Zakir Hussain: ಸದಾ ತಬಲಾವನ್ನು ಮಡಿಲಲ್ಲಿಟ್ಟುಕೊಂಡೇ ಪ್ರಯಾಣಿಸುತ್ತಿದ್ದ ಜಾಕಿರ್ ಹುಸೇನ್

|

Updated on: Dec 16, 2024 | 10:55 AM

ತಬಲಾ ಮಾಂತ್ರಿಕ ಎಂದೇ ಖ್ಯಾತರಾಗಿರುವ ಜಾಕಿರ್ ಹುಸೇನ್ ನಿಧನರಾಗಿದ್ದಾರೆ, ಕೇವಲ ಭಾರತ ಮಾತ್ರವಲ್ಲ ಇಡೀ ವಿಶ್ವವೇ ಮರುಗಿದೆ. ಅವರು ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು, ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. 73ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಅವರು ತಬಲ ಬಾರಿಸುವ ಪರಿ ಜನರನ್ನು ಮಂತ್ರಮುಗ್ದಗೊಳಿಸುತ್ತಿತ್ತು. ಅವರಿಗೆ ಸಂಬಂಧಿಸಿದ ಹಲವು ಮಾಹಿತಿ ಇಲ್ಲಿದೆ.

Zakir Hussain: ಸದಾ ತಬಲಾವನ್ನು ಮಡಿಲಲ್ಲಿಟ್ಟುಕೊಂಡೇ ಪ್ರಯಾಣಿಸುತ್ತಿದ್ದ ಜಾಕಿರ್ ಹುಸೇನ್
ಜಾಕಿರ್ ಹುಸೇನ್
Image Credit source: Mid Day
Follow us on

ತಬಲಾ ಮಾಂತ್ರಿಕ ಎಂದೇ ಖ್ಯಾತರಾಗಿರುವ ಜಾಕಿರ್ ಹುಸೇನ್ ನಿಧನರಾಗಿದ್ದಾರೆ, ಕೇವಲ ಭಾರತ ಮಾತ್ರವಲ್ಲ ಇಡೀ ವಿಶ್ವವೇ ಮರುಗಿದೆ. ಅವರು ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು, ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. 73ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಅವರು ತಬಲ ನುಡಿಸುವ ಪರಿ ಜನರನ್ನು ಮಂತ್ರಮುಗ್ದಗೊಳಿಸುತ್ತಿತ್ತು. ಅವರಿಗೆ ಸಂಬಂಧಿಸಿದ ಹಲವು ಮಾಹಿತಿ ಇಲ್ಲಿದೆ.

ಜಾಕಿರ್ ಹುಸೇನ್ ಮೊದಲ ಆಲ್ಬಂ
ಜಾಕಿರ್ ತಬಲಾ ಸದ್ದು ಜನರ ನಶೆ ಏರುವಂತೆ ಮಾಡುತ್ತಿತ್ತು, ಜನ ಅವರನ್ನು ವಾಹ್ ಉಸ್ತಾದ್ ಎನ್ನುತ್ತಿದ್ದರು.
ಜಾಕಿರ್ ತನ್ನ ಕಲೆಯ ಪತಾಕೆಯನ್ನು ದೇಶ ಮಾತ್ರವಲ್ಲದೆ ವಿಶ್ವದಾದ್ಯಂತ ಹಾರಿಸಿದ್ದರು. ಜಾಕಿರ್ ಹುಸೇನ್ ಮಾರ್ಚ್​ 9 1951ರಲ್ಲಿ ಮುಂಬೈನಲ್ಲಿ ಜನಿಸಿದರು.

ಅವರು ತಬಲಾ ವಾದಕ ಉಸ್ತಾದ್ ಅಲ್ಲಾ ರಖಾ ಅವರ ಮಗ, ಜಾಕಿರ್​ ತಂದೆಯಿಂದಲೇ ತಬಲಾ ನುಡಿಸುವುದನ್ನು ಕಲಿತಿದ್ದರು. ಅವರು ಶ್ಲೋಕ, ಮಂತ್ರಗಳನ್ನೂ ಕಲಿತಿದ್ದರು. ಅವರ 11ನೇ ವಯಸ್ಸಿನಲ್ಲಿ ಅಮೆರಿಕದಲ್ಲಿ ತಮ್ಮ ಮೊದಲ ಸಂಗೀತ ಕಚೇರಿ ನಡೆಸಿದ್ದರು. ಅವರು 1973 ರಲ್ಲಿ ತಮ್ಮ ಮೊದಲ ಆಲ್ಬಂ ಲಿವಿಂಗ್ ಇನ್ ದಿ ಮೆಟೀರಿಯಲ್ ವರ್ಲ್ಡ್ ಅನ್ನು ಪ್ರಾರಂಭಿಸಿದರು.

ಮತ್ತಷ್ಟು ಓದಿ: ತಬಲಾ ಮಾಂತ್ರಿಕ ಜಾಕಿರ್ ಹುಸೇನ್ ನಿಧನ; ಖಚಿತ ಪಡಿಸಿದ ಕುಟುಂಬ

ತಬಲಾ ವಾದನ ಜಾಕಿರ್ ಪಯಣ
ಜಾಕಿರ್ ಚಿಕ್ಕ ವಯಸ್ಸಿನಲ್ಲೇ ತಬಲಾ ಮೇಲಿನ ಹಿಡಿತವನ್ನು ಗಟ್ಟಿಗೊಳಿಸಿದ್ದರು. 11-12ರಿಂದಲೇ ತಬಲಾ ನುಡಿಸುವ ಪಯಣ ಆರಂಭಿಸಿದ್ದರು. ಸಂಗೀತ ಕಚೇರಿಗಳಿಗಾಗಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗುತ್ತಿದ್ದರು. ತಾವು ರೈಲಿನಲ್ಲಿ ಪ್ರಯಾಣಿಸುವಾಗ ಕಾಯ್ದಿರಿಸಿದ ಟಿಕೆಟ್​ಗಳನ್ನು ಪಡೆಯುವಷ್ಟು ಹಣ ತನ್ನ ಬಳಿ ಇರಲಿಲ್ಲ ಎಂದು ಹೇಳಿಕೊಂಡಿದ್ದರು.

ತಬಲಾವನ್ನು ಮಡಿಲಿನಲ್ಲಿಟ್ಟುಕೊಳ್ಳುತ್ತಿದ್ದರು
ಜನರು ಕಿಕ್ಕಿರಿದು ತುಂಬಿರುವ ಜನರಲ್ ಕೋಚ್​ಗೆ ಅವರು ಹತ್ತುತ್ತಿದ್ದರು. ಯಾರ ಪಾದವಾಗಲೀ, ಪಾದರಕ್ಷೆಯಾಗಲೀ ತಾಗದಂತೆ ತಡೆಯಲು ಅವರು ತಬಲಾವನ್ನು ಮಗುವಿನಂತೆ ತೊಡೆಯ ಮೇಲೆ ಇಟ್ಟುಕೊಳ್ಳುತ್ತಿದ್ದರು.

ಗ್ರ್ಯಾಮಿ ಪ್ರಶಸ್ತಿಯೂ ಬಂದಿತ್ತು
ಅನೇಕ ಕಠಿಣ ಹಾದಿಗಳು, ಸವಾಲುಗಳನ್ನು ದಾಟಿ ಪ್ರಪಂಚದಾದ್ಯಂತ ಜನರ ಹೃದಯದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದ ಜಾಕಿರ್ ಹುಸೇನ್​ಗೆ 2009ರಲ್ಲಿ ಗ್ರ್ಯಾಮಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು. 1988 ರಲ್ಲಿ ಪದ್ಮಶ್ರೀ ಮತ್ತು 2002 ರಲ್ಲಿ ಪದ್ಮಭೂಷಣ ಪ್ರಶಸ್ತಿಯನ್ನು ನೀಡಲಾಗಿತ್ತು. 1990 ರಲ್ಲಿ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ