ಉತ್ತರ ಪ್ರದೇಶದ ಸಚಿವ ಸಂಪುಟ ವಿಸ್ತರಿಸಿದ ಯೋಗಿ ಆದಿತ್ಯನಾಥ; 7 ನೂತನ ಸಚಿವರ ಸೇರ್ಪಡೆ

UP Cabinet Expansion: ಜತಿನ್ ಪ್ರಸಾದ, ಛತ್ರಪಾಲ್ ಸಿಂಗ್ ಗಂಗ್ವಾರ್, ಪಾಲ್ತು ರಾಮ್, ಸಂಗೀತಾ ಬಲವಂತ್, ಸಂಜೀವ್ ಕುಮಾರ್, ದಿನೇಶ್ ಖಾತಿಕ್ ಮತ್ತು ಧರ್ಮವೀರ್ ಸಿಂಗ್ ಅವರನ್ನು ರಾಜ್ಯ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಲಾಯಿತು.

ಉತ್ತರ ಪ್ರದೇಶದ ಸಚಿವ ಸಂಪುಟ ವಿಸ್ತರಿಸಿದ ಯೋಗಿ ಆದಿತ್ಯನಾಥ; 7 ನೂತನ ಸಚಿವರ ಸೇರ್ಪಡೆ
ಜಿತಿನ್ ಪ್ರಸಾದ ಪ್ರಮಾಣ ವಚನ ಸ್ವೀಕಾರ

ಲಕ್ನೋ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ (Yogi Adityanath) ಅವರು ಭಾನುವಾರ ಸಂಜೆ ತಮ್ಮ ಸಂಪುಟವನ್ನು ವಿಸ್ತರಿಸಿದ್ದು, ಏಳು ಹೊಸ ಸಚಿವರನ್ನು ಸೇರಿಸಿದ್ದಾರೆ. ಜತಿನ್ ಪ್ರಸಾದ, ಛತ್ರಪಾಲ್ ಸಿಂಗ್ ಗಂಗ್ವಾರ್, ಪಾಲ್ತು ರಾಮ್, ಸಂಗೀತಾ ಬಲವಂತ್, ಸಂಜೀವ್ ಕುಮಾರ್, ದಿನೇಶ್ ಖಾತಿಕ್ ಮತ್ತು ಧರ್ಮವೀರ್ ಸಿಂಗ್ ಅವರನ್ನು ರಾಜ್ಯ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಲಾಯಿತು. ಈ ಮೂಲಕ ಉತ್ತರಪ್ರದೇಶದಲ್ಲಿ ಸಚಿವರ ಸಂಖ್ಯೆ 60ಕ್ಕೆ ಏರಿದೆ. ಪಕ್ಷದಲ್ಲಿ ಸಮುದಾಯದ ಪ್ರಾತಿನಿಧ್ಯದ ಬಗ್ಗೆ ಅದರ ಆಂತರಿಕ ಚಿಂತೆಗಳ ನಡುವೆ ಬ್ರಾಹ್ಮಣ ನಾಯಕ ಜಿತಿನ್ ಪ್ರಸಾದ ಅವರನ್ನು ಈ ವರ್ಷದ ಆರಂಭದಲ್ಲಿ ಬಿಜೆಪಿಗೆ ಸೇರಿಸಲಾಯಿತು. ಪ್ರಸಾದ ಅವರನ್ನು ಕ್ಯಾಬಿನೆಟ್ ಸಚಿವರಾಗಿ ಸೇರಿಸಿಕೊಂಡಿದ್ದು ಉಳಿದ ಆರು ಮಂದಿ ರಾಜ್ಯ ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದಾರೆ.

ಜೂನ್ ಆರಂಭದಲ್ಲಿ ಸಿಎಂ ಆದಿತ್ಯನಾಥ ತಮ್ಮ ಸಚಿವ ಸಂಪುಟವನ್ನು ಪುನರ್ರಚಿಸಲಿದ್ದಾರೆ ಎಂಬ ಬಲವಾದ ಊಹಾಪೋಹಗಳ ನಡುವೆ ಬಿಜೆಪಿಯ ಉತ್ತರ ಪ್ರದೇಶದ ಉಸ್ತುವಾರಿ ರಾಧಾ ಮೋಹನ್ ಸಿಂಗ್ ಅವರು ಖಾಲಿ ಇರುವ ಹುದ್ದೆಗಳಿದ್ದರೂ ಸಿಎಂ ಇಚ್ಛೆಯಂತೆ ಅವರನ್ನು ತುಂಬುವುದು ಅವರ ಆದ್ಯತೆಯಾಗಿದೆ.


ಮುಂದಿನ ವರ್ಷದ ಅಸೆಂಬ್ಲಿ ಚುನಾವಣೆಯಲ್ಲಿ ಬಿಜೆಪಿ ಹೋರಾಟ ನಡೆಸಲಿದ್ದು ಫೆಬ್ರವರಿಯಲ್ಲಿ ಸಿಎಂ ಆದಿತ್ಯನಾಥ ನೇತೃತ್ವದಲ್ಲಿ ಚುನಾವಣೆ ನಡೆಯಲಿದೆ.

ಉತ್ತರ ಪ್ರದೇಶ ಉಪಮುಖ್ಯಮಂತ್ರಿ ದಿನೇಶ್ ಶರ್ಮಾ, ಪಿಟಿಐಗೆ ನೀಡಿದ ಸಂದರ್ಶನದಲ್ಲಿ “ಅಧಿಕಾರಕ್ಕೆ ಮರಳಲು ಯೋಗಿ ಆದಿತ್ಯನಾಥ ಜೀ ನೇತೃತ್ವದಲ್ಲಿ ಪಕ್ಷವು ಚುನಾವಣೆಯಲ್ಲಿ ಸ್ಪರ್ಧಿಸುತ್ತದೆ ಎಂದು ಕೇಂದ್ರ ನಾಯಕತ್ವವು ಈಗಾಗಲೇ ಸ್ಪಷ್ಟಪಡಿಸಿದೆ.

ಶರ್ಮಾ 2017 ರಲ್ಲಿ ಉನ್ನತ ಹುದ್ದೆಗಾಗಿ ಸ್ಪರ್ಧಿಸುತ್ತಿದ್ದ ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದರು. ಮುಂಬರುವ ಚುನಾವಣೆಗಳು ಬಿಜೆಪಿ ಮತ್ತು ಎಸ್‌ಪಿ ನಡುವಿನ ನೇರ ಹೋರಾಟವೇ ಅಥವಾ ಮಾಯಾವತಿ ಅವರ ಬಿಎಸ್‌ಪಿಯನ್ನು ಒಳಗೊಂಡ ತ್ರಿಕೋನ ಸ್ಪರ್ಧೆಯಾಗಿದೆಯೇ ಎಂದು ಕೇಳಿದಾಗ, ಶರ್ಮಾ, “ಬಿಜೆಪಿ ಗೆಲುವು ಸಾಧಿಸುತ್ತಿದೆ ಎಂದಿದ್ದಾರೆ.

2017ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ, 403 ಸ್ಥಾನಗಳಲ್ಲಿ ಬಿಜೆಪಿ 312 ಸ್ಥಾನಗಳನ್ನು ಗೆದ್ದಿತ್ತು. ಅದರ ಮಿತ್ರ ಪಕ್ಷ ಅಪ್ನಾ ದಳ (ಸೋನೆಲಾಲ್) ಒಂಬತ್ತು ಸ್ಥಾನಗಳನ್ನು ಗೆದ್ದಿತ್ತು.

ಇದನ್ನೂ ಓದಿ: UP Cabinet Expansion: ಇಂದು ಉತ್ತರ ಪ್ರದೇಶ ಸಂಪುಟ ವಿಸ್ತರಣೆ; ಯೋಗಿ ಕ್ಯಾಬಿನೆಟ್​ ಸೇರಲಿದ್ದಾರೆ ನೂತನ ಸಚಿವರು

(Uttar Pradesh CM Yogi Adityanath expands Cabinet inducts seven new ministers)

Click on your DTH Provider to Add TV9 Kannada