ಭಾರೀ ಹಿಮಪಾತ; ಕಾಶ್ಮೀರದಲ್ಲಿ ವಾಹನ ಸಂಚಾರ ಸ್ಥಗಿತ

ಜಮ್ಮು ಮತ್ತು ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರೀ ಪ್ರಮಾಣದ ಹಿಮಪಾತದಿಂದಾಗಿ ಸತತ ಎರಡನೇ ದಿನ ಮಂಗಳವಾರ ವಾಹನ ಸಂಚಾರ ಸ್ಥಗಿತಗೊಂಡಿದೆ.

ಭಾರೀ ಹಿಮಪಾತ; ಕಾಶ್ಮೀರದಲ್ಲಿ ವಾಹನ ಸಂಚಾರ ಸ್ಥಗಿತ
ಹಿಮಪಾತದಿಂದ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ಸ್ಥಗಿತ
Edited By:

Updated on: Jan 05, 2021 | 5:46 PM

ಶ್ರೀನಗರ: ಜಮ್ಮು ಮತ್ತು ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರೀ ಪ್ರಮಾಣದ ಹಿಮಪಾತದಿಂದಾಗಿ ಸತತ ಎರಡನೇ ದಿನ ಮಂಗಳವಾರ ವಾಹನ ಸಂಚಾರ ಸ್ಥಗಿತಗೊಂಡಿದೆ.

ಸುಮಾರು 4,500 ವಾಹನಗಳು ರಸ್ತೆಯ ಮಧ್ಯದಲ್ಲಿ ಸಿಲುಕಿಕೊಂಡಿವೆ. ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿ ಹಾಗೂ ವಿಶೇಷವಾಗಿ ಜವಾಹರ್ ಸುರಂಗದ ಸುತ್ತಲೂ ಹಿಮ ಸಂಗ್ರಹವಾಗಿ ರಸ್ತೆ ಮುಚ್ಚಿ ಹೋಗಿದೆ ಎಂದು ಸಂಚಾರ ನಿಯಂತ್ರಣ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಹಿಮ ತೆರವು ಕಾರ್ಯಾಚರಣೆ ನಡೆಯುತ್ತಿದೆ. 260 ಕಿಲೋಮೀಟರ್ ರಸ್ತೆಯಲ್ಲಿ ಸಿಲುಕಿಕೊಂಡಿರುವ ವಾಹನ ಸಂಚಾರವನ್ನು ಪುನಃ ಪ್ರಾರಂಭಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದು ಅವರು ಹೇಳಿದ್ದಾರೆ.

ದಕ್ಷಿಣ ಕಾಶ್ಮೀರದ ಕುಲ್ಗಾಂ, ಅನಂತನಾಗ್ ಜಿಲ್ಲೆಗಳಲ್ಲಿ ಹಿಮಪಾತವಾಗುತ್ತಿದೆ. ಶ್ರೀನಗರವು ಕಳೆದ ಮೂರು ದಿನಗಳಿಂದ ಹಿಮಪಾತವನ್ನು ಕಂಡಿದೆ. ವಾಹನ ಸಂಚಾರವನ್ನು ಪ್ರಾರಂಭಿಸಲು ಪ್ರಯತ್ನಗಳು ನಡೆಯುತ್ತಿವೆ. ಜಾರು ರಸ್ತೆಗಳು ಕೆಲವು ಸ್ಥಳಗಳಲ್ಲಿ ಸಂಚಾರ ದಟ್ಟಣೆಗೆ ಕಾರಣವಾಗಿವೆ. ಹಿಮಪಾತದ ಸಾಧ್ಯತೆಯು ಆಗಾಗ ಹೆಚ್ಚಾಗುತ್ತಿದೆ. ಹೆಚ್ಚಿನ ಪ್ರದೇಶಗಳು ಅಧಿಕ ಹಿಮಪಾತವನ್ನು ಹೊಂದುತ್ತಿದೆ ಎಂದು ಅವರು ಹೇಳಿದ್ದಾರೆ.

ಅಟಲ್ ಸುರಂಗದ ಬಳಿ ಹಿಮಪಾತದಲ್ಲಿ ಸಿಲುಕಿದ್ದ 300 ಪ್ರವಾಸಿಗರನ್ನು ರಕ್ಷಿಸಿದ ಪೊಲೀಸರು

Published On - 5:46 pm, Tue, 5 January 21