ಏನಿದು ಅಸಹ್ಯ, ಬೇಕರಿಯಲ್ಲಿ ಬಾಲಕಿಗೆ ಮುತ್ತಿಟ್ಟು, ಬಾಯೊಳಗೆ ಬೆರಳು ಹಾಕಿದ ವ್ಯಕ್ತಿ
ಬೇಕರಿಯೊಂದರಲ್ಲಿ ಅಜ್ಜಿಯ ಜತೆ ನಿಂತಿದ್ದ ಬಾಲಕಿಗೆ ವ್ಯಕ್ತಿಯೊಬ್ಬ ಲೈಂಗಿಕ ಕಿರುಕುಳ ನೀಡಿರುವ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ. ಆ ವ್ಯಕ್ತಿ ಬಾಲಕಿಗೆ ಕೆನ್ನೆಗೆ ಮುತ್ತಿಟ್ಟು ಬಳಿಕ, ಆಕೆಯ ಬಾಯಿಗೆ ಬೆರಳು ಹಾಕಿ ಅಸಹ್ಯಕರವಾಗಿ ನಡೆದುಕೊಂಡಿದ್ದಾನೆ. ಇದೀಗ ಪೋಕ್ಸೊ ಕಾಯ್ದೆಯಡಿ ಆತನ ವಿರುದ್ಧ ಪ್ರಕರಣ ದಾಖಲಾಗಿದೆ. ಅಷ್ಟೆಲ್ಲಾ ನಡೆದರೂ ಅಲ್ಲೇ ನಿಂತಿದ್ದ ಅಜ್ಜಿಗಾಗಲಿ ಅಥವಾ ಬೇಕರಿ ಸುತ್ತಮುತ್ತಲಿದ್ದವರಿಗಾಗಿ ಏನೂ ಗೊತ್ತೇ ಆಗಿರಲಿಲ್ಲ.

ಪಶ್ಚಿಮ ಬಂಗಾಳ, ಆಗಸ್ಟ್ 25: ಈ ಇಂಟರ್ನೆಟ್ ಯುಗದಲ್ಲಿ ಎಲ್ಲೆಲ್ಲೂ ಸಿಸಿಟಿವಿ ಕ್ಯಾಮರಾಗಳು ಇದ್ದೇ ಇರುತ್ತವೆ. ಹಾಗೆಯೇ ಎಲ್ಲರ ಬಳಿಯೂ ಮೊಬೈಲ್ ಫೋನ್ಗಳು, ಫೇಸ್ಬುಕ್(FaceBook), ಎಕ್ಸ್ನಂತಹ ಸಾಮಾಜಿಕ ಮಾಧ್ಯಮಗಳು ಕೂಡ ಇದ್ದೇ ಇರುತ್ತವೆ. ಇದರ ಹೊರತಾಗಿಯೂ ಕೆಲವು ಕಾನೂನಿಗೆ ಹೆದರದ ರಾಕ್ಷಸರಿದ್ದಾರೆ.
ಪಶ್ಚಿಮ ಬಂಗಾಳದ ಬೇಕರಿಯೊಂದರಲ್ಲಿ ಅಸಹ್ಯಕರ ಘಟನೆಯೊಂದು ನಡೆದಿದೆ. ಅಜ್ಜಿ ಜತೆ ನಿಂತಿದ್ದ ಬಾಲಕಿಗೆ ವ್ಯಕ್ತಿಯೊಬ್ಬ ಮುತ್ತಿಟ್ಟಿದ್ದಲ್ಲದೆ ಆಕೆಯ ಬಾಯೊಳಗೆ ಬೆರಳು ಹಾಕಿರುವ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದ್ದು, ಜನರು ಆತನಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಮೂರನೇ ತರಗತಿ ವಿದ್ಯಾರ್ಥಿಯನ್ನು ವ್ಯಕ್ತಿಯೊಬ್ಬ ಸಾರ್ವಜನಿಕವಾಗಿ ಚುಂಬಿಸುತ್ತಿರುವುದು ಮತ್ತು ಮುತ್ತಿಡುತ್ತಿರುವ ದೃಶ್ಯ ಆತಂಕಕಾರಿಯಾಗಿದೆ.
ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾದ ಬಳಿಕ ಪೊಲೀಸರು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಆರೋಪಿಗಾಗಿ ಹುಡುಕಾಟ ನಡೆಸಿದ್ದಾರೆ. ಹೂಗ್ಲಿಯ ಉತ್ತರಪಾರಾದಲ್ಲಿರುವ ಬೇಕರಿಯಲ್ಲಿ ಘಟನೆ ನಡೆದಿದೆ. ಈ ಘಟನೆ ನಡೆದಾಗ ಬಾಲಕಿ ತನ್ನ ಅಜ್ಜಿಯೊಂದಿಗೆ ಅಂಗಡಿಗೆ ಬಂದಿದ್ದಳು. ವ್ಯಕ್ತಿಯೊಬ್ಬ ಬಂದು ಬಾಲಕಿಗೆ ಕಿರುಕುಳ ನೀಡಲು ಪ್ರಾರಂಭಿಸಿದ್ದ.
ಮತ್ತಷ್ಟು ಓದಿ: Video: ಬಿಹಾರದಲ್ಲಿ ಬೈಕ್ ಜಾಥಾ ವೇಳೆ ಸಂಸದ ರಾಹುಲ್ ಗಾಂಧಿ ಕೆನ್ನೆಗೆ ಮುತ್ತಿಟ್ಟ ವ್ಯಕ್ತಿ
ವಿಡಿಯೋದಲ್ಲಿ ಆ ವ್ಯಕ್ತಿ ಬಾಲಕಿಯ ತಲೆ ಮೇಲೆ ಕೈ ನೇವರಿಸಿ ಬಳಿಕ ಆಕೆಯ ಕೆನ್ನೆಯನ್ನು ಮುಟ್ಟುವುದನ್ನು ಕಾಣಬಹುದು. ಅವನು ಆಕೆಯ ಕೆನ್ನೆಗೆ ಮುತ್ತಿಡುತ್ತಾನೆ. ಬಳಿಕ ಆಕೆಯ ತುಟಿಗೆ ಮುತ್ತಿಡಲು ಪ್ರಯತ್ನಿಸುತ್ತಿರುವಾಗ ಆಕೆ ಆತನಿಂದ ಹಿಂದೆ ಸರಿಯುತ್ತಾಳೆ.
ಅಂಗಡಿಗೆ ತುಂಬಾ ಜನರು ಬಂದು ಹೋಗುತ್ತಾರೆ. ಆದರೆ ಇಲ್ಲಿ ಏನೋ ತಪ್ಪಾಗುತ್ತಿದೆ ಎನ್ನುವ ಅರಿವು ಯಾರಿಗೂ ಇರುವುದಿಲ್ಲ.ಬಳಿಕ ಆ ವ್ಯಕ್ತಿ ಆ ಬಾಲಕಿಯ ಬಾಯೊಳಗೆ ಬೆರಳಿಡುತ್ತಿರುವ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




