ಭೋಪಾಲ್ ಮಾಡೆಲ್ ಟ್ವಿಶಾ ಶರ್ಮಾ ಸಾವಿನ ಪ್ರಕರಣ: ಪತಿ ಮತ್ತು ಅತ್ತೆ ವಿರುದ್ಧ ಸಿಬಿಐನಿಂದ 636 ಪುಟಗಳ ಬೃಹತ್ ಚಾರ್ಜ್‌ಶೀಟ್ ಸಲ್ಲಿಕೆ

ಮಾದೆಲ್ ಟ್ವಿಶಾ ಶರ್ಮಾ ಅನುಮಾನಾಸ್ಪದ ಸಾವಿನ ಪ್ರಕರಣದಲ್ಲಿ ಸಿಬಿಐ ಭೋಪಾಲ್ ನ್ಯಾಯಾಲಯಕ್ಕೆ 636 ಪುಟಗಳ ದೋಷಾರೋಪಣೆ ಪಟ್ಟಿ ಸಲ್ಲಿಸಿದೆ. ಪತಿ ಸಮರ್ಥ್ ಸಿಂಗ್ ಹಾಗೂ ಅತ್ತೆ, ನಿವೃತ್ತ ನ್ಯಾಯಾಧೀಶೆ ಗಿರಿಬಾಲಾ ಸಿಂಗ್ ಅವರನ್ನು ಮುಖ್ಯ ಆರೋಪಿಗಳನ್ನಾಗಿ ಹೆಸರಿಸಲಾಗಿದೆ. ವರದಕ್ಷಿಣೆ ಕಿರುಕುಳ ಮತ್ತು ಆತ್ಮಹತ್ಯೆಗೆ ಪ್ರಚೋದನೆ ಆರೋಪಗಳಿದ್ದು, ಭಾರತೀಯ ನ್ಯಾಯ ಸಂಹಿತೆ ಮತ್ತು ವರದಕ್ಷಿಣೆ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಸಿಬಿಐ ತನಿಖೆಯಿಂದ ನ್ಯಾಯ ಸಿಗುವ ನಿರೀಕ್ಷೆಯಿದೆ.

ಭೋಪಾಲ್ ಮಾಡೆಲ್ ಟ್ವಿಶಾ ಶರ್ಮಾ ಸಾವಿನ ಪ್ರಕರಣ: ಪತಿ ಮತ್ತು ಅತ್ತೆ ವಿರುದ್ಧ ಸಿಬಿಐನಿಂದ 636 ಪುಟಗಳ ಬೃಹತ್ ಚಾರ್ಜ್‌ಶೀಟ್ ಸಲ್ಲಿಕೆ
ಟ್ವಿಶಾ ಶರ್ಮಾ, ಸಮರ್ಥ್ ಸಿಂಗ್ ಹಾಗೂ ಅತ್ತೆ, ನಿವೃತ್ತ ನ್ಯಾಯಾಧೀಶೆ ಗಿರಿಬಾಲಾ ಸಿಂಗ್

Updated on: Aug 17, 2026 | 8:13 PM

ಭೋಪಾಲ್, ಆ.17: ದೇಶಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿದ್ದ ಮಾಡೆಲ್ ಹಾಗೂ ನಟಿ ಟ್ವಿಶಾ ಶರ್ಮಾ (31) ಅವರ ಅನುಮಾನಾಸ್ಪದ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳ (CBI) ಭೋಪಾಲ್‌ನ ಸಿಬಿಐ ನ್ಯಾಯಾಲಯಕ್ಕೆ 636 ಪುಟಗಳ ಬೃಹತ್ ದೋಷಾರೋಪಣೆ ಪಟ್ಟಿ (ಚಾರ್ಜ್‌ಶೀಟ್) ಸಲ್ಲಿಸಿದೆ. ಟ್ವಿಶಾ ಅವರ ಪತಿ, ವಕೀಲ ಸಮರ್ಥ್ ಸಿಂಗ್ ಹಾಗೂ ಅತ್ತೆ, ನಿವೃತ್ತ ಜಿಲ್ಲಾ ನ್ಯಾಯಾಧೀಶೆ ಗಿರಿಬಾಲಾ ಸಿಂಗ್ ಅವರನ್ನು ಮುಖ್ಯ ಆರೋಪಿಗಳನ್ನಾಗಿ ಸಿಬಿಐ ಹೆಸರಿಸಿದೆ. ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್‌ಗಳಾದ 80(2), 85, 108, 3(5) ಹಾಗೂ ವರದಕ್ಷಿಣೆ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

ನೋಯ್ಡಾದ ಮೂಲದ ಮಾಡೆಲ್ ಟ್ವಿಶಾ ಶರ್ಮಾ, ವಕೀಲ ಸಮರ್ಥ್ ಸಿಂಗ್ ಅವರನ್ನು ಡಿಸೆಂಬರ್ 2025 ರಲ್ಲಿ ವಿವಾಹವಾಗಿದ್ದರು. ಮದುವೆಯ ನಂತರ ಭೋಪಾಲ್‌ನ ಕಟಾರಾ ಹಿಲ್ಸ್‌ನಲ್ಲಿರುವ ಪತಿಯ ಮನೆಯಲ್ಲಿ ವಾಸಿಸುತ್ತಿದ್ದರು. ಪತಿಯ ಮನೆಯಲ್ಲೇ ಟ್ವಿಶಾ ಶವವಾಗಿ ಪತ್ತೆಯಾಗಿದ್ದರು. ವರದಕ್ಷಿಣೆ ಕಿರುಕುಳ ಹಾಗೂ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾರೆ ಎಂದು ಟ್ವಿಶಾ ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದರು.

ನಿವೃತ್ತ ನ್ಯಾಯಾಧೀಶೆ ಗಿರಿಬಾಲಾ ಸಿಂಗ್ ಹಾಗೂ ಮಗ ಸಮರ್ಥ್ ವಿರುದ್ಧ ಎಫ್‌ಐಆರ್ ದಾಖಲಾಯಿತು. ನಂತರ ಗಿರಿಬಾಲಾ ಸಿಂಗ್‌ಗೆ ನಿರೀಕ್ಷಣಾ ಜಾಮೀನು ಸಿಕ್ಕರೆ, ಸಮರ್ಥ್ ತಲೆಮರೆಸಿಕೊಂಡಿದ್ದ. ಸ್ಥಳೀಯ ನ್ಯಾಯಾಲಯ ಸಮರ್ಥ್ ಜಾಮೀನು ಅರ್ಜಿಯನ್ನು ವಜಾಗೊಳಿಸಿ, ಆತನ ಸುಳಿವು ನೀಡಿದವರಿಗೆ 30,000 ರೂ. ಬಹುಮಾನ ಘೋಷಿಸಿತು.

ಇದನ್ನೂ ಓದಿ: ಬಿಜೆಪಿ ತೊರೆಯಲು ನಿಜವಾದ ಕಾರಣ ಬಿಚ್ಚಿಟ್ಟ ಅಣ್ಣಾಮಲೈ; ಗುಜರಾತ್ ಕೇಂದ್ರಿತ, ದೆಹಲಿ ಕೇಂದ್ರಿತ ರಾಜಕೀಯ ಧೋರಣೆಗೆ ಟೀಕೆ

ಟ್ವಿಶಾ ಕುಟುಂಬಸ್ಥರು ಮಧ್ಯಪ್ರದೇಶ ಮುಖ್ಯಮಂತ್ರಿಯವರನ್ನು ಭೇಟಿಯಾದ ನಂತರ ಸಿಬಿಐ ತನಿಖೆಗೆ ಆದೇಶಿಸುವ ಭರವಸೆ ನೀಡಲಾಯಿತು. ಜಬಲ್ಪುರ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಶರಣಾಗಲು ಬಂದಿದ್ದ ಸಮರ್ಥ್ ಸಿಂಗ್‌ನನ್ನು ಪೊಲೀಸರು ವಶಕ್ಕೆ ಪಡೆದರು.

ವರದಕ್ಷಿಣೆ ಕಿರುಕುಳ, ಪೊಲೀಸ್ ತನಿಖೆಯ ಲೋಪಗಳು ಹಾಗೂ ಕುಟುಂಬಸ್ಥರ ಹೋರಾಟದ ಫಲವಾಗಿ ಪ್ರಕರಣ ಸಿಬಿಐ ಕೈಸೇರಿತ್ತು. ಇದೀಗ ಸಿಬಿಐ ಸುದೀರ್ಘ ತನಿಖೆ ನಡೆಸಿ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದ್ದು, ಆರೋಪಿಗಳಿಗೆ ಶೀಘ್ರವೇ ಶಿಕ್ಷೆಯಾಗುವ ನಿರೀಕ್ಷೆಯಿದೆ.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us