AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯುವತಿ ಮೇಲೆ ಅತ್ಯಾಚಾರ ಮಾಡಿ ವ್ಯಕ್ತಿ ಪರಾರಿ, ಪೊಲೀಸರಿಂದ ತಪ್ಪಿಸಿಕೊಳ್ಳುತ್ತಿರುವ ವಿಡಿಯೋ ವೈರಲ್

ಅತ್ಯಾಚಾರ ಆರೋಪಿಯೊಬ್ಬ ಪೊಲೀಸರಿಂದ ತಪ್ಪಿಸಿಕೊಳ್ಳುವ ವಿಡಿಯೋ ವೈರಲ್ ಆಗಿದೆ. ಮದುವೆಯಾಗುತ್ತೇನೆಂದು ಯುವತಿಯನ್ನು ನಂಬಿಸಿ, ಅತ್ಯಾಚಾರ(Rape) ಮಾಡಿದ್ದ ವ್ಯಕ್ತಿ ಪೊಲೀಸರಿಂದ ತಪ್ಪಿಸಿಕೊಂಡು ಪರಾರಿಯಾಗುತ್ತಿರುವ ವಿಡಿಯೋ ವೈರಲ್ ಆಗಿದೆ. ಆತನಿಗೆ ಓಡಿ ಹೋಗಲು ಸಹಾಯ ಮಾಡಿದ 7 ಮಂದಿಯನ್ನು ಬಂಧಿಸಲಾಗಿದೆ. ವರದಿಯ ಪ್ರಕಾರ, ಸೆಪ್ಟೆಂಬರ್ 4ರಂದು ಬುಲಂದ್​ಶಹರ್​ನ ಚೆಹ್ಲಾ ಗ್ರಾಮದಲ್ಲಿ ಘಟನೆ ನಡೆದಿದೆ.

ಯುವತಿ ಮೇಲೆ ಅತ್ಯಾಚಾರ ಮಾಡಿ ವ್ಯಕ್ತಿ ಪರಾರಿ, ಪೊಲೀಸರಿಂದ ತಪ್ಪಿಸಿಕೊಳ್ಳುತ್ತಿರುವ ವಿಡಿಯೋ ವೈರಲ್
ಆರೋಪಿ
ನಯನಾ ರಾಜೀವ್
|

Updated on:Sep 12, 2025 | 9:46 AM

Share

ಬುಲಂದ್​ಶಹರ್, ಸೆಪ್ಟೆಂಬರ್ 12: ಮದುವೆಯಾಗುತ್ತೇನೆಂದು ಯುವತಿಯನ್ನು ನಂಬಿಸಿ, ಅತ್ಯಾಚಾರ(Rape) ಮಾಡಿದ್ದ ವ್ಯಕ್ತಿ ಪೊಲೀಸರಿಂದ ತಪ್ಪಿಸಿಕೊಂಡು ಪರಾರಿಯಾಗುತ್ತಿರುವ ವಿಡಿಯೋ ವೈರಲ್ ಆಗಿದೆ. ಆತನಿಗೆ ಓಡಿ ಹೋಗಲು ಸಹಾಯ ಮಾಡಿದ 7 ಮಂದಿಯನ್ನು ಬಂಧಿಸಲಾಗಿದೆ. ವರದಿಯ ಪ್ರಕಾರ, ಸೆಪ್ಟೆಂಬರ್ 4ರಂದು ಬುಲಂದ್​ಶಹರ್​ನ ಚೆಹ್ಲಾ ಗ್ರಾಮದಲ್ಲಿ ಘಟನೆ ನಡೆದಿದ್ದು, ಪೊಲೀಸ್ ತಂಡ ಅಫ್ಝಲ್​​ ಮೊಹಮ್ಮದ್​​ನನ್ನು ಬಂಧಿಸಲು ಹಳ್ಳಿಗೆ ಬಂದಿತ್ತು. 22 ವರ್ಷದ ಯುವತಿಗೆ ಮದುವೆಗೆ ಆಮಿಷವೊಡ್ಡಿ ನಂತರ ಅತ್ಯಾಚಾರ ಮಾಡಿದ ಆರೋಪ ಆತನ ಮೇಲಿದೆ.

ಪೊಲೀಸರ ಪ್ರಕಾರ, ಗ್ರಾಮದ ಮುಖ್ಯಸ್ಥ ರೌಫ್ ಸೇರಿದಂತೆ ಹಲವಾರು ಗ್ರಾಮಸ್ಥರು ಬಂಧನವನ್ನು ವಿರೋಧಿಸಿ ಅಧಿಕಾರಿಗಳನ್ನು ತಡೆದರು. ಈ ಗೊಂದಲದಲ್ಲಿ, ಅಫ್ಝಲ್ ಸಾಮಾನ್ಯ ಉಡುಪಿನಲ್ಲಿದ್ದ ಕಾನ್‌ಸ್ಟೆಬಲ್‌ನನ್ನು ತಳ್ಳಿ ಪರಾರಿಯಾಗುವಲ್ಲಿ ಯಶಸ್ವಿಯಾದನೆಂದು ವರದಿಯಾಗಿದೆ. ಆ ಕ್ಷಣದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಪೊಲೀಸ್ ತಂಡಕ್ಕೆ ಪ್ರತಿರೋಧವು ದೃಶ್ಯಗಳಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ ಎಂದು ಗ್ರಾಮೀಣ ಎಸ್ಪಿ ತೇಜ್ವೀರ್ ಸಿಂಗ್ ದೃಢಪಡಿಸಿದರು. ಇಲ್ಲಿಯವರೆಗೆ ಏಳು ಜನರನ್ನು ಬಂಧಿಸಲಾಗಿದೆ. ಇತರ ಆರೋಪಿಗಳಿಗಾಗಿ ಹುಡುಕಾಟ ಮುಂದುವರೆದಿದೆ. ರೌಫ್ ಚೆಹ್ಲಾದ ಗ್ರಾಮದ ಮುಖ್ಯಸ್ಥ.

ಮತ್ತಷ್ಟು ಓದಿ:  ಅಪರಿಚಿತ ವಾಹನ ಹತ್ತಲೇಬೇಡಿ, ಕಾರಿನೊಳಗೆ 9ನೇ ತರಗತಿ ಬಾಲಕಿ ಮೇಲೆ ಅತ್ಯಾಚಾರ

ಅಫ್ಜಲ್ ಪರಾರಿಯಾಗಿದ ನಂತರ, ಸಚಿವ ಡ್ಯಾನಿಶ್ ಅನ್ಸಾರಿ, ಅಲ್ಪಸಂಖ್ಯಾತ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಜಮಾಲ್ ಸಿದ್ದಿಕಿ, ಬಿಜೆಪಿ ನಾಯಕ ಶಹನವಾಜ್ ಹುಸೇನ್ ಮತ್ತು ರಾಜ್ಯ ಅಧ್ಯಕ್ಷ ಕುನ್ವರ್ ಬಸಿತ್ ಅಲಿ ಸೇರಿದಂತೆ ಪಕ್ಷದ ಪ್ರಮುಖ ವ್ಯಕ್ತಿಗಳೊಂದಿಗೆ ಅವರ ಹಲವಾರು ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಪ್ರಸಾರವಾದವು.

30 ಜನರ ವಿರುದ್ಧ ಎಫ್‌ಐಆರ್

ವರದಿಯ ಪ್ರಕಾರ, ಅಧಿಕಾರಿಗಳ ಮೇಲೆ ದಾಳಿ ಮಾಡಿ ಆರೋಪಿ ತಪ್ಪಿಸಿಕೊಳ್ಳಲು ಸಹಾಯ ಮಾಡಿದ ಆರೋಪದ ಮೇಲೆ ಪೊಲೀಸರು 30 ಜನರ ವಿರುದ್ಧ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ಅಫ್ಜಲ್ ಸಿಕ್ಕಿಬಿದ್ದ ನಂತರ, ರೌಫ್ ಮತ್ತು ಅವನ ಸಹಚರರು ಅಧಿಕಾರಿಗಳ ಮೇಲೆ ಹಿಂಸಾತ್ಮಕ ದಾಳಿ ನಡೆಸಿ, ಅವನು ಮತ್ತೆ ಪರಾರಿಯಾಗಲು ಅವಕಾಶವನ್ನು ಸೃಷ್ಟಿಸಿದ್ದರು.

ಅಫ್ಜಲ್ ತಲೆಮರೆಸಿಕೊಂಡಿದ್ದು, ಪೊಲೀಸರು ಹುಡುಕಾಟವನ್ನು ತೀವ್ರಗೊಳಿಸಿದ್ದಾರೆ. ಪರಾರಿಯಾದ ವ್ಯಕ್ತಿಗೆ ಆಶ್ರಯ ನೀಡುವುದು ಅಥವಾ ಕಾನೂನು ಕ್ರಮಗಳಿಗೆ ಅಡ್ಡಿಪಡಿಸುವುದು ಕಂಡುಬಂದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 9:45 am, Fri, 12 September 25