ಮೀರತ್​ ಕೊಲೆ ಪ್ರಕರಣ: ಮುಸ್ಕಾನ್, ಪತಿ​ ಸೌರಭ್​ನನ್ನು ತುಂಡು ತುಂಡಾಗಿ ಕತ್ತರಿಸಿದ್ದೇಕೆ?

ಮೀರತ್​ನ ಕೊಲೆ ಪ್ರಕರಣವು ಹೊಸ ತಿರುವು ಪಡೆದುಕೊಳ್ಳುತ್ತಿದೆ. ಆರೋಪಿಗಳಾದ ಸಾಹಿಲ್ ಶುಕ್ಲಾ, ಮುಸ್ಕಾನ್ ರಸ್ತೋಗಿ ಸೌರಭ್​ನನ್ನು ಕೊಲೆ ಮಾಡಿದ್ದಲ್ಲದೇ 15 ತುಂಡುಗಳಾಗಿ ಕತ್ತರಿಸಿದ್ದೇಕೆ ಎನ್ನುವ ವಿಚಾರವನ್ನು ಬಾಯ್ಬಿಟ್ಟಿದ್ದಾರೆ. ಮೃತರನ್ನು ಗುರುತಿಸುವುದು ಕಷ್ಟವಾಗಲಿ ಎನ್ನುವ ಕಾರಣಕ್ಕೆ ದೇಹವನ್ನು ಕತ್ತರಿಸಲಾಗಿದೆ. ಪೊಲೀಸರು ಬೆರಳಚ್ಚುಗಳ ಮೂಲಕ ಸೌರಭ್​ನನ್ನು ಗುರುತಿಸುವುದನ್ನು ತಡೆಯಲು ಮಣಿಕಟ್ಟನ್ನು ಕತ್ತರಿಸಲಾಗಿತ್ತು ಎಂಬುದನ್ನು ಒಪ್ಪಿಕೊಂಡಿದ್ದಾರೆ.

ಮೀರತ್​ ಕೊಲೆ ಪ್ರಕರಣ: ಮುಸ್ಕಾನ್, ಪತಿ​ ಸೌರಭ್​ನನ್ನು ತುಂಡು ತುಂಡಾಗಿ ಕತ್ತರಿಸಿದ್ದೇಕೆ?
ಮುಸ್ಕಾನ್

Updated on: Mar 27, 2025 | 7:45 AM

ಮೀರತ್, ಮಾರ್ಚ್​ 27: ಮೀರತ್​ನ ಕೊಲೆ ಪ್ರಕರಣವು ಹೊಸ ತಿರುವು ಪಡೆದುಕೊಳ್ಳುತ್ತಿದೆ. ಆರೋಪಿಗಳಾದ ಸಾಹಿಲ್ ಶುಕ್ಲಾ, ಮುಸ್ಕಾನ್ ರಸ್ತೋಗಿ ಸೌರಭ್​ನನ್ನು ಕೊಲೆ ಮಾಡಿದ್ದಲ್ಲದೇ 15 ತುಂಡುಗಳಾಗಿ ಕತ್ತರಿಸಿದ್ದೇಕೆ ಎನ್ನುವ ವಿಚಾರವನ್ನು ಬಾಯ್ಬಿಟ್ಟಿದ್ದಾರೆ. ಮೃತರನ್ನು ಗುರುತಿಸುವುದು ಕಷ್ಟವಾಗಲಿ ಎನ್ನುವ ಕಾರಣಕ್ಕೆ ದೇಹವನ್ನು ಕತ್ತರಿಸಲಾಗಿದೆ. ಪೊಲೀಸರು ಬೆರಳಚ್ಚುಗಳ ಮೂಲಕ ಸೌರಭ್​ನನ್ನು ಗುರುತಿಸುವುದನ್ನು ತಡೆಯಲು ಮಣಿಕಟ್ಟನ್ನು ಕತ್ತರಿಸಲಾಗಿತ್ತು ಎಂಬುದನ್ನು ಒಪ್ಪಿಕೊಂಡಿದ್ದಾರೆ.

ತಲೆ ಇಲ್ಲದೆ ದೇಹವನ್ನು ಗುರುತಿಸಲಾಗದು ಎಂದು ನಂಬಿ ತಲೆಯನ್ನು ದೇಹದಿಂದ ಬೇರ್ಪಡಿಸಿದ್ದರು. ವಿಧಿವಿಜ್ಞಾನ ತಂಡವು ಬೆಡ್‌ಶೀಟ್‌ಗಳು ಮತ್ತು ದಿಂಬುಗಳ ಮೇಲೆ ಹಾಗೂ ಸ್ನಾನಗೃಹದ ಟೈಲ್ಸ್ ಮತ್ತು ಟ್ಯಾಪ್‌ನಲ್ಲಿ ರಕ್ತದ ಕಲೆಗಳನ್ನು ಕಂಡುಕೊಂಡಿದೆ.

ಮೊದಲು ಡ್ರಮ್​ನೊಳಗೆ ಸಿಮೆಂಟ್​ ಹಾಕಿ ಸೀಲ್ ಮಾಡುವ ಪ್ಲ್ಯಾನ್ ಇರಲಿಲ್ಲ, ಸೂಟ್​ಕೇಸ್​ಗೆ ಹಾಕಿ ಬೇರೆ ಬೇರೆ ಕಡೆಗಳಲ್ಲಿ ಎಸೆದು ಬರಲು ಯೋಜನೆ ಹಾಕಿಕೊಂಡಿದ್ದರು. ಸೂಟ್​ಕೇಸ್​ಗೆ ದೇಹವನ್ನು ತುಂಬಿಸುವಾಗ ದೇಹದ ತುಂಡುಗಳು ಅದರೊಳಗೆ ಹಿಡಿಯಲಿಲ್ಲ ಹಾಗಾಗಿ ಅದರಿಂದ ಮತ್ತೆ ಹೊರ ತೆಗೆದು ಡ್ರಮ್​ನಲ್ಲಿ ಹಾಕಲಾಯಿತು ಎಂದು ಒಪ್ಪಿಕೊಂಡಿದ್ದಾರೆ.

ಇದನ್ನೂ ಓದಿ
ಮೀರತ್ ಕೊಲೆ; ಗಂಡನ ಜೊತೆ ಮುಸ್ಕಾನ್ ಡ್ಯಾನ್ಸ್ ಮಾಡಿದ ಹಳೇ ವಿಡಿಯೋ ವೈರಲ್
ಮಗಳನ್ನು ಗಲ್ಲಿಗೇರಿಸಿ ಎಂದು ಕಣ್ಣೀರಿಟ್ಟ ಆರೋಪಿ ಮಹಿಳೆಯ ಪೋಷಕರು
ಅಮ್ಮನಿಗೆ ಬೈದಿದ್ದಕ್ಕೆ ಮಾವನನ್ನೇ ಕೊಂದ ಪುತ್ರ!
ಮನೆಯ ಬಾವಿಯಲ್ಲಿ 4 ತಿಂಗಳ ಹೆಣ್ಣು ಮಗುವಿನ ಶವ ಪತ್ತೆ, ಕೊಂದಿದ್ಯಾರು?

ಸೂಟ್​ಕೇಸ್​ನಲ್ಲಿ ಕೂಡ ರಕ್ತದ ಕಲೆಗಳು ಪತ್ತೆಯಾಗಿವೆ. ಮೊದಲು ದೇಹದ ಭಾಗಗಳನ್ನು ಪಾಲಿಥಿನ್‌ನಲ್ಲಿ ಪ್ಯಾಕ್ ಮಾಡಲಾಗಿತ್ತು. ಮಾರ್ಚ್ 23 ರಂದು ಸೌರಭ್ ರಜಪೂತ್ ಅವರ ಮರಣೋತ್ತರ ಪರೀಕ್ಷೆಯ ವರದಿಯು ಭಯಾನಕ ವಿವರಗಳನ್ನು ಬಹಿರಂಗಪಡಿಸಿತು.

ಮತ್ತಷ್ಟು ಓದಿ:ಮೀರತ್: ಸೌರಭ್​ನನ್ನು ಕೊಲೆ ಮಾಡಿ ಹಿಮಾಚಲಕ್ಕೆ ಟ್ರಿಪ್​ಗೆ ಹೋಗಿ ಸಾಹಿಲ್, ಮುಸ್ಕಾನ್ ಮಾಡಿದ್ದೇನು?

ರಜಪೂತ್ ಅವರ ದೇಹವು ಎಡಭಾಗದಲ್ಲಿ ಮೂರು ಇರಿತದ ಗಾಯಗಳು ಮತ್ತು ಕುತ್ತಿಗೆ ಮತ್ತು ಮಣಿಕಟ್ಟಿನ ಮೇಲೆ ಕತ್ತರಿಸಿದ ಗುರುತುಗಳನ್ನು ಒಳಗೊಂಡಂತೆ ಬಹು ಇರಿತದ ಗಾಯಗಳು ಕಂಡುಬಂದಿವೆ. ಅತ್ಯಂತ ಗೊಂದಲದ ಅಂಶವೆಂದರೆ ಮಣಿಕಟ್ಟು ಮತ್ತು ಕುತ್ತಿಗೆ ಎರಡೂ ದೇಹದಿಂದ ಬೇರ್ಪಟ್ಟಿವೆ.

ಆರೋಪಿಗಳಾದ ರಜಪೂತ್ ಅವರ ಪತ್ನಿ ಮುಸ್ಕನ್ ರಸ್ತೋಗಿ ಮತ್ತು ಆಕೆಯ ಪ್ರಿಯಕರ ಸಾಹಿಲ್ ಶುಕ್ಲಾ, ರಜಪೂತ್ ಅವರ ಎದೆಗೆ ಹಲವು ಬಾರಿ ಇರಿದು ನಂತರ ದೇಹವನ್ನು ತುಂಡು ಮಾಡಿ ಸಿಮೆಂಟ್ ತುಂಬಿದ ಡ್ರಮ್‌ನಲ್ಲಿ ಅಡಗಿಸಿಟ್ಟಿದ್ದರು ಎಂದು ಆರೋಪಿಸಲಾಗಿದೆ.ಪ್ರಕರಣಕ್ಕೆ ನೇರವಾಗಿ ಸಂಬಂಧಿಸಿರುವ ಸುಮಾರು 10 ರಿಂದ 12 ಜನರಿಂದ ಎಲ್ಲಾ ಪುರಾವೆಗಳನ್ನು ಸಂಗ್ರಹಿಸಿ ಹೇಳಿಕೆಗಳನ್ನು ದಾಖಲಿಸಿಕೊಂಡು ಪೊಲೀಸ್ ತನಿಖೆ ಮುಂದುವರೆಸಿದ್ದಾರೆ.

ಗಂಡನನ್ನು ಕೊಂದು ದೇಹವನ್ನು ತುಂಡುಗಳಾಗಿ ಕತ್ತರಿಸಿದ ನಂತರ, ಮುಸ್ಕಾನ್ ತನ್ನ ಪ್ರಿಯಕರ ಸಾಹಿಲ್ ಜೊತೆ ಶಿಮ್ಲಾ, ಹಿಮಾಚಲದ ಕಸೌಲಿ ಮತ್ತು ಉತ್ತರಾಖಂಡಕ್ಕೆ ಟ್ರಿಪ್​ಗೆ ಹೋಗಿದ್ದಳು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ