ಹೈದರಾಬಾದ್‌ನಿಂದ ಬರಲಿದೆ ಪ್ಲಾಸ್ಮಾ ಕಟ್ಟರ್, ಹಸ್ತಚಾಲಿತ ಕೊರೆತ ನಾಳೆಯಿಂದ ಪ್ರಾರಂಭ: ಉತ್ತರಾಖಂಡ ಸಿಎಂ

ಪರಿಸ್ಥಿತಿ ಬಹಳ ಕಷ್ಟಕರ ಮತ್ತು ಸವಾಲಿನದ್ದು ಎಂದು ಅವರು ಹೇಳಿದ್ದಾರೆ. ಅವಶೇಷಗಳೆಡೆಯಲ್ಲಿ ಕೊರೆಯುವ ಮತ್ತು ಸಿಕ್ಕಿಬಿದ್ದ ಕಾರ್ಮಿಕರಿಗೆ ಹೊರಬರಲು ಪೈಪ್‌ಗಳನ್ನು ಇರಿಸುವ ಯಂತ್ರವು ಒಂದು ನಿರ್ದಿಷ್ಟ ಹಂತವನ್ನು ತಲುಪಿದ ನಂತರ ಸಿಲುಕಿಕೊಂಡಿದೆ. ಈ ರಕ್ಷಣಾ ಕಾರ್ಯಾಚರಣೆಯನ್ನು ಕಷ್ಟಕರ ಮತ್ತು ಸವಾಲಿನ ಸಂದರ್ಭಗಳಲ್ಲಿ ಮಾಡಲಾಗುತ್ತಿದೆ ಎಂದು ಎಲ್ಲರಿಗೂ ತಿಳಿದಿದೆ ಎಂದು ಉತ್ತರಾಖಂಡ ಸಿಎಂ ಹೇಳಿದ್ದಾರೆ.

ಹೈದರಾಬಾದ್‌ನಿಂದ ಬರಲಿದೆ ಪ್ಲಾಸ್ಮಾ ಕಟ್ಟರ್, ಹಸ್ತಚಾಲಿತ ಕೊರೆತ ನಾಳೆಯಿಂದ ಪ್ರಾರಂಭ: ಉತ್ತರಾಖಂಡ ಸಿಎಂ
ಪುಷ್ಕರ್ ಸಿಂಗ್ ಧಾಮಿ
Follow us
ರಶ್ಮಿ ಕಲ್ಲಕಟ್ಟ
|

Updated on:Nov 25, 2023 | 5:33 PM

ಉತ್ತರಕಾಶಿ (ಉತ್ತರಾಖಂಡ) ನವೆಂಬರ್ 25: ಉತ್ತರಕಾಶಿಯ ಸಿಲ್ಕ್ಯಾರಾ ಸುರಂಗದ (Uttarakhand tunnel rescue Operation) ಅವಶೇಷಗಳಲ್ಲಿ ಸಿಲುಕಿರುವ ಆಗರ್ ಯಂತ್ರವನ್ನು ಕತ್ತರಿಸಲು ಹೈದರಾಬಾದ್‌ನಿಂದ(Hyderabad) ಪ್ಲಾಸ್ಮಾ ಕಟ್ಟರ್ ತರಲಾಗುತ್ತಿದೆ ಎಂದು ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ (Pushkar Singh Dhami) ಶನಿವಾರ ಹೇಳಿದ್ದಾರೆ. ನವೆಂಬರ್ 12 ರಿಂದ ಸುರಂಗ ಕುಸಿದು 41 ಕಾರ್ಮಿಕರು ಸಿಲುಕಿರುವ ಸ್ಥಳಕ್ಕೆ ಭೇಟಿ ನೀಡಿದ ನಂತರ, ಧಾಮಿ ಅವರು, ಸಿಲ್ಕ್ಯಾರಾ ಕಡೆಯಿಂದ ಅವಶೇಷಗಳ ಮೂಲಕ ಕೊರೆಯುವ ಕಾರ್ಯದಲ್ಲಿ ತೊಡಗಿರುವ ಆಗರ್ ಯಂತ್ರವನ್ನು ನಾಳೆ ಬೆಳಿಗ್ಗೆ ಹೊರತೆಗೆಯುವ ನಿರೀಕ್ಷೆಯಿದೆ. ಆ ನಂತರ ಹಸ್ತಚಾಲಿತ ಕೊರೆಯುವಿಕೆಯು ಪ್ರಾರಂಭವಾಗುತ್ತದೆ.

ಪರಿಸ್ಥಿತಿ ಬಹಳ ಕಷ್ಟಕರ ಮತ್ತು ಸವಾಲಿನದ್ದು ಎಂದು ಅವರು ಹೇಳಿದ್ದಾರೆ. ಅವಶೇಷಗಳೆಡೆಯಲ್ಲಿ ಕೊರೆಯುವ ಮತ್ತು ಸಿಕ್ಕಿಬಿದ್ದ ಕಾರ್ಮಿಕರಿಗೆ ಹೊರಬರಲು ಪೈಪ್‌ಗಳನ್ನು ಇರಿಸುವ ಯಂತ್ರವು ಒಂದು ನಿರ್ದಿಷ್ಟ ಹಂತವನ್ನು ತಲುಪಿದ ನಂತರ ಸಿಲುಕಿಕೊಂಡಿದೆ. ಈ ರಕ್ಷಣಾ ಕಾರ್ಯಾಚರಣೆಯನ್ನು ಕಷ್ಟಕರ ಮತ್ತು ಸವಾಲಿನ ಸಂದರ್ಭಗಳಲ್ಲಿ ಮಾಡಲಾಗುತ್ತಿದೆ ಎಂದು ಎಲ್ಲರಿಗೂ ತಿಳಿದಿದೆ. ಯಂತ್ರವು ತುಂಬಾ ಹತ್ತಿರ ತಲುಪಿದ ನಂತರ ಸಿಕ್ಕಿಹಾಕಿಕೊಂಡಿದೆ. ನಾಳೆ ಬೆಳಿಗ್ಗೆ ಈ ಯಂತ್ರವು ಹೊರಬರುತ್ತದೆ ಎಂದು ನಾವು ನಿರೀಕ್ಷಿಸುತ್ತಿದ್ದೇವೆ ಎಂದು ಮುಖ್ಯಮಂತ್ರಿ ಹೇಳಿದರು.

“ನಾವು ಎಲ್ಲಾ ಆಯ್ಕೆಗಳಲ್ಲಿ ಕೆಲಸ ಮಾಡುತ್ತಿದ್ದೇವೆ. ಆಗರ್ ಯಂತ್ರವನ್ನು ಕತ್ತರಿಸಲು ಹೈದರಾಬಾದ್‌ನಿಂದ ಪ್ಲಾಸ್ಮಾ ಕಟ್ಟರ್ ಯಂತ್ರ ತರಲು ಹೇಳಲಾಗಿದೆ ಎಂದು ಧಾಮಿ ಹೇಳಿದರು. ಹೆವಿ ಡ್ಯೂಟಿ ಯುಎಸ್ ನಿರ್ಮಿತ ಆಗರ್ ಯಂತ್ರವು ಒಂದು ನಿರ್ದಿಷ್ಟ ಹಂತವನ್ನು ತಲುಪಿದ ನಂತರ ಸಿಲುಕಿಕೊಂಡಿತು, ಕೆಲವು ಲೋಹದ ವಸ್ತುವು ಅದರೊಳಗೆ ಸಿಲುಕಿಕೊಂಡಿದ್ದರಿಂದ ಶುಕ್ರವಾರ ಸಂಜೆ ಕೊರೆಯುವ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಯಿತು.

ಸುರಂಗದೊಳಗೆ ಸಿಲುಕಿದ್ದ ಕಟ್ಟಡ ಕಾರ್ಮಿಕರನ್ನು ಮಾತನಾಡಿಸಿದ್ದು ಅವರ ಮನೋಬಲ ಹೆಚ್ಚಿದೆ ಎಂದು ಧಾಮಿ ಹೇಳಿದ್ದಾರೆ.

“ನಾನು ಈಗಷ್ಟೇ ಒಳಗಿರುವ ಜನರೊಂದಿಗೆ ಮಾತನಾಡಿದ್ದೇನೆ, ಗಬ್ಬರ್ ಸಿಂಗ್, ಸಭಾ ಅಹ್ಮದ್ ಮತ್ತು ಷರಿಯಾ ಮಿಶ್ರಾ ಅವರೆಲ್ಲರ ನೈತಿಕ ಸ್ಥೈರ್ಯವು ಸಂಪೂರ್ಣವಾಗಿ ಬಲವಾಗಿದೆ. ಅವರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಮಯಕ್ಕೆ ಸರಿಯಾಗಿ ಆಹಾರವನ್ನು ಪಡೆಯುತ್ತಿದ್ದಾರೆ ಎಂದು ಅವರು ನನಗೆ ಹೇಳಿದರು. ಸುರಕ್ಷಿತವಾಗಿ ಅವರನ್ನು ಸುರಂಗದಿಂದ ಹೊರತೆಗೆಯುತ್ತೇವೆ ಎಂದು ಧಾಮಿ ಹೇಳಿದರು.

ಇದನ್ನೂ ಓದಿ: ಉತ್ತರಾಖಂಡದ ಸುರಂಗ ಕುಸಿತ: ಆಗರ್ ಯಂತ್ರ ಕೆಟ್ಟುಹೋಗಿದೆ; ಮುಂದಿನ ರಕ್ಷಣಾ ಕಾರ್ಯಾಚರಣೆ ಹೇಗೆ?

ಹಾಗಾಗಿ ನಾವು ಸಹ ಆದಷ್ಟು ಬೇಗ ರಕ್ಷಣೆಯನ್ನು ಪೂರ್ಣಗೊಳಿಸಬೇಕೆಂದು ದೇವರಲ್ಲಿ ಪ್ರಾರ್ಥಿಸುತ್ತಿದ್ದೇವೆ. ಭಾರತ ಸರ್ಕಾರ, ರಾಜ್ಯ ಸರ್ಕಾರ ಮತ್ತು ನಮ್ಮ ಎಲ್ಲಾ ಸಂಸ್ಥೆಗಳ ಮಟ್ಟದಲ್ಲಿ, ಎಲ್ಲಾ ಜನರು ತಮ್ಮ ಸಂಪೂರ್ಣ ಪ್ರಯತ್ನವನ್ನು ಮಾಡುತ್ತಿದ್ದಾರೆ. ನಾವು ಅನೇಕ ಪ್ರಯತ್ನಗಳನ್ನು ಮಾಡುತ್ತಿದ್ದೇವೆ. ಪ್ರಧಾನಿ ಪ್ರತಿದಿನ ಪ್ರಗತಿ ವರದಿಗಳನ್ನು ಪಡೆಯುತ್ತಿದ್ದಾರೆ. ಪ್ರಧಾನಿ ಮೋದಿ ಪರಿಸ್ಥಿತಿ ಮತ್ತು ಕಾರ್ಮಿಕರ ಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ನಾವು ಆದಷ್ಟು ಬೇಗ ಕಾರ್ಯಾಚರಣೆಯನ್ನು ಪೂರ್ಣಗೊಳಿಸುತ್ತೇವೆ ಎಂದು ನಿರೀಕ್ಷಿಸುತ್ತೇವೆ ಮತ್ತು ಆಶಿಸುತ್ತೇವೆ ಎಂದು ಮುಖ್ಯಮಂತ್ರಿ ಧಾಮಿ ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:30 pm, Sat, 25 November 23