Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉತ್ತರಾಖಂಡ: ಮನೆಯ ಹೊರಗೆ ಆಟವಾಡುತ್ತಿದ್ದ 3 ವರ್ಷದ ಮಗುವನ್ನು ಎಳೆದೊಯ್ದ ಚಿರತೆ

ಉತ್ತರಾಖಂಡದಲ್ಲಿ ಚಿರತೆಯೊಂದು ಮೂರು ವರ್ಷದ ಮಗುವನ್ನು ಕೊಂದಿರುವ ಘಟನೆ ವರದಿಯಾಗಿದೆ. ಮಕ್ಕಳೆಲ್ಲರೂ ಮಗುವಿನ ಜತೆ ಆಟವಾಡುತ್ತಿದ್ದರು, ಆಗ ದಾಳಿ ಮಾಡಿದ ಚಿರತೆ ಮಗುವನ್ನು ಬಾಯಲ್ಲಿ ಕಚ್ಚಿಕೊಂಡು ಓಡಿದೆ. ಬಳಿಕ ಕೊಲೆ ಮಾಡಿದೆ. ವಿರೂಪಗೊಂಡಿರುವ ಮಗುವಿನ ದೇಹ ಮನೆಯ ಹತ್ತಿರದ ಪೊದೆಯೊಂದರಲ್ಲಿ ಪತ್ತೆಯಾಗಿದೆ.

ಉತ್ತರಾಖಂಡ: ಮನೆಯ ಹೊರಗೆ ಆಟವಾಡುತ್ತಿದ್ದ 3 ವರ್ಷದ ಮಗುವನ್ನು ಎಳೆದೊಯ್ದ ಚಿರತೆ
ಚಿರತೆImage Credit source: Pangolin Photo Safaris
Follow us
ನಯನಾ ರಾಜೀವ್
|

Updated on: Sep 30, 2024 | 10:06 AM

ನರಭಕ್ಷಕ ಚಿರತೆಯೊಂದು ಮನೆಯ ಹೊರಗೆ ಆಟವಾಡುತ್ತಿದ್ದ 3 ವರ್ಷದ ಮಗುವನ್ನು ಎಳೆದೊಯ್ದಿರುವ ಘಟನೆ ಉತ್ತರಾಖಂಡದಲ್ಲಿ ನಡೆದಿದೆ. ಮಕ್ಕಳೆಲ್ಲರೂ ಮಗುವಿನ ಜತೆ ಆಟವಾಡುತ್ತಿದ್ದರು, ಆಗ ದಾಳಿ ಮಾಡಿದ ಚಿರತೆ ಮಗುವನ್ನು ಬಾಯಲ್ಲಿ ಕಚ್ಚಿಕೊಂಡು ಓಡಿದೆ. ಬಳಿಕ ಕೊಂದಿದೆ,  ವಿರೂಪಗೊಂಡಿರುವ ಮಗುವಿನ ದೇಹ ಮನೆಯ ಹತ್ತಿರದ ಪೊದೆಯೊಂದರಲ್ಲಿ ಪತ್ತೆಯಾಗಿದೆ.

ಅಂಕಿತ್ ಕುಮಾರ್ ಅವರ ಮಗ ರಾಜ್ ಕುಮಾರ್ ತನ್ನ ತಾಯಿಯ ಚಿಕ್ಕಪ್ಪನ ಮಕ್ಕಳೊಂದಿಗೆ ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದಾಗ ಸಂಜೆ 5 ಗಂಟೆ ಸುಮಾರಿಗೆ ಪುರ್ವಾಲ್ ಗ್ರಾಮದಲ್ಲಿ ಈ ಘಟನೆ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತೆಹ್ರಿ ಅರಣ್ಯ ವಿಭಾಗದ ಭಿಲಾಂಗನಾ ರೇಂಜ್ ಆಫೀಸರ್ ಆಶಿಶ್ ನೌಟಿಯಾಲ್ ಮತ್ತು ಪುರ್ವಾಲ್ ಗ್ರಾಮದ ಮುಖ್ಯಸ್ಥ ಸಂಜಯ್ ತಿವಾರಿ ಮಾತನಾಡಿ, ಮಗು ಆಟವಾಡುತ್ತಿದ್ದಾಗ ಮನೆಯ ಹಿಂದೆ ಚಿರತೆ ಹೊಂಚುಹಾಕಿ ಕುಳಿತಿತ್ತು.

ಮತ್ತಷ್ಟು ಓದಿ: ಹಾಸನದಲ್ಲಿ ಚಿರತೆ ದಾಳಿಗೆ ಹಸು ಬಲಿ, ಮೂರು ಹಸುಗಳಿಗೆ ಗಂಭೀರ ಗಾಯ, ಕೋಲಾರದಲ್ಲಿ ಕರು ತಿಂದ ಚಿರತೆ!

ಮನೆಯಲ್ಲಿ ಮಗನನ್ನು ಕಾಣದ ಮಂಜು ದೇವಿ ಹುಡುಕಾಟ ಆರಂಭಿಸಿದರು. ಬಳಿಕ ಆಕೆಯ ನೆರೆಹೊರೆಯವರು ಕೂಡ ಹುಡುಕಿದರೂ ಎಲ್ಲೂ ಮಗು ಪತ್ತೆಯಾಗಿರಲಿಲ್ಲ.

ಅಷ್ಟರಲ್ಲಿ ಯಾರೋ ಮನೆಯ ಹಿಂದಿನ ರಸ್ತೆಯಲ್ಲಿ ರಕ್ತದ ಕಲೆಗಳನ್ನು ಗಮನಿಸಿದರು. ಅದನ್ನು ಹಿಂಬಾಲಿಸಿ ಹೋದಾಗ ಅಲ್ಲಿ ವಿರೂಪಗೊಂಡಿರುವ ಮಗುವಿನ ದೇಹ ಪತ್ತೆಯಾಗಿತ್ತು.

ಮೂವರ ಮೇಲೆ ದಾಳಿ: ಸಿಟ್ಟಿಗೆದ್ದು ಹುಡುಕಿ ಚಿರತೆಯನ್ನೇ ಕೊಂದು ಆಂಬ್ಯುಲೆನ್ಸ್​ಗೆ ಹಾಕಿದ ಗ್ರಾಮಸ್ಥರು ರಾಯಚೂರಿನಲ್ಲಿ ನಡೆದ ಘಟನೆ ಇದು, ಲ್ಲೆಯ ಡಿ.ಕರಡಿಗುಡ್ಡ ಗ್ರಾಮದಲ್ಲಿ ಚಿರತೆ‌ (leopard) ಹೆದರಿಸಲು ಹೋದ ಮೂವರ ಮೇಲೆ ದಾಳಿ ಮಾಡಿರುವಂತಹ ಘಟನೆ ಜುಲೈನಲ್ಲಿ ನಡೆದಿತ್ತು.

ಆದರೆ ಇದೀಗ ಚಿರತೆ ತಪ್ಪಿಸಿಕೊಂಡರೇ ಮತ್ತೆ ದಾಳಿ‌ ನಡೆಸುವ ಭಯದಲ್ಲಿ ಅರಣ್ಯ ಇಲಾಖೆ ಕಾರ್ಯಾಚರಣೆ ವೇಳೆಯೇ ಸಾರ್ವಜನಿಕರು ಚಿರತೆ ಕೊಂದು (killed) ಹಾಕಿದ್ದಾರೆ. ಆ ಮೂಲಕ ಜನರು ತಮ್ಮ ಆಕ್ರೋಶವನ್ನು ತೀರಿಸಿಕೊಂಡಿದ್ದಾರೆ. ಬಳಿಕ ಪಶು ಆಂಬ್ಯುಲೆನ್ಸ್​ನಲ್ಲಿ ಚಿರತೆ ಹಾಕಿ ಸಾಗಾಟ ಮಾಡಲಾಗಿದೆ. ದೇವದುರ್ಗ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಚಿರತೆ ಓಡಿಸಲು ಹೋದ ಮೂವರ ಮೇಲೆ ಬೆಳಿಗ್ಗೆ ದಾಳಿ ಹಿನ್ನೆಲೆ ಅರಣ್ಯ ಇಲಾಖೆ‌ ಸಿಬ್ಬಂದಿಯಿಂದ ಚಿರತೆ ಸೆರೆಗೆ ಕಾರ್ಯಾಚರಣೆ ಮಾಡಲಾಗಿತ್ತು. ಕಾರ್ಯಾಚರಣೆ ವೇಳೆ ಸಿಗದ ಚಿರತೆ ನಂತರ ಸಿಕ್ಕಿದ್ದು, ಸ್ಥಳೀಯರು ಸಾಯಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ