ನವದೆಹಲಿ: ಕೇಂದ್ರ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವ ಅನುರಾಗ್ ಠಾಕೂರ್ (Anurag Thakur) ಇಂದು (ಜೂನ್ 3) ವಿಶ್ವ ಬೈಸಿಕಲ್ ದಿನದ (World Bicycle Day) ಪ್ರಯುಕ್ತ ರಾಷ್ಟ್ರವ್ಯಾಪಿ ‘ಫಿಟ್ ಇಂಡಿಯಾ ಫ್ರೀಡಂ ರೈಡರ್ ಸೈಕಲ್ ರ್ಯಾಲಿ’ಗೆ (Fit India Freedom Rider Cycle rally) ಚಾಲನೆ ನೀಡಿದರು. ಅಲ್ಲದೆ, ದೆಹಲಿಯಲ್ಲಿ 7.5 ಕಿ.ಮೀ. ಸೈಕಲ್ ಸವಾರಿ ಮಾಡುವ ಮೂಲಕ ಸೈಕಲ್ ದಿನದ ರ್ಯಾಲಿಗೆ ಚಾಲನೆ ನೀಡಿದ್ದಾರೆ.
“ಇಂದು ವಿಶ್ವ ಬೈಸಿಕಲ್ ದಿನದಂದು ನಾವು ಪ್ರಧಾನಿ ನರೇಂದ್ರ ಮೋದಿಯವರ ಸಂದೇಶವನ್ನು ಎಲ್ಲರಿಗೂ ತಲುಪಿಸಲು ಬಯಸುತ್ತೇವೆ. ಫಿಟ್ ಇಂಡಿಯಾ ಆಂದೋಲನ, ಖೇಲೋ ಇಂಡಿಯಾ ಆಂದೋಲನ, ಸ್ವಚ್ಛ ಭಾರತ ಆಂದೋಲನ ಮತ್ತು ಆರೋಗ್ಯಕರ ಭಾರತ ಆಂದೋಲನ ಎಲ್ಲವನ್ನೂ ಸೈಕಲ್ ಸವಾರಿ ಮಾಡುವ ಮೂಲಕ ಸಾಧಿಸಬಹುದು. ಇದು ಮಾಲಿನ್ಯದ ಮಟ್ಟವನ್ನು ಕಡಿಮೆ ಮಾಡುತ್ತದೆ” ಎಂದು ಅನುರಾಗ್ ಠಾಕೂರ್ ಹೇಳಿದ್ದಾರೆ.
#WATCH | Delhi: Union Minister for Youth Affairs & Sports Anurag Thakur launches nationwide ‘Fit India Freedom Rider Cycle rally’ on #WorldBicycleDay pic.twitter.com/syKPgiYuuv
— ANI (@ANI) June 3, 2022
ವಿಶ್ವ ಸೈಕಲ್ ದಿನವಾದ ಇಂದು ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವರಾದ ಅನುರಾಗ್ ಠಾಕೂರ್ ನವದೆಹಲಿಯ ಮೇಜರ್ ಧ್ಯಾನ್ ಚಂದ್ ಸ್ಟೇಡಿಯಂನಿಂದ ರಾಷ್ಟ್ರವ್ಯಾಪಿ ಸೈಕಲ್ ರ್ಯಾಲಿಗಳಿಗೆ ಚಾಲನೆ ನೀಡಿದರು. ಮೇಜರ್ ಧ್ಯಾನ್ ಚಂದ್ ಸ್ಟೇಡಿಯಂನಿಂದ ಆರಂಭವಾದ ಸೈಕಲ್ ರ್ಯಾಲಿಯಲ್ಲಿ ಅನುರಾಗ್ ಠಾಕೂರ್ ಅವರು 750 ಯುವ ಸೈಕ್ಲಿಸ್ಟ್‌ಗಳೊಂದಿಗೆ 7.5 ಕಿಮೀ ದೂರ ಸೈಕ್ಲಿಂಗ್ ಮಾಡಿದರು. ದೆಹಲಿ ಮಾತ್ರವಲ್ಲದೆ 35 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತ್ತು ದೇಶದಾದ್ಯಂತ 75 ಸ್ಥಳಗಳಲ್ಲಿ ಇಂದು ವಿಶ್ವ ಸೈಕಲ್ ದಿನವನ್ನು ಆಚರಿಸಲಾಗುತ್ತದೆ.
ಇದನ್ನೂ ಓದಿ: World Bicycle Day 2022: ಇಂದು ವಿಶ್ವ ಸೈಕಲ್ ದಿನ; ಈ ವರ್ಷದ ಥೀಮ್, ವಿಶೇಷತೆ ಹೀಗಿದೆ
ಪ್ರಪಂಚದಾದ್ಯಂತ ಸೈಕಲ್‌ನ ಮಹತ್ವವನ್ನು ಗುರುತಿಸಲು ಪ್ರತಿ ವರ್ಷ ಜೂನ್ 3ರಂದು ವಿಶ್ವ ಸೈಕಲ್ ದಿನವನ್ನು ಆಚರಿಸಲಾಗುತ್ತದೆ. ಸೈಕಲ್‌ನ ವೈಶಿಷ್ಟ್ಯತೆ, ದೀರ್ಘಾಯುಷ್ಯವನ್ನು ಗುರುತಿಸಲು ಇದು ವಿಶ್ವಸಂಸ್ಥೆಯ ಪ್ರಯತ್ನವಾಗಿದೆ. ಸೈಕಲ್ ಪರಿಸರ ಸ್ನೇಹಿ ಸಾರಿಗೆ ಸಾಧನವಾಗಿದೆ. 2018ರ ಏಪ್ರಿಲ್ ತಿಂಗಳಲ್ಲಿ ಅಮೆರಿಕಾದಲ್ಲಿ ಮೊದಲು ಜನರಲ್ ಅಸೆಂಬ್ಲಿ ಜೂನ್ 3 ಅನ್ನು ವಿಶ್ವ ಬೈಸಿಕಲ್ ದಿನ ಎಂದು ಘೋಷಿಸಿತು. ಪ್ರಪಂಚದಾದ್ಯಂತದ ಇದೇ ದಿನ ಸೈಕಲ್ ದಿನವನ್ನು ಆಚರಿಸಲಾಗುತ್ತದೆ. ವಿಶ್ವಸಂಸ್ಥೆಯ ಪ್ರಕಾರ, ಸೈಕಲ್ ಸುಸ್ಥಿರ ಸಾರಿಗೆ ಸಾಧನವಾಗಿದೆ. ಇದು ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುತ್ತದೆ, ಹವಾಮಾನ ಬದಲಾವಣೆಯ ವಿರುದ್ಧದ ಹೋರಾಟವನ್ನು ಉತ್ತೇಜಿಸುವ ಮೂಲಕ ಅಸಮಾನತೆಗಳನ್ನು ಕಡಿಮೆ ಮಾಡುತ್ತದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ