ಉತ್ತರ ಪ್ರದೇಶ: ಹೆದ್ದಾರಿಯಲ್ಲಿ ಬೈಕ್‌ಗೆ ಡಿಕ್ಕಿ ಹೊಡೆಸಿ, ಗುಂಡು ಹಾರಿಸಿ ಪತ್ರಕರ್ತನ ಹತ್ಯೆ
ಉತ್ತರ ಪ್ರದೇಶದ ಸೀತಾಪುರದ ಲಕ್ನೋ-ದೆಹಲಿ ಹೆದ್ದಾರಿಯಲ್ಲಿ ಗುಂಡಿಕ್ಕಿ ಪತ್ರಕರ್ತನನ್ನು ಹತ್ಯೆ ಮಾಡಲಾಗಿದೆ. ಮೃತ ರಾಘವೇಂದ್ರ ಬಾಜ್‌ಪೈ ಉತ್ತರ ಪ್ರದೇಶದ ಹಿಂದಿ ದಿನಪತ್ರಿಕೆಯ ಸ್ಥಳೀಯ ವರದಿಗಾರರಾಗಿದ್ದರು. ಅವರು ಆರ್ಟಿಐ ಕಾರ್ಯಕರ್ತ ಕೂಡ ಆಗಿದ್ದರು. ವರದಿಯ ಪ್ರಕಾರ, ದುಷ್ಕರ್ಮಿಗಳು ಮೊದಲು ಅವರ ಬೈಕ್‌ಗೆ ಡಿಕ್ಕಿ ಹೊಡೆದು ನಂತರ ಮೂರು ಬಾರಿ ಗುಂಡು ಹಾರಿಸಿದ್ದಾರೆ. ಇದನ್ನು ಮೊದಲು ಅಪಘಾತವೆಂದು ಪರಿಗಣಿಸಲಾಗಿತ್ತು

ಉತ್ತರ ಪ್ರದೇಶ, ಮಾರ್ಚ್ 9: ಉತ್ತರ ಪ್ರದೇಶದ ಸೀತಾಪುರದ ಲಕ್ನೋ-ದೆಹಲಿ ಹೆದ್ದಾರಿಯಲ್ಲಿ ಗುಂಡಿಕ್ಕಿ ಪತ್ರಕರ್ತನನ್ನು ಹತ್ಯೆ ಮಾಡಲಾಗಿದೆ. ಮೃತ ರಾಘವೇಂದ್ರ ಬಾಜ್‌ಪೈ ಉತ್ತರ ಪ್ರದೇಶದ ಹಿಂದಿ ದಿನಪತ್ರಿಕೆಯ ಸ್ಥಳೀಯ ವರದಿಗಾರರಾಗಿದ್ದರು. ಅವರು ಆರ್ಟಿಐ ಕಾರ್ಯಕರ್ತ ಕೂಡ ಆಗಿದ್ದರು.
ವರದಿಯ ಪ್ರಕಾರ, ದುಷ್ಕರ್ಮಿಗಳು ಮೊದಲು ಅವರ ಬೈಕ್‌ಗೆ ಡಿಕ್ಕಿ ಹೊಡೆದು ನಂತರ ಮೂರು ಬಾರಿ ಗುಂಡು ಹಾರಿಸಿದ್ದಾರೆ. ಇದನ್ನು ಮೊದಲು ಅಪಘಾತವೆಂದು ಪರಿಗಣಿಸಲಾಗಿತ್ತು ಆದರೆ ಜಿಲ್ಲಾ ಆಸ್ಪತ್ರೆಯ ವೈದ್ಯರು ಅವರ ದೇಹದ ಮೇಲೆ ಮೂರು ಗುಂಡುಗಳು ಕಂಡುಬಂದಿದ್ದು, ಬಳಿಕ ಇದು ಕೊಲೆ ಪ್ರಕರಣವಾಗಿ ಪರಿವರ್ತನೆಯಾಗಿತ್ತು. ಶನಿವಾರ ಮಧ್ಯಾಹ್ನ ಫೋನ್ ಕರೆ ಬಂದ ನಂತರ 35 ವರ್ಷದ ಪತ್ರಕರ್ತ ಮನೆಯಿಂದ ಹೊರಟು ಹೋಗಿದ್ದರು.
ಸ್ವಲ್ಪ ಸಮಯದ ನಂತರ, ಮಧ್ಯಾಹ್ನ 3.15 ರ ಸುಮಾರಿಗೆ, ಹೆದ್ದಾರಿಯಲ್ಲಿ ಅವರನ್ನು ಹತ್ಯೆ ಮಾಡಲಾಗಿದೆ. ಕೊಲೆಯ ಹಿಂದಿನ ಉದ್ದೇಶವನ್ನು ಪೊಲೀಸರು ಇನ್ನೂ ತಿಳಿದುಬಂದಿಲ್ಲ. ಇನ್ನೂ ಯಾವುದೇ ಎಫ್‌ಐಆರ್ ದಾಖಲಾಗಿಲ್ಲ. ಪ್ರಕರಣ ದಾಖಲಿಸುವ ಮೊದಲು ಬಲಿಪಶುವಿನ ಕುಟುಂಬದಿಂದ ಔಪಚಾರಿಕ ದೂರಿಗಾಗಿ ಅಧಿಕಾರಿಗಳು ಕಾಯುತ್ತಿದ್ದಾರೆ.
ಮತ್ತಷ್ಟು ಓದಿ: ಮೈಸೂರು ಜಿಲ್ಲೆಯಲ್ಲಿ ಜೋಡಿ ಕೊಲೆ: ಒಳಕಲ್ಲಿನಿಂದ ಜಜ್ಜಿ ವೃದ್ಧ ದಂಪತಿಯ ಹತ್ಯೆ
ಪೊಲೀಸರ ಪ್ರಕಾರ, ಆರೋಪಿಗಳನ್ನು ಬಂಧಿಸಲು ನಾಲ್ಕು ತಂಡಗಳನ್ನು ರಚಿಸಲಾಗಿದೆ. ಮಹೋಲಿ, ಇಮಾಲಿಯಾ ಮತ್ತು ಕೊತ್ವಾಲಿಯ ಪೊಲೀಸ್ ತಂಡಗಳು, ಕಣ್ಗಾವಲು ಮತ್ತು ಎಸ್‌ಒಜಿ ತಂಡಗಳೊಂದಿಗೆ ಆರೋಪಿಗಳನ್ನು ತನಿಖೆ ಮಾಡಲು ಮತ್ತು ಗುರುತಿಸಲು ನಿಯೋಜಿಸಲಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ