ಭಾರತ ಚೀನಾದ ಬೆದರಿಕೆಯನ್ನು ಅರ್ಥಮಾಡಿಕೊಂಡಿಲ್ಲ ಎಂಬ ರಾಹುಲ್ ಹೇಳಿಕೆಗೆ ಖಡಕ್ ಉತ್ತರ ನೀಡಿದ ಜೈಶಂಕರ್

Rashmi Kallakatta

|

Updated on: Mar 18, 2023 | 3:00 PM

ಮಿಲಿಟರಿ ಬೆದರಿಕೆಗಳನ್ನು ಭಾರತ ಹೇಗೆ ಎದುರಿಸಬೇಕು ಎಂದು ಕೇಳಿದಾಗ, ಬೆದರಿಕೆಯ ಸ್ವರೂಪಕ್ಕೆ ಭಾರತವು ಮಿಲಿಟರಿಯಾಗಿ ಪ್ರತಿಕ್ರಿಯಿಸುವ ಅಗತ್ಯವಿದೆ ಎಂದು ಗಾಂಧಿ ಹೇಳಿದ್ದರು. ಜೈಶಂಕರ್ ಮತ್ತು ಸರ್ಕಾರವು ಚೀನಾದಿಂದ ನಿಜವಾದ ಬೆದರಿಕೆಯನ್ನು ಅರ್ಥಮಾಡಿಕೊಂಡಿಲ್ಲ

ಭಾರತ ಚೀನಾದ ಬೆದರಿಕೆಯನ್ನು ಅರ್ಥಮಾಡಿಕೊಂಡಿಲ್ಲ ಎಂಬ ರಾಹುಲ್ ಹೇಳಿಕೆಗೆ ಖಡಕ್ ಉತ್ತರ ನೀಡಿದ ಜೈಶಂಕರ್
ಎಸ್ ಜೈಶಂಕರ್

ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್(S Jai Shankar) ಅವರು ಭಾರತಕ್ಕೆ ಚೀನಾ (China) ಒಡ್ಡುತ್ತಿರುವ ಬೆದರಿಕೆಯನ್ನು “ಅರ್ಥಮಾಡಿಕೊಂಡಿಲ್ಲ” ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಜೈಶಂಕರ್ ಯಾರೋ ಚೀನಾದ ಮೇಲೆ ಜೊಲ್ಲು ಸುರಿಸುವುದನ್ನು ಭಾರತದ ಪ್ರಜೆಯಾಗಿ ನೋಡುವುದು ಕಷ್ಟವಾಗುತ್ತಿದೆ ಎಂದಿದ್ದಾರೆ. ನವದೆಹಲಿಯಲ್ಲಿ ನಡೆದ ಇಂಡಿಯಾ ಟುಡೇ ಕಾನ್‌ಕ್ಲೇವ್‌ನಲ್ಲಿ ಮಾತನಾಡಿದ ಜೈಶಂಕರ್, ಪಾಂಡಾವೊಂದು ಚೀನಾದ ಗಿಡುಗವಾಗಲು ಪ್ರಯತ್ನಿಸಿದರೆ ಅದು ಹಾರುವುದಿಲ್ಲ ಎಂದು ಹೇಳಿದ್ದಾರೆ.  ಈ ತಿಂಗಳ ಆರಂಭದಲ್ಲಿ ಲಂಡನ್‌ನಲ್ಲಿ ಭಾರತೀಯ ಪತ್ರಕರ್ತರ ಸಂಘದ ಸದಸ್ಯರೊಂದಿಗೆ ಮಾತನಾಡಿದ ರಾಹುಲ್ ಗಾಂಧಿ ಯಾರೂ ಭಾರತೀಯ ಪ್ರದೇಶವನ್ನು ಪ್ರವೇಶಿಸಿಲ್ಲ ಎಂಬ ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆಯು ವಾಸ್ತವ ನಿಯಂತ್ರಣ ರೇಖೆಯಲ್ಲಿ ತನ್ನ ಆಕ್ರಮಣವನ್ನು ಪುನರಾವರ್ತಿಸಲು ಚೀನಾಕ್ಕೆ ಆಹ್ವಾನವಾಗಿದೆ ಎಂದು ಹೇಳಿದ್ದರು.

ಮಿಲಿಟರಿ ಬೆದರಿಕೆಗಳನ್ನು ಭಾರತ ಹೇಗೆ ಎದುರಿಸಬೇಕು ಎಂದು ಕೇಳಿದಾಗ, ಬೆದರಿಕೆಯ ಸ್ವರೂಪಕ್ಕೆ ಭಾರತವು ಮಿಲಿಟರಿಯಾಗಿ ಪ್ರತಿಕ್ರಿಯಿಸುವ ಅಗತ್ಯವಿದೆ ಎಂದು ಗಾಂಧಿ ಹೇಳಿದ್ದರು. ಜೈಶಂಕರ್ ಮತ್ತು ಸರ್ಕಾರವು ಚೀನಾದಿಂದ ನಿಜವಾದ ಬೆದರಿಕೆಯನ್ನು ಅರ್ಥಮಾಡಿಕೊಂಡಿಲ್ಲ. ಪ್ರಧಾನಿಯವರ ಹೇಳಿಕೆಯು ಬೆದರಿಕೆಯ ಗ್ರಹಿಕೆಯ ಕೊರತೆಯನ್ನು ಪ್ರದರ್ಶಿಸುತ್ತದೆ ಎಂದಿದ್ದರು ರಾಹುಲ್ ರಾಹುಲ್ ಹೇಳಿಕೆಗೆ ಪ್ರತಿಕ್ರಿಯಿಸಿದ ಜೈಶಂಕರ್, “ಯಾರೋ ಚೀನಾದ ಮೇಲೆ ಜೊಲ್ಲು ಸುರಿಸುತ್ತಿರುವುದನ್ನು ಮತ್ತು ಭಾರತದ ಬಗ್ಗೆ ತಿರಸ್ಕಾರ ಮಾಡುತ್ತಿರುವುದನ್ನು ನೋಡಿದರೆ  ಭಾರತದ ಪ್ರಜೆಯಾಗಿ ನನಗೆ ಕಷ್ಟವಾಗುತ್ತಿದೆ ಎಂದು ಹೇಳಿದರು. ಯುಕೆಯಲ್ಲಿ ರಾಹುಲ್ ಗಾಂಧಿಯವರ ಇತ್ತೀಚಿನ ಭಾಷಣದ ಕುರಿತು ಕೇಳಿದ ಪ್ರಶ್ನೆಗೆ ಅವರು ಉತ್ತರಿಸುತ್ತಿದ್ದರು.

ಇದನ್ನೂ ಓದಿ:Global Millets Conference: ಆಹಾರ ಭದ್ರತೆ ಸವಾಲು ಎದುರಿಸಲು ಸಿರಿಧಾನ್ಯ ನೆರವಾಗಬಹುದು; ಪ್ರಧಾನಿ ಮೋದಿ

ಕಾಂಗ್ರೆಸ್‌ನ ಮಾಜಿ ಅಧ್ಯಕ್ಷರನ್ನು ಟೀಕಿಸಿದ ಜೈಶಂಕರ್, ಭಾರತ ಚೀನಾಕ್ಕೆ ಹೆದರುತ್ತಿದೆ ಎಂಬ ಆರೋಪಗಳನ್ನು ತಳ್ಳಿಹಾಕಿದರು. “ರಾಹುಲ್ ಗಾಂಧಿ ಚೀನಾದ ಬಗ್ಗೆ ಮೆಚ್ಚುಗೆಯಿಂದ ಮಾತನಾಡುತ್ತಾರೆ ಮತ್ತು ದೇಶವನ್ನು ‘ಸಾಮರಸ್ಯ’ ಎಂದು ವಿವರಿಸುತ್ತಾರೆ, ಅವರು ಚೀನಾ ಶ್ರೇಷ್ಠ ತಯಾರಕ ಎಂದು ಹೇಳುತ್ತಾರೆ ಮತ್ತು ‘ಮೇಕ್ ಇನ್ ಇಂಡಿಯಾ’ ಕೆಲಸ ಮಾಡುವುದಿಲ್ಲ ಅಂತಾರೆ ಎಂದು ಜೈಶಂಕರ್ ಹೇಳಿದ್ದಾರೆ.

“ನೀವು ದೇಶದ ಬಗ್ಗೆ ದೃಷ್ಟಿಕೋನವನ್ನು ಹೊಂದಬಹುದು, ಆದರೆ ನೀವು ರಾಷ್ಟ್ರೀಯ ನೈತಿಕತೆಯನ್ನು ದುರ್ಬಲಗೊಳಿಸಬಾರದು” ಎಂದು ಸಚಿವರು ಹೇಳಿದ್ದಾರೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada