AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪತ್ನಿ ಕೊಂದು ಕೊಡಲಿಯಿಂದ ತಲೆ ಕತ್ತರಿಸಿ ನದಿಗೆಸೆದು, ದೇಹವನ್ನು ಮನೆಯಲ್ಲೇ ಹೂತು ಹಾಕಿದ್ದ ಪತಿ

ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಕೊಂದು ಕೊಡಲಿಯಿಂದ ತಲೆ ಕತ್ತರಿಸಿ ನದಿಗೆಸೆದಿರುವ ಘಟನೆ ಮೊರಾದಾಬಾದ್​ನಲ್ಲಿ ನಡೆದಿದೆ. ಕುಟುಂಬದ ದೂರಿನ ಮೇರೆಗೆ ಪೊಲೀಸರು ಕಠಿಣ ಕ್ರಮ ಕೈಗೊಂಡ ನಂತರ, ವ್ಯಕ್ತಿ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾನೆ. ಕೊಲೆಗೆ ಬಳಸಲಾದ ವಸ್ತುಗಳು, ಮಹಿಳೆಯ ತಲೆಯನ್ನು ನದಿಯಿಂದ ಮತ್ತು ಮನೆಯಲ್ಲಿ ಹೂತಿಟ್ಟಿದ್ದ ಮುಂಡವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕೊಲೆಗಾರ ಪತಿಯನ್ನು ಜೈಲಿಗೆ ಕಳುಹಿಸಲಾಗಿದೆ.

ಪತ್ನಿ ಕೊಂದು ಕೊಡಲಿಯಿಂದ ತಲೆ ಕತ್ತರಿಸಿ ನದಿಗೆಸೆದು, ದೇಹವನ್ನು ಮನೆಯಲ್ಲೇ ಹೂತು ಹಾಕಿದ್ದ ಪತಿ
ಕ್ರೈಂ
ನಯನಾ ರಾಜೀವ್
|

Updated on:May 14, 2025 | 9:38 AM

Share

ಮೊರಾದಾಬಾದ್, ಮೇ 14: ಪತಿಯೊಬ್ಬ ಪತ್ನಿಯನ್ನು ಕೊಲೆ (Murder)ಮಾಡಿ  ಕೊಡಲಿಯಿಂದ ತಲೆ ಕತ್ತರಿಸಿ ನದಿಗೆಸೆದು, ದೇಹವನ್ನು ಮನೆಯಲ್ಲೇ ಹೂತು ಹಾಕಿರುವ ಘಟನೆ ಉತ್ತರ ಪ್ರದೇಶದ ಮೊರಾದಾಬಾದ್​ನಲ್ಲಿ ನಡೆದಿದೆ. ಆತ ಇಟ್ಟಿಗೆಯಿಂದ ಪತ್ನಿಯ ತಲೆಯನ್ನು ಜಜ್ಜಿ ಹತ್ಯೆ ಮಾಡಿದ್ದ. ನಂತರ ಕೊಡಲಿಯಿಂದ ತಲೆ ಕಡಿದು ದೇಹವನ್ನು ಮನೆಯಲ್ಲಿಯೇ ಹೂತುಹಾಕಿದ್ದ.

ಕುಟುಂಬದ ದೂರಿನ ಮೇರೆಗೆ ಪೊಲೀಸರು ಕಠಿಣ ಕ್ರಮ ಕೈಗೊಂಡ ನಂತರ, ವ್ಯಕ್ತಿ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾನೆ. ಕೊಲೆಗೆ ಬಳಸಲಾದ ವಸ್ತುಗಳು, ಮಹಿಳೆಯ ತಲೆಯನ್ನು ನದಿಯಿಂದ ಮತ್ತು ಮನೆಯಲ್ಲಿ ಹೂತಿಟ್ಟಿದ್ದ ಮುಂಡವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕೊಲೆಗಾರ ಪತಿಯನ್ನು ಜೈಲಿಗೆ ಕಳುಹಿಸಲಾಗಿದೆ.

ಏನಿದು ಘಟನೆ ? ಈ ಪ್ರಕರಣ ಮಜೋಲಾ ಪೊಲೀಸ್ ಠಾಣೆಯ ಟಿಪಿ ನಗರದಲ್ಲಿ ನಡೆದಿದೆ.ವ್ಯಕ್ತಿ ಶೇನ್ ಆಲಂ ಅಲಿಯಾಸ್ ರೆಹಾನ್ ಮೊದಲು ತನ್ನ ಪತ್ನಿ ತಬಸ್ಸುಮ್‌ಳನ್ನು ಇರಿದು, ನಂತರ ಇಟ್ಟಿಗೆಯಿಂದ ಜಜ್ಜಿ ಕೊಂದಿದ್ದಾನೆ. ಶೇನ್ ಆಲಂ ತನ್ನ ಪತ್ನಿ ತಬಸ್ಸುಮ್ ಅವರ ಶಿರಚ್ಛೇದ ಮಾಡಿ ನದಿಗೆ ಎಸೆದಿದ್ದಾನೆ. ಯಾರಿಗೂ ಏನೂ ತಿಳಿಯದಂತೆ ಶೇನ್ ಮನೆಯೊಳಗೆ ಗುಂಡಿ ತೋಡಿ ತಬಸ್ಸಮ್‌ನ ದೇಹವನ್ನು ಹೂತುಹಾಕಿದ್ದ ಮಮತ್ತು ಕುಟುಂಬದ ದಾರಿ ತಪ್ಪಿಸಲು ಪ್ರಯತ್ನಿಸಿದ್ದ.

ಇದನ್ನೂ ಓದಿ
Image
ಬಿಜೆಪಿ ಮುಖಂಡನ ವಿಡಿಯೋ: 20 ಲಕ್ಷಕ್ಕೆ ಡಿಮ್ಯಾಂಡ್‌, ಮಾಯಾಂಗನೆ ಲಾಕ್
Image
ಕಾರವಾರದಲ್ಲಿ SSLC ವಿದ್ಯಾರ್ಥಿ, ತುಮಕೂರಿನಲ್ಲಿ PUC ವಿದ್ಯಾರ್ಥಿನಿ ಸಾವು
Image
ಕುಣಿಗಲ್: ದೊಡ್ಡಕೆರೆಯಲ್ಲಿ ಮಹಿಳಾ ಟೆಕ್ಕಿ ಮೃತದೇಹ ಪತ್ತೆ, ಆತ್ಮಹತ್ಯೆ ಶಂಕೆ
Image
ಪ್ರೀತಿಸಿ ಮದ್ವೆಯಾಗಿದ್ದ ಪತ್ನಿ ಸ್ನೇಹಿತನ ಜತೆ ಪರಾರಿ: ಪತಿ ದುರಂತ ಸಾವು

ಮತ್ತಷ್ಟು ಓದಿ:ಪ್ರಿಯಕರನ ಸಹಾಯದಿಂದ ನಿವೃತ್ತ ಸೈನಿಕನನ್ನು ಕೊಂದು ಆರು ತುಂಡುಗಳಾಗಿ ಕತ್ತರಿಸಿ ಎಸೆದ ಪತ್ನಿ

ತಬಸ್ಸುಮ್ ಅವರ ತಾಯಿ ಮಜೋಲಾ ಪೊಲೀಸ್ ಠಾಣೆಯಲ್ಲಿ ತಮ್ಮ ಮಗಳು ಕಾಣೆಯಾಗಿದ್ದಾಳೆಂದು ದೂರು ದಾಖಲಿಸಿದ್ದರು. ಅವರ ಮಗಳು ಶೇನ್ ಆಲಂ ಅಲಿಯಾಸ್ ರೆಹಾನ್ ಅವರನ್ನು ಮದುವೆಯಾಗಿದ್ದಾಳೆಂದು ಹೇಳಲಾಗಿತ್ತು. ಇದು ಅವರಿಬ್ಬರಿಗೂ ಎರಡನೇ ವಿವಾಹವಾಗಿತ್ತು. ತಬಸ್ಸುಮ್ ಅವರ ಹೆಸರಿನಲ್ಲಿ ಅವರ ಮೊದಲ ಪತಿ ಕೊಟ್ಟಿದ್ದ ಮನೆ ಇದೆ, ಇಬ್ಬರೂ ಒಂದೇ ಮನೆಯಲ್ಲಿ ವಾಸಿಸುತ್ತಿದ್ದಾರೆ.

ಆದರೆ ಆಕೆಯ ಪತಿ ರೆಹಾನ್ ಆ ಮನೆಯನ್ನು ಮಾರಾಟ ಮಾಡಲು ಬಯಸಿದ್ದ , ಇದೇ ವಿವಾದಕ್ಕೆ ಕಾರಣ. ಆದರೆ ಅವರ ಮಗಳು ಹಲವು ದಿನಗಳಿಂದ ಕಾಣೆಯಾಗಿದ್ದಾಳೆ.ಆದರೆ ಆಕೆಯ ಪತಿ ಆಕೆಯ ಬಗ್ಗೆ ಏನೂ ಮಾತನಾಡುತ್ತಿರಲಿಲ್ಲ ಎಂದು ಮಾಹಿತಿ ನೀಡಿದ್ದರು.

ಎಸ್‌ಪಿ ರಣವಿಜಯ್ ಸಿಂಗ್ ಮಾತನಾಡಿ ಇದೇ ಏಪ್ರಿಲ್ 18 ರಂದು, ಮಹಿಳೆಯೊಬ್ಬರು ಮಜೋಲಾ ಪೊಲೀಸ್ ಠಾಣೆಯಲ್ಲಿ ತಮ್ಮ ಮಗಳು ಕಾಣೆಯಾಗಿದ್ದಾಳೆಂದು ದೂರು ದಾಖಲಿಸಿದ್ದರು, ಅವರ ಮಗಳು ಜನ್ನತ್ ಬಾಗ್‌ನಿಂದ 12 ರಿಂದ ಕಾಣೆಯಾಗಿದ್ದಾಳೆ ಮತ್ತು ಆಕೆಗೆ ಮದುವೆಯಾಗಿತ್ತು.

ಸುಮಾರು ಒಂದು ತಿಂಗಳ ಹಿಂದೆ ಘಟನೆ ನಡೆದಿತ್ತು. ಅವನ ಮಾಹಿತಿಯ ಆಧಾರದ ಮೇಲೆ, ಕಾಣೆಯಾದ ಮಹಿಳೆಯ ಶವವನ್ನು ಅವನ ಮನೆಯಿಂದ ಮತ್ತು ಆಕೆಯ ತಲೆಯನ್ನು ಹತ್ತಿರದ ನದಿಯಿಂದ ವಶಪಡಿಸಿಕೊಳ್ಳಲಾಯಿತು. ಕೊಲೆಗೆ ಬಳಸಲಾದ ಕೊಡಲಿ ಪತ್ತೆಯಾಗಿದ್ದು, ಆರೋಪಿಯನ್ನು ಜೈಲಿಗೆ ಕಳುಹಿಸಲಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 9:34 am, Wed, 14 May 25

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ