WNV: ಕೊವಿಡ್ ಬೆನ್ನಲ್ಲೇ ರಷ್ಯಾದಲ್ಲಿ ಆತಂಕ ಹೆಚ್ಚಿಸಿದೆ ವೆಸ್ಟ್ ನೈಲ್ ವೈರಸ್; ಏನಿದು ಹೊಸ ರೋಗ?

West Nile Virus | ಸೋಂಕಿತ ಸೊಳ್ಳೆಗಳಿಂದ ಹರಡುವ ಡಬ್ಲುಎನ್​ವಿ ರೋಗ ಸಾಂಕ್ರಾಮಿಕ ರೋಗವಾಗಿದೆ. ಝಿಕಾ, ಡೆಂಗ್ಯು, ಹಳದಿ ಜ್ವರದ ವೈರಸ್​ಗಳಿಗೂ ಈ ವೆಸ್ಟ್ ನೈಲ್ ವೈರಸ್ ರೋಗಕ್ಕೂ ಸಾಮ್ಯತೆಯಿದೆ.

WNV: ಕೊವಿಡ್ ಬೆನ್ನಲ್ಲೇ ರಷ್ಯಾದಲ್ಲಿ ಆತಂಕ ಹೆಚ್ಚಿಸಿದೆ ವೆಸ್ಟ್ ನೈಲ್ ವೈರಸ್; ಏನಿದು ಹೊಸ ರೋಗ?
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಸುಷ್ಮಾ ಚಕ್ರೆ

Updated on:Aug 30, 2021 | 7:47 PM

ನವದೆಹಲಿ: ಈಗಾಗಲೇ ಭಾರತದಲ್ಲಿ ಕೊವಿಡ್ 3ನೇ ಅಲೆಯ (Covid 3rd Wave) ಭೀತಿ ಶುರುವಾಗಿದೆ. ವಿಶ್ವಾದ್ಯಂತ ಕೊರೊನಾ (Coronavirus Pandemic) ಅಟ್ಟಹಾಸ ಮುಂದುವರೆದಿದೆ. ಕೊವಿಡ್ ರೂಪಾಂತರಿ ವೈರಸ್​ಗಳು ಕೂಡ ಎಲ್ಲೆಡೆ ಹರಡುತ್ತಿವೆ. ಇದೆಲ್ಲದರ ನಡುವೆ ರಷ್ಯಾದಲ್ಲಿ ವೆಸ್ಟ್ ನೈಲ್ ವೈರಸ್ (WNV) ಕಾಣಿಸಿಕೊಂಡಿದ್ದು, ಈ ಸೋಂಕು ವ್ಯಾಪಕವಾಗಿ ಹರಡುವ ಸಾಧ್ಯತೆಯಿದೆ ಎಂದು ರಷ್ಯಾ ಎಚ್ಚರಿಕೆ ನೀಡಿದೆ. ತಂಪಾದ ವಾತಾವರಣದಲ್ಲಿ ಹರಡುವ ಈ ವೆಸ್ಟ್ ನೈಲ್ ವೈರಸ್ (West Nile ಮುಖ್ಯವಾಗಿ ಸೋಂಕಿತ ಸೊಳ್ಳೆಗಳಿಂದ ಎಲ್ಲೆಡೆ ಹರಡುತ್ತದೆ. ಇದು ಕೂಡ ಕೊರೊನಾ ರೀತಿಯ ಸಾಂಕ್ರಾಮಿಕ ರೋಗವಾಗಿದೆ.

ಈ ವರ್ಷ ರಷ್ಯಾದಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ವೆಸ್ಟ್ ನೈಲ್ ವೈರಸ್ ಹರಡುವ ಸಾಧ್ಯತೆ ಹೆಚ್ಚಾಗಿದೆ. ರಷ್ಯಾದಲ್ಲಿ ದಾಖಲಾಗಿರುವ ಡಬ್ಲುಎನ್​ವಿ ಕೇಸುಗಳ ಪೈಕಿ ಶೇ. 80ರಷ್ಟು ಪ್ರಕರಣಗಳು ರಷ್ಯಾದ ಸೌತ್​ವೆಸ್ಟ್​ ಭಾಗದಲ್ಲಿಯೇ ದಾಖಲಾಗಿವೆ. ಸೋಂಕಿತ ಸೊಳ್ಳೆಗಳಿಂದ ಹರಡುವ ಡಬ್ಲುಎನ್​ವಿ ರೋಗ ಸಾಂಕ್ರಾಮಿಕ ರೋಗವಾಗಿದೆ. ಇದು ಸೋಂಕಿತ ಸೊಳ್ಳೆಗಳಿಂದ ಹಕ್ಕಿಗಳಿಗೆ ಹರಡಿ, ಹಕ್ಕಿಗಳಿಂದ ಮನುಷ್ಯರಿಗೆ ಹರಡುತ್ತದೆ. ಝಿಕಾ, ಡೆಂಗ್ಯು, ಹಳದಿ ಜ್ವರದ ವೈರಸ್​ಗಳಿಗೂ ಈ ವೆಸ್ಟ್ ನೈಲ್ ವೈರಸ್ ರೋಗಕ್ಕೂ ಸಾಮ್ಯತೆಯಿದೆ.

ಕ್ಯುಲೆಕ್ಸ್​ ಎಂಬ ವಿಧದ ಜಾತಿಯ ಸೊಳ್ಳೆಗಳ ಮೂಲಕ ಈ ಹೊಸ ರೋಗ ಹರಡುತ್ತದೆ. ವೆಸ್ಟ್ ನೈಲ್ ವೈರಸ್ ರೋಗ ತಗುಲುವ ಮನುಷ್ಯರಿಗೆ ನರ ಸಂಬಂಧಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಕೊರೊನಾದಂತೆ ವೆಸ್ಟ್ ನೈಲ್ ವೈರಸ್​ ರೋಗದಲ್ಲಿ ಕೂಡ ಕೆಲವೊಮ್ಮೆ ರೋಗ ಲಕ್ಷಣಗಳು ಕಾಣಿಸಿದರೆ ಇನ್ನು ಕೆಲವೊಮ್ಮೆ ರೋಗ ಲಕ್ಷಣಗಳು ಗೋಚರವಾಗುವುದಿಲ್ಲ. ಸಾಮಾನ್ಯವಾಗಿ ಈ ಸೋಂಕು ಕಾಣಿಸಿಕೊಳ್ಳುವ ಜನರಲ್ಲಿ ಜ್ವರ, ಮೈ ಕೈ ನೋವು, ತಲೆ ನೋವು, ಚರ್ಮದ ತುರಿಕೆಯಂತಹ ರೋಗ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ ಎಂದು ಹಿಂದುಸ್ತಾನ್ ಟೈಮ್ಸ್ ವರದಿ ಮಾಡಿದೆ.

ಇದನ್ನೂ ಓದಿ: ಕೇರಳದಿಂದ ಕರ್ನಾಟಕಕ್ಕೆ ಪ್ರವೇಶಿಸಲು ಕೊವಿಡ್ ನೆಗೆಟಿವ್ ನಕಲಿ ವರದಿ: ಒಟ್ಟು 7 ಜನರ ಬಂಧನ

TV9 Kannada Exclusive: ಅಫ್ಘಾನಿಸ್ತಾನದಲ್ಲಿಯೂ ಕೊವಿಡ್ ಇದೆ, ನಿಮಗೆ ನೆನಪಿದೆಯೇ?

(West Nile Virus Symptoms: Russia warns of increase in cases of West Nile Virus What is WNV)

Published On - 7:43 pm, Mon, 30 August 21

ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು