ಕೋಲ್ಕತ್ತಾ ಸರ್ಕಾರಿ ಆಸ್ಪತ್ರೆಯಲ್ಲಿ ತಮಗಾದ ಕಹಿ ಅನುಭವ ಬಿಚ್ಚಿಟ್ಟ ಸಿಎಂ ಮಮತಾ ಬ್ಯಾನರ್ಜಿ
ಕೋಲ್ಕತ್ತಾ ಸರ್ಕಾರಿ ಆಸ್ಪತ್ರೆಯಲ್ಲಿ ತಮಗಾದ ಕಹಿ ಅನುಭವವನ್ನು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ(Mamata Banerjee) ತೆರೆದಿಟ್ಟಿದ್ದಾರೆ. ಮಮತಾ ಬ್ಯಾನರ್ಜಿಯವರಿಗೆ ಆಗಿದ್ದೇ ಒಂದು ಅಲ್ಲಿನ ವೈದ್ಯರು ಕೊಟ್ಟ ಚಿಕಿತ್ಸೆಯೇ ಬೇರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಕೋಲ್ಕತ್ತಾ ಸರ್ಕಾರಿ ಆಸ್ಪತ್ರೆಯಲ್ಲಿ ತಮಗಾದ ಕಹಿ ಅನುಭವವನ್ನು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ(Mamata Banerjee) ತೆರೆದಿಟ್ಟಿದ್ದಾರೆ. ಮಮತಾ ಬ್ಯಾನರ್ಜಿಯವರಿಗೆ ಆಗಿದ್ದೇ ಒಂದು ಅಲ್ಲಿನ ವೈದ್ಯರು ಕೊಟ್ಟ ಚಿಕಿತ್ಸೆಯೇ ಬೇರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಕೋಲ್ಕತ್ತಾದ ಸರ್ಕಾರಿ ಆಸ್ಪತ್ರೆಯಲ್ಲಿ ಎಸ್‌ಎಸ್‌ಕೆಎಂನಲ್ಲಿ ತಪ್ಪಾದ ಚಿಕಿತ್ಸೆ ಪಡೆದಿದ್ದಾರೆ.
ನಾನು 10-12 ದಿನಗಳಿಂದ IV ಚುಚ್ಚುಮದ್ದನ್ನು ಪಡೆಯುತ್ತಿದ್ದೇನೆ, ತಪ್ಪಾದ ಚಿಕಿತ್ಸೆಯಿಂದಾಗಿ, ನನ್ನ ಕಾಲಿನ ಸೋಂಕು ಸೆಪ್ಟಿಕ್ ಆಗಿದೆ ಎಂದರು.
ಮತ್ತಷ್ಟು ಓದಿ: ಬಂಗಾಳಕ್ಕೆ ಟಾಟಾ ಪೆಟ್ಟು; ನ್ಯಾನೋ ಫ್ಯಾಕ್ಟರಿ ಎತ್ತಂಗಡಿಗೆ 766 ಕೋಟಿ ಪರಿಹಾರ; ಕೋರ್ಟ್ ತೀರ್ಪು
ಪಶ್ಚಿಮ ಬಂಗಾಳ ಸಿಎಂ ಕಾಲಿಗೆ ಗಾಯ ಹೆಲಿಕಾಪ್ಟರ್ ತುರ್ತು ಲ್ಯಾಂಡಿಂಗ್ ವೇಳೆ ಮುಖ್ಯಮಂತ್ರಿ ಕಾಲಿಗೆ ಗಾಯವಾಗಿತ್ತು. ನಂತರ, ಸ್ಪೇನ್‌ಗೆ ಭೇಟಿ ನೀಡಿದಾಗ ಅವರ ಕಾಲಿನ ಗಾಯವು ಉಲ್ಬಣಗೊಂಡಿತ್ತು.ವರು ಸ್ಪೇನ್ ಮತ್ತು ದುಬೈಗೆ ಪ್ರಯಾಣಿಸಿದ ನಂತರ ಸೆಪ್ಟೆಂಬರ್ 23 ರಂದು ಸಂಜೆ ಕೋಲ್ಕತ್ತಾಗೆ ಮರಳಿದರು.
ಸೆಪ್ಟೆಂಬರ್ 24ರಂದು ಆಕೆಯ ಕಾಲಿಗೆ ಎಸ್ ಎಸ್ ಕೆಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆಸ್ಪತ್ರೆಗೆ ದಾಖಲಿಸುವಂತೆ ವೈದ್ಯರು ಸಲಹೆ ನೀಡಿದರೂ ಮುಖ್ಯಮಂತ್ರಿಗಳು ಮನೆಯಲ್ಲಿಯೇ ಚಿಕಿತ್ಸೆ ಪಡೆಯಲು ಆದ್ಯತೆ ನೀಡಿದ್ದರು.
ಕಾಲಿನ ಸಮಸ್ಯೆಯಿಂದಾಗಿ ಹೆಚ್ಚು ಕಾಲ ಮನೆಯಲ್ಲೇ ಇರಬೇಕಾಯಿತು. ಅವರ ಆರೋಗ್ಯದ ಹೊರತಾಗಿಯೂ, ಅವರು ಮನೆಯಿಂದಲೇ ಎಲ್ಲಾ ಆಡಳಿತ ಮತ್ತು ಪಕ್ಷದ ಚಟುವಟಿಕೆಗಳನ್ನು ನಿರ್ವಹಿಸುತ್ತಿದ್ದರು.
ಮಮತಾ ಬ್ಯಾನರ್ಜಿ ಆರೋಗ್ಯ ಸಚಿವೆ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಪ್ರತಿಪಕ್ಷ ನಾಯಕ ಸುವೇಂದು ಅಧಿಕಾರಿ ಒತ್ತಾಯಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:55 am, Thu, 2 November 23