Sign In

By signing in or creating an account, you agree with Associated Broadcasting Company's Terms & Conditions and Privacy Policy.

VK Sasikala: ಶಶಿಕಲಾ ಬೆಂಗಳೂರು – ಚೆನ್ನೈ ಜರ್ನಿ: 23 ಗಂಟೆ ಪ್ರಯಾಣಕ್ಕೆ 200 ಕೋಟಿ ರೂ ಖರ್ಚು?

vk shashikala bengaluru to chennai costs rupees 200 crore ಅಣ್ಣಾಡಿಎಂಕೆ ಪಕ್ಷದಿಂದ ಉಚ್ಛಾಟಿತಗೊಂಡಿರುವ ಶಶಿಕಲಾ ಬೆಂಗಳೂರು ಟು ಚನ್ನೈ 23 ಗಂಟೆ ಜರ್ನಿಗೆ 200 ಕೋಟಿ ರೂ ಖರ್ಚು ವೆಚ್ಚವಾಗಿದೆ ಎಂದು ಅಂದಾಜಿಸಲಾಗಿದೆ. ಅಂದರೆ ಒಂದು ಗಂಟೆಗೆ ಅಂದಾಜು 8 ಕೋಟಿ 60 ಲಕ್ಷ ರೂ ತಗುಲಿರಬಹುದು ಎಂಬ ಲೆಕ್ಕಾಚಾರವೂ ಇದೆ.

VK Sasikala: ಶಶಿಕಲಾ ಬೆಂಗಳೂರು - ಚೆನ್ನೈ ಜರ್ನಿ: 23 ಗಂಟೆ ಪ್ರಯಾಣಕ್ಕೆ 200 ಕೋಟಿ ರೂ ಖರ್ಚು?
ವಿಕೆ ಶಶಿಕಲಾ ಬೆಂಗಳೂರು - ಚನ್ನೈ ಜರ್ನಿ: 23 ಗಂಟೆ ಪ್ರಯಾಣಕ್ಕೆ 200 ಕೋಟಿ ರೂ ಖರ್ಚು?
Follow us
TV9 Web
| Updated By: ganapathi bhat

Updated on:Apr 06, 2022 | 8:01 PM

ಚೆನ್ನೈ:ತಮಿಳುನಾಡು ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ನಿಕಟವರ್ತಿ ವಿ.ಕೆ. ಶಶಿಕಲಾ ಇತ್ತೀಚೆಗೆ ಜೈಲುವಾಸದಿಂದ ಮುಕ್ತಿ ಪಡೆದು 23 ಗಂಟೆಗಳ ಪ್ರಯಾಣದ ಬಳಿಕ, ಬೆಂಗಳೂರಿನಿಂದ ಚೆನ್ನೈ ತಲುಪಿದ್ದಾರೆ. ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿ ಬೆಂಗಳೂರಿನಲ್ಲಿ ನಾಲ್ಕು ವರ್ಷಗಳ ಸೆರೆವಾಸ ಅನುಭವಿಸಿ, ಕೊರೊನಾ ಚಿಕಿತ್ಸೆಯನ್ನೂ ಪಡೆದ ನಂತರ ತಮಿಳುನಾಡು ಚಿನ್ನಮ್ಮ ತವರೂರು ಸೇರಿದ್ದಾರೆ.

ಅಣ್ಣಾಡಿಎಂಕೆ ಪಕ್ಷದಿಂದ (AIADMK) ಉಚ್ಛಾಟಿತಗೊಂಡಿರುವ ನಾಯಕಿ ಶಶಿಕಲಾ ಬೆಂಗಳೂರು ಟು ಚನ್ನೈ 23 ಗಂಟೆಗಳ ಈ ಜರ್ನಿಗೆ 200 ಕೋಟಿ ರೂ ಖರ್ಚು ವೆಚ್ಚವಾಗಿದೆ ಎಂದು ಅಂದಾಜಿಸಲಾಗಿದೆ. ಅಂದರೆ ಒಂದು ಗಂಟೆಗೆ ಅಂದಾಜು 8 ಕೋಟಿ 60 ಲಕ್ಷ ರೂಪಾಯಿ ತಗುಲಿರಬಹುದು ಎಂಬ ಲೆಕ್ಕಾಚಾರವೂ ಇದೆ.

vk shashikala bengaluru to chennai costs rs 200 cr 1

ವಿಕೆ ಶಶಿಕಲಾ ಬೆಂಗಳೂರು – ಚನ್ನೈ 23 ಗಂಟೆ ಪ್ರಯಾಣ

ಕರ್ನಾಟಕ ರಾಜಧಾನಿ ಬೆಂಗಳೂರಿನಿಂದ ಫೆಬ್ರವರಿ 8ರ ಮುಂಜಾನೆ ವೇಳೆ ಚೆನ್ನೈಗೆ ಹೊರಟಿದ್ದ ಶಶಿಕಲಾ, ಫೆ. 9 ಮುಂಜಾನೆ 7 ಗಂಟೆಯ ಸುಮಾರಿಗೆ ಚೆನ್ನೈನ ಟಿ ನಗರ್ ತಲುಪಿದ್ದರು. ದಿವಂಗತ ಜಯಲಲಿತಾ ಆಪ್ತೆ, 65 ವರ್ಷ ವಯಸ್ಸಿನ ಶಶಿಕಲಾಗೆ ದಾರಿಯುದ್ದಕ್ಕೂ ಅಭಿಮಾನಿಗಳು ಅದ್ಧೂರಿ ಸ್ವಾಗತ ಕೋರಿದ್ದರು.

ಚೆನ್ನೈನಲ್ಲಿ ನಿವಾಸಕ್ಕೆ ತೆರಳುವ ಮುನ್ನ, ರಾಮಪುರಂನಲ್ಲಿರುವ ಎಐಎಡಿಎಂಕೆ ಸಂಸ್ಥಾಪಕ ದಿವಂಗತ ಎಂ.ಜಿ. ರಾಮಚಂದ್ರನ್ ನಿವಾಸಕ್ಕೆ ಶಶಿಕಲಾ ಭೇಟಿ, ಎಂ.ಜಿ.ಆರ್. ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದ್ದರು. ಶಶಿಕಲಾಗೆ ಅಳಿಯ ಹಾಗೂ AMMK ನಾಯಕ ಟಿ.ಟಿ.ವಿ. ದಿನಕರನ್ ಸಾಥ್ ನೀಡಿದ್ದರು.

ಶಶಿಕಲಾ ಚೆನ್ನೈಗೆ ತೆರಳುವ ವೇಳೆ ಹಲವೆಡೆ ಭರ್ಜರಿ ಸ್ವಾಗತ ದೊರೆತಿತ್ತು. ಸುಮಾರು 50 ಕಡೆಗಳಲ್ಲಿ ಅಪಾರ ಜನಸ್ತೋಮ ಸಂಭ್ರಮಾಚರಣೆಯಲ್ಲಿ ಭಾಗಿಯಾಗಿದ್ದರು. ಶಶಿಕಲಾ ಭಾವಚಿತ್ರ ಹಾಗೂ ಶಶಿಕಲಾಗೆ ಸ್ವಾಗತ ಕೋರುವ ಘೋಷಣೆಗಳನ್ನು ಹೊತ್ತ ಬ್ಯಾನರ್​ಗಳು ಡ್ರೋನ್ ಕ್ಯಾಮರಾ ಕಣ್ಣಿಗೆ ಬಿದ್ದಿದ್ದವು.

ದಾರಿಯುದ್ದಕ್ಕೂ ಅಲ್ಲಲ್ಲಿ ನೂರಾರು ಜನ ಅಭಿಮಾನಿಗಳು, ಬೆಂಬಲಿಗರು ಶಶಿಕಲಾರನ್ನು ಸ್ವಾಗತಿಸಿದ್ದರು. AIADMK ಪಕ್ಷದ ಶಾಲು ಹೊದ್ದುಕೊಂಡು ಕೆಲವಾರು ದೇವಾಲಯಗಳಿಗೆ ಅವರು ಭೇಟಿಯಿತ್ತಿದ್ದರು. ಹೊಸೂರಿನ ಮುತ್ತು ಮಾರಿಯಮ್ಮನ ದೇವಸ್ಥಾನಕ್ಕೂ ಭೇಟಿ ನೀಡಿ ದರ್ಶನ ಪಡೆದಿದ್ದರು.

ನಾಲ್ಕು ವರ್ಷಗಳ ಹಿಂದೆ, 2017ರ ಫೆಬ್ರವರಿಯಲ್ಲಿ ಭ್ರಷ್ಟಾಚಾರದ ಆರೋಪದಲ್ಲಿ ಶಶಿಕಲಾ ಜೈಲು ಸೇರಿದ್ದರು. 66.65 ಕೋಟಿ ರೂ.ಗಳ ಅಕ್ರಮ ಆಸ್ತಿ ಗಳಿಕೆಯ ಅಪರಾಧದಿಂದ ಪರಪ್ಪನ ಅಗ್ರಹಾರದಲ್ಲಿ ದಿನಕಳೆಯುವಂತಾಗಿತ್ತು. ಆನಂತರ, ಜನವರಿ 27ರಂದು ಶಶಿಕಲಾ ಬಂಧಮುಕ್ತರಾಗಿದ್ದರು.

ಇದನ್ನೂ ಓದಿ: Tamil Nadu Politics: ರಾಜಕೀಯ ವಿಶ್ಲೇಷಣೆ | ಶಶಿಕಲಾ ಆಡೋದು ಗೆಲ್ಲುವ ಆಟವೋ? ಒಡೆಯುವ ಆಟವೋ?

Tamil Nadu Politics: ರಾಜಕೀಯ ವಿಶ್ಲೇಷಣೆ | ಶಶಿಕಲಾ ಬದಲು ದಿನಕರನ್​ ಈಗ ಎಐಎಡಿಎಂಕೆ ನಾಯಕರ ಟಾರ್ಗೆಟ್; ಏನಿದು ಹೊಸ ಬೆಳವಣಿಗೆ?

Published On - 11:12 am, Sat, 13 February 21