ಮೈಕ್ರೋಸಾಫ್ಟ್ಗೆ ಗುಡ್ ಬೈ, ಜೋಹೋ ಮೂಲಕ ಸಂಪುಟ ಸಭೆಯ ಮಾಹಿತಿ; ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಸ್ವದೇಶಿ ಅಭಿಯಾನ
ಜಿಎಸ್ಟಿ ಪರಿಷ್ಕರಣೆ ಹಾಗೂ ಅಮೆರಿಕ ಭಾರತದ ಆಮದು ವಸ್ತುಗಳ ಮೇಲೆ ಹೆಚ್ಚುವರಿ ಸುಂಕ ಹೇರಿದ ಬೆನ್ನಲ್ಲೇ ಕೇಂದ್ರ ಸರ್ಕಾರ ಸ್ವದೇಶಿ ವಸ್ತುಗಳ ಬಳಕೆಗೆ ಜನರನ್ನು ಒತ್ತಾಯಿಸುತ್ತಿದೆ. ಖುದ್ದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರೇ ಸ್ವದೇಶಿ ಅಭಿಯಾನದಲ್ಲಿ ಪಾಲ್ಗೊಂಡಿದ್ದು, ಮೈಕ್ರೋಸಾಫ್ಟ್ ಪವರ್ ಪಾಯಿಂಟ್ ಬದಲು ಸ್ವದೇಶಿ ವೇದಿಕೆಯಾದ ಜೋಹೋ ಬಳಸಲು ಕರೆ ನೀಡಿದ್ದಾರೆ.

ನವದೆಹಲಿ, ಸೆಪ್ಟೆಂಬರ್ 24: ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಹಾಗೂ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಸ್ವದೇಶಿ ಅಭಿಯಾನಕ್ಕೆ ಕರೆನೀಡಿದ್ದಾರೆ. ಇಂದು ಸಚಿವ ಸಂಪುಟ ಸಭೆಯ ಬಳಿಕ ಆ ಕುರಿತಾದ ಬ್ರೀಫಿಂಗ್ಗೆ ಅವರು ಪವರ್ ಪಾಯಿಂಟ್ ಬದಲು ಸ್ವದೇಶಿಯಾದ ಜೋಹೋವನ್ನು (Zoho) ಬಳಸಿದ್ದಾರೆ. ಸರ್ಕಾರಿ ವಲಯದಲ್ಲಿ ಈ ಜೋಹೋವನ್ನು ವ್ಯಾಪಕವಾಗಿ ಬಳಸುವ ಮೂಲಕ ಜನರಿಗೂ ಈ ಬಗ್ಗೆ ಆಸಕ್ತಿ ಉಂಟಾಗುವಂತೆ ಮಾಡಲಾಗುತ್ತಿದೆ. ಸಚಿವ ಅಶ್ವಿನಿ ವೈಷ್ಣವ್ (Ashwini Vaishnaw) ದಾಖಲೆಗಳು, ಸ್ಪ್ರೆಡ್‌ಶೀಟ್‌ಗಳು ಮತ್ತು ಪ್ರಸ್ತುತಿಗಳಿಗಾಗಿ ಸ್ವದೇಶಿ ವೇದಿಕೆಯಾದ ಜೋಹೊವನ್ನು ಬಳಸಲು ಪ್ರಾರಂಭಿಸಿದ್ದಾರೆ.
ಅವರು ತಮ್ಮ ಸಚಿವಾಲಯದಲ್ಲಿ ಮೈಕ್ರೋಸಾಫ್ಟ್ ಬದಲು ಜೋಹೋ ಬಳಸಲಾರಂಭಿಸಿದ್ದು, ಇಂದು ಕ್ಯಾಬಿನೆಟ್ ಬ್ರೀಫಿಂಗ್ ಅನ್ನು ಜೋಹೋದಲ್ಲೇ ನೀಡುವ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಮೊದಲು ಸೋಮವಾರ (ಸೆಪ್ಟೆಂಬರ್ 22) ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು ದಾಖಲೆಗಳು, ಸ್ಪ್ರೆಡ್‌ಶೀಟ್‌ಗಳು ಮತ್ತು ಪ್ರೆಸೆಂಟೇನ್ಗೆ ಸ್ವದೇಶಿ ವೇದಿಕೆಯಾದ ಜೋಹೋವನ್ನು ಬಳಸಲು ಪ್ರಾರಂಭಿಸುವುದಾಗಿ ಘೋಷಿಸಿದ್ದರು. ಅವರು “ಸ್ವದೇಶಿ” ಉತ್ಪನ್ನಗಳು ಮತ್ತು ಸೇವೆಗಳನ್ನು ಅಳವಡಿಸಿಕೊಳ್ಳುವಂತೆ ಭಾರತೀಯರನ್ನು ಒತ್ತಾಯಿಸಿದ್ದರು.
Switch to Swadeshi!
Cabinet briefing using Zoho Show. pic.twitter.com/wacKUajwsa
— Ashwini Vaishnaw (@AshwiniVaishnaw) September 24, 2025
ಇದನ್ನೂ ಓದಿ: ಸ್ವದೇಶಿ ಉತ್ಪನ್ನ ಬಳಸಿ; ಜೋಹೋ ಬಳಸುವ ಮೂಲಕ ಭಾರತೀಯರಿಗೆ ಕರೆ ನೀಡಿದ ಸಚಿವ ಅಶ್ವಿನಿ ವೈಷ್ಣವ್
ಪ್ರಧಾನಿ ಮೋದಿಯವರ ಸ್ವದೇಶಿ ಅಭಿಯಾನದಲ್ಲಿ ಪಾಲ್ಗೊಳ್ಳಿ ಎಂದು ಅಶ್ವಿನಿ ವೈಷ್ಣವ್ ಕರೆನೀಡಿದ್ದಾರೆ. ಸಾಮಾಜಿಕ ಮಾಧ್ಯಮ ವೇದಿಕೆ Xನಲ್ಲಿ ಪೋಸ್ಟ್ ಮಾಡಿರುವ ಐಟಿ, ರೈಲ್ವೆ, ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್, “ನಾನು ದಾಖಲೆಗಳು, ಸ್ಪ್ರೆಡ್‌ಶೀಟ್‌ಗಳು ಮತ್ತು ಪ್ರೆಸೆಂಟೇಷನಿಗಾಗಿ ನಮ್ಮದೇ ಆದ ಸ್ಥಳೀಯ ವೇದಿಕೆ ಜೋಹೊವನ್ನು ಬಳಸುತ್ತಿದ್ದೇನೆ” ಎಂದು ಹೇಳಿದ್ದರು. ಅದರಂತೆಯೇ ಅವರು ನಡೆದುಕೊಂಡಿದ್ದಾರೆ ಕೂಡ.
ಪ್ರಧಾನಿ ನರೇಂದ್ರ ಮೋದಿಯವರ ಸ್ವದೇಶಿ ಕರೆಗೆ ಸೇರಲು ಮತ್ತು ಸ್ಥಳೀಯ ಉತ್ಪನ್ನಗಳು ಮತ್ತು ಸೇವೆಗಳನ್ನು ಅಳವಡಿಸಿಕೊಳ್ಳಲು ಕೇಂದ್ರ ಸಚಿವ ವೈಷ್ಣವ್ ಇತರರಿಗೂ ಕರೆ ನೀಡಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




