AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹರ್ನಿಯಾ ಶಸ್ತ್ರಚಿಕಿತ್ಸೆ ಮಾಡಿದ್ರೆ ವಿಮೆ ಹಣ ಸಿಗಲ್ಲವೆಂದು ಅಪೆಂಡಿಕ್ಸ್ ಸರ್ಜರಿ ಮಾಡಿದ ವೈದ್ಯ

ಎತ್ತಿಗೆ ಜ್ವರ ಬಂದ್ರೆ ಎಮ್ಮೆಗೆ ಬರೆ ಹಾಕಿದ್ರು ಅಂದಂಗಾಯ್ತು ಈ ವೈದ್ಯ ಮಾಡಿದ ಎಡವಟ್ಟು. ಹರ್ನಿಯಾ ಶಸ್ತ್ರಚಿಕಿತ್ಸೆ ಮಾಡಿದರೆ ವಿಮೆ ಹಣ ಸಿಗಲ್ಲವೆಂದು ವೈದ್ಯರು ರೋಗಿಗೆ ಅಪೆಂಡಿಕ್ಸ್​ ಸರ್ಜರಿ ಮಾಡಿರುವ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ. ಬಿಸ್ವಜಿತ್ ಎಂಬ ವೈದ್ಯರ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ರೋಗಿಯ ಹೆಸರೂ ಕೂಡ ಬಿಸ್ವಜಿತ್ ದಾಸ್. ಬಿಸ್ವಜಿತ್ ಅವರ ಕುಟುಂಬ ಹೇಳಿದಂತೆ, ಬಿಸ್ವಜಿತ್ ಹರ್ನಿಯಾ ಶಸ್ತ್ರಚಿಕಿತ್ಸೆಗಾಗಿ ಪಾಣಿಹತಿ ಆಸ್ಪತ್ರೆಗೆ ಹೋಗಿದ್ದರು.

ಹರ್ನಿಯಾ ಶಸ್ತ್ರಚಿಕಿತ್ಸೆ ಮಾಡಿದ್ರೆ ವಿಮೆ ಹಣ ಸಿಗಲ್ಲವೆಂದು ಅಪೆಂಡಿಕ್ಸ್ ಸರ್ಜರಿ ಮಾಡಿದ ವೈದ್ಯ
ಆಪರೇಷನ್
ನಯನಾ ರಾಜೀವ್
|

Updated on: Jul 02, 2025 | 3:03 PM

Share

ಕೋಲ್ಕತ್ತಾ, ಜುಲೈ 02: ಎತ್ತಿಗೆ ಜ್ವರ ಬಂದ್ರೆ ಎಮ್ಮೆಗೆ ಬರೆ ಹಾಕಿದ್ರು ಅಂದಂಗಾಯ್ತು ಈ ವೈದ್ಯ ಮಾಡಿದ ಎಡವಟ್ಟು. ಹರ್ನಿಯಾ ಶಸ್ತ್ರಚಿಕಿತ್ಸೆ ಮಾಡಿದರೆ ವಿಮೆ ಹಣ ಸಿಗಲ್ಲವೆಂದು ವೈದ್ಯರು ರೋಗಿಗೆ ಅಪೆಂಡಿಕ್ಸ್​ ಸರ್ಜರಿ ಮಾಡಿರುವ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ. ಬಿಸ್ವಜಿತ್ ಎಂಬ ವೈದ್ಯರ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ರೋಗಿಯ ಹೆಸರೂ ಕೂಡ ಬಿಸ್ವಜಿತ್ ದಾಸ್. ಬಿಸ್ವಜಿತ್ ಅವರ ಕುಟುಂಬ ಹೇಳಿದಂತೆ, ಬಿಸ್ವಜಿತ್ ಹರ್ನಿಯಾ ಶಸ್ತ್ರಚಿಕಿತ್ಸೆಗಾಗಿ ಪಾಣಿಹತಿ ಆಸ್ಪತ್ರೆಗೆ ಹೋಗಿದ್ದರು.

ಆರೋಪಿ ವೈದ್ಯ ಬಿಸ್ವಜಿತ್ ದಾಸ್ ಆ ಆಸ್ಪತ್ರೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ವೈದ್ಯ ಅವರಿಗೆ ತಮ್ಮ ನರ್ಸಿಂಗ್ ಹೋಂನಲ್ಲಿ ಚಿಕಿತ್ಸೆ ಪಡೆಯುವಂತೆ ಸಲಹೆ ನೀಡಿದ್ದಾರೆ. ಇದಕ್ಕೆ ಬಿಸ್ವಜಿತ್ ಒಪ್ಪಿಕೊಂಡಿದ್ದರು. ವೈದ್ಯರು ತಮ್ಮ ಸ್ವಾಸ್ಥ್ಯ ಸಾಥಿ ಕಾರ್ಡ್ ಮೂಲಕ ತಮ್ಮ ನರ್ಸಿಂಗ್ ಹೋಂನಲ್ಲಿ ಶಸ್ತ್ರಚಿಕಿತ್ಸೆ ನೀಡುವುದಾಗಿ ಭರವಸೆ ನೀಡಿದ್ದರು .ಆದರೆ ಹರ್ನಿಯಾ ಶಸ್ತ್ರ ಚಿಕಿತ್ಸೆ ಮಾಡಿದರೆ ವಿಮೆ ಹಣ ಸಿಗುವುದಿಲ್ಲವೆಂದು ಅಪೆಂಡಿಕ್ಸ್​ ಸರ್ಜರಿ ಮಾಡಿದ್ದಾರೆ.

ಶಸ್ತ್ರಚಿಕಿತ್ಸೆಯ ಕೆಲವು ದಿನಗಳ ನಂತರ, ರೋಗಿಯು ತನ್ನ ಹೊಟ್ಟೆಯ ಕೆಳಭಾಗವು ಉಬ್ಬಿರುವುದನ್ನು ನೋಡಿದ್ದಾರೆ.ಬಿಸ್ವಜಿತ್ ತಮ್ಮ ವೈದ್ಯರ ಬಳಿ ಇದನ್ನು ಪದೇ ಪದೇ ಹೇಳುತ್ತಲೇ ಇದ್ದರು. ಆದರೆ ವೈದ್ಯರು ಆ ವಿಚಾರವನ್ನು ಬದಲಿಸಿ ಬೇರೇನೋ ಮಾತನಾಡುತ್ತಿದ್ದರು. ರೋಗಿಗೆ ಹರ್ನಿಯಾ ನೋವು ಹೆಚ್ಚಾಗಿತ್ತು. ನಂತರ ಕುಟುಂಬ ಸದಸ್ಯರು ಅವರನ್ನು ಯುಎಸ್‌ಜಿಗೆ ಕರೆದೊಯ್ದರು. ಅಲ್ಲಿ ನೋಡಿದಾಗ ಹರ್ನಿಯಾ ಶಸ್ತ್ರ ಚಿಕಿತ್ಸೆ ಆಗಿರಲಿಲ್ಲ.ಬದಲಾಗಿ ಅಪೆಂಡಿಕ್ಸ್​ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ ಎಂಬುದು ತಿಳಿದುಬಂದಿದೆ.

ಮತ್ತಷ್ಟು ಓದಿ: ವೈದ್ಯರಿಲ್ಲ, ಫೋನ್​ ನೋಡಿಕೊಂಡು ಗರ್ಭಿಣಿಯ ಹೊಟ್ಟೆ ಕೊಯ್ದ ನರ್ಸ್, ಅವಳಿ ಶಿಶುಗಳ ಸಾವು

ಸ್ವಾಸ್ಥ್ಯ ಸಾಥಿ ಕಾರ್ಡ್‌ನಲ್ಲಿ ಹರ್ನಿಯಾ ಶಸ್ತ್ರಚಿಕಿತ್ಸೆ ಮಾಡಲಾಗುವುದಿಲ್ಲ.ಹರ್ನಿಯಾ ಶಸ್ತ್ರಚಿಕಿತ್ಸೆ ಮಾಡಿದರೆ, ನರ್ಸಿಂಗ್ ಹೋಂಗೆ ಸ್ವಾಸ್ಥ್ಯ ಸತಿಯಿಂದ ಯಾವುದೇ ಹಣ ಸಿಗುವುದಿಲ್ಲ. ಆದ್ದರಿಂದ, ಸ್ವಾಸ್ಥ್ಯ ಸಾಥಿಯಿಂದ ಹಣವನ್ನು ಪಡೆಯಲು ಹರ್ನಿಯಾ ಬದಲಿಗೆ ಅಪೆಂಡಿಕ್ಸ್‌ಗೆ ಶಸ್ತ್ರಚಿಕಿತ್ಸೆ ಮಾಡಲಾಯಿತು ಎಂದು ತಿಳಿದುಬಂದಿದೆ. ಇದನ್ನು ಕೇಳಲು ಕಾಲ್ ಮಾಡಿದರೆ ಕಟ್ ಮಾಡಿದ್ದರು.

ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಸಮುದ್ರ ಸೇನ್‌ಗುಪ್ತಾ ಮಾತನಾಡಿ, ಡಾ. ಬಿಸ್ವಜಿತ್ ದಾಸ್ ವಿರುದ್ಧ ಹಲವು ದೂರುಗಳಿವೆ. ಈ ವೈದ್ಯರ ವಿರುದ್ಧ ಈ ಹಿಂದೆಯೂ ಹಲವು ದೂರುಗಳು ದಾಖಲಾಗಿವೆ.ದೂರುಗಳು ಸಾಬೀತಾದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!