ಮನೆಗೆ ಬಂದು ಪ್ರತಿಭಟಿಸಿದ ಎನ್‌ಎಸ್‌ಯುಐ ಕಾರ್ಯಕರ್ತರಿಗೆ ಲಡ್ಡು ಹಂಚಿದ ಬಿಜೆಪಿ ಸಂಸದ ನಿಶಿಕಾಂತ್ ದುಬೆ!
ಈ ಹಿಂದೆ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೋರೇಸ್ ಜೊತೆ ಸಂಬಂಧ ಹೊಂದಿದ್ದಾರೆಂದು ಆರೋಪ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಎನ್‌ಎಸ್‌ಯುಐ ಕಾರ್ಯಕರ್ತರು ಬಿಜೆಪಿ ಸಂಸದ ನಿಶಿಕಾಂತ್ ದುಬೆ ಮನೆಗೆ ತೆರಳಿ ಗುಲಾಬಿ ಹೂವು ನೀಡಿ ವಿಭಿನ್ನವಾಗಿ ಪ್ರತಿಭಟಿಸಿದ್ದರು. ಅದನ್ನು ಲಘುವಾಗಿ ಸ್ವೀಕರಿಸಿದ ಸಂಸದ ನಿಶಿಕಾಂತ್ ತಮ್ಮ ಮನೆಯಿಂದ ಲಡ್ಡುಗಳನ್ನು ತಂದು ಪ್ರತಿಭಟನಾಕಾರರಿಗೆ ಹಂಚಿದ್ದಾರೆ.
ನವದೆಹಲಿ: ದೆಹಲಿಯ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರ ನಿವಾಸದ ಹೊರಗೆ ಕಾಂಗ್ರೆಸ್‌ನ ವಿದ್ಯಾರ್ಥಿ ಘಟಕವಾದ ಎನ್‌ಎಸ್‌ಯುಐ ಕಾರ್ಯಕರ್ತರು ವಿಶಿಷ್ಟ ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಎನ್‌ಎಸ್‌ಯುಐ ಕಾರ್ಯಕರ್ತರು ಬಿಜೆಪಿ ಸಂಸದರಿಗೆ ಗುಲಾಬಿ ನೀಡಿ ಪುಷ್ಪನಮನ ಸಲ್ಲಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಸಂಸದ ನಿಶಿಕಾಂತ್ ದುಬೆ ಕೂಡ ಆ ಪ್ರತಿಭಟನಾಕಾರರಿಗೆ ಲಡ್ಡು ತಿನ್ನಿಸಿದ್ದಾರೆ. ಗಾಂಧಿ ತತ್ವವನ್ನು ಅನುಸರಿಸಿದ್ದೇನೆ ಎಂದು ನಿಶಿಕಾಂತ್ ತಮಾಷೆ ಮಾಡಿದ್ದಾರೆ.
ಭಾರತೀಯ ಜನತಾ ಪಕ್ಷದ ಸಂಸದ ನಿಶಿಕಾಂತ್ ದುಬೆ ಅವರು ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಗುರಿಯಾಗಿಸಿಕೊಂಡು ಯುಎಸ್ ಮೂಲದ ಬಹುಕೋಟ್ಯಾಧಿಪತಿ ಸೋರೇಸ್ ಜೊತೆ ಸಂಪರ್ಕ ಸಾಧಿಸಲು ಪ್ರಯತ್ನಿಸುತ್ತಿದ್ದಾರೆ ಎಂದಿದ್ದರು. ಇದು ಲೋಕಸಭೆಯಲ್ಲಿ ಕೋಲಾಹಲಕ್ಕೆ ಕಾರಣವಾಗಿತ್ತು.
#WATCH | Delhi: In a unique protest outside the residence of BJP MP Nishikant Dubey, NSUI workers gave him a rose flower. MP Nishikant Dubey offered sweets to them. https://t.co/wsCCzsmxlu pic.twitter.com/nxLqjLByZc
— ANI (@ANI) December 12, 2024
ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರ ನಿವಾಸದ ಹೊರಗೆ ನಡೆದ ವಿಶಿಷ್ಟ ಪ್ರತಿಭಟನೆಯಲ್ಲಿ ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ (ಎನ್‌ಎಸ್‌ಯುಐ) ಕಾರ್ಯಕರ್ತರು ಅವರಿಗೆ ಗುಲಾಬಿ ಹೂವನ್ನು ನೀಡಿದರು. ಆದರೆ, ಸಂಸದ ನಿಶಿಕಾಂತ್ ದುಬೆ ಅವರಿಗೆ ಸಿಹಿ ವಿತರಿಸಿದರು. ತಮ್ಮ ನಿವಾಸದ ಹೊರಗೆ ಎನ್‌ಎಸ್‌ಯುಐ ಕಾರ್ಯಕರ್ತರು ನಡೆಸಿದ ಪ್ರತಿಭಟನೆಗೆ ಪ್ರತಿಕ್ರಿಯಿಸಿದ ಬಿಜೆಪಿ ಸಂಸದ ನಿಶಿಕಾಂತ್ ದುಬೆ, “ಈ ಜನರು ಗೊಂದಲಕ್ಕೊಳಗಾಗಿದ್ದಾರೆ, ಇದರರ್ಥ ಅವರನ್ನು ಯಾರೋ ದಾರಿ ತಪ್ಪಿಸುತ್ತಿದ್ದಾರೆ. ಇಂದು ಅವರು ಎನ್‌ಎಸ್‌ಯುಐನಲ್ಲಿದ್ದಾರೆ, ನಾಳೆ ಅವರು ಭಾರತೀಯ ಜನತಾ ಯುವ ಮೋರ್ಚಾದ ಕಾರ್ಯಕರ್ತರಾಗುತ್ತಾರೆ. ಇವರನ್ನೆಲ್ಲ ಯುವಮೋರ್ಚಾಗೆ ಕರೆತರುತ್ತೇನೆ’’ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಜೋ ಬೈಡೆನ್‌ನಂತೆ ಪ್ರಧಾನಿ ಮೋದಿಗೂ ನೆನಪಿನ ಶಕ್ತಿಯ ಸಮಸ್ಯೆಯಿದೆ; ರಾಹುಲ್ ಗಾಂಧಿ ಟೀಕೆ
ವಿದೇಶಿ ಹೂಡಿಕೆದಾರರು ಮತ್ತು ವಿರೋಧ ಪಕ್ಷದ ನಾಯಕರ ನಡುವೆ ಸಂಬಂಧವಿದೆ ಎಂದು ರಾಹುಲ್ ಗಾಂಧಿಯನ್ನು ಸದನದಲ್ಲಿ ನಿಶಿಕಾಂತ್ ದುಬೆ ಟೀಕಿಸಿದ್ದರು. ಕಾಂಗ್ರೆಸ್ ಮತ್ತು ಜಾರ್ಜ್ ಸೊರೊಸ್ ನಡುವಿನ ಸಂಬಂಧದ ಬಗ್ಗೆ ಬಿಜೆಪಿ ಸಂಸದ ದುಬೆ ಪ್ರಶ್ನೆಗಳನ್ನು ಕೇಳಿದರು. ಅವರು ಮಾಡಿದ ಟೀಕೆಗಳ ನಂತರ ಸಂಸತ್ತಿನ ಕಲಾಪವನ್ನು ಮುಂದೂಡಲಾಯಿತು. ಪ್ರಧಾನಿ ನರೇಂದ್ರ ಮೋದಿಯವರ ಅಡಿಯಲ್ಲಿ ಭಾರತದ ಯಶಸ್ಸಿನ ಕಥೆಯನ್ನು ಹಳಿತಪ್ಪಿಸಲು ಅಂತಾರಾಷ್ಟ್ರೀಯ ಪಿತೂರಿ ನಡೆಯುತ್ತಿದೆ ಎಂದು ಹೇಳಿದ್ದರು.
VIDEO | BJP MP Nishikant Dubey (@nishikant_dubey) offers sweets to NSUI workers, who had gathered at his Delhi residence, carrying roses, to protest against his statement on LoP Lok Sabha Rahul Gandhi.
(Full video available on PTI Videos – https://t.co/n147TvrpG7) pic.twitter.com/Cy7LxnyLaj
— Press Trust of India (@PTI_News) December 12, 2024
ಇದನ್ನು ವಿರೋಧಿಸಿ ಕಾಂಗ್ರೆಸ್ ಸಂಸದರು ಸಂಸತ್ತಿನ ಮಕರ ದ್ವಾರದ ಮೆಟ್ಟಿಲುಗಳ ಮೇಲೆ ಪ್ರತಿಭಟಿಸಿದರು. ರಾಹುಲ್ ಗಾಂಧಿ ವಿರುದ್ಧ “ಅವಹೇಳನಕಾರಿ ಭಾಷೆ” ಬಳಸುವುದರ ವಿರುದ್ಧ ಘೋಷಣೆಗಳನ್ನು ಕೂಗಿದರು.
ಇದನ್ನೂ ಓದಿ: ಅಂದು ಸೋನಿಯಾ ಗಾಂಧಿ ಕಾಲರ್ ಹಿಡಿದೆಳೆಯಲು ಪ್ರಯತ್ನಿಸಿದ್ದರು: ಬಿಜೆಪಿ ಸಂಸದ ನಿಶಿಕಾಂತ್ ದುಬೆ
ಸದನದಲ್ಲಿ ರಾಹುಲ್ ಗಾಂಧಿಗೆ ನಿಶಿಕಾಂತ್ ದುಬೆ ಕೆಲವು ಪ್ರಶ್ನೆಗಳನ್ನು ಕೂಡ ಕೇಳಿದ್ದರು. ಕಾಶ್ಮೀರವನ್ನು ಪ್ರತ್ಯೇಕ ದೇಶವೆಂದು ಪರಿಗಣಿಸುವ ಸಂಘಟನೆಯೊಂದಿಗೆ ರಾಹುಲ್ ಗಾಂಧಿಗೆ ಏನು ಸಂಬಂಧ? ಸೋನಿಯಾ ಗಾಂಧಿ ಮತ್ತು ಜಾರ್ಜ್ ಸೊರೊಸ್ ನಡುವಿನ ಸಂಬಂಧವೇನು? ಕಾಂಗ್ರೆಸ್ ನಾಯಕ ಸ್ಯಾಮ್ ಪಿತ್ರೋಡಾ ಭ್ರಷ್ಟಾಚಾರದ ಆರೋಪ ಹೊತ್ತಿದ್ದರು. ರಾಹುಲ್ ಗಾಂಧಿ, ಸ್ಯಾಮ್ ಪಿತ್ರೋಡಾ ಮತ್ತು ಜಾರ್ಜ್ ಸೊರೊಸ್ ನಡುವೆ ಏನು ಸಂಬಂಧ? ಸೊರೊಸ್ ಮತ್ತು ಗಾಂಧಿ ಕುಟುಂಬದ ನಡುವಿನ ಸಂಬಂಧವೇನು? ರಾಜೀವ್ ಗಾಂಧಿ ಪ್ರತಿಷ್ಠಾನಕ್ಕೆ ಸೊರೊಸ್ ಅತಿ ಹೆಚ್ಚು ಹಣವನ್ನು ನೀಡಿದರು. ರಾಜೀವ್ ಗಾಂಧಿ ಪ್ರತಿಷ್ಠಾನದೊಂದಿಗೆ ಸೊರೊಸ್ ಅವರ ಸಂಬಂಧವೇನು? ಸೊರೊಸ್ ಅನೇಕ ನಿಧಿಗಳನ್ನು ರಚಿಸಿದರು, ಅವರು ಈ ನಿಧಿಯಿಂದ ಕಾಂಗ್ರೆಸ್‌ನ 300 ಜನರಿಗೆ ಹಣವನ್ನು ನೀಡಿದ್ದಾರೆ. ಭಾರತ್ ಜೋಡೋ ಯಾತ್ರೆಗೆ ಕಾಂಗ್ರೆಸ್ ಎಷ್ಟು ಹಣವನ್ನು ಖರ್ಚು ಮಾಡಿದೆ ಮತ್ತು ಅದರಲ್ಲಿ ಸೋರೋಸ್ ಫೌಂಡೇಶನ್ ಎಷ್ಟು ನೀಡಿದೆ? ಎಂಬ ಪ್ರಶ್ನೆಗಳನ್ನು ಕೇಳಿದ್ದರು. ಇದು ತೀವ್ರ ವಿವಾದವನ್ನು ಸೃಷ್ಟಿಸಿತ್ತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ