ದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಕೇಂದ್ರ ಸಚಿವ ಸಂಪುಟ ಬುಧವಾರ ಮಾದರಿ ಬಾಡಿಗೆ ಕಾಯ್ದೆಗೆ ಅನುಮೋದನೆ ನೀಡಿತು. ಹೊಸ ಶಾಸನಗಳನ್ನು ಜಾರಿಗೆ ತರುವ ಮೂಲಕ ಅಥವಾ ಅಸ್ತಿತ್ವದಲ್ಲಿರುವ ಬಾಡಿಗೆ ಕಾನೂನುಗಳನ್ನು ಸೂಕ್ತವಾಗಿ ತಿದ್ದುಪಡಿ ಮಾಡುವ ಮೂಲಕ ಇದನ್ನು ಪಾಲಿಸಲು ಸರ್ಕಾರ ಎಲ್ಲಾ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಿಗೆ ಸುತ್ತೋಲೆ ಕಳುಹಿಸಿದೆ. ಸರ್ಕಾರವು ಮೊದಲು 2019 ರಲ್ಲಿ ಕಾಯ್ದೆಯ ಕರಡನ್ನು ಬಿಡುಗಡೆ ಮಾಡಿತ್ತು. ಬಾಡಿಗೆದಾರರು ಮತ್ತು ಭೂಮಾಲೀಕರ ನಡುವಿನ ವಿಶ್ವಾಸಕ್ಕೆ ಸೇತುವೆ ಇದಾಗಿದ್ದು ಸಮಸ್ಯೆಗಳನ್ನು ನಿವಾರಿಸುವ ಗುರಿಯನ್ನು ಇದು ಹೊಂದಿದೆ.
ಮಾದರಿ ಬಾಡಿಗೆ ಕಾಯ್ದೆಯು (Model Tenancy Act)ಬಾಡಿಗೆ ವಸತಿ ಉದ್ದೇಶಗಳಿಗಾಗಿ ಖಾಲಿ ಇರುವ ಮನೆಗಳನ್ನು ಅನ್ಲಾಕ್ ಮಾಡಲು ಅನುಕೂಲವಾಗಲಿದೆ ಎಂದು ಕೇಂದ್ರ ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ. ವಸತಿ ಕೊರತೆಯನ್ನು ನೀಗಿಸಲು ವ್ಯಾಪಾರ ಮಾದರಿಯಾಗಿ ಬಾಡಿಗೆ ವಸತಿಗಳಲ್ಲಿ ಖಾಸಗಿ ಭಾಗವಹಿಸುವಿಕೆಗೆ ಇದು ಉತ್ತೇಜನ ನೀಡುತ್ತದೆ ಎಂದು ಸರ್ಕಾರ ತಿಳಿಸಿದೆ.
Discussed details of the landmark Model Tenancy Act with members of the media fraternity during an interaction.
The Act has been approved by Union Cabinet under guidance of PM @narendramodi Ji & will be circulated to all states/UTs for adaptation. pic.twitter.com/noZCPHG6iu
— Hardeep Singh Puri (@HardeepSPuri) June 2, 2021
ಏನಿದು ಕಾಯ್ದೆ? ಇದರ ವಿಶೇಷತೆ ಏನು?
ಮಾದರಿ ಬಾಡಿಗೆ ಕಾಯ್ದೆಯು (Model Tenancy Act) ದೇಶದಲ್ಲಿ ಸುಸ್ಥಿರ ಮತ್ತು ಬಾಡಿಗೆ ವಸತಿ ಮಾರುಕಟ್ಟೆಯನ್ನು ಸೃಷ್ಟಿಸುವ ಗುರಿಯನ್ನು ಹೊಂದಿದೆ ಎಂದು ಸರ್ಕಾರ ಹೇಳಿದೆ. ಇದು ಎಲ್ಲಾ ಆದಾಯ ಗುಂಪುಗಳಿಗೆ ಸಾಕಷ್ಟು ಬಾಡಿಗೆ ವಸತಿಯನ್ನು ನಿರ್ಮಿಸಲು ಅನುವು ಮಾಡಿಕೊಡುತ್ತದೆ ಮತ್ತು ಆ ಮೂಲಕ ಮನೆಯ ಕೊರತೆಯನ್ನು ನೀಗಿಸುತ್ತದೆ.
ಈ ಕಾಯ್ದೆಯು ಬಾಡಿಗೆ ಮನೆಗಳನ್ನು ಕ್ರಮೇಣ ಔಪಚಾರಿಕ ಮಾರುಕಟ್ಟೆಯತ್ತ ವರ್ಗಾಯಿಸುವ ಮೂಲಕ ಸಾಂಸ್ಥಿಕಗೊಳಿಸಲು ಅನುವು ಮಾಡಿಕೊಡುತ್ತದೆ ಎಂದು ಅದು ಹೇಳಿದೆ.
ಮಾದರಿ ಬಾಡಿಗೆ ಕಾಯ್ದೆ ಬಾಡಿಗೆಯನ್ನು ನಿಯಂತ್ರಿಸಲು ಭೂಮಾಲೀಕರು ಮತ್ತು ಬಾಡಿಗೆದಾರರ ಹಿತಾಸಕ್ತಿಗಳನ್ನು ರಕ್ಷಿಸಲು ಬಾಡಿಗೆ ಪ್ರಾಧಿಕಾರವನ್ನು ಸ್ಥಾಪಿಸುವ ಬಗ್ಗೆ ಮಾತನಾಡುತ್ತದೆ. ಪ್ರಸ್ತಾವಿತ ಪ್ರಾಧಿಕಾರವು ಕಾಯ್ದೆಯ ಪ್ರಕಾರ, ವಿವಾದಗಳು ಅದಕ್ಕೆ ಸಂಬಂಧಿಸಿದ ಅಥವಾ ಪ್ರಾಸಂಗಿಕ ವಿಷಯಗಳ ಪರಿಹಾರಕ್ಕಾಗಿ ತ್ವರಿತ ತೀರ್ಪು ನೀಡುವ ವ್ಯವಸ್ಥೆಯನ್ನು ಸಹ ಒದಗಿಸುತ್ತದೆ.
ಸಾಮಾನ್ಯವಾಗಿ ಭೂಮಾಲೀಕರು ಮತ್ತು ಬಾಡಿಗೆದಾರರ ನಡುವಿನ ವ್ಯಾಜ್ಯಕ್ಕೆ ಕಾರಣ – ವಸತಿ ನಿವೇಶನದ ಸಂದರ್ಭದಲ್ಲಿ ಗರಿಷ್ಠ ಎರಡು ತಿಂಗಳ ಬಾಡಿಗೆ ಮತ್ತು ವಸತಿ ರಹಿತ ನಿವೇಶನ ಸಂದರ್ಭದಲ್ಲಿ ಆರು ತಿಂಗಳು ಆಗಿದೆ. ಪ್ರಸ್ತುತ, ಈ ಮೊತ್ತವು ಒಂದು ನಗರದಿಂದ ಮತ್ತೊಂದು ನಗರಕ್ಕೆ ಭಿನ್ನವಾಗಿದೆ. ಉದಾಹರಣೆಗೆ, ದೆಹಲಿಯಲ್ಲಿ, ಠೇವಣಿ ಸಾಮಾನ್ಯವಾಗಿ ಮಾಸಿಕ ಬಾಡಿಗೆಗೆ ಎರಡು-ಮೂರು ಪಟ್ಟು ಹೆಚ್ಚಾಗುತ್ತದೆ, ಆದರೆ ಮುಂಬೈ ಮತ್ತು ಬೆಂಗಳೂರಿನಲ್ಲಿ ಇದು ಮಾಸಿಕ ಬಾಡಿಗೆಗಿಂತ ಆರು ಪಟ್ಟು ಹೆಚ್ಚಿರಬಹುದು.
ಈ ಕಾಯ್ದೆಯ ಮತ್ತೊಂದು ನಿರ್ಣಾಯಕ ಅಂಶವೆಂದರೆ, ನಿವೇಶನವನ್ನು ಖಾಲಿ ಮಾಡುವುದು. ಬಾಡಿಗೆ ಒಪ್ಪಂದದಲ್ಲಿ ಹೇಳಿರುವ ಎಲ್ಲಾ ಷರತ್ತುಗಳನ್ನು ಭೂಮಾಲೀಕರು ಪೂರೈಸಿದ್ದರೆ – ನೋಟಿಸ್ ನೀಡುವುದು ಇತ್ಯಾದಿ – ಮತ್ತು ಬಾಡಿಗೆದಾರರು ಅವಧಿ ಮುಗಿದ ನಂತರ ಅಥವಾ ಬಾಡಿಗೆ ಒಪ್ಪಂದದ ಮುಕ್ತಾಯದ ನಂತರ ಬಾಡಿಗೆದಾರನು ನಿವೇಶನವನ್ನು ಖಾಲಿ ಮಾಡಲು ವಿಫಲವಾದರೆ, ಭೂಮಾಲೀಕರಿಗೆ ಅರ್ಹತೆ ಇದೆ ಎಂದು ಮಾದರಿ ಬಾಡಿಗೆ ಕಾಯ್ದೆ ಹೇಳುತ್ತದೆ. ಇದರ ಪ್ರಕಾರ ಭೂಮಾಲೀಕರು ಎರಡು ತಿಂಗಳವರೆಗೆ ಮಾಸಿಕ ಬಾಡಿಗೆಯನ್ನು ದ್ವಿಗುಣಗೊಳಿಸುವುದು ಮತ್ತು ಆನಂತರ ಅದರ ನಂತರ ನಾಲ್ಕು ಪಟ್ಟು ಹೆಚ್ಚಿಸಬಹುದು.
ಪ್ರತಿ ಭೂಮಾಲೀಕರು ಅಥವಾ ಆಸ್ತಿ ವ್ಯವಸ್ಥಾಪಕರು ಈ ಕೆಳಗಿನ ಸಂದರ್ಭಗಳಲ್ಲಿ ಕನಿಷ್ಠ ಇಪ್ಪತ್ನಾಲ್ಕು ಗಂಟೆಗಳ ಮೊದಲು ಬಾಡಿಗೆದಾರರಿಗೆ ನೋಟಿಸ್, ಲಿಖಿತ ಅಥವಾ ಎಲೆಕ್ಟ್ರಾನಿಕ್ ಮೋಡ್ ಮೂಲಕ ಬಾಡಿಗೆ ನಿವೇಶನ ಜಾಗಕ್ಕೆ ಪ್ರವೇಶಿಸಬಹುದು ಎಂದು ಕಾಯ್ದೆ ಹೇಳುತ್ತದೆ.
ಇದು ಭೂಮಾಲೀಕ ಮತ್ತು ಬಾಡಿಗೆದಾರರ ಹಕ್ಕುಗಳು ಮತ್ತು ಕಟ್ಟುಪಾಡುಗಳನ್ನು ವಿವರವಾಗಿ ವಿವರಿಸಿದೆ. ಎರಡು ಪಕ್ಷಗಳ ನಡುವಿನ ವಿವಾದಗಳಿಗೆ ಕಾರಣವಾಗುವ ಅನೇಕ ವಿಷಯಗಳ ಬಗ್ಗೆಯೂ ಸಹ ಗಮನಹರಿಸಿದೆ.
ಇದನ್ನೂ ಓದಿ: ಐಎಎಸ್ ನಿಯಮದಡಿಯಲ್ಲಿ ಅಲ್ಲ ವಿಪತ್ತು ನಿರ್ವಹಣಾ ಕಾಯ್ದೆಯನ್ವಯ ಆಲಾಪನ್ ಬಂದೋಪಧ್ಯಾಯ್ಗೆ ಶೋಕಾಸ್ ನೋಟಿಸ್ ಕಳಿಸಿತ್ತು ಕೇಂದ್ರ
Published On - 5:52 pm, Wed, 2 June 21