AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೈದರಾಬಾದ್​ ಬಿಜೆಪಿ ಕಾರ್ಯಕಾರಿಣಿಯಲ್ಲಿ ತೆಲಂಗಾಣದ ದೇಸಿ ಖಾದ್ಯಗಳ ಸವಿ: ಮೋದಿಗಾಗಿ ಸವಿರುಚಿ ಅಡುಗೆ ತಯಾರಿಸಲಿದ್ದಾರೆ ಯಾದಮ್ಮ

ಊಟ ಮಾತ್ರವಲ್ಲ ಕುರುಕಲು ತಿನಿಸು ಮತ್ತು ಸಿಹಿ ತಿಂಡಿಗಳನ್ನೂ ತೆಲಂಗಾಣದ ದೇಸಿ ಶೈಲಿಯಲ್ಲಿಯೇ ಸಿದ್ಧಪಡಿಸಲಾಗುತ್ತಿದೆ.

ಹೈದರಾಬಾದ್​ ಬಿಜೆಪಿ ಕಾರ್ಯಕಾರಿಣಿಯಲ್ಲಿ ತೆಲಂಗಾಣದ ದೇಸಿ ಖಾದ್ಯಗಳ ಸವಿ: ಮೋದಿಗಾಗಿ ಸವಿರುಚಿ ಅಡುಗೆ ತಯಾರಿಸಲಿದ್ದಾರೆ ಯಾದಮ್ಮ
ಕರೀಂನಗರ ಯಾದಮ್ಮ ಅವರು ಫೈವ್​ಸ್ಟಾರ್ ಹೊಟೆಲ್​ನ ಬಾಣಸಿಗರು ತಯಾರಿಸಿದ ಅಡುಗೆ ರುಚಿ ನೋಡಿ ತಮ್ಮ ಅಭಿಪ್ರಾಯ ತಿಳಿಸಿದರು.
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ|

Updated on: Jul 03, 2022 | 1:41 PM

Share

ಹೈದರಾಬಾದ್: ಪ್ರಧಾನಿ ನರೇಂದ್ರ ಮೋದಿ (PM Narendra Modi), ಅವರ ಸಚಿವ ಸಂಪುಟ ಸಹೋದ್ಯೋಗಿಗಳು, ಬಿಜೆಪಿ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿ ಮತ್ತು ಹಿರಿಯ ನಾಯಕರು ಇಂದು ಹೈದರಾಬಾದ್​ನಲ್ಲಿ ನಡೆಯಲಿರುವ ರಾಷ್ಟ್ರೀಯ ಕಾರ್ಯಕಾರಿಣಿ (BJP National Executive meeting) ಸಭೆಯಲ್ಲಿ ತೆಲಂಗಾಣದ ದೇಸೀ ಖಾದ್ಯಗಳನ್ನು (Telangana Dishes) ಸವಿಯಲಿದ್ದಾರೆ. ಈ ಖಾದ್ಯಗಳನ್ನು ತೆಲಂಗಾಣದ ಕರೀಂನಗರ ಜಿಲ್ಲೆ ಹುಸ್ನಾಬಾದ್ ಕ್ಷೇತ್ರದ ಗೌರವೆಲ್ಲಿ ಗುದಾಟಿಪಲ್ಲೆಯ ಯಾದಮ್ಮ ತಯಾರಿಸಲಿದ್ದಾರೆ. ಊಟ ಮಾತ್ರವಲ್ಲ ಕುರುಕಲು ತಿನಿಸು ಮತ್ತು ಸಿಹಿ ತಿಂಡಿಗಳನ್ನೂ ತೆಲಂಗಾಣದ ದೇಸಿ ಶೈಲಿಯಲ್ಲಿಯೇ ಸಿದ್ಧಪಡಿಸಲಾಗುತ್ತಿದೆ.

ಭಾನುವಾರದ ಸಮಾರಂಭದಲ್ಲಿ ತಿನಿಸುಗಳ ಪಟ್ಟಿಯಲ್ಲಿ 50 ಖಾದ್ಯಗಳಿವೆ. ಇದರಲ್ಲಿ ವಿವಿಧ ಕರಿ, ಟೊಮೆಟೊ ಸಾರು, ಆಲು ಕುರ್ಮಾ, ಬದನೆ ಮಸಾಲಾ, ದೊಂಡಕಾಯ ಸಾದೊಬ್ಬರಿ ಟುರುಮು ಫ್ರೈ, ಒಕ್ರಾ ಕಾಜು ಪಲ್ಲಿಲ ಫ್ರೈ, ಟೊಮೆಟೊ ಫ್ರೈ, ಬೇರಕಾಯ ಚೂರ ಫ್ರೈ, ಮಾವಿನ ದಾಲ್, ಪುದೀನಾ ಬಾತ್, ಪುಳಿಯೋಗರೆ, ಮೊಸರನ್ನ, ಗೊಂಗೂರು ಪಚಡಿ, ಸೌತೆಕಾಯಿ ಚಟ್ನಿ, ಟೊಮೆಟೊ ಚಟ್ನಿ ಸೇರಿದಂತೆ ಹಲವು ಖಾದ್ಯಗಳು ಮೆನುವಿನಲ್ಲಿವೆ. ಬೆಲ್ಲದ ಪರಮಾನ್ನ, ಶ್ಯಾವಿಗೆ ಪಾಯಸ, ಶಾಲ್ಯನ್ನ ಸೇರಿದಂತೆ ವಿವಿಧ ಸಿಹಿ ತಿನಿಸುಗಳು ಇವೆ. ಕುರುಕಲು ತಿಂಡಿಗಳಾಗಿ ಪಿಸರಪ್ಪು ಗಾರಲು, ಸಕಿನಾ, ಮಕ್ಕ ಗುಡಾ, ಸರ್ವ ಪಿಂಡಿ, ಕೊಬ್ಬರಿ ಚಟ್ನಿ ಸೇರಿದಂತೆ ಹಲವು ತಿಂಡಿಗಳಿವೆ.

‘ನನಗೆ ಇಂಥ ಗೌರವ ಸಿಗುತ್ತದೆ ಎಂದು ಕನಸುಮನಸಿನಲ್ಲಿಯೂ ಎಣಿಸಿರಲಿಲ್ಲ. ಬಿಜೆಪಿ ತೆಲಂಗಾಣ ಘಟಕದ ಅಧ್ಯಕ್ಷ ಬಂಡಿ ಸಂಜಯ್ ಅವರು ನನಗೆ ಪರಿಚಯವಿದ್ದರು. ಆದರೆ ಪ್ರಧಾನಿಗೆ ಅಡುಗೆ ಮಾಡುವಂಥ ಸೌಭಾಗ್ಯ ತಂದುಕೊಡುತ್ತಾರೆ ಎಂದುಕೊಂಡಿರಲಿಲ್ಲ’ ಎಂದು ಯಾದಮ್ಮ ಯೇಳಿದರು.

‘ಯಾದಮ್ಮ ಅವರನ್ನು ನಾವು ಒಮ್ಮೆ ದೆಹಲಿಗೆ ಕರೆದೊಯ್ಯಬೇಕು ಎಂದುಕೊಂಡಿದ್ದೇವೆ. ತೆಲಂಗಾಣದ ಅಡುಗೆಯನ್ನು ಎಲ್ಲರಿಗೂ ಪರಿಚಯಿಸಬೇಕು’ ಎನ್ನುವ ಆಸೆಯಿದೆ ಎಂದು ಬಂಡಿ ಸಂಜಯ್ ಹೇಳಿದ್ದರು.

ಕಾರ್ಯಾಕಾರಿಣಿ ಸಭೆ ಆರಂಭಗೊಳ್ಳುವುದಕ್ಕೆ ಕೆಲ ದಿನಗಳು ಮೊದಲು ಯಾದಮ್ಮ ಅವರು ಫೈವ್​ಸ್ಟಾರ್ ಹೊಟೆಲ್​ಗೆ ಭೇಟಿ ನೀಡಿ, ಅಲ್ಲಿನ ಬಾಣಸಿಗರೊಂದಿಗೆ ಸಂವಾದ ನಡೆಸಿದ್ದರು. ಅವರು ತಯಾರಿಸಿದ ಅಡುಗೆಯ ರುಚಿ ನೋಡಿ, ಸುಧಾರಣೆಗೆ ಸಲಹೆಗಳನ್ನು ನೀಡಿದ್ದರು.

ಕರೀಂನಗರ ಸೇರಿದಂತೆ ತೆಲಂಗಾಣದ ಹಲವೆಡೆ ಅಡುಗೆ ಯಾದಮ್ಮ ಉತ್ತಮ ಹೆಸರು ಪಡೆದಿದ್ದಾರೆ. ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಮತ್ತು ಬಿಜೆಪಿ ನಾಯಕ ಬಂಡಿ ಸಂಜಯ್ ಕುಮಾರ್ ಆಯೋಜಿಸಿದ್ದ ಹಲವು ಕಾರ್ಯಕ್ರಮಗಳಿಗೆ ಈ ಹಿಂದೆಯೂ ಯಾದಮ್ಮ ಅಡುಗೆ ಮಾಡಿದ್ದರು. ಅವರ ಅಡುಗೆಗೆಂದೇ ಜನಸೇರುವ ಮಟ್ಟಿಗೆ ಯಾದಮ್ಮ ಹೆಸರು ಮಾಡಿದ್ದಾರೆ.

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!