಡೆ ಸಿಲಿಂಡರ್ ದರ ಇಷ್ಟಾಗಿದೆ
4. ಕ್ಷಮೆ ಕೇಳಿದ ಪೊಗರು ತಂಡ
ಪೊಗರು ಚಿತ್ರ ತಂಡ ಸುದ್ದಿಗೋಷ್ಠಿ ನಡೆಸಿದೆ. ಸಿನಿಮಾ ರಿಲೀಸ್ ಆದ ದಿನದಿಂದ ಸಂಕಷ್ಟ ಎದುರಿಸುತ್ತಿರುವ ಚಿತ್ರತಂಡ ಇಂದು ಸುದ್ದಿಗೋಷ್ಠಿ ನಡೆಸಿ 8 ನಿಮಿಷಗಳ ಚಿತ್ರದ14 ಸೀನ್ಗಳನ್ನು ಕಟ್ ಮಾಡಿದರೆ ಬಗ್ಗೆ ಮಾತನಾಡಿದ್ದಾರೆ. ಹಾಗೂ ಆರು ದಿನಗಳಲ್ಲಿ ಸಿನಿಮಾ ಗಳಿಸಿದ ಮೊತ್ತ ತಿಳಿಸಿದ್ದು ಚಿತ್ರ ತಂಡ ಕ್ಷಮೆಯಾಚಿಸಿದೆ.
Link: ಪೊಗರು ಸುದ್ದಿಗೋಷ್ಠಿ; ನಮ್ಮಿಂದಾದ ತಪ್ಪು ಸರಿಪಡಿಸಿಕೊಂಡಿದ್ದೇವೆ, ಕತ್ತರಿ ಹಾಕಿದ ನಂತರ ಚಿತ್ರದ ಅವಧಿ 8 ನಿಮಿಷ ಕಡಿಮೆಯಾಗಿದೆ
5. ನಾಳೆ ರಾಜ್ಯಾದ್ಯಂತ ರಸ್ತೆಗಿಳಿಯಲ್ಲ ಲಾರಿಗಳು
ಡೀಸೆಲ್ ಬೆಲೆ 4 ರೂಪಾಯಿ ಇಳಿಸಬೇಕೆಂದು ಒತ್ತಾಯಿಸಿ ನಾಳೆ ರಾಜ್ಯಾದ್ಯಂತ ನಾಳೆ ಲಾರಿ ಮುಷ್ಕರ ನಡೆಯಲಿದ್ದು, ನಾಳೆ ಬೆಳಗ್ಗೆಯಿಂದ ಸಂಜೆವರೆಗೂ ಲಾರಿಗಳು ರಸ್ತೆಗಿಳಿಯುವುದಿಲ್ಲ. ಈ ಬಗ್ಗೆ ರಾಜ್ಯ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಷಣ್ಮುಗಪ್ಪ ಘೋಷಿಸಿದ್ದಾರೆ. ಹಾಗಾದ್ರೆ ನಾಳೆ ಪರಿಸ್ಥಿತಿ ಹೇಗಿರಲಿದೆ. ಏನಿರುತ್ತೆ? ಏನಿರಲ್ಲ? ಅವರ ಬೇಡಿಕೆ ಏನು ಇಲ್ಲಿದೆ ಮಾಹಿತಿ.
Link: ನಾಳೆ ಕರ್ನಾಟಕದಲ್ಲೂ ರಸ್ತೆಗಿಳಿಯಲ್ಲ ಲಾರಿಗಳು; ಲಾರಿ ಮಾಲೀಕರ ಸಂಘದ ಅಧ್ಯಕ್ಷ ಷಣ್ಮುಗಪ್ಪ ಘೋಷಣೆ
6) ಡಿಜಿಟಲ್ ಕಂಟೆಂಟ್ ನಿಯಂತ್ರಣಕ್ಕೆ ಕೇಂದ್ರದಿಂದ ಹೊಸ ನಿಯಮ
ಸೋಷಿಯಲ್ ಮೀಡಿಯಾ, ಒಟಿಟಿ ಮತ್ತು ವೆಬ್ಸೈಟ್ಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಜಾರಿಗೆ ತರಲಿರುವ ಹೊಸ ನಿಯಮಗಳ ಬಗ್ಗೆ ನೀವು ತಿಳಿಯಲೇಬೇಕಾದ 10 ಪ್ರಮುಖ ಅಂಶಗಳಿವು.
Link: ಕೇಂದ್ರದಿಂದ ಹೊಸ ನಿಯಮ: ನೀವು ತಿಳಿಯಬೇಕಾದ 10 ಅಂಶಗಳು
7) ಭಾರತಕ್ಕೆ ನೀರವ್ ಮೋದಿ ಹಸ್ತಾಂತರ: ಲಂಡನ್ ನ್ಯಾಯಾಲಯ ಆದೇಶ
ಮುಂಬೈನಲ್ಲಿರುವ ಆರ್ಥರ್ ರೋಡ್ ಜೈಲ್ ಚೆನ್ನಾಗಿದೆ. ನೀರವ್ ಮೋದಿ ಮುಂಬೈ ಜೈಲಿನಲ್ಲೇ ಚಿಕಿತ್ಸೆ ಪಡೆಯಬಹುದು ಎಂದು ನ್ಯಾಯಾಲಯ ತಿಳಿಸಿದೆ.
Link: ಭಾರತ ಸಲ್ಲಿಸಿದ್ದ ಸಾಕ್ಷ್ಯಗಳಲ್ಲಿ ಏನಿತ್ತು?
8) ಪಾಕ್ ಗಡಿಯಲ್ಲಿ ಗುಂಡಿನ ಚಕಮಕಿಗೆ ಬ್ರೇಕ್
ಗಡಿ ನಿಯಂತ್ರಣ ರೇಖೆ ಮತ್ತು ಇತರ ವಲಯಗಳಲ್ಲಿ ಕದನ ವಿರಾಮವನ್ನು ಪಾಲಿಸಲು ಭಾರತ-ಪಾಕ್ ಒಪ್ಪಿಕೊಂಡಿವೆ.
Link: ಭಾರತ-ಪಾಕ್ ಗಡಿಯಲ್ಲಿ ಶಾಂತಿ
9) ಎಲೆಕ್ಟ್ರಿಕ್ ಸ್ಕೂಟರ್ ಏರಿದ ಮಮತಾ ಬ್ಯಾನರ್ಜಿ
ತೈಲ ಬೆಲೆ ಏರಿಕೆ ವಿರೋಧಿಸಿ ಎಲೆಕ್ಟ್ರಿಕ್ ಸ್ಕೂಟರ್ನಲ್ಲಿ 5 ಕಿಮೀ ಪ್ರಯಾಣ ಮಾಡಿದ್ದಾರೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ
Link: ಬೆಲೆ ಏರಿಕೆ ಖಂಡಿಸಿದ ಮಮತಾ ವೈಖರಿ
ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.tv9kannada.com ನೋಡುತ್ತಿರಿ.