ವಿವಾಹೇತರ ಸಂಬಂಧ ಆರೋಪ, ರಸ್ತೆಯಲ್ಲಿ ಮಹಿಳೆಗೆ ಥಳಿತ, ಮನನೊಂದು ಆತ್ಮಹತ್ಯೆ
ಮಹಿಳೆಯ ಮೇಲೆ ಅಕ್ರಮ ಸಂಬಂಧದ ಅನುಮಾನ ವ್ಯಕ್ತಪಡಿಸಿದ ಸ್ಥಳೀಯರು ಆಕೆಯನ್ನು ಸಾರ್ವಜನಿಕವಾಗಿ ಥಳಿಸಿದ ಪರಿಣಾಮ ಆಕೆ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎನ್ನುವ ಮಾಹಿತಿ ಲಭ್ಯವಾಗಿದೆ. ಆಕೆ ಕೆಲ ದಿನಗಳಿಂದ ನಾಪತ್ತೆಯಾಗಿದ್ದಳು, ಮನೆಗೆ ವಾಪಸ್ ಹಿಂದಿರುಗುವಾಗ ಮಹಿಳೆಯರ ಗುಂಪು ಹಲ್ಲೆ ನಡೆಸಿತ್ತು. ಈ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.
ವಿವಾಹೇತರ ಸಂಬಂಧ ಹೊಂದಿದ್ದಾಳೆ ಎಂದು ಆರೋಪಿಸಿ ಮಹಿಳೆಗೆ ಸಾರ್ವಜನಿಕವಾಗಿ ಗುಂಪೊಂದು ಥಳಿಸಿದ ಪರಿಣಾಮ ಮನನೊಂದು ಆಕೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ. ಕಳೆದ ವಾರ ಮಹಿಳೆ ನಾಪತ್ತೆಯಾಗಿದ್ದಳು, ಅದೇ ಊರಿನ ಯುವಕನೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದಕ್ಕೆ ಆಕೆ ಮನೆ ಬಿಟ್ಟು ಹೋಗಿದ್ದಳು ಎಂದು ಆರೋಪಿಸಿ ಸ್ಥಳೀಯ ಮಹಿಳೆಯರ ಗುಂಪು ಸಾರ್ವಜನಿಕವಾಗಿ ಥಳಿಸಿದೆ.
ಸಂತ್ರಸ್ತೆಯ ಪತಿ ಮನೆಗೆ ಹಿಂದಿರುಗಿದಾಗ ಮಹಿಳೆಯರ ಗುಂಪು ತನ್ನೊಂದಿಗೂ ಕೆಟ್ಟದಾಗಿ ನಡೆಸಿಕೊಂಡಿದೆ. ಮಹಿಳೆಯ ಪತಿ ಮಧ್ಯ ಪ್ರವೇಶಿಸಲು ಯತ್ನಿಸಿದಾಗ ಆತನನ್ನು ಕೂಡ ಥಳಿಸಲಾಗಿದೆ. ಸೋಮವಾರ ರಾತ್ರಿ ಮಹಿಳೆ ಕ್ರಿಮಿನಾಶಕ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮಹಿಳೆಯ ಪತಿ ದೂರಿನಲ್ಲಿ ತಿಳಿಸಿದ್ದಾರೆ. ತನಿಖೆ ಆರಂಭಿಸಲಾಗಿದೆ ಎಂದು ಸಿಲಿಗುರಿ ಪೊಲೀಸ್ ಕಮಿಷನರೇಟ್‌ನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ವಿಚಾರಣೆಗಾಗಿ ನಾಲ್ವರನ್ನು ವಶಕ್ಕೆ ಪಡೆಯಲಾಗಿದೆ.
ಹಿಂದಿನ ಪ್ರಕರಣದಂತೆ ಈ ಪ್ರಕರಣದಲ್ಲೂ ಟಿಎಂಸಿ ನಾಯಕನ ವಿರುದ್ಧ ಆರೋಪ ಮಾಡಲಾಗಿದೆ. ಜೂನ್ 29 ರಂದು ಮಹಿಳೆಗೆ ಥಳಿಸಲಾಗಿತ್ತು. ಇದಕ್ಕೂ ಒಂದು ದಿನ ಮೊದಲು, ಜೂನ್ 28 ರಂದು, ಪಶ್ಚಿಮ ಬಂಗಾಳದಲ್ಲಿ ಮತ್ತೊಂದು ರೀತಿಯ ಪ್ರಕರಣ ವರದಿಯಾಗಿದೆ.
ಮತ್ತಷ್ಟು ಓದಿ: Viral Video: ನನ್ನ ಪ್ರಿಯಕರ ನಮ್ಮ ಜತೆ ಇರಬೇಕು ಎಂದು ಟ್ರಾನ್ಸ್ ಫಾರ್ಮರ್ ಕಂಬವೇರಿದ 3 ಮಕ್ಕಳ ತಾಯಿ
ಆರೋಪಿಗಳು ರಾಜ್ಯದ ಆಡಳಿತ ಪಕ್ಷ ಟಿಎಂಸಿಯೊಂದಿಗೆ ಸಂಬಂಧ ಹೊಂದಿದ್ದಾರೆ ಎಂದು ಹೇಳಲಾಗಿದೆ.
ಜೂನ್ 28ರಂದು ಅಂಥದ್ದೇ ಘಟನೆ ನಡೆದಿತ್ತು ಜೂನ್ 28 ರಂದು ಉತ್ತರ ದಿನಾಜ್‌ಪುರ ಜಿಲ್ಲೆಯ ಚೋಪ್ರಾ ಬ್ಲಾಕ್‌ನ ಲಖಿಪುರ ಗ್ರಾಮ ಪಂಚಾಯತ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ವಿವಾಹೇತರ ಸಂಬಂಧ ಹೊಂದಿರುವ ಆರೋಪದ ಮೇಲೆ ಮಹಿಳೆಯೊಬ್ಬರನ್ನು ಕಾಂಗರೂ ನ್ಯಾಯಾಲಯದಲ್ಲಿ ಅಮಾನುಷವಾಗಿ ಥಳಿಸಲಾಗಿದೆ.
ಆರೋಪಿ ಟಿಎಂಸಿ ನಾಯಕ ತಜಿಮುಲ್ ಇಸ್ಲಾಂ ಅಲಿಯಾಸ್ ಜೆಸಿಬಿಯನ್ನು ಪೊಲೀಸರು ಬಂಧಿಸಿ 5-5 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದಾರೆ. ಸಂತ್ರಸ್ತೆ ಪಶ್ಚಿಮ ಬಂಗಾಳದ ರಾಜ್ಯಪಾಲ ಸಿವಿ ಆನಂದ್ ಬೋಸ್ ಅವರನ್ನು ಭೇಟಿ ಮಾಡಲು ನಿರಾಕರಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ