ಕಾನ್ಪುರ: ರೈಲು ಹಳಿ ತಪ್ಪಿಸುವ ಮತ್ತೊಂದು ಯತ್ನ, ಹಳಿಯಲ್ಲಿತ್ತು ಸಿಲಿಂಡರ್​

ಉತ್ತರ ಪ್ರದೇಶದ ಕಾನ್ಪುರದ ರೈಲ್ವೆ ಹಳಿಯಲ್ಲಿ ಅನುಮಾನಾಸ್ಪದ ವಸ್ತು ಕಂಡುಬಂದಾಗ ಲೋಕೊ ಪೈಲಟ್​ ಬ್ರೇಕ್​ ಹಾಕಿದ್ದರಿಂದ ಆಗುವ ಅನಾಹುತ ತಪ್ಪಿದೆ. ಹಳಿಯಲ್ಲಿ ಸಿಲಿಂಡರ್​ ಪತ್ತೆಯಾಗಿದೆ, ದೇಶದ ಹಲವು ಕಡೆಗಳಲ್ಲಿ ರೈಲು ಹಳಿ ತಪ್ಪಿಸುವ ಸಾಕಷ್ಟು ಯತ್ನಗಳು ನಡೆದಿದೆ.

ಕಾನ್ಪುರ: ರೈಲು ಹಳಿ ತಪ್ಪಿಸುವ ಮತ್ತೊಂದು ಯತ್ನ, ಹಳಿಯಲ್ಲಿತ್ತು ಸಿಲಿಂಡರ್​
ಸಿಲಿಂಡರ್
Follow us
|

Updated on: Sep 30, 2024 | 8:52 AM

ಉತ್ತರ ಪ್ರದೇಶದ ಕಾನ್ಪುರದ ರೈಲ್ವೆ ಹಳಿಯಲ್ಲಿ ಅನುಮಾನಾಸ್ಪದ ವಸ್ತು ಕಂಡುಬಂದಾಗ ಲೋಕೊ ಪೈಲಟ್​ ಬ್ರೇಕ್​ ಹಾಕಿದ್ದರಿಂದ ಆಗುವ ಅನಾಹುತ ತಪ್ಪಿದೆ. ಹಳಿಯಲ್ಲಿ ಸಿಲಿಂಡರ್​ ಪತ್ತೆಯಾಗಿದೆ, ದೇಶದ ಹಲವು ಕಡೆಗಳಲ್ಲಿ ರೈಲು ಹಳಿ ತಪ್ಪಿಸುವ ಸಾಕಷ್ಟು ಯತ್ನಗಳು ನಡೆದಿದೆ. ಪುಷ್ಪಕ್ ಎಕ್ಸ್‌ಪ್ರೆಸ್‌ನ ಲೊಕೊ ಪೈಲಟ್ ಟ್ರ್ಯಾಕ್ ಮೇಲೆ ಕೆಂಪು ಸಿಲಿಂಡರ್ ಬಿದ್ದಿರುವುದನ್ನು ಗಮನಿಸಿ ಸಮಯಕ್ಕೆ ಸರಿಯಾಗಿ ಬ್ರೇಕ್ ಹಾಕಿದರು. ಸಿಲಿಂಡರ್‌ನಿಂದ ಸ್ವಲ್ಪ ದೂರದಲ್ಲಿ ರೈಲು ನಿಂತಿತು ಎಂದು ಪೊಲೀಸರು ಹೇಳಿದರು.

ರೈಲು ಹಳಿಗಳ ಮೇಲೆ ಅಪಾಯಕಾರಿ ವಸ್ತುಗಳನ್ನು ಇಡುವುದರಿಂದ ರೈಲು ಸಂಚಾರಕ್ಕೆ ಆಗಾಗ ಅಡ್ಡಿಯುಂಟಾಗುತ್ತಿದೆ, ರೈಲು ಹಳಿತಪ್ಪುವ ಅಥವಾ ಪ್ರಾಣಾಪಾಯವಾಗು ಸಾಧ್ಯತೆ ಹೆಚ್ಚಿದೆ.

ಇನ್ನೂ ಕುತೂಹಲಕಾರಿ ಸಂಗತಿಯೆಂದರೆ, ಈ ವಸ್ತುಗಳಲ್ಲಿ ಹೆಚ್ಚಿನವು, ಮುಖ್ಯವಾಗಿ ಗ್ಯಾಸ್ ಸಿಲಿಂಡರ್‌ಗಳು ಮತ್ತು ಕಾಂಕ್ರೀಟ್ ಕಂಬಗಳು ಉತ್ತರ ಪ್ರದೇಶದಲ್ಲಿ ರೈಲ್ವೆ ಹಳಿಗಳು ಕಂಡುಬಂದಿವೆ.

ಮತ್ತಷ್ಟು ಓದಿ: ರೈಲ್ವೆ ಹಳಿ ಮೇಲೆ ಕಿಡಿಗೇಡಿಗಳು ಇರಿಸಿದ್ದ ಸಿಮೆಂಟ್ ಮೈಲಿಗಲ್ಲಿಗೆ ಗುದ್ದಿದ ರೈಲು

ಮುಂಬೈನಿಂದ ಲಕ್ನೋಗೆ ಹೋಗುತ್ತಿದ್ದ ರೈಲು ಗೋವಿಂದಪುರಿ ನಿಲ್ದಾಣದ ಬಳಿ ಹೋಲ್ಡಿಂಗ್ ಲೈನ್ ಅನ್ನು ತಲುಪಿದಾಗ, ಸೆಪ್ಟೆಂಬರ್ 29ರಂದು ಭಾನುವಾರ ಸಂಜೆ 4.15 ಕ್ಕೆ ಹಳಿ ಮೇಲೆ ಬೆಂಕಿ ಸಿಲಿಂಡರ್ ಬಿದ್ದಿರುವುದನ್ನು ನೋಡಿ ಚಾಲಕನಿಗೆ ಆಘಾತವಾಯಿತು.

ಕಾಳಿಂದಿ ರೈಲು ಹಳಿ ತಪ್ಪಿಸಲು ಯತ್ನ, ಹಳಿಯಲ್ಲಿ ಸಿಲಿಂಡರ್​, ಪೆಟ್ರೋಲ್​ ಬಾಟಲಿಗಳು ಪತ್ತೆ ಕಾನ್ಪುರದಲ್ಲಿ ಕಾಳಿಂದಿ ಎಕ್ಸ್​ಪ್ರೆಸ್​ ರೈಲು ಹಳಿ ತಪ್ಪಿಸುವ ಯತ್ನ ನಡೆದಿದ್ದು, ಹಳಿಯಲ್ಲಿ ಗ್ಯಾಸ್​ ಸಿಲಿಂಡರ್​, ಪೆಟ್ರೋಲ್​ ಬಾಟಲಿಗಳು ಸಿಕ್ಕಿವೆ. ಭಾರಿ ಅನಾಹುತ ತಪ್ಪಿದೆ. ಅಪಾಯಕಾರಿ ವಸ್ತುಗಳು ಹಳಿಗಳ ಮೇಲೆ ಪತ್ತೆಯಾದ ನಂತರ ದೊಡ್ಡ ರೈಲು ದುರಂತವನ್ನು ತಪ್ಪಿಸಲಾಗಿದೆ.

ನಿನ್ನೆ ರಾತ್ರಿ 8.25 ರ ಸುಮಾರಿಗೆ ಈ ಘಟನೆ ನಡೆದಿದ್ದು, ಕಾಳಿಂದಿ ಎಕ್ಸ್‌ಪ್ರೆಸ್ ಬರಜ್‌ಪುರ ನಿಲ್ದಾಣದಿಂದ ಹೊರಟು 2.3 ಕಿಲೋಮೀಟರ್ ದೂರದಲ್ಲಿದ್ದಾಗ ಹಳಿಗಳ ಮೇಲೆ ಇರಿಸಲಾಗಿದ್ದ ಗ್ಯಾಸ್ ಸಿಲಿಂಡರ್‌ಗೆ ಡಿಕ್ಕಿ ಹೊಡೆದು ಸ್ಫೋಟ ಸಂಭವಿಸಿದೆ. ದೊಡ್ಡ ಶಬ್ದವನ್ನು ಕೇಳಿದ ಲೊಕೊ ಪೈಲಟ್ ತಕ್ಷಣ ತುರ್ತು ಬ್ರೇಕ್‌ ಹಾಕಿದ್ದಾರೆ.

ಬಳಿಕ ಇಳಿದು ನೋಡಿದಾಗ ಅಪಾಯಕಾರಿ ವಸ್ತುಗಳು ಹಳಿಯಲ್ಲಿರುವುದು ಕಂಡುಬಂದಿತ್ತು. ತಕ್ಷಣ ರೈಲ್ವೆ ಪ್ರೊಟೆಕ್ಷನ್ ಫೋರ್ಸ್​ಗೆ ಮಾಹಿತಿ ನೀಡಲಾಗಿತ್ತು. ಪ್ರದೇಶದ ಸಂಪೂರ್ಣ ಶೋಧ ನಡೆಸಲಾಯಿತು. ರೈಲಿಗೆ ಡಿಕ್ಕಿಯಾದ ಕಾರಣ ಸಿಲಿಂಡರ್ ಹಳಿಯಿಂದ ತುಂಬಾ ದೂರ ಹೋಗಿ ಬಿದ್ದಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ