AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Explainer: ಹಿರಿಯ ಐಪಿಎಸ್ ಅಧಿಕಾರಿ ರಶ್ಮಿ ಶುಕ್ಲಾಗೆ ಮುಂಬೈ ಪೊಲೀಸ್​ನಿಂದ ಬುಲಾವ್ ಬಂದಿರೋದು ಯಾಕೆ? ಮಾಹಿತಿ ಇಲ್ಲಿದೆ

ಈ ವರ್ಷದ ಫೆಬ್ರುವರಿ ತಿಂಗಳಲ್ಲಿ ಅವರನ್ನು ಕೇಂದ್ರ ಮೀಸಲು ಪೊಲೀಸ್ ಪಡೆಯ ಎಡಿಜಿಯಾಗಿ ಕೇಂದ್ರಕ್ಕೆ ಎರವಲು ಸೇವೆ ಮೇಲೆ ಕಳಿಸಲಾಗಿತ್ತು ಹಾಗೂ ಪ್ರಸ್ತುತವಾಗಿ ಅವರ ಪೋಸ್ಟಿಂಗ್ ಹೈದರಾಬಾದನಲ್ಲಿದೆ.

Explainer: ಹಿರಿಯ ಐಪಿಎಸ್ ಅಧಿಕಾರಿ ರಶ್ಮಿ ಶುಕ್ಲಾಗೆ ಮುಂಬೈ ಪೊಲೀಸ್​ನಿಂದ ಬುಲಾವ್ ಬಂದಿರೋದು ಯಾಕೆ? ಮಾಹಿತಿ ಇಲ್ಲಿದೆ
Rashmi Shukla
ಅರುಣ್​ ಕುಮಾರ್​ ಬೆಳ್ಳಿ
| Edited By: |

Updated on:Apr 27, 2021 | 10:38 PM

Share

ಮುಂಬೈ: ಮಹಾರಾಷ್ಟ್ರದ ಪೊಲೀಸ್ ಇಲಾಖೆಯು ತನ್ನೆದುರು ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದ ನಂತರ ಹಿರಿಯ ಐಪಿಎಸ್ ಅಧಿಕಾರಿ ರಶ್ಮಿ ಶುಕ್ಲಾ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಬಗ್ಗೆ ತಿಳಿದುಕೊಳ್ಳವುದು ಅವಶ್ಯಕವಾಗಿದೆ, ರಶ್ಮಿ 1988-ಬ್ಯಾಚ್​ನ ಐಪಿಎಸ್ ಅಧಿಕಾರಿಯಾಗಿದ್ದು ಮುಂಬೈ ಪೊಲೀಸ್​ನ ಹಿರಿಯ ಅಧಿಕಾರಿಗಳಲ್ಲೊಬ್ಬರಾಗಿದ್ದಾರೆ. ಮಹಾರಾಷ್ಟ್ರದಲ್ಲಿ ಅಧಿಕಾರಕ್ಕೆ ಬಂದ ಮಹಾ ವಿಕಾಸ್ ಅಗಾಡಿ ಸಮ್ಮಿಶ್ರ ಸರ್ಕಾರವು ರಶ್ಮಿ ಅವರು ಬಿಜೆಪಿ ಸರ್ಕಾರದೊಂದಿಗೆ ನಿಕಟ ಬಾಂಧವ್ಯ ಹೊಂದಿದೆ ಎಂದು ಭಾವಿಸಿ ಅವರನ್ನು ರಾಜ್ಯ ಗುಪ್ತಚರ ಕಮೀಶನರ್ ಹುದ್ದೆಯಿಂದ ಸಿವಿಲ್ ಡಿಫೆನ್ಸ್​ಗೆ ವರ್ಗಾವಣೆ ಮಾಡಿತು. ಇದನ್ನು ನಾನ್-ಎಕ್ಸಿಕ್ಯೂಟಿವ್ ಹುದ್ದೆ ಎಂದು ಭಾವಿಸಲಾಗುತ್ತದೆ.

ಈ ವರ್ಷದ ಫೆಬ್ರುವರಿ ತಿಂಗಳಲ್ಲಿ ಅವರನ್ನು ಕೇಂದ್ರ ಮೀಸಲು ಪೊಲೀಸ್ ಪಡೆಯ ಎಡಿಜಿಯಾಗಿ ಕೇಂದ್ರಕ್ಕೆ ಎರವಲು ಸೇವೆ ಮೇಲೆ ಕಳಿಸಲಾಗಿತ್ತು ಹಾಗೂ ಪ್ರಸ್ತುತವಾಗಿ ಅವರ ಪೋಸ್ಟಿಂಗ್ ಹೈದರಾಬಾದ್​ನಲ್ಲಿದೆ. ಇದಕ್ಕೆ ಮೊದಲು ಅವರು ಪುಣೆಯ ಪೊಲೀಸ್ ಕಮೀಶನರ್​ ಆಗಿ ಸೇವೆ ಸಲ್ಲಿಸುತ್ತಿದ್ದಾಗ ‘ಸ್ನೇಹಮಯಿ ಪೊಲೀಸ್​’ (ಬಡ್ಡಿ ಕಾಪ್) ನಂಥ ಯೋಜನೆಗಳಿಂದ ಜನಪ್ರಿಯರಾಗಿದ್ದರು.

ಮುಂಬೈ ಪೊಲೀಸ್ ರಶ್ಮಿ ಶುಕ್ಲಾ ಅವರನ್ನು ಯಾಕೆ ಕರೆದಿದೆ? ನಿಮಗೆ ಗೊತ್ತಿರುವ ಹಾಗೆ, ಈ ವರ್ಷದ ಮಾರ್ಚ್ ತಿಂಗಳಲ್ಲಿ ಮುಂಬೈನ ಮಾಜಿ ಪೊಲೀಸ ಕಮೀಶನರ್ ಪರಮ್ ಬೀರ್ ಸಿಂಗ್ ಪತ್ರವೊಂದನ್ನು ಬರೆದು ಮಾಜಿ ಗೃಹ ಸಚಿವ ಅನಿಲ್ ದೇಶ್​ಮುಖ್ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆಂದು ಆರೋಪಿಸಿದ್ದರು. ಕೂಡಲೇ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನಾವಿಸ್ ಅವರು ದೇಶ್​ಮುಖ್ ಮತ್ತು ಆಫೀಸರ್​ಗಳ ಮಧ್ಯೆ ಕೇಂದ್ರ ಗೃಹ ಇಲಾಖೆಯಲ್ಲಿ ಪೋಸ್ಟಿಂಗ್​ಗಳಿಗಾಗಿ ಲಾಬಿ ಮಾಡಿದ್ದು ಎನ್ನಲಾದ ಮಾತುಕತೆಗಳ 6.1 ಜಿಬಿ ಪೋನ್​ ರಿಕಾರ್ಡಿಂಗ್ ಅನ್ನು ಶೇರ್ ಮಾಡಿದರು. ಕರೆಗಳನ್ನು ತಡೆಹಿಡಿದ ಮಾಡಿದ ಬಗ್ಗೆ ಕೆಲವು ಗೌಪ್ಯ ದಾಖಲೆಗಳು ಇದೇ ಸಂದರ್ಭದಲ್ಲಿ ಲೀಕ್ ಆದವು. ಆಗ ಎಸ್​ಐಡಿ ಕಮೀಶನರ್ ಆಗಿದ್ದ ರಶ್ಮಿ ಶುಕ್ಲಾ ಅವರು ಕರೆಗಳನ್ನು ತಡೆಹಿಡಿದಿದ್ದರು ಎಂದು ಫಡ್ನಾವಿಸ್ ಹೇಳಿದ್ದರು. ಸೂಕ್ತ ಅನುಮತಿಯೊಂದಿಗೆ ಕರೆಗಳನ್ನು ಇಂಟರ್ಸೆಪ್ಟ್ ಅಧಿಕಾರ ಎಸ್​ಐಡಿ ಕಮೀಶನರ್​ಗೆ ಇರುತ್ತದೆ. ಆದರೆ ಇವು ಬಹಳ ಗೌಪ್ಯವಾದ ಸಂಗತಿಗಳು. ಈ ಪ್ರಕರಣದಲ್ಲಿ ದಾಖಲೆಗಳನ್ನು ವಿರೋಧ ಪಕ್ಷದ ನಾಯಕನಿಗೆ ಲೀಕ್ ಮಾಡಿದ್ದರಿಂದ ಒಬ್ಬ ಅಧಿಕಾರಿಯು ಸೂಕ್ಷ್ಮವಾದ ಮಾಹಿತಿಯನ್ನು ಗೌಪ್ಯವಾಗಿಡಲು ವಿಫಲನಾದ ಆರೋಪ ಎದುರಿಸಬೇಕಾಗುತ್ತದೆ. ಸರ್ಕಾರದ ಮುಖ್ಯ ಕಾರ್ಯದರ್ಶಿ ಸೀತಾರಾಮ್ ಕುಂಟೆ ಅವರಿಗೆ ಪ್ರಕರಣವನ್ನು ತನಿಖೆ ಮಾಡಲು ಹೇಳಲಾಗಿತ್ತು.

ತನಿಖೆಯಲ್ಲಿ ಬೆಳಕಿಗೆ ಬಂದ ಸತ್ಯಗಳು ಸಾರ್ವಜನಿಕ ರಕ್ಷಣೆ ಹಿತದೃಷ್ಟಿಯಿಂದ ಕರೆಗಳನ್ನು ತಡೆಹಿಡಿಯುವ ನೆಪದಲ್ಲಿ ರಶ್ಮಿಯವರು ಆ ಕರೆಗಳನ್ನು ರೆಕಾರ್ಡ್​ ಮಾಡುವ ಅನುಮತಿ ಪಡೆದುಕೊಂಡು ಅಧಿಕಾರಿಗಳನ್ನು ಮಿಸ್​ಗೈಡ್ ಮಾಡಿದ್ದಾರೆಂದು ತಾವು ಸಲ್ಲಿಸಿರುವ ವರದಿಯಲ್ಲಿ ಕುಂಟೆ ಉಲ್ಲೇಖಿಸಿದ್ದಾರೆ.

‘ವಾಸ್ತವದಲ್ಲಿ, ರಾಷ್ಟ್ರೀಯ ಭದ್ರತೆಗೆ ಅಪಾಯ ಮತ್ತು ರಾಷ್ಟ-ವಿರೋಧಿ ಚಟುವಟಿಕೆಗಳು ನಡೆಯುತ್ತಿರುವ ಸಂಶಯ ಎದುರಾದರೆ ಅಂಥ ಅಪಾಯಗಳನ್ನು ಮಟ್ಟಹಾಕುವುದಕ್ಕೋಸ್ಕರ ಕರೆಗಳನ್ನು ಅಡ್ಡಹಾಕಲು ಭಾರತೀಯ ಟೆಲಿಗ್ರಾಮ್ ಕಾಯ್ದೆ ಅಡಿಯಲ್ಲಿ ಅವಕಾಶವಿರುತ್ತದೆ. ಆದರೆ ಹಾಗೆ ಕರೆಗಳನ್ನು ಅಡ್ಡಹಾಕುವುದನ್ನು ರಾಜಕೀಯ ಕಾರಣಗಳಿಗೆ, ವೃತ್ತಿಪರ ಇಲ್ಲವೇ ಕೌಟುಂಬಿಕ ಕಲಹಗಳಿಗೆ ಮಾಡಬಾರದು. ಆದರೆ ರಶ್ಮಿಯವರು ತನಗೆ ದೊರೆತ ಅನುಮತಿಯನ್ನು ಅದಕ್ಕೆ ಮೀಸಲಿರುವ ಉದ್ದೇಶಕ್ಕಾಗಿ ಬಳಸದೆ ಸರ್ಕಾರವನ್ನು ದಿಕ್ಕುತಪ್ಪಿದ್ದಾರೆ ಮತ್ತು ಅನುಮತಿಯನ್ನು ದುರಿಪಯೋಗಪಡಿಸಿಕೊಂಡಿದ್ದಾರೆ,’ ಎಂದು ವರದಿಯಲ್ಲಿ ಹೇಳಲಾಗಿದೆ.

ಈ ವರದಿಯ ಆಧಾರದ ಮೇಲೆ ಸರ್ಕಾರ ಯಾವ ಕ್ರಮವನ್ನು ತೆಗೆದುಕೊಂಡಿದೆ? ಕುಂಟೆ ಅವರ ವರದಿಯ ಆಧಾರದ ಮೇಲೆ ರಾಜ್ಯ ಸಿಐಡಿ ಮುಂಬೈ ಸೈಬರ್ ಪೊಲೀಸ್​ನೊಂದಿಗೆ ಒಂದು ದೂರನ್ನು ಸಲ್ಲಿಸಿದ್ದು ಅಧಿಕೃತ ರಹಸ್ಯಗಳ ಕಾಯ್ದೆ, ಭಾರತೀಯ ಟೆಲಿಗ್ರಾಫ್ ಕಾಯ್ದೆ ಸೆಕ್ಷನ್ 30 ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆ ಸೆಕ್ಷನ್ 43 (ಬಿ) ಅಡಿಯಲ್ಲಿ ಒಂದು ಎಫ್​ಐಅರ್ ದಾಖಲಾಗಿದೆ. ಇದೇ ಹಿನ್ನೆಲೆಯಲ್ಲಿ ರಶ್ಮಿಯವರಿಗೆ ಮುಂಬೈ ಪೊಲೀಸ್​ನಿಂದ ಬುಲಾವ್ ಬಂದಿದೆ. ಅವರ ವಿಚಾರಣೆ ನಡೆಸಿದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗಿವುದು

ಸದರಿ ಪ್ರಕರಣದಲ್ಲಿ ಬೇರೆ ಯಾರಿಗಾದರೂ ಸಮನ್ಸ್ ಜಾರಿಯಾಗಿದೆಯೇ? ಕೇಂದ್ರ ಗೃಹ ಇಲಾಖೆಯಲ್ಲಿ ಪೋಸ್ಟಿಂಗ್​ಗಾಗಿ ಲಾಬಿ ನಡೆದಿದೆ ಎಂದು ಫಡ್ನಾವಿಸ್ ಅವರು ಮಾಡಿರುವ ಅರೋಪದಲ್ಲಿ ಉಲ್ಲೇಖಿಸಲಾಗಿರುವ ಮತ್ತ್ತೊಬ್ಬ ಐಪಿಎಸ್ ಅಧಿಕಾರಿಗೆ ವಿಚಾರಣೆಗೆ ಹಾಜರಾಗುವಂತೆ ಹೇಳಲಾಗಿದೆ. ಹಾಗೆಯೇ, ಹೇಳಿಕೆಯನ್ನು ದಾಖಲಿಸಿಕೊಳ್ಳಲು ಮುಂಬೈ ಪೊಲೀಸ್, ಫಡ್ನಾವಿಸ್ ಅವರನ್ನು ಕರೆಸುವ ಸಾಧ್ಯತೆಯಿದೆ.

ಇದನ್ನೂ ಓದಿ: ವಾಟ್ಸ್ಯಾಪ್ ಗುಂಪಿನ ಸದಸ್ಯನ ಆಕ್ಷೇಪಾರ್ಹ ಪೋಸ್ಟ್​ಗಳಿಗೆ ಗ್ರೂಪ್ ಅಡ್ಮಿನ್ ಹೊಣೆಗಾರನಲ್ಲ: ಬಾಂಬೆ ಹೈಕೋರ್ಟ್

Published On - 10:13 pm, Tue, 27 April 21

ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?