Maithili Thakur: ಪಿಯುಸಿ ಪಾಸ್ ಆಗಿರುವ ಮೈಥಿಲಿ ಠಾಕೂರ್ ಈಗ ಭಾರತದ ಅತಿ ಕಿರಿಯ ಶಾಸಕಿ; ಯಾರು ಈಕೆ?
ಬಿಹಾರದ ವಿಧಾನಸಭಾ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸುವುದಕ್ಕಿಂತ ಕೇವಲ ಒಂದು ದಿನ ಮೊದಲು ಪಕ್ಷಕ್ಕೆ ಸೇರ್ಪಡೆಯಾಗಿದ್ದ ಜಾನಪದ ಗಾಯಕಿ ಮೈಥಿಲಿ ಠಾಕೂರ್ ಅವರ ಹೆಸರೂ ಕೂಡ ಅಭ್ಯರ್ಥಿಗಳ ಪಟ್ಟಿಯಲ್ಲಿ ಕಾಣಿಸಿಕೊಂಡಿತ್ತು. ಹಲವು ಹಿರಿಯ ನಾಯಕರಿಗೇ ಟಿಕೆಟ್ ಸಿಗದಿದ್ದಾಗ ಕೇವಲ 25 ವರ್ಷದ ಈ ಹುಡುಗಿಗೆ ಟಿಕೆಟ್ ನೀಡಿದ್ದಕ್ಕೆ ಹಲವರಿಗೆ ಕೊಂಚ ಅಸಮಾಧಾನವೂ ಆಗಿತ್ತು. ಆದರೆ, ಅದೇ ಮೈಥಿಲಿ ಈಗ ಮೊದಲ ಪ್ರಯತ್ನದಲ್ಲೇ ಆರ್ಜೆಡಿ ಅಭ್ಯರ್ಥಿ ವಿರುದ್ಧ ಗೆದ್ದು ದೇಶದ ಅತಿ ಕಿರಿಯ ಶಾಸಕಿಯೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ನವದೆಹಲಿ, ನವೆಂಬರ್ 14: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ (Bihar Assembly Elections) ಬಿಜೆಪಿ ನೇತೃತ್ವದ ಎನ್ಡಿಎ ಭರ್ಜರಿ ಗೆಲುವು ಕಂಡಿದೆ. ಬಿಹಾರದಲ್ಲಿ ಐತಿಹಾಸಿಕ ಜಯ ಕಂಡಿರುವ ಬಿಜೆಪಿ ಬಿಹಾರದ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಈ ಬಾರಿ ಬಿಜೆಪಿ ಬೇರೆಲ್ಲ ರಾಜ್ಯಗಳಲ್ಲಿ ಮಾಡಿದ ರೀತಿಯಲ್ಲೇ ಬಿಹಾರದಲ್ಲೂ ಟಿಕೆಟ್ ಘೋಷಣೆ ವೇಳೆ ಹಲವು ಪ್ರಯೋಗಗಳನ್ನು ಮಾಡಿತ್ತು. ಅದರಲ್ಲಿ ಬಿಹಾರದ ಜಾನಪದ ಗಾಯಕಿ ಮೈಥಿಲಿ ಠಾಕೂರ್ ಎಂಬ 25 ವರ್ಷದ ಯುವತಿಯನ್ನು ಕಣಕ್ಕೆ ಇಳಿಸಿದ್ದು ಕೂಡ ಒಂದು.
ರಿಯಾಲಿಟಿ ಶೋ ಒಂದರ ರನ್ನರ್ ಅಪ್ ಆಗಿದ್ದ ಮೈಥಿಲಿ ಠಾಕೂರ್ ಕಂಠಕ್ಕೆ ಬಹಳ ಅಭಿಮಾನಿಗಳಿದ್ದರು. ಆದರೆ, ಆ ಅಭಿಮಾನ ಮತವಾಗಿ ಬದಲಾಗುತ್ತಾ? ಎಂಬ ಅನುಮಾನವಂತೂ ಇದ್ದೇ ಇತ್ತು. ಇದೀಗ ಅದೇ ಮೈಥಿಲಿ ಠಾಕೂರ್ ಚುನಾವಣಾ ಕಣಕ್ಕೆ ಇಳಿದ ಮೊದಲ ಪ್ರಯತ್ನದಲ್ಲೇ ಶಾಸಕಿಯಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಭಾರತದ ಅತ್ಯಂತ ಕಿರಿಯ ಶಾಸಕಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಇದನ್ನೂ ಓದಿ: ಬಿಹಾರ ಚುನಾವಣೆ ಮಹಿಳೆಯರು ಮತ್ತು ಯುವಜನರು ಎಂಬ ಹೊಸ ಸೂತ್ರ ನೀಡಿದೆ; ವಿಜಯೋತ್ಸವದಲ್ಲಿ ಪ್ರಧಾನಿ ಮೋದಿ ಭಾಷಣ
ಮೈಥಿಲಿ ಠಾಕೂರ್ ಯಾರು?:
ಪಿಯುಸಿ ಓದಿರುವ ಜಾನಪದ ಗಾಯಕಿ ಮೈಥಿಲಿ ಠಾಕೂರ್ ಅವರಿಗೆ ಕೇವಲ 25 ವರ್ಷ. ಮೈಥಿಲಿ ದರ್ಭಂಗಾದ ಅಲಿನಗರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದರು. ಇದೀಗ ಅವರು 12 ಸಾವಿರ ಮತಗಳ ಅಂತರದಿಂದ ಜಯ ಸಾಧಿಸಿದ್ದಾರೆ.
🔥🔥🔥Youngest BJP candidate maithili thakur🔥 this is gen Z revolution … 🔥🔥🔥@maithilithakur pic.twitter.com/guZLJsgZXe
— Tom Mathews Moolamattom (@TMoolamattom) November 14, 2025
ಜಾನಪದ ಗಾಯಕಿಯಾಗಿರುವ ಮೈಥಿಲಿ ಠಾಕೂರ್ 2000ನೇ ಇಸವಿಯ ಜುಲೈ 25ರಂದು ಮಧುಬನಿಯಲ್ಲಿ ಜನಿಸಿದ ಮೈಥಿಲಿ ಠಾಕೂರ್ ಅವರ ಕುಟುಂಬವು ದೆಹಲಿಯ ನಜಾಫ್‌ಗಢಕ್ಕೆ ಸ್ಥಳಾಂತರಗೊಂಡಿತು. ಅಲ್ಲಿ ಅವರ ತಂದೆ ಕೆಲಸ ಕಳೆದುಕೊಂಡ ಕಾರಣ ಅವರು ಆರ್ಥಿಕ ಸಮಸ್ಯೆಗಳನ್ನು ಎದುರಿಸಿದರು. ಸ್ವತಃ ಶಾಸ್ತ್ರೀಯ ಗಾಯಕರಾಗಿದ್ದ ಅವರ ತಂದೆ ತಮ್ಮ ಕುಟುಂಬವನ್ನು ಪೋಷಿಸಲು ಸಂಗೀತದತ್ತ ಮುಖ ಮಾಡಿದರು. ಅವರು ಮೈಥಿಲಿಯ ಮಾರ್ಗದರ್ಶಕ ಮತ್ತು ಶಿಕ್ಷಕರೂ ಆಗಿದ್ದರು.
ಇದನ್ನೂ ಓದಿ: Bihar Election Results: ಬಿಹಾರದಲ್ಲಿ ತನ್ನದೇ ದಾಖಲೆ ಮುರಿದು ದೊಡ್ಡಣ್ಣನಾಗಿ ಹೊರಹೊಮ್ಮಿದ ಬಿಜೆಪಿ!
ಭಾರತೀಯ ಶಾಸ್ತ್ರೀಯ ಸಂಗೀತ ಮತ್ತು ಜಾನಪದ ಸಂಗೀತವೆರಡರಲ್ಲೂ ಹೆಸರು ಮಾಡಿರುವ ಮೈಥಿಲಿ ಸ ರಿ ಗ ಮ ಪ ಲಿಟಲ್ ಚಾಂಪ್ಸ್ ಮತ್ತು ಇಂಡಿಯನ್ ಐಡಲ್ ಜೂನಿಯರ್‌ನಂತಹ ಪ್ರಸಿದ್ಧ ರಿಯಾಲಿಟಿ ಶೋಗಳ ಮೂಲಕ ಜನಪ್ರಿಯರಾದರು. ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಹಾಡಿನ ರೀಲ್ಸ್ ಮಾಡುತ್ತಿದ್ದರು.
25 year old Maithili Thakur is going to become MLA..
Khesarilal Yadav losing from Chapra.
Thankyou Bihar.#BiharElection2025 #ElectionUpdate pic.twitter.com/nKrTZSYN5b
— 𝑨𝑻10 (@Loyalsachfan10) November 14, 2025
2021ರಲ್ಲಿ ಮೈಥಿಲಿಗೆ ಸಂಗೀತ ನಾಟಕ ಅಕಾಡೆಮಿಯಿಂದ ಉಸ್ತಾದ್ ಬಿಸ್ಮಿಲ್ಲಾ ಖಾನ್ ಯುವ ಪುರಸ್ಕಾರ ಪ್ರಶಸ್ತಿ ನೀಡಲಾಯಿತು. ಇದು ಭಾರತದ ಯುವ ಕಲಾವಿದರಿಗೆ ನೀಡುವ ಪ್ರತಿಷ್ಠಿತ ಪ್ರಶಸ್ತಿಯಾಗಿದೆ. ಮೈಥಿಲಿ ಹಿಂದಿ ಮತ್ತು ಭೋಜ್‌ಪುರಿ ಪ್ರದರ್ಶನಗಳಿಗೆ ದೇಶಾದ್ಯಂತ ಹೆಸರಾಗಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:40 pm, Fri, 14 November 25




