Year Ender 2024: ಭಾರತದಲ್ಲಿ ಈ ವರ್ಷ ಸಂಭವಿಸಿದ ರೈಲು ಅಪಘಾತಗಳ ಪಟ್ಟಿ

ಪ್ರತಿ ವರ್ಷವೂ ನಾವು ರಸ್ತೆ ಅಪಘಾತಗಳು, ಭೀಕರ ರೈಲು ಅಪಘಾತಗಳು ಸಂಭವಿಸುವಂತಹ, ಅಪಘಾತದಲ್ಲಿ ಮುಗ್ಧ ಜನರು ಪ್ರಾಣ ಕಳೆದುಕೊಳ್ಳುವಂತಹ ಕಹಿ ಸುದ್ದಿಗಳ ಬಗ್ಗೆ ಕೇಳುತ್ತಿರುತ್ತೇವೆ. ಈ ವರ್ಷವೂ ಹಳಿ ತಪ್ಪಿಸುವುದರಿಂದ ಹಿಡಿದು ಎಕ್ಸ್‌ಪ್ರೆಸ್‌ ರೈಲಿಗೆ ಗೂಡ್ಸ್‌ ರೈಲು ಡಿಕ್ಕಿಯಾಗಿ ಆಕ್ಸಿಡೆಂಟ್‌ ಆದಂತಹ ಹಲವಾರು ರೈಲು ಅಪಘಾತಗಳು ಸಂಭವಿಸಿವೆ. ಮತ್ತು ಇದರಿಂದ ಹಲವು ಸಾವು ನೋವುಗಳು ಕೂಡಾ ಸಂಭವಿಸಿವೆ. ಭಾರತದಲ್ಲಿ ಈ ವರ್ಷ ಸಂಭವಿಸಿದಂತಹ ರೈಲು ಅಪಘಾತಗಳ ಪಟ್ಟಿಯನ್ನು ನೋಡೋಣ.

Year Ender 2024: ಭಾರತದಲ್ಲಿ ಈ ವರ್ಷ ಸಂಭವಿಸಿದ ರೈಲು ಅಪಘಾತಗಳ ಪಟ್ಟಿ
Train Accidents in India
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷತಾ ವರ್ಕಾಡಿ

Updated on:Dec 12, 2024 | 6:32 PM

ಸಿಹಿ ವಿಷಯಗಳ ಜೊತೆ ಜೊತೆಗೆ ಒಂದಷ್ಟು ಕಹಿ ವಿಷಯಗಳ ಬಗ್ಗೆಯೂ ನಾವು ಪ್ರತಿ ವರ್ಷ ಕೇಳುತ್ತಿರುತ್ತೇವೆ. ಹಾಗೆಯೇ ಈ ವರ್ಷ ಕೂಡಾ ಒಳ್ಳೊಳ್ಳೆಯ ವಿಷಯಗಳ ಜೊತೆ ಜೊತೆಗೆ ರಸ್ತೆ ಅಪಘಾತ ರೈಲು ಅಪಘಾತಗಳು, ಪ್ರಾಕೃತಿಕ ವಿಕೋಪಗಳಂತಹ ಕೆಟ್ಟ ಘಟನೆಗಳು ಕೂಡಾ ನಡೆದಿವೆ. ಅದರಲ್ಲೂ ಈ ವರ್ಷವಂತೂ ಬೆಚ್ಚಿ ಬೀಳಿಸುವಂತಹ ಹಲವಾರು ರೈಲು ಅಪಘಾತಗಳು ಸಂಭವಿಸಿವೆ. ಮಾಹಿತಿಗಳ ಪ್ರಕಾರ 2024 ರ ವರ್ಷದಲ್ಲಿ ಭಾರತದಾದ್ಯಂತ ಹಲವಾರು ರೈಲು ಅಪಘಾತಗಳು ಸಂಭವಿಸಿವೆ. “ನವೆಂಬರ್‌ 26 ರ ವರೆಗೆ ಒಟ್ಟು 29 ಪ್ರಮುಖ ರೈಲು ಅಪಘಾತಗಳು ಸಂಭವಿಸಿದ್ದು, ಈ ಅಪಘಾತಗಳಲ್ಲಿ 17 ಪ್ರಯಾಣಿಕರು ಜೀವವನ್ನು ಕಳೆದುಕೊಂಡರೆ, ಸುಮಾರು 71 ಜನರು ಗಾಯಗೊಂಡಿದ್ದಾರೆ. ತಾಂತ್ರಿಕ ದೋಷ, ಹಳಿ ತಪ್ಪಿಸುವುದರಿಂದ ಹಿಡಿದು ಪರಸ್ಪರ ರೈಲು ಡಿಕ್ಕಿ ಸೇರಿದಂತೆ ವಿವಿಧ ಕಾರಣಗಳಿಂದ ಈ ಎಲ್ಲಾ ಅಪಘಾತಗಳು ಸಂಭವಿಸಿವೆ” ಎಂದು ಕೇಂದ್ರ ರೈಲ್ವೆ ಖಾತೆ ಸಚಿವ ಅಶ್ವಿನಿ ವೈಷ್ಣವ್‌ ರಾಜ್ಯ ಸಭೆಯಲ್ಲಿ ವರದಿ ಸಲ್ಲಿಸಿದ್ದಾರೆ. ಹಾಗಾದರೆ ಈ ವರ್ಷ ಯಾವೆಲ್ಲಾ ಪ್ರಮುಖ ರೈಲು ಅಪಘಾತಗಳು ಸಂಭವಿಸಿದೆ ಎಂಬುದನ್ನು ನೋಡೋಣ.

2024 ರಲ್ಲಿ ಸಂಭವಿಸಿದ ಪ್ರಮುಖ ರೈಲು ಅಪಘಾತಗಳ ಪಟ್ಟಿ:

ಜಮ್ತಾರಾ ರೈಲು ಅಪಘಾತ – ಫೆಬ್ರವರಿ 28, 2024:

ಜಾರ್ಖಾಂಡ್‌ನ ಜಮ್ತಾರಾ ಜಿಲ್ಲೆಯ ಕಲಝಾರಿಯ ಬಳಿ ಫೆಬ್ರವರಿ 28 ರಂದು ರೈಲು ಡಿಕ್ಕಿಯಾಗಿ ಭೀಕರ ಅಪಘಾತವೊಂದು ಸಂಭವಿಸಿತ್ತು. ಈ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದರು. ಇದು ಈ ವರ್ಷ ನಡೆದ ಭೀಕರ ರೈಲು ಅಪಘಾತಗಳಲ್ಲಿ ಒಂದಾಗಿದೆ.

ಹಳಿ ತಪ್ಪಿದ ಸಬರಮತಿ-ಆಗ್ರಾ ಎಕ್ಸ್‌ಪ್ರೆಸ್ – ಮಾರ್ಚ್ 18, 2024:

ರಾಜಸ್ಥಾನದ ಅಜ್ಮೀರ್ ಬಳಿ ಸಬರಮತಿ-ಆಗ್ರಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್‌ ರೈಲಿನ ನಾಲ್ಕು ಬೋಗಿಗಳು ಹಳಿತಪ್ಪಿದ ಘಟನೆ ಮಾರ್ಚ್‌ 18 ರಂದು ಸಂಭವಿಸಿತ್ತು. ಅದೃಷ್ಟವಶಾತ್ ಈ ಒಂದು ಅಪಘಾತದಲ್ಲಿ ಯಾವುದೇ ಸಾವು ಸಂಭವಿಸಿಲ್ಲ, ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದವು.

ಕಾಂಚನಜುಂಗಾ ಎಕ್ಸ್‌ಪ್ರೆಸ್ ರೈಲು ಅಪಘಾತ – ಜೂನ್ 17, 2024:

ಜೂನ್‌ 17 ರಂದು ಪಶ್ಚಿಮ ಬಂಗಾಳದ ಡಾರ್ಜಿಲಿಂಗ್‌ನ ರಂಗಪಾಣಿ ನಿಲ್ದಾಣದ ಬಳಿ ಗೂಡ್ಸ್ ರೈಲು ಅಗರ್ತಲಾ ಮತ್ತು ಕಾಂಚನಜುಂಗಾ ಎಕ್ಸ್‌ಪ್ರೆಸ್‌ ರೈಲುಗಳು ಡಿಕ್ಕಿ ಹೊಡೆದ ಪರಿಣಾಮ ಭೀಕರ ಅಪಘಾತವೊಂದು ಸಂಭವಿಸಿತ್ತು. ಈ ಒಂದು ಅಪಘಾತದಲ್ಲಿ ಸುಮಾರು 15 ಜನರು ಮೃತಪಟ್ಟಿದ್ದು, 41 ಜನರು ಗಾಯಗೊಂಡಿದ್ದರು. ಈ ಅಪಘಾತ ಕೂಡಾ ಈ ವರ್ಷ ನಡೆದ ಪ್ರಮುಖ ರೈಲು ಅಘಾತಗಳಲ್ಲಿ ಒಂದಾಗಿದೆದೆ.

ಸಿರ್ಹಿಂದ್ ಗೂಡ್ಸ್‌ ರೈಲು ಅಪಘಾತ – ಜೂನ್ 2, 2024:

ಪಂಜಾಬ್‌ನಲ್ಲಿ ಸಿರ್ಹಿಂದ್‌ನ ಮಾಧೋಪುರ ಬಳಿ ಜೂನ್‌ 2 ರಂದು ಸರಕು ರೈಲುಗಳು ಪರಸ್ಪರ ಡಿಕ್ಕಿ ಹೊಡೆದಂತಹ ಘಟನೆ ನಡೆದಿದ್ದು, ಈ ಒಂದು ಅಪಘಾತದಲ್ಲಿ ಆ ರೈಲುಗಳಲ್ಲಿದ್ದ ಮೂವರು ಪ್ರಯಾಣಿಕರು ಮತ್ತು ಇಬ್ಬರು ಲೋಕೋ ಪೈಲಟ್‌ಗಳಿಗೆ ಗಾಯಗಳಾಗಿದ್ದವು.

ಹಳಿ ತಪ್ಪಿದ ಚಂಡೀಗಢ-ದಿಬ್ರುಗಢ ರೈಲು – ಜುಲೈ 18, 2024:

ಉತ್ತರ ಪ್ರದೇಶದ ಗೊಂಡಾ ಜಿಲ್ಲೆಯಲ್ಲಿ ದಿಬ್ರುಗಢ-ಚಂಡೀಗಢ ಎಕ್ಸ್‌ಪ್ರೆಸ್ ಹಳಿತಪ್ಪಿದಂತಹ ಘಟನೆ ಜುಲೈ 18 ರಂದು ನಡೆದಿತ್ತು. ಈ ದುರಂತದಲ್ಲಿ ನಾಲ್ಕು ಜನ ಪ್ರಾಣವನ್ನು ಕಳೆದುಕೊಂಡಿದ್ದಾರೆ ಮತ್ತು 31 ಮಂದಿ ಗಾಯಗೊಂಡಿದ್ದರು. ಇದು ಕೂಡಾ ಈ ವರ್ಷ ಸಂಭವಿಸಿದ ಪ್ರಮುಖ ರೈಲು ಅಪಘಾತಗಳಲ್ಲಿ ಒಂದಾಗಿದೆ.

ಇದನ್ನೂ ಓದಿ: Year Ender 2024: ಈ ವರ್ಷ ಭಾರತೀಯರು ಅತೀ ಹೆಚ್ಚು ಹುಡುಕಾಡಿದ ಟಾಪ್ ರೆಸಿಪಿಗಳು ಇವೇ ನೋಡಿ

ಮುಂಬೈ-ಹೌರಾ ರೈಲು ಅಪಘಾತ- ಜುಲೈ 30, 2024:

ಹೌರಾ-ಮುಂಬೈ ಪ್ಯಾಸೆಂಜರ್‌ ರೈಲು ಹಳಿ ತಪ್ಪಿದ ಘಟನೆ ಜಾರ್ಖಾಂಡ್‌ನ ಛಕ್ರಾಧರ್‌ಪುರ್‌ ವಿಭಾಗದ ಬಳಿ ಜುಲೈ 30 ರಂದು ನಡೆದಿತ್ತು. ಪ್ಯಾಸೆಂಜರ್‌ ರೈಲಿನ 18 ಬೋಗಿಗಳು ಹಳಿ ತಪ್ಪಿ ತಪ್ಪಿದ್ದ ಪರಿಣಾಮ 2 ಪ್ರಯಾಣಿಕರು ಮೃತಪಟ್ಟು, ಸುಮಾರು 20 ಗಾಯಗೊಂಡಿದ್ದರು.

ಮೈಸೂರು-ದರ್ಬಾಂಗ ಎಕ್ಸ್‌ಪ್ರೆಸ್ ಡಿಕ್ಕಿ – ಅಕ್ಟೋಬರ್ 11, 2024:

ತಮಿಳುನಾಡಿನ ತಿರುವಳ್ಳೂರು ಜಿಲ್ಲೆಯ ಕವರಪೇಟ್ಟೈನಲ್ಲಿ ಗೂಡ್ಸ್‌ ರೈಲಿಗೆ ಮೈಸೂರು-ದರ್ಬಾಂಗ ಎಕ್ಸ್‌ಪ್ರೆಸ್‌ ರೈಲು ಡಿಕ್ಕಿಯಾಗಿ ಭಾರೀ ಅನಾಹುತ ಸಂಭವಿಸಿದ ಘಟನೆ ಅಕ್ಟೋಬರ್‌ 11 ರಂದು ನಡೆದಿತ್ತು. ಅದೃಷ್ಟವಶಾತ್‌ ಈ ಅಪಘಾತದಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಆದರೆ ಹಲವು ಪ್ರಯಾಣಿಕರಿಗೆ ಸಣ್ಣಪಟ್ಟ ಗಾಯಗಳಾಗಿದ್ದವು. ಇದು ಕೂಡಾ ಈ ವರ್ಷ ಸಂಭವಿಸಿದ ಪ್ರಮುಖ ರೈಲು ಅಪಘಾತವಾಗಿದೆ.

Published On - 6:31 pm, Thu, 12 December 24

ಎಲ್ಲರ ಆಟಕ್ಕೆ ಅಡ್ಡಗಾಲು ಹಾಕಿದ ಮಂಜು, ಗೌತಮಿ ಫುಲ್ ಗರಂ
ಎಲ್ಲರ ಆಟಕ್ಕೆ ಅಡ್ಡಗಾಲು ಹಾಕಿದ ಮಂಜು, ಗೌತಮಿ ಫುಲ್ ಗರಂ
ಸಿಎಂ ಕರೆದಿರುವ ವಿಷಯ ಹೇಳಿದಾಗ ಸಿಸಿ ಪಾಟೀಲ್ ಕುಂಟುನೆಪ ಹೇಳಿದರು: ಹೆಬ್ಬಾಳ
ಸಿಎಂ ಕರೆದಿರುವ ವಿಷಯ ಹೇಳಿದಾಗ ಸಿಸಿ ಪಾಟೀಲ್ ಕುಂಟುನೆಪ ಹೇಳಿದರು: ಹೆಬ್ಬಾಳ
ಸ್ವಾಮೀಜಿ ಬಿಜೆಪಿಯವರಾ ಅಂತ ಕೇಳುತ್ತಿರೋದು ಹಾಸ್ಯಾಸ್ಪದ: ಅಶೋಕ
ಸ್ವಾಮೀಜಿ ಬಿಜೆಪಿಯವರಾ ಅಂತ ಕೇಳುತ್ತಿರೋದು ಹಾಸ್ಯಾಸ್ಪದ: ಅಶೋಕ
ಸಾಕಿದ ಮಾವುತ ಬಿಟ್ಟು ಹೊರಟಾಗ ಓಡೋಡಿ ಹೋಗಿ ಎಳೆದು ತಂದ ಆನೆ ಮರಿ
ಸಾಕಿದ ಮಾವುತ ಬಿಟ್ಟು ಹೊರಟಾಗ ಓಡೋಡಿ ಹೋಗಿ ಎಳೆದು ತಂದ ಆನೆ ಮರಿ
ಕೃಷ್ಣ ಅವರ ಅಂತ್ಯಕ್ರಿಯೆ ಸರ್ಕಾರ ನಡೆಸಿಕೊಟ್ಟ ರೀತಿ ಅಭಿನಂದನೀಯ: ವಿಶ್ವನಾಥ್
ಕೃಷ್ಣ ಅವರ ಅಂತ್ಯಕ್ರಿಯೆ ಸರ್ಕಾರ ನಡೆಸಿಕೊಟ್ಟ ರೀತಿ ಅಭಿನಂದನೀಯ: ವಿಶ್ವನಾಥ್
Video: ಹೆದ್ದಾರಿಯಲ್ಲಿ ವಾಹನಗಳ ಮೇಲೆ ಅಪ್ಪಳಿಸಿದ ವಿಮಾನ
Video: ಹೆದ್ದಾರಿಯಲ್ಲಿ ವಾಹನಗಳ ಮೇಲೆ ಅಪ್ಪಳಿಸಿದ ವಿಮಾನ
Pushpa 2 Press Meet Live: ಅಭಿಮಾನಿಗಳಿಗೆ ‘ಪುಷ್ಪ’ರಾಜ್ ಧನ್ಯವಾದ
Pushpa 2 Press Meet Live: ಅಭಿಮಾನಿಗಳಿಗೆ ‘ಪುಷ್ಪ’ರಾಜ್ ಧನ್ಯವಾದ
ನಾವು ತಯಾರಿಸಿದ ಮಂತ್ರಿಗಳ ಲಿಸ್ಟ್​ನಿಂದ ನಮ್ಮ ಹೆಸರೇ ಗಾಯಬ್!: ಶಿವಕುಮಾರ್
ನಾವು ತಯಾರಿಸಿದ ಮಂತ್ರಿಗಳ ಲಿಸ್ಟ್​ನಿಂದ ನಮ್ಮ ಹೆಸರೇ ಗಾಯಬ್!: ಶಿವಕುಮಾರ್
ಶಾಂತಿಯುತ ಪ್ರತಿಭಟನೆಗೆ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಕರೆ
ಶಾಂತಿಯುತ ಪ್ರತಿಭಟನೆಗೆ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಕರೆ
ಗದಗದಲ್ಲಿ ಪಂಚಮಸಾಲಿ ಹೋರಾಟ: ಟಯರ್​ಗೆ ಬೆಂಕಿ ಹಚ್ಚುವ ವೇಳೆ ಕಾಲಿಗೆ ಬೆಂಕಿ
ಗದಗದಲ್ಲಿ ಪಂಚಮಸಾಲಿ ಹೋರಾಟ: ಟಯರ್​ಗೆ ಬೆಂಕಿ ಹಚ್ಚುವ ವೇಳೆ ಕಾಲಿಗೆ ಬೆಂಕಿ