World Food Safety Day 2021: ಉತ್ತಮ ನಾಳೆಗಾಗಿ ಇಂದು ಸುರಕ್ಷಿತವಾದ ಆಹಾರ ಸೇವಿಸಿ

| Updated By: preethi shettigar

Updated on: Jun 07, 2021 | 8:52 AM

ವಿಶ್ವ ಆಹಾರ ಸುರಕ್ಷತಾ ದಿನವನ್ನು ಪ್ರತಿ ವರ್ಷ ಜೂನ್ 7 ರಂದು ಆಚರಿಸಲಾಗುತ್ತದೆ. ಈ ದಿನದಂದು ಆಹಾರ ಸೇವನೆಯ ಬಗೆಗಿನ ಸುರಕ್ಷತೆ, ಆಹಾರ ಭದ್ರತೆ, ಆರೋಗ್ಯ ಮತ್ತು ಉತ್ತಮ ಆಹಾರ ಸೇವನೆಗೆ ಪ್ರೇರೇಪಿಸಲಾಗುತ್ತದೆ.

World Food Safety Day 2021: ಉತ್ತಮ ನಾಳೆಗಾಗಿ ಇಂದು ಸುರಕ್ಷಿತವಾದ ಆಹಾರ ಸೇವಿಸಿ
ಸಾಂದರ್ಭಿಕ ಚಿತ್ರ
Follow us on

ನಾವು ಸೇವಿಸುವ ಆಹಾರ ನಮ್ಮ ಜೀವಿತಾವಧಿಯನ್ನು ನಿರ್ಧಾರ ಮಾಡುತ್ತದೆ. ಏಕೆಂದರೆ ಸೇವಿಸುವ ಆಹಾರದಲ್ಲಿನ ಪೌಷ್ಟಿಕಾಂಶ ದೇಹಕ್ಕೆ ಹೆಚ್ಚು ಶಕ್ತಿ ನೀಡುತ್ತದೆ ಮತ್ತು ದೈಹಿಕ ಬೆಳವಣಿಗೆಗೆ ಹೆಚ್ಚು ಒತ್ತು ನೀಡುತ್ತದೆ. ಆರೋಗ್ಯದ ಹಿತದೃಷ್ಟಿಯಿಂದ ಉತ್ತಮ ಆಹಾರ ಸೇವಿಸುವುದು ಒಳಿತು. ಅದರಲ್ಲೂ ಕೊವಿಡ್ 19 ಸೋಂಕು ಹರಡುತ್ತಿರುವ ಈ ಕಾಲಘಟ್ಟದಲ್ಲಿ ಆಹಾರ ಸೇವನೆಯ ಮೇಲಿನ ಕಾಳಜಿ ಬಹುಮುಖ್ಯ. ಈ ಕಾರಣಕ್ಕೆ ಈ ವರ್ಷದ ಆಹಾರ ಸುರಕ್ಷತಾ ದಿನ ವಿಶೇಷವಾದ ದಿನವಾಗಿ ಪರಿಣಮಿಸಿದೆ. ವಿಶ್ವ ಆಹಾರ ಸುರಕ್ಷತಾ ದಿನವನ್ನು ಪ್ರತಿ ವರ್ಷ ಜೂನ್ 7 ರಂದು ಆಚರಿಸಲಾಗುತ್ತದೆ. ಈ ದಿನದಂದು ಆಹಾರ ಸೇವನೆಯ ಬಗೆಗಿನ ಸುರಕ್ಷತೆ, ಆಹಾರ ಭದ್ರತೆ, ಆರೋಗ್ಯ ಮತ್ತು ಉತ್ತಮ ಆಹಾರ ಸೇವನೆಗೆ ಪ್ರೇರೇಪಿಸಲಾಗುತ್ತದೆ.

ಆಹಾರವು ಶಕ್ತಿವರ್ಧಕವಾಗಿ ಕಾರ್ಯನಿರ್ವಹಿಸುತ್ತದೆ:
ಆಹಾರವು ನಮ್ಮ ದೇಹದಲ್ಲಿನ ಶಕ್ತಿಯ ವೇಗವರ್ಧಕವಾಗಿದೆ ಇದು ಬೆಳವಣಿಗೆಯನ್ನು ಉಳಿಸಿಕೊಳ್ಳಲು ನಮ್ಮ ದೇಹದಲ್ಲಿನ ಎಲ್ಲಾ ಅಗತ್ಯ ಪೋಷಕಾಂಶಗಳು, ಕಾರ್ಬೋಹೈಡ್ರೇಟ್‌ಗಳು, ಕೊಬ್ಬು ಮತ್ತು ಪ್ರೋಟೀನ್‌ ಅನ್ನು ನೀಡುತ್ತದೆ. ಆ ಮೂಲಕ ನಾವು ಹೆಚ್ಚು ಹುಮ್ಮಸ್ಸಿನಿಂದ ಜೀವನ ನಡೆಸಲು ಅನುವು ಮಾಡಿಕೊಡುತ್ತದೆ.

ಇತಿಹಾಸ:
2018 ರಲ್ಲಿ ನಡೆದ ಯುನೈಟೆಡ್ ರಾಷ್ಟ್ರದ ಸಾಮಾನ್ಯ ಸಭೆಯು ಪ್ರತಿ ವರ್ಷ ಜೂನ್ 7 ರಂದು ವಿಶ್ವ ಆಹಾರ ಸುರಕ್ಷತಾ ದಿನವನ್ನು ಆಚರಿಸಲು ನಿರ್ಧರಿಸಿತು. ಬಳಿಕ 2020 ರಲ್ಲಿ ವಿಶ್ವ ಸಂಸ್ಥೆಯು ಆಹಾರಕ್ಕೆ ಸಂಬಂಧಿಸಿದ ರೋಗಗಳನ್ನು ಗಮನಿಸಿ, ಈ ಸಮಸ್ಯೆಯನ್ನು ದೂರವಾಗಿಸಲು ಜಾಗತಿಕ ಪ್ರಯತ್ನಗಳನ್ನು ಆರಂಭಿಸಿತು. ಅದರಂತೆ ಇದು ವಿಶ್ವ ಆಹಾರ ಸುರಕ್ಷತಾ ದಿನದ 3ನೇ ವರ್ಷಾಚರಣೆ. .

ಈ ವರ್ಷದ ವಿಶ್ವ ಆಹಾರ ಸುರಕ್ಷತಾ ದಿನದ ಆಶಯ
ವಿಶ್ವ ಆಹಾರ ಸುರಕ್ಷತಾ ದಿನದ ಈ ವರ್ಷದ ಆಶಯವೆಂದರೆ ‘ಉತ್ತಮ ನಾಳೆಗಾಗಿ ಸುರಕ್ಷಿತ ಆಹಾರ ಸೇವನೆ ಎನ್ನುವುದಾಗಿದೆ.

ಆಹಾರಕ್ಕೆ ಸಂಬಂಧಿಸಿದ ಕೆಲವು ಉಲ್ಲೇಖಗಳು:

ಹಿಪ್ಪೊಕ್ರೇಟ್ಸ್ – “ನಿಮ್ಮ ಆಹಾರವು ನಿಮ್ಮ ಔಷಧಿಯಾಗಲಿ ಮತ್ತು ನಿಮ್ಮ ಔಷಧವು ನಿಮ್ಮ ಆಹಾರವಾಗಲಿ.”

ಪ್ಯಾಟ್ ಪುಚಾನನ್- “ಮನಸ್ಸಿನ ಮೇಲೆ ಪರಿಣಾಮ ಬೀರುವ ವಿಷಯಗಳಂತೆಯೇ ದೇಹಕ್ಕೆ ಸೇರುವ ಆಹಾರದ ಮೇಲೆ ಗಮನಹರಿಸಬೇಕು.”

ಮೈಕ್, ಜೋಹಾನ್ಸ್ – “ಆಹಾರ ಸುರಕ್ಷತೆಯು ಆಹಾರ ಸರಪಳಿಯೇ ಆಗಿದ್ದು, ಪ್ರತಿಯೊಬ್ಬರನ್ನು ಒಳಗೊಂಡಿರುತ್ತದೆ.”

ಆಂಡ್ರ್ಯೂ ಆರ್ವೆಲ್ – “ಜನರನ್ನು ಮತ್ತೆ ಅಡುಗೆಮನೆಯತ್ತ ಕರೆದೊಯ್ಯಿರಿ ಮತ್ತು ಸಂಸ್ಕರಿಸಿದ ಆಹಾರ ಮತ್ತು ತ್ವರಿತ ಆಹಾರ ಸಿದ್ಧಪಡಿಸುವ ಪ್ರವೃತ್ತಿಯನ್ನು ಬೆಳೆಸಿ”

ಕ್ವಿಂಟಿಲಿಯನ್ – “ನಮ್ಮ ಮನಸ್ಸು ನಮ್ಮ ಹೊಟ್ಟೆಯಂತಿದೆ; ಆಹಾರ ಮತ್ತು ವೈವಿಧ್ಯಮಯ ಅಂಶಗಳ ಪ್ರವೇಶಿಸುವಿಕೆಯು ಹೊಸ ಹಸಿವಿನೊಂದಿಗೆ ಕೂಡಿರುತ್ತದೆ.”

ಮಹಾತ್ಮ ಗಾಂಧಿ -“ಜಗತ್ತಿನಲ್ಲಿ ತುಂಬಾ ಹಸಿದಿರುವ ಜನರಿದ್ದಾರೆ, ದೇವರು ಅವರಿಗೆ ರೊಟ್ಟಿಯ ರೂಪದಲ್ಲಿ ಕಾಣಿಸುವುದಿಲ್ಲ.”

ಇದನ್ನೂ ಓದಿ:

ಅನಾರೋಗ್ಯಕರ ಉತ್ಪನ್ನ ವಿವಾದಕ್ಕೆ ಮತ್ತೆ ಸಿಲುಕಿದ ನೆಸ್ಲೆ: ‘ಮ್ಯಾಗಿ’ ತಯಾರಿಕಾ ಕಂಪೆನಿಯ ಮೇಲೆ ಈ ವಿವಾದದ ಪರಿಣಾಮವೇನು?

World Food Safety Day 2021: ವಿಶ್ವ ಆಹಾರ ದಿನದ ಹಿನ್ನೆಲೆ ಏನು? ಏಕಿಷ್ಟು ಮಹತ್ವ? ನೀವು ತಿಳಿಯಬೇಕಾದ ಮಾಹಿತಿ ಇಲ್ಲಿದೆ

Published On - 8:02 am, Mon, 7 June 21