AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪೂಜಾ ಸ್ಥಳಗಳ ಕಾಯ್ದೆ ವಿಚಾರಣೆ ಮುಗಿಯುವವರೆಗೆ ಹೊಸ ದಾವೆ, ಸಮೀಕ್ಷೆಗಳಿಗೆ ಅವಕಾಶವಿಲ್ಲ; ಸುಪ್ರೀಂ ಕೋರ್ಟ್

ಪ್ರಸ್ತುತ ನಡೆಯುತ್ತಿರುವ ಪೂಜಾ ಸ್ಥಳಗಳ ಕಾಯಿದೆಯ ವಿಚಾರಣೆ ಮುಗಿಯುವವರೆಗೂ ದೇಶದೆಲ್ಲೆಡೆ ಎಲ್ಲೂ ಧಾರ್ಮಿಕ ರಚನೆಗಳಿಗೆ (ಮಂದಿರ, ಮಸೀದಿ) ಸಂಬಂಧಿಸಿದಂತೆ ಯಾವುದೇ ಹೊಸ ಮೊಕದ್ದಮೆಗಳನ್ನು ಸ್ವೀಕರಿಸುವುದಿಲ್ಲ ಅಥವಾ ಸಮೀಕ್ಷೆ ನಡೆಯುವಂತಿಲ್ಲ ಎಂದು ಸುಪ್ರೀಂ ಕೋರ್ಟ್​ ಮಹತ್ವದ ಆದೇಶ ಹೊರಡಿಸಿದೆ. ಹಾಗೇ, ಸುಪ್ರೀಂ ಕೋರ್ಟ್ ಅಸ್ತಿತ್ವದಲ್ಲಿರುವ ಧಾರ್ಮಿಕ ರಚನೆಗಳ ವಿರುದ್ಧ ಹೊಸ ದಾವೆಗಳಿಗೆ ತಡೆ ನೀಡಿದೆ.

ಪೂಜಾ ಸ್ಥಳಗಳ ಕಾಯ್ದೆ ವಿಚಾರಣೆ ಮುಗಿಯುವವರೆಗೆ ಹೊಸ ದಾವೆ, ಸಮೀಕ್ಷೆಗಳಿಗೆ ಅವಕಾಶವಿಲ್ಲ; ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್
ಸುಷ್ಮಾ ಚಕ್ರೆ
|

Updated on: Dec 12, 2024 | 4:40 PM

Share

ನವದೆಹಲಿ: 1991ರ ಪೂಜಾ ಸ್ಥಳಗಳ ಕಾಯಿದೆಯು ಆ ಕುರಿತಾದ ಮೊಕದ್ದಮೆಗಳನ್ನು ಸ್ಥಾಪಿಸುವುದನ್ನು ನಿಷೇಧಿಸುತ್ತದೆ ಮತ್ತು 1991ರ ಕಾನೂನಿನ ಸಿಂಧುತ್ವವನ್ನು ನಿರ್ಧರಿಸುವವರೆಗೆ ಹೊಸ ದಾವೆಗಳನ್ನು ಸ್ವೀಕರಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್​ ಹೇಳಿದೆ. ಸದ್ಯಕ್ಕೆ ಭಾರತದಲ್ಲಿ ಪೂಜಾ ಸ್ಥಳಗಳ ಕಾಯ್ದೆಗೆ ಸಂಬಂಧಿಸಿದ ಹೊಸ ಅರ್ಜಿಗಳ ನೋಂದಣಿಯನ್ನು ನಿಲ್ಲಿಸುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ. ಕಾನೂನಿಗೆ ಸಂಬಂಧಿಸಿದಂತೆ ತನ್ನ ಮುಂದೆ ಬಾಕಿ ಉಳಿದಿರುವ ಎಲ್ಲಾ ಪ್ರಸ್ತುತ ಅರ್ಜಿಗಳ ವಿಚಾರಣೆಯನ್ನು ಪೂರ್ಣಗೊಳಿಸಿ, ವಿಲೇವಾರಿ ಮಾಡುವವರೆಗೆ ದೇಶದಲ್ಲಿ ಯಾವುದೇ ಹೊಸ ದಾವೆಗಳನ್ನು ನೋಂದಾಯಿಸಬಾರದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಪೂಜಾ ಸ್ಥಳಗಳ ಕಾಯಿದೆ 1991ರ ಸಿಂಧುತ್ವವನ್ನು ಪ್ರಶ್ನಿಸಿರುವ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಇಂದು ನಡೆಸುತ್ತಿದೆ. ಸುಪ್ರೀಂ ಕೋರ್ಟ್​ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ, ನ್ಯಾಯಮೂರ್ತಿಗಳಾದ ಸಂಜಯ್ ಕುಮಾರ್, ಕೆ.ವಿ. ವಿಶ್ವನಾಥನ್ ನೇತೃತ್ವದ ತ್ರಿಸದಸ್ಯ ಪೀಠ ವಿಚಾರಣೆಯನ್ನು ನಡೆಸುತ್ತಿದೆ.

ಇದನ್ನೂ ಓದಿ: ದೀಪಾವಳಿಗೆ ಪಟಾಕಿ ನಿಷೇಧವೇಕೆ ಜಾರಿಯಾಗಲಿಲ್ಲ?; ದೆಹಲಿ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್

ಪೂಜಾ ಸ್ಥಳಗಳ ಕಾಯಿದೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ಕುರಿತು ಅಫಿಡವಿಟ್ ಸಲ್ಲಿಸಲು ಭಾರತ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ 4 ವಾರಗಳ ಕಾಲಾವಕಾಶವನ್ನೂ ನೀಡಿದೆ. ಹಾಗೇ, ಸರ್ವೋಚ್ಚ ನ್ಯಾಯಾಲಯವು ಯಾವುದೇ ವಿಚಾರಣಾ ನ್ಯಾಯಾಲಯ ಮಸೀದಿಗಳು ಅಥವಾ ದರ್ಗಾಗಳು ಇತ್ಯಾದಿಗಳ ವಿರುದ್ಧ ಬಾಕಿ ಇರುವ ಮೊಕದ್ದಮೆಗಳಲ್ಲಿ ಸಮೀಕ್ಷೆ ಆದೇಶಗಳನ್ನು ಒಳಗೊಂಡಂತೆ ಪರಿಣಾಮಕಾರಿ ಮಧ್ಯಂತರ ಅಥವಾ ಅಂತಿಮ ಆದೇಶಗಳನ್ನು ಹೊರಡಿಸಬಾರದು ಎಂದು ಆದೇಶಿಸಿದೆ.

ಏನಿದು ಪ್ರಕರಣ:

ಪೂಜಾ ಸ್ಥಳಗಳ ಕಾಯಿದೆ 1947ರ ಆಗಸ್ಟ್ 15ಕ್ಕಿಂತ ಮೊದಲಿನ ಧಾರ್ಮಿಕ ಸ್ಥಳಗಳನ್ನು ಬದಲಾಯಿಸುವಂತಿಲ್ಲ, ಆ ಪೂಜಾ ಸ್ಥಳಗಳನ್ನು ಯಥಾಸ್ಥಿತಿಯಲ್ಲೇ ಮುಂದುವರೆಸಬೇಕೆಂದು ಹೇಳಿತ್ತು. ಇದು ಧಾರ್ಮಿಕ ಹಕ್ಕಿನ ಉಲ್ಲಂಘನೆಯಾದ್ದರಿಂದ ಈ ಕಾಯಿದೆ ಏಕಪಕ್ಷೀಯವಾಗಿದೆ ಎಂದು ಬಿಜೆಪಿ ನಾಯಕರಾದ ಅಶ್ವಿನಿ ಉಪಾಧ್ಯಾಯ, ಸುಬ್ರಹ್ಮಣ್ಯಸ್ವಾಮಿ ಮುಂತಾದವರು ಅರ್ಜಿ ಸಲ್ಲಿಸಿದ್ದರು. ಅದರ ವಿಚಾರಣೆ ಸುಪ್ರೀಂ ಕೋರ್ಟ್​ನಲ್ಲಿ ನಡೆಯುತ್ತಿದೆ.

ಇದನ್ನೂ ಓದಿ: ವಿವಾಹಿತ ಮಹಿಳೆಯರಿಂದ ಕಾನೂನು ದುರುಪಯೋಗ; ಬೆಂಗಳೂರು ಟೆಕ್ಕಿ ಅತುಲ್ ಸುಭಾಷ್ ಆತ್ಮಹತ್ಯೆ ಬಳಿಕ ಸುಪ್ರೀಂ ಕೋರ್ಟ್ ಮಹತ್ವದ ಹೇಳಿಕೆ

ಧಾರ್ಮಿಕ ಮುಖಂಡರು, ರಾಜಕಾರಣಿಗಳು ಮತ್ತು ವಕೀಲರು ಸೇರಿದಂತೆ ಅರ್ಜಿದಾರರು ಈ ಕಾಯಿದೆಯು ಹಿಂದೂಗಳು, ಜೈನರ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂದು ಪ್ರತಿಪಾದಿಸಿದ್ದಾರೆ. ಬೌದ್ಧರು ಮತ್ತು ಸಿಖ್ಖರು ತಮ್ಮ ಆರಾಧನಾ ಸ್ಥಳಗಳನ್ನು ಪುನಃಸ್ಥಾಪಿಸಲು ಮತ್ತು ನಿರ್ವಹಿಸಲು ಅವಕಾಶ ನೀಡಬೇಕೆಂದು ಒತ್ತಾಯಿಸಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ