AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಹಿಳಾ ಮೀಸಲಾತಿ ಮಸೂದೆಯ ಕುರಿತು ಮಾತಾನಾಡುವಾಗ ಬಿಜೆಪಿಗೆ ಕಬೀರ್ ‘ದ್ವಿಪದಿ’ ನೆನಪಿಸಿದ ಖರ್ಗೆ

'ಕಲ್ ಕರೇ ಸೋ ಆಜ್ ಕರ್, ಆಜ್ ಕರೇ ಸೋ ಅಬ್...' (ನಾಳೆ ಏನು ಮಾಡಬೇಕೋ ಅದನ್ನು ಇಂದೇ ಮಾಡು. ಇಂದು ಏನು ಮಾಡಬೇಕೋ ಅದನ್ನು ಈಗಲೇ ಮಾಡು.) ಎಂಬ ಕಬೀರದಾಸ್ ದ್ವಿಪದಿಯನ್ನು ಹೇಳಿದಾಗ ಸದನದಲ್ಲಿ ಗದ್ದಲವಾಯಿತು. ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನ್ಥರ್ ಅವರು ಸದಸ್ಯರೆಲ್ಲರೂ ತಮ್ಮ ತಮ್ಮ ಆಸನದಲ್ಲಿ ಕುಳಿತುಕೊಳ್ಳುವಂತೆ ಮನವಿ ಮಾಡಿದರು. ಧನ್ಖರ್ ಅವರು ಬಿಜೆಪಿ ಮುಖ್ಯಸ್ಥ ಜೆಪಿ ನಡ್ಡಾ ಅವರನ್ನು ಪ್ರತಿಕ್ರಿಯಿಸಲು ಆಹ್ವಾನಿಸಿದರು.

ಮಹಿಳಾ ಮೀಸಲಾತಿ ಮಸೂದೆಯ ಕುರಿತು ಮಾತಾನಾಡುವಾಗ ಬಿಜೆಪಿಗೆ ಕಬೀರ್ 'ದ್ವಿಪದಿ' ನೆನಪಿಸಿದ ಖರ್ಗೆ
ಮಲ್ಲಿಕಾರ್ಜುನ ಖರ್ಗೆ
ರಶ್ಮಿ ಕಲ್ಲಕಟ್ಟ
|

Updated on: Sep 21, 2023 | 5:09 PM

Share

ದೆಹಲಿ ಸೆಪ್ಟೆಂಬರ್ 21: ಮಹಿಳಾ ಮೀಸಲಾತಿ ಮಸೂದೆ (Women’s Reservation Bill) ಜಾರಿ ವಿಳಂಬದ ಬಗ್ಗೆ ಬಿಜೆಪಿ (BJP) ವಿರುದ್ಧ ರಾಜ್ಯಸಭೆಯಲ್ಲಿ ವಾಗ್ದಾಳಿ ನಡೆಸಿದ ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರು ಕಬೀರ್ ಅವರ ‘ಕಲ್ ಕರೇ ಸೋ ಆಜ್ ಕರ್’ ದ್ವಿಪದಿಯನ್ನು ಉಲ್ಲೇಖಿಸಿದ್ದಾರೆ. 2024 ರ ಚುನಾವಣೆಯ ಸಮಯದಲ್ಲಿ ಮಹಿಳೆಯರಿಗೆ ಕೆಳಮನೆ ಮತ್ತು ರಾಜ್ಯ ಶಾಸಕಾಂಗಗಳಲ್ಲಿ 33 ಪ್ರತಿಶತದಷ್ಟು ಸ್ಥಾನಗಳನ್ನು ಮೀಸಲಿಡಲು ಮತ್ತು ಮಸೂದೆಯನ್ನು ತಿದ್ದುಪಡಿ ಮಾಡಲು ಸರ್ಕಾರಕ್ಕೆ ಖರ್ಗೆ ಕರೆ ನೀಡಿದರು.  ಪ್ರಸ್ತುತ ಮಸೂದೆಗೆ ಜನಗಣತಿ ಮತ್ತು ಡಿಲಿಮಿಟೇಶನ್ ಅಗತ್ಯವಿದೆ. ಹಾಗಾಗಿ 2029 ಕ್ಕಿಂತ ಮೊದಲು ಜಾರಿಯಾಗುವುದಿಲ್ಲ.

“ಈ ಮಸೂದೆಯ ತಿದ್ದುಪಡಿ ಕಷ್ಟವೇನಲ್ಲ… ನೀವು (ಸರ್ಕಾರ) ಇದನ್ನು ಈಗ ಮಾಡಬಹುದು ಆದರೆ 2031ರವರೆಗೆ ಮುಂದೂಡಿದ್ದೀರಿ. ಇದರ ಅರ್ಥವೇನು?” “ಪಂಚಾಯತ್ ಚುನಾವಣೆ ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಗಳಿಗೆ (ಮಹಿಳೆಯರಿಗೆ) ಮೀಸಲಾತಿ ಇರುವಾಗ ಇದು ಯಾಕೆ ಇಲ್ಲ ಎಂದು ಪ್ರಶ್ನಿಸಿದ್ದಾರೆ.

‘ಕಲ್ ಕರೇ ಸೋ ಆಜ್ ಕರ್, ಆಜ್ ಕರೇ ಸೋ ಅಬ್…’ (ನಾಳೆ ಏನು ಮಾಡಬೇಕೋ ಅದನ್ನು ಇಂದೇ ಮಾಡು. ಇಂದು ಏನು ಮಾಡಬೇಕೋ ಅದನ್ನು ಈಗಲೇ ಮಾಡು.) ಎಂಬ ಕಬೀರದಾಸ್ ದ್ವಿಪದಿಯನ್ನು ಹೇಳಿದಾಗ ಸದನದಲ್ಲಿ ಗದ್ದಲವಾಯಿತು. ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನ್ಥರ್ ಅವರು ಸದಸ್ಯರೆಲ್ಲರೂ ತಮ್ಮ ತಮ್ಮ ಆಸನದಲ್ಲಿ ಕುಳಿತುಕೊಳ್ಳುವಂತೆ ಮನವಿ ಮಾಡಿದರು. ಧನ್ಖರ್ ಅವರು ಬಿಜೆಪಿ ಮುಖ್ಯಸ್ಥ ಜೆಪಿ ನಡ್ಡಾ ಅವರನ್ನು ಪ್ರತಿಕ್ರಿಯಿಸಲು ಆಹ್ವಾನಿಸಿದರು.

ಖರ್ಗೆ ಅವರು ಮೀಸಲಾತಿ ಮಸೂದೆಗಾಗಿ ತಿದ್ದುಪಡಿ ಮಾಡಲು ಮತ್ತು ಅದರ ತಕ್ಷಣದ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು ಸರ್ಕಾರವನ್ನು ಒತ್ತಾಯಿಸಿದರು. ಇದಕ್ಕಾಗಿಯೇ ನೀವು ಇದನ್ನು ಈಗಲೇ ಮಾಡಬೇಕು. ಇಂದೇ ಮಾಡಿ, ನಾವು ಸಿದ್ಧರಿದ್ದೇವೆ. ಇದು ಕಾನೂನುಬಾಹಿರವಲ್ಲ ಎಂದು ಖರ್ಗೆ ಹೇಳಿದ್ದಾರೆ. ಗೌರವಾನ್ವಿತ ಸದಸ್ಯರೇ… ನಾವು ಮೇಲ್ಮನೆ… ಹಿರಿಯರ ಮನೆ.. ಎಂದ ಅವರು, ನಂತರ ಬಿಜೆಪಿ ಸಂಸದರಿಗೆ ಮಾತನಾಡಲು ಅವಕಾಶ ನೀಡಿದರು.

ನಾನು ಒಂದು ವಿಷಯವನ್ನು ಸ್ಪಷ್ಟಪಡಿಸಬಯಸುತ್ತೇನೆ. ಬಿಜೆಪಿಯ ಉದ್ದೇಶ (ಮಸೂದೆಯನ್ನು ವಿಳಂಬವಾಗಿ ಜಾರಿಗೊಳಿಸುವ ಬಗ್ಗೆ)… ಅಂಕ ಗಳಿಸುವುದು ಅಥವಾ ರಾಜಕೀಯ ಲಾಭ ಪಡೆಯುವುದು ಅಲ್ಲ. ನಾವು ಮಹಿಳೆಯರಿಗಾಗಿ ಈ ಮಸೂದೆಯನ್ನು ಜಾರಿಗೆ ತರಲು ಬಯಸುತ್ತೇವೆ. ಆದರೆ ನಾವು ಅದನ್ನು ಸರಿಯಾದ ರೀತಿಯಲ್ಲಿ ಮಾಡಲು ಬಯಸುತ್ತೇವೆ ಸಂವಿಧಾನವನ್ನು ಅನುಸರಿಸುವ ಮೂಲ ಎಂದು ನಡ್ಡಾ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: ಮೋದಿ ಇದ್ದರೆ ಎಲ್ಲವೂ ಸಾಧ್ಯ: ಮಹಿಳಾ ಮೀಸಲಾತಿ ಮಸೂದೆಯನ್ನು ಕ್ರಾಂತಿಕಾರಿ ಮಸೂದೆ ಎಂದು ಬಣ್ಣಿಸಿದ ಸಚಿವ ಕಿಶನ್ ರೆಡ್ಡಿ

ಲೋಕಸಭೆಯಲ್ಲಿ ಪ್ರತಿಪಕ್ಷಗಳ ತೀವ್ರ ವಾಗ್ದಾಳಿಗೆ ಪ್ರತಿಕ್ರಿಯಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, “ಡಿಲಿಮಿಟೇಶನ್ ಆಯೋಗವು ದೇಶದಲ್ಲಿ ಚುನಾವಣಾ ಪ್ರಕ್ರಿಯೆಗೆ ಪ್ರಮುಖ ಸಂಸ್ಥೆಯಾಗಿದೆ. ನಾವು ಮೂರನೇ ಒಂದು ಸ್ಥಾನವನ್ನು ಕಾಯ್ದಿರಿಸುತ್ತಿದ್ದರೆ ಅದನ್ನು ಯಾರು ಮಾಡುತ್ತಾರೆ? ನಾವು ಅದನ್ನು ಮಾಡುತ್ತೇವೆ, ನೀವು (ವಿಪಕ್ಷಗಳು) ಅದನ್ನು ಪ್ರಶ್ನಿಸುತ್ತೀರಿ ಎಂದು ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ