Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral News: ಇಬ್ಬರಿಗೆ ಕೈಕೊಟ್ಟು ಮೂರನೆಯವನ ಜೊತೆ ಓಡಿಹೋದ ಹೆಂಡತಿ; ಪೊಲೀಸರೆದುರು ಗಂಡಂದಿರ ಕಣ್ಣೀರು

20 ವರ್ಷದ ಮಹಿಳೆಯು ಕೆಲವು ದಿನಗಳ ಹಿಂದೆ ತನ್ನ 'ಎರಡನೇ' ಗಂಡನ ಮನೆಯನ್ನು ತನ್ನ ಊರಿಗೆ ಹೋಗುವ ನೆಪದಲ್ಲಿ ಹೊರಗೆ ಹೋಗಿದ್ದಳು. ಅಂದಿನಿಂದ ಆಕೆ ಎಲ್ಲೂ ಪತ್ತೆಯಾಗಿರಲಿಲ್ಲ.

Viral News: ಇಬ್ಬರಿಗೆ ಕೈಕೊಟ್ಟು ಮೂರನೆಯವನ ಜೊತೆ ಓಡಿಹೋದ ಹೆಂಡತಿ; ಪೊಲೀಸರೆದುರು ಗಂಡಂದಿರ ಕಣ್ಣೀರು
ಸಾಂದರ್ಭಿಕ ಚಿತ್ರImage Credit source: your tango
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Jun 15, 2022 | 3:49 PM

ನಾಗ್ಪುರ: ಇಬ್ಬರು ಗಂಡಂದಿರನ್ನು ಮದುವೆಯಾದ ಮಹಿಳೆಯೊಬ್ಬಳು ಆ ಇಬ್ಬರಿಗೂ ಕೈಕೊಟ್ಟು ಮೂರನೇ ವ್ಯಕ್ತಿಯ ಜೊತೆ ಓಡಿಹೋಗಿರುವ ಘಟನೆ ಮಹಾರಾಷ್ಟ್ರದಲ್ಲಿ (Maharashtra) ನಡೆದಿದೆ. ಭರೋಸಾ ಸೆಲ್‌ನ ಪೊಲೀಸರ ಬಳಿ ಮೂರನೇ ಪ್ರೇಮಿಯೊಂದಿಗೆ ಓಡಿಹೋದ ತಮ್ಮ ಪತ್ನಿಯನ್ನು ಹುಡುಕಲು ಸಹಾಯ ಮಾಡಬೇಕೆಂದು ಇಬ್ಬರು ಪುರುಷರು ಮನವಿ ಮಾಡಿದ್ದಾರೆ.

20 ವರ್ಷದ ಮಹಿಳೆಯು ಕೆಲವು ದಿನಗಳ ಹಿಂದೆ ತನ್ನ ‘ಎರಡನೇ’ ಗಂಡನ ಮನೆಯನ್ನು ತನ್ನ ಊರಿಗೆ ಹೋಗುವ ನೆಪದಲ್ಲಿ ಹೊರಗೆ ಹೋಗಿದ್ದಳು. ಅಂದಿನಿಂದ ಆಕೆ ಎಲ್ಲೂ ಪತ್ತೆಯಾಗಿರಲಿಲ್ಲ. ಆಕೆ ಸಾಮಾಜಿಕ ಜಾಲತಾಣಗಳ ಮೂಲಕ ಮೂರನೇ ವ್ಯಕ್ತಿಯೊಂದಿಗೆ ಸ್ನೇಹ ಬೆಳೆಸಿದ್ದಳು. ಆತನೊಂದಿಗೆ ಓಡಿಹೋಗಿದ್ದಳು ಎನ್ನಲಾಗಿದೆ.

ಪೊಲೀಸರ ಪ್ರಕಾರ, ಆ ಮಹಿಳೆ ತನ್ನ ಮೊದಲ ಪತಿಯೊಂದಿಗೆ ಪ್ರೇಮ ವಿವಾಹವಾಗಿದ್ದಳು. ಅವರಿಗೆ ಇಬ್ಬರು ಮಕ್ಕಳಿದ್ದರು. ಮದುವೆಯಾದ ನಾಲ್ಕು ವರ್ಷಗಳ ನಂತರ ಆಕೆ ಇನ್ನೊಬ್ಬನನ್ನು ಭೇಟಿಯಾಗಿ, ಎರಡು ವರ್ಷಗಳ ಹಿಂದೆ ನಾಗ್ಪುರದ ಹೊರಗಿನ ದೇವಸ್ಥಾನದಲ್ಲಿ ಮದುವೆಯಾಗಿದ್ದಳು. ಅದಾದ ಬಳಿಕ ಆಕೆ 2ನೇ ಗಂಡನೊಂದಿಗೆ ವಾಸವಾಗಿದ್ದಳು.

ಇದನ್ನೂ ಓದಿ: Murder: ನಿಮ್ಮ ಗಂಡನನ್ನು ಕೊಲ್ಲುವುದು ಹೇಗೆ? ಕಾದಂಬರಿ ಬರೆದು ತನ್ನ ಪತಿಯನ್ನೇ ಕೊಂದ ಲೇಖಕಿಗೆ ಜೀವಾವಧಿ ಶಿಕ್ಷೆ

ಆಕೆಯ ಮೊದಲ ಪತಿ ಮೇಸ್ತ್ರಿಯಾಗಿದ್ದರೆ, ಎರಡನೆಯವರು ಆಪ್ಟಿಕ್ ಫೈಬರ್ ಹಾಕುವ ಕೆಲಸ ಮಾಡುತ್ತಿದ್ದರು ಎಂದು ಹೇಳಲಾಗುತ್ತದೆ. ಭರೋಸಾ ಸೆಲ್‌ನ ಮೂಲಗಳ ಪ್ರಕಾರ, ಮೂರನೇ ಪ್ರೇಮಿಗೆ ಪಾಠ ಕಲಿಸಲು ಇದೀಗ ಆಕೆಯ ಇಬ್ಬರು ಮಾಜಿ ಗಂಡಂದಿರುವ ಒಟ್ಟಿಗೇ ಸೇರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಆಕೆಯ ಎರಡನೇ ಗಂಡ ಮೊದಲ ಪತಿಯನ್ನು ಪತ್ತೆಹಚ್ಚಿ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡುವಂತೆ ಮನವೊಲಿಸಿದ್ದಾನೆ. ಈ ಬಗ್ಗೆ ಭರೋಸಾ ಸೆಲ್‌ನ ಪ್ರಭಾರಿ ಹಿರಿಯ ಇನ್ಸ್‌ಪೆಕ್ಟರ್ ಸೀಮಾ ಸುರ್ವೆ ಮಾತನಾಡಿ, ಎರಡನೇ ಪತಿ ಮಹಿಳೆಯನ್ನು ತನ್ನ ಜೀವನದಲ್ಲಿ ಮರಳಿ ಪಡೆಯಲು ಬಯಸಿದ್ದರು ಆದರೆ ಮೊದಲ ಪತಿ ಸಿದ್ಧರಿರಲಿಲ್ಲ ಎಂದು ಟೈಮ್ಸ್​ ಆಫ್ ಇಂಡಿಯಾ ವರದಿ ಮಾಡಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ