‘ವಿಕ್ಷಿತ್ ಭಾರತ್’ ಯುವ ನಾಯಕರ ಸಂವಾದ ಕಾರ್ಯಕ್ರಮದಲ್ಲಿ ಭಾಗಹಿಸುವ ಮುನ್ನ ಈ ರಸ ಪ್ರಶ್ನೆಗಳಿಗೆ ಉತ್ತರಿಸಿ: ಪ್ರಧಾನಿ ಮೋದಿ
ಭಾರತದಲ್ಲಿ ಯುವ ನಾಯಕರನ್ನು ಸೃಷ್ಟಿಸುವುದು ಅಗತ್ಯವಾಗಿದೆ. ಈ ಕಾರಣಕ್ಕೆ ಪ್ರಧಾನಿ ಮೋದಿ ಅವರು ತಮ್ಮ ಕುಟುಂಬದಲ್ಲಿ ರಾಜಕೀಯ ಹಿನ್ನಲೆ ಇಲ್ಲದ ಯುವಕರು ಈ ಕಾರ್ಯಕ್ರಮದಲ್ಲಿ ಭಾಗಹಿಸಬೇಕು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದಕ್ಕೂ ಮುನ್ನ ಈ ರಸ ಪ್ರಶ್ನೆಗಳಿಗೆ ಉತ್ತರಿಸಿ ಎಂದು ಪ್ರಧಾನಿ ಮೋದಿ ಅವರನ್ನು ಹೇಳಿದ್ದಾರೆ. ಜತೆಗೆ ಈ ಕಾರ್ಯಕ್ರಮದಲ್ಲಿ ಯುವಕರು ಭಾಗವಹಿಸಲು ಇರುವ ಮಾನದಂಡಗಳೇನು? ಎಂಬ ಬಗ್ಗೆ ಇಲ್ಲಿ ನೀಡಲಾಗಿದೆ.
ಭಾರತದ ಯುವ ನಾಯಕರಿಗೆ ಒಂದು ಹೊಸ ವೇದಿಕೆಯನ್ನು ನೀಡಲಾಗುತ್ತಿದೆ. ಜನವರಿ 11-12 ರಂದು ದೆಹಲಿಯಲ್ಲಿ ” ವಿಕ್ಷಿತ್ ಭಾರತ್ ಯುವ ನಾಯಕರ ಸಂವಾದ ಕಾರ್ಯಕ್ರಮ ನಡೆಯಲಿದೆ. ರಾಜಕೀಯ ಹಿನ್ನೆಲೆಯಿಲ್ಲದ ಯುವಕರನ್ನು ರಾಜಕೀಯದೊಂದಿಗೆ ಸಂಪರ್ಕಿಸುವ ಪ್ರಯತ್ನದ ಭಾಗವಾಗಿದೆ. ಪ್ರಧಾನಿ ಮೋದಿ ಅವರ ಜನಪ್ರಿಯ ಕಾರ್ಯಕ್ರಮ ” ಮನ್ ಕಿ ಬಾತ್ ” ನಲ್ಲೂ ಈ ಬಗ್ಗೆ ಪ್ರಸ್ತಾಪಿಸಿದ್ದಾರೆ. ಜನವರಿ 12 ರಂದು ಸ್ವಾಮಿ ವಿವೇಕಾನಂದರ 162 ನೇ ಜಯಂತಿಯನ್ನು ಅತ್ಯಂತ ವಿಶೇಷ ರೀತಿಯಲ್ಲಿ ಆಚರಿಸಲಾಗುವುದು ಎಂದು ಹೇಳಿದರು.
ಜನವರಿ 11-12 ರಂದು ದೆಹಲಿಯ ಭಾರತ್ ಮಂಟಪದಲ್ಲಿ ವಿಕ್ಷಿತ್ ಭಾರತ್ ಯುವ ನಾಯಕರ ಸಂವಾದ ನಡೆಯಲಿದೆ ಎಂದು ಹೇಳಿದ್ದಾರೆ. ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲೂ ಹಂಚಿಕೊಂಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಯುವಕರು ಯಾವುದೇ ಕುಟುಂಬದಲ್ಲಿ ರಾಜಕೀಯ ಹಿನ್ನಲೆ ಇಲ್ಲದವರು ಭಾಗವಹಿಸಬೇಕು. ಈ ಹಿಂದೆ ನಾನು ಕೆಂಪುಕೋಟೆ ಭಾಷಣದಲ್ಲೂ ಈ ಬಗ್ಗೆ ಹೇಳಿದ್ದೇನೆ ಎಂದರು.
ಇದನ್ನೂ ಓದಿ: ಸಾಮಾಜಿಕ ಮಾಧ್ಯಮದಲ್ಲಿ ಅಸಭ್ಯ ವಿಷಯಗಳನ್ನು ತಡೆಯಲು ಕಠಿಣ ಕಾನೂನು ಅಗತ್ಯ: ಸಚಿವ ಅಶ್ವಿನಿ ವೈಷ್ಣವ್
ಇನ್ನು ಪ್ರಧಾನಿ ಮೋದಿ ಅವರು ಇಂದು ಹಂಚಿಕೊಂಡ ಎಕ್ಸ್ ಟ್ವೀಟ್ನಲ್ಲಿ ಯುವ ಸಮೂಹಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಮುನ್ನ, ಆಸಕ್ತಿದಾಯಕ ರಸಪ್ರಶ್ನೆ ಇದೆ, ಅದರಲ್ಲಿ ಭಾಗವಹಿಸಿ ಎಂದು ಕರೆ ನೀಡಿದ್ದಾರೆ. ಈ ವಿಕ್ಷಿತ್ ಭಾರತ್ ಭಾರತದ ಮುಂದಿನ ಯುವ ಸಮೂಹಕ್ಕೆ ವಿಶೇಷ ಕೂಡುಗೆ ಆಗಿದೆ ಎಂದರು. ಈ ರಸ ಪ್ರಶ್ನೆಯಲ್ಲಿ ಭಾಗವಹಿಸಲು ನೀವು ಮಾಡಬೇಕಿರುವುದು ಇಷ್ಟೇ mybharat.gov ಗೆ ಭೇಟಿ ನೀಡಿ ಎಂದು ಎಕ್ಸ್ನಲ್ಲಿ ಹಂಚಿಕೊಂಡಿದ್ದಾರೆ.
This is a very special opportunity for letting your innovative ideas be heard by the topmost…
— Narendra Modi (@narendramodi) November 27, 2024
ವಿಕ್ಷಿತ್ ಭಾರತ್ ಯಂಗ್ ಲೀಡರ್ಸ್ ಡೈಲಾಗ್ ರಸಪ್ರಶ್ನೆಯು ಯುಜಿಸಿ-ಮಾನ್ಯತೆ ಪಡೆದ ಕಾಲೇಜುಗಳು ಮತ್ತು ಸಂಸ್ಥೆಗಳಲ್ಲಿ ಓದುತ್ತಿರುವ ತಮ್ಮ ಎರಡನೇ ಮತ್ತು ಮೂರನೇ ವರ್ಷಗಳಲ್ಲಿ ಪದವಿಪೂರ್ವ ವಿದ್ಯಾರ್ಥಿಗಳಿಗೆ ಮುಕ್ತವಾಗಿದೆ ಎಂದು ಹೇಳಲಾಗಿದೆ. ವಿದ್ಯಾರ್ಥಿಗಳು/ವಿದ್ಯಾರ್ಥಿಗಳಲ್ಲದ ಅವರ ಪ್ರಾಯ 29 ವರ್ಷವಾಗಿರಬೇಕು ಎಂದು ಹೇಳಿದೆ. ಇನ್ನು ಉಳಿದ ಮಾನದಂಡಗಳನ್ನು ಪ್ರಧಾನಿ ಮೋದಿ ಅವರು ಹಂಚಿಕೊಂಡಿರುವ ಟ್ವೀಟ್ನಲ್ಲಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:46 pm, Wed, 27 November 24